Home Articles posted by v4news (Page 14)

ಶ್ರೀನಿವಾಸ್ ಸಮೂಹ ಕಾಲೇಜುಗಳ ಘಟಿಕೋತ್ಸವ ಸಮಾರಂಭ

ಎ. ಶಾಮರಾವ್ ಪ್ರತಿಷ್ಟಾನದ ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ 2019ನೇ ಬ್ಯಾಚ್‌ನ ಪದವೀಧರರಿಗೆ ಪದವಿ ಪ್ರಧಾನ ಸಮಾರಂಭವನ್ನು ಶ್ರೀನಿವಾಸ್ ಸಮೂಹ ಸಂಸ್ಥೆಯ ವಲಚ್ಚಿಲ್ ಕ್ಯಾಂಪಸ್‌ನಲ್ಲಿ ಆಚರಿಸಲಾಯಿತು. ಡಾ. ಸಿ. ಎ. ರಾಘವೇಂದ್ರ ರಾವ್,

SRINIVAS GROUP OF COLLEGES, MANGALORE ORGANISE  GRADUATION DAY  

Srinivas Group of Colleges which include Srinivas Institute of Technology, Srinivas College of Pharmacy and Srinivas Institute of Nursing Sciences, Valachil, Mangalore organised Graduation day on 13.11.2021 for 2019 batch graduates of Engineering, Pharmacy and Nursing. Dr. CA A. Raghavendra Rao, Chancellor, Srinivas University and President, A. Shama Rao Foundation,

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆ “ಮಿಲನ್-2021

 ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿಲನ್ -2021 ಎನ್ನುವ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಂಪ್ರದಾಯಿಕ ಹಾಡು ಹಾಗೂ ನೃತ್ಯ ಕಾರ್ಯಕ್ರಮವನ್ನು ಎಲ್ಲಾರ ಗಮನ ಸೆಳೆದವು.  ರಾಜ್ಯ ಹಾಗೂ ಮಂಗಳೂರು ನಗರದಲ್ಲೇ ಅತ್ಯುತ್ತಮ ಶಿಕ್ಷಣಕ್ಕೆ ಹೆಸ್ರು ಪಡೆದುಕೊಂಡಿರುವ ಮಂಗಳೂರಿನ ವಾಮಂಜೂರು ಪರಿಸರದಲ್ಲಿರುವ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿಲನ್ ಎನ್ನುವ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮವನ್ನು

ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಅಗ್ರಹಿಸಿ ಪ್ರತಿಭಟನೆ

ಮಂಗಳೂರು: ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯವನ್ನ ಖಂಡಿಸಿ, ಕೋಮುವಾದಿಗಳಿಂದ ಬಲ್ಲಾಳ್‌ಭಾಗ್ ರಕ್ಷಿಸಿ, ಜನಜಾಗೃತಿ ಪ್ರತಿಭಟನಾ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ಇನ್ನು ದೌರ್ಜನ್ಯ ನಡೆಸಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಮಂಗಳೂರಿನ ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯವನ್ನು ಖಂಡಿಸಿ, ಇಂದು ಬಲ್ಲಾಳ್‌ಭಾಗ್ ಫ್ರೆಂಡ್ಸ್

ಪುತ್ತೂರು: ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಬೋರ್ಡ್ ತೆರವು

ಪುತ್ತೂರು ನಗರದ ಮಧ್ಯಭಾಗದಲ್ಲಿ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಬೋರ್ಡ್ ಅನ್ನು ಇದೀಗ ತೆರವುಗೊಳಿಸಲಾಗಿದೆ. ಪುತ್ತೂರು ಮಹಿಳಾ ಪೋಲೀಸ್ ಠಾಣೆ ಬಳಿಯಿರುವ ಫಡರಲ್ ಬ್ಯಾಂಕ್ ಗೆ ಸಂಬಂಧಪಟ್ಟ ಎಟಿಎಂ ಕೇಂದ್ರದ ಬೋರ್ಡ್ ಇದಾಗಿದ್ದು, ಎಟಿಎಂ ಗೆ ಬರುವ ಗ್ರಾಹಕರು ಪಾರ್ಕಿಂಗ್ ನಡೆಸುವ ಜಾಗದಲ್ಲೇ ಈ ಬೋರ್ಡ್ ಹಾಕಲಾಗಿತ್ತು. ಇದು ವಾಹನ ಸವಾರರಿಗೆ ತಕ್ಷಣಕ್ಕೆ ಗೋಚರವಾಗದೇ ಇದ್ದ ಕಾರಣ ಹಲವು ದ್ವಿಚಕ್ರ ವಾಹನ ಸವಾರರ ತಲೆಗೆ ಈ ಬೋರ್ಡ್ ನಿಂದಾಗಿ ಗಂಭೀರ ಗಾಯಗಳಾಗಿದ್ದರು.

ಪರಿಸರಕ್ಕೆ ಕೊಡುಗೆ ನೀಡುವ ಜತೆಗೆ ಬಡವರ ಜೀವನಮಟ್ಟ ಸುಧಾರಣೆಗೆ ಆದ್ಯತೆ ನೀಡಿ : ಡಾ. ಅಗುಸ್ತಸ್ ಜಿ.ಎಸ್. ಅಜಾರಿಯಾ

ಬೆಂಗಳೂರು:  ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ವೇಗವಾಗಿ ಬದಲಾವಣೆಯಾಗುತ್ತಿದ್ದು, ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ಅಲ್ಲಿ ಪರಿಸರಕ್ಕೆ ಕೊಡುಗೆ ನೀಡುವ ಜತೆಗೆ ಬಡವರ ಜೀವನ ಮಟ್ಟ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಐ.ಬಿ.ಎಂ. ಇಂಡಿಯಾದ ದಕ್ಷಿಣ ಏಷ್ಯಾ ವಿಭಾಗದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಅಗುಸ್ತಸ್ ಜಿ.ಎಸ್. ಅಜರಿಯಾ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ನ ಆರ್.ವಿ. ಮ್ಯಾನೆಜ್ ಮೆಂಟ್ ಸಂಸ್ಥೆಯ 2018-2020 ಮತ್ತು

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವುದು ಅನಿವಾರ್ಯ: ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ

ದೇಶಕ್ಕಾಗಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಕಾರ್ಖನೆಗಳು ಶಾಲೆ, ಶಾಲೆಗಳು ಪಾಠ ಸಹಿತ ಪಠ್ಯೇತರ ಚಟುವಟಿಕೆ ನಡೆಸಿದರೆ, ಅದೇ ಮಕ್ಕಳಿಗೆ ಮನೆಗಳಲ್ಲಿ ನಮ್ಮ ನಮ್ಮ ಧರ್ಮಗಳ ಸಂಸ್ಕಾರ ಕಲಿಸುವ ಅಗತ್ಯತೆ ಇದೆ ಎಂಬುದಾಗಿ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಹೇಳಿದ್ದಾರೆ. ಅವರು ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭ ಮಕ್ಕಳ ದಿನಾಚರಣಾ ಅಂಗವಾಗಿ ಆಯೋಜಿಸಿದ

ಸರ್ಕಾರದ ಜನವಿರೋಧಿ ನೀತಿಗಳಿಂದ ನಿರುದ್ಯೋಗ ಸೃಷ್ಟಿ: ಪ್ರೊಫೆಸರ್ ಚಂದ್ರ ಪೂಜಾರಿ

ಜನರಿಗೆ ಉದ್ಯೋಗಕ್ಕಿಂತ ಮಂದಿರ ನಿರ್ಮಾಣ ದೊಡ್ಡ ವಿಚಾರವಾಗಿದೆ: ಪ್ರೊಫೆಸರ್ ಚಂದ್ರ ಪೂಜಾರಿದೇಶದಲ್ಲಿ ನಿರುದ್ಯೋಗ ಈಗ ಹೆಚ್ಚಳ ಆಗುತ್ತಿರುವ ನಡುವೆ ಉದ್ಯೋಗ ಇರುವವರಿಗೆ ಗುಣಮಟ್ಟದ ಉದ್ಯೋಗ ಇಲ್ಲ. ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಗಮನ ಹರಿಸಲ್ಲ. ಬರೀ ಕೈಗಾರಿಕೆ ಮೇಲೆ ಗಮನ ಹರಿಸುತ್ತಿದೆ ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಚಂದ್ರ ಪೂಜಾರಿ ಹೇಳಿದರು. CPIM 23ನೇ ದ.ಕ ಜಿಲ್ಲಾ ಸಮ್ಮೆಳನದ ಭಾಗವಾಗಿ ಸಿಪಿಐಎಂ ಮಂಗಳೂರು ನಗರ

ಜಂಕ್ ಫುಡ್ ಬಳಕೆಯಿಂದ ಕ್ಯಾನ್ಸರ್‌ಗೆ ಮುನ್ನುಡಿ : ಡಾ| ಅನುಷಾ ಎಚ್ಚರಿಕೆ

ಮೂಡುಬಿದಿರೆ: “ಮೈದಾ, ಜೋಳದ ಹಿಟ್ಟು, ಪುಡಿ ಉಪ್ಪು, ಸಕ್ಕರೆ ಈ ನಾಲ್ಕು ಬಗೆಯ ಬಿಳಿ ವಿಷವಸ್ತುಗಳನ್ನು ಹೊಂದಿರುವ ಆಹಾರ ವಸ್ತುಗಳಿಂದ ದೂರವಿರಿ. ಜಂಕ್ ಫುಡ್ ಸೇವನೆಯಿಂದ ಕ್ಯಾನ್ಸರ್‌ಗೆ ಬಲಿಯಾಗುವ ಅಪಾಯವಿದೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಹೋಮಿಯೋಪತಿ ವಿಭಾಗದ ಡಾ.ಅನುಷಾ ಎಚ್ಚರಿಸಿದರು. ಅಲಂಗಾರು ಸಂತ ಥೋಮಸ್ ಶಾಲಾಸಭಾಂಗಣದಲ್ಲಿ ಮಂಗಳೂರು ಸಿಓಡಿಪಿ ಮೂಡುಬಿದಿರೆ ಪ್ರಗತಿ ಮಹಾಸಂಘ, ಮಂಗಳೂರು ಲಯನ್ಸ್ ಕ್ಲಬ್ ಇವುಗಳ ಆಶ್ರಯದಲ್ಲಿ ಫಾದರ್ ಮುಲ್ಲಾರ್

ಅಕ್ಷರ ಸಂತನ ಮನೆಗೆ ವೃಕ್ಷಮಾತೆ ಭೇಟಿ

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸೀ ಗೌಡ ಅವರು ಹರೇಕಳದ ನ್ಯೂಪಡ್ಪು ಮನೆಯಲ್ಲಿ ಭೇಟಿ ನೀಡಿದರು. ಇಂದು ಬೆಳಗ್ಗೆ ಭೇಟಿ ನೀಡಿದ ತುಳಸಿ ಗೌಡ ಅವರು ಹಾಜಬ್ಬರ ಜೊತೆ ಉಪಹಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹರೇಕಳ ಗ್ರಾಮಸ್ಥರಿಂದ ತುಳಸಿ ಗೌಡ ಅವರನ್ನು ಅಭಿನಂದಿಸಲಾಯಿತು.