ಮನುಷ್ಯ ಮತ್ತು ಶ್ವಾನದ ನಡುವೆ ಹೆಣೆದ ಕಥೆಯೊಂದಿಗೆ ತಯಾರಾದ ವಿಶಿಷ್ಠ ಶೈಲಿಯ ಹಾಡೊಂದು ಬಿಡುಗಡೆಗೆ ಸಿದ್ಧವಾಗಿದೆ. ಮಂಗಳೂರಿನ ವಿವೇಕ್ ಗೌಡ ನಿರ್ದೇಶಿಸಿ, ನಿರ್ಮಿಸಿರುವ ಭೇಟಿ ಎಂಬ ಹೆಸರಿನ ಕನ್ನಡ ವಿಡಿಯೋ ಆಲ್ಬಾಂ ಸಾಂಗ್ ನವೆಂಬರ್ 12 ರಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಲಿದೆ. ಶ್ವಾನ ಮತ್ತು ಮನಷ್ಯನ ನಡುವೆ ಸುತ್ತ ಹೆಣೆದ ಕಥೆಯೊಂದು ಆಲ್ಬಾಂ ಸಾಂಗ್ ಮೂಲಕ
ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ನವೆಂಬರ್ 20 ರಂದು ಆಯೋಜಿಸಲಾಗಿದೆ ಎಂದು ಗೌರವ ಕಾರ್ಯದರ್ಶಿ ತಾರನಾಥ ಶೆಟ್ಟಿ ಹೇಳಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕ್ರೀಡಾಕೂಟವು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಂಡು, ಸಂಜೆ 4 ಗಂಟೆಗೆ ಕ್ರೀಡಾಕೂಟದ ಸಮಾರೋಪ ನಡೆಯಲಿದೆ. ಇದರದಲ್ಲಿ ಬಾಲಕ ಬಾಲಕಿಯರ 12 ರಿಂದ 16 ರ ವಯೋಮಿತಿಯ
ಪುತ್ತೂರು; ಅಪ್ರಾಪ್ತ ಆದಿದ್ರಾವಿಡ ಜನಾಂಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿರುವ ರಾಜು ಹೊಸ್ಮಠ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ ಜಿಲ್ಲಾಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಆಗ್ರಹಿಸಿದ್ದಾರೆ. ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಪುತ್ತೂರು ಮಹಮ್ಮಾಯಿ ದೇವಳದ ಬಳಿಯಲ್ಲಿರುವ ಸಂಘಟನಾ ಕಚೇರಿಯಲ್ಲಿ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಇವರಿಬ್ಬರೂ
ಕಾರ್ಕಳ ಪುರಸಭಾಧ್ಯಕ್ಷೆ ಸುಮಾಕೇಶವ್ ರಿಂದ ಸಾಮಾಜಿಕ ತಾರತಮ್ಯ, ಪರಿಶಿಷ್ಟ ಪಂಗಡದವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಹಾಗೂ ತುಚ್ಚವಾಗಿ ಕಾಣುತ್ತಿದ್ದಾರೆ. ಪರಿಶಿಷ್ಟ ಪಂಗಡದ ಮೀಸಲಾತಿ ನಿಧಿಯನ್ನು ಪರಿಶಿಷ್ಟ ಪಂಗಡದ ಪುರಸಭಾ ಸದಸ್ಯರ ಗಮನಕ್ಕೆ ತರದೆ ಸಾಮಾನ್ಯ ವರ್ಗಗಳ ನಿಧಿಗೆ ವರ್ಗಾಯಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷ ಸೋಮನಾಥ್ ನಾಯ್ಕ್ ಆರೋಪಿಸಿದ್ದಾರೆ. ಅವರು ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ
ಬೆಂಗಳೂರು, ನ 10; ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನಪರ ಸಮಸ್ಯೆಗಳ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ “ ಯಂಗ್ ಇಂಡಿಯಾ ಕಿ ಬೋಲ್ “ [ಯುವ ಭಾರತ ಮಾತನಾಡಿ] ಎಂಬ ರಾಜ್ಯ ಮಟ್ಟದ ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ ಅಂತಿಮವಾಗಿ 15 ಮಂದಿ ಆಯ್ಕೆಯಾಗಿದ್ದಾರೆ ಎಂದು ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ
ಹಾಜಬ್ಬರಿಗೆ ಉಚಿತ ಉಮ್ರಾ ನಿರ್ವಹಣೆಗೆ ಅವಕಾಶ ನೀಡಿದ ಫಾಹಿಮಾ ಇಂಟರ್‍ನ್ಯಾಷನಲ್ ಇಂದು ಹರೇಕಳದ ಹಾಜಬ್ಬನವರ ಶಾಲೆಯಲ್ಲಿ ವಿವಿಧ ಸಂಘಸಂಸ್ಥೆಗಳು ಅವರನ್ನು ವಿವಿಧ ರೀತಿಯಲ್ಲಿ ಸನ್ಮಾನಿಸಿತ್ತು. ಆದರೆ ದೇರಳಕಟ್ಟೆಯ ಫಾಹಿಮಾ ಇಂಟರ್‍ನ್ಯಾಷನಲ್ ನವರು ಹಾಜಬ್ಬನವರಿಗೆ ಉಚಿತವಾಗಿ ಉಮ್ರಾ ನಿರ್ವಹಣೆಗೆ ಅವಕಾಶ ಒದಗಿಸುವ ಭರವಸೆಯನ್ನು ನೀಡಿದೆ. ಈ ಕುರಿತಾದ ಪತ್ರವನ್ನು ಸಂಸ್ಥೆಯ ನಿರ್ದೇಶಕ ಕಲಂದರ್, ಮ್ಯಾನೇಜರ್ ಅಝೀಝ್ ಝುಹ್‌ರಿ ಇಂದು ಅವರಿಗೆ ಹಸ್ತಾಂತರಿಸಿದರು. ಕೋವಿಡ್
ಹಣ, ಅಧಿಕಾರ ಇದ್ದಲ್ಲಿ ಯಾವ ಕಾನೂನುಬಾಹಿರ ಕೃತ್ಯ ಮಾಡಿದರೂ ತಡೆಯುವವರು ಇಲ್ಲ ಎನ್ನುವ ಮನೋಭಾವ ಕೆಲವರಲ್ಲಿದೆ. ಈ ಮನೋಭಾವಕ್ಕೆ ತಕ್ಕಂತೆ ಇಂಥಹ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವ ಅಧಿಕಾರಿ ವರ್ಗವೂ ಸುಮ್ಮನಿದ್ದರೆ, ಇಂಥವರ ದಬ್ಬಾಳಿಕೆಯೂ ಹೆಚ್ಚಾಗುತ್ತದೆ. ಇಂಥಹುದೇ ಒಂದು ಪ್ರಕರಣ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ನಡೆದಿದ್ದು, ರಸ್ತೆ ಪಕ್ಕದಲ್ಲಿರುವ ಸರಕಾರಿ ಜಾಗಕ್ಕೆ ಕೆಲವು ವ್ಯಕ್ತಿಗಳು ಬೇಲಿ ಹಾಕುವ ಮೂಲಕ ರಾಜಾರೋಷವಾಗಿ ಅತಿಕ್ರಮಣ
ಪುತ್ತೂರು: ನ.9ರಂದು ರಾತ್ರಿ ಮೊಟ್ಟೆತ್ತಡ್ಕ ಸಮೀಪ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವರ ಪೈಕಿ ಸ್ಕೂಟರ್ ಹಿಂಬದಿ ಸವಾರ ಕುರಿಯ ನಿವಾಸಿ ವಸಂತ ರೈ ಬಳ್ಳಮಜಲು ಅವರು ಮೃತಪಟ್ಟಿದ್ದಾರೆ. ಪುತ್ತೂರನಲ್ಲಿ ಮೇಸ್ತ್ರಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆಂದು ಕುರಿಯ ನಿವಾಸಿ ನಾರಾಯಣ ನಾಯ್ಕ ಬಳ್ಳಮಜಲು ಅವರು ಚಲಾಯಿಸುತ್ತಿದ್ದ ಆಕ್ಟಿವಾ ಸ್ಕೂಟರ್ ಮೊಟ್ಟೆತ್ತಡ್ಕ ತಲುಪುತ್ತಿದ್ದಂತೆ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ
ಕುಂದಾಪುರ: ನಟ ಪುನೀತ್ ರಾಜಕುಮಾರ್ ಸಮಾಜಕ್ಕೆ ಬಹುದೊಡ್ಡ ಶಕ್ತಿಯನ್ನು ನೀಡಿದವರು. ಏನೂ ಪ್ರಚಾರ ಬಯಸದೆ ಸಮಾಜದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ ಅಪರೂಪದ ವ್ಯಕ್ತಿತ್ವದ ಪುನೀತ್ ಪರಿಪೂರ್ಣ ವ್ಯಕ್ತಿತ್ವ ಅನಾವರಣಗೊಂಡದ್ದೆ ಅವರ ಸಾವಿನ ಬಳಿಕ ಎನ್ನುವುದು ದುರಂತ ಎಂದು ಶಿಕ್ಷಕ ಉದಯ್ ಬಳೆಗಾರ್ ಹೇಳಿದರು. ಅವರು ಮಂಗಳವಾರ ಸಂಜೆ ಇಲ್ಲಿನ ಹೆಮ್ಮಾಡಿ ರಿಕ್ಷಾ ನಿಲ್ದಾಣದಲ್ಲಿ ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ, ಇತ್ತೀಚೆಗಷ್ಟೇ ಅಗಲಿದ ನಟ
ಮುಕ್ಕ: ಶ್ರೀನಿವಾಸ್ ವಿಶ್ವವಿದ್ಯಾಲಯವು ಅಜಯ್ ಕೌಶಿಕ್ ನೊರೋನ್ಹಾರಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಹೆಚ್‌ಡಿ ಪದವಿಯನ್ನು ನೀಡಿದೆ. ಎ ಸ್ಟಡಿ ಆನ್ ಇಪ್ಲಿಮೆಂಟೇಶನ್ ಆಫ್ ಲೀನ್ ಸಿಕ್ಸ್ ಸಿಗ್ಮಾ ಸ್ಟ್ರಾಟರ್ಜಿ ಇನ್ ಡೆಂಟಲ್ ಹಾಸ್ಪಿಟಲ್ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಈ ಪದವಿಯನ್ನು ನೀಡಲಾಗಿದೆ. ಇವರು ಶ್ರೀನಿವಾಸ್ ವಿಶ್ವವಿದ್ಯಾಲಯದ ಡಾ. ಸುಮಾ ಭಟ್ ಹಾಗೂ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಡಾ. ಶ್ರೀರಂಗ ಭಟ್ ರವರ