Home Articles posted by v4news (Page 23)

ಪುತ್ತೂರಿನ ಕೊಡನೀರು ಎಂಬಲ್ಲಿ ರಸ್ತೆ ಅಪಘಾತ : ದ್ವಿಚಕ್ರ ಸವಾರ ಮೃತ್ಯು

ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕೊಡನೀರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿ ಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನ .1 ರಂದು ನಡೆದಿದೆ.ಪೆರಮೊಗರಿನ ಕೋಳಿ ಅಂಗಡಿಯ ಸೋಮಶೇಖರ್ ರೈ ಮೃತಪಟ್ಟವರು.ಇವರು ಮೂಲತ: ಸವಣೂರು ಪುಣ್ಚಪ್ಪಾಡಿ ನಿವಾಸಿಯಾಗಿದ್ದು ಸದ್ಯ ಪೆರಮೊಗರಿನಲ್ಲಿ ವಾಸವಾಗಿದ್ದರು .

ಮೂಡುಬಿದರೆಯಲ್ಲಿ ಸಿಡಿಲಬ್ಬರಕ್ಕೆ ಇಬ್ಬರು ಮೃತ್ಯು : ಸಾಂತ್ವಾನ ಹೇಳಿದ ಬಿಜೆಪಿ ರಾಜ್ಯಾದ್ಯಕ್ಷರು

ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಕಂಚಿಬೈಲು ಅರ್ಬಿ ಫಾಲ್ಸ್ ಬಳಿಯಲ್ಲಿ ಶೆಡ್ಡ್ ಒಂದಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ನಿನ್ನೆ ನಡೆದಿದ್ದು, ಈ ದುರ್ಘಟನೆಯಲ್ಲಿ ಸಿಡಿಲಿಗೆ ಬಲಿಯಾದಪುತ್ತಿಗೆಯ ನಿವಾಸಿಗಳಾದ ಯಶವಂತ (22) ಮತ್ತು ಮಣಿ ಪ್ರಸಾದ್ (22) ಮನೆಗೆ ಬಿಜೆಪಿ ರಾಜ್ಯಾದ್ಯಕ್ಷರು ಹಾಗೂ ಮಾನ್ಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್

ಹಾವು ಮತ್ತು ಇಲಿ : ಫೈಟ್ ಫೈಟ್‍ನಲ್ಲಿ ಗೆದ್ದ ಇಲಿರಾಯ

ಕಡಬ : ಸಾಮಾನ್ಯವಾಗಿ ಹಾವು ಇಲಿಯನ್ನು ತಿನ್ನುವುದನ್ನು ಕೇಳಿದ್ದೇವೆ , ನೋಡಿದ್ದೇವೆ . ಆದರೆ ಇಲ್ಲೊಂದು ಹಾವು ಇಲಿ ಫೈಟ್‍ನಲ್ಲಿ ಇಲಿಯೇ ಹಾವನ್ನು ಹಿಡಿದಳೆದು ನುಂಗಲು ಪ್ರಯತ್ನಪಡುವ ವೀಡಿಯೋವೊಂದು ವೈರಲ್ ಆಗಿದೆ . ಇದು ನಡೆದದ್ದು ಕಡಬ ಸಮೀಪದ ಕಳಾರದಲ್ಲಿ ಇಲ್ಲಿನ ಗಣೇಶ್ ಸ್ಟೋರ್ ಸಮೀಪ ಹಾವು ಮತ್ತು ಇಲಿಯ ಪೈಟ್‍ನಲ್ಲಿ ಕೊನೆಗೆ ಇಲಿಯೇ ಹಾವನ್ನು ಕಚ್ಚಿ ಎಳೆದಾಡುವ ದೃಶ್ಯ ಕಂಡು ಬಂದಿದೆ . ಈ ವಿಶ್ವಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದೆ .

ಲಂಡನ್‌ನಲ್ಲಿ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶ

ಲಂಡನ್ ನಗರದಲ್ಲಿ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಮಳಿಗೆಯನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ರವರು ಉದ್ಘಾಟಿಸಿದರು. ಇವರೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಜಯ್ ಶರ್ಮ, ನಿರ್ದೇಶಕರಾದ ಶ್ರೀಮತಿ ಸಿಂಧು ಬಿ ರೂಪೇಶ್ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಪ್ರಧಾನ ವ್ಯವಸ್ಥಾಪಕರಾದ ಯುವರಾಜ್ ರವರು ಭಾಗವಹಿಸಿದ್ದರು. ಕೋವಿಡ್

ಅಥ್ಲೆಟಿಕ್ ಕೋಚ್ ದಿನೇಶ್ ಕುಂದರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮಂಗಳೂರಿನ ಬೊಕ್ಕಪಟ್ಣದ ಅಥ್ಲೆಟಿಕ್ ಕೋಚ್ ದಿನೇಶ್ ಕುಂದರ್ ಅವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಸ್. ಅಂಗಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಮಂಗಳೂರಿನ ನೆಹರೂ ಮೈದಾನದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಎಸ್. ಅಂಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಬಳಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ನವೆಂಬರ್ 2ರಿಂದ 1-5ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ

ಮಂಗಳೂರು: ರಾಜ್ಯೋತ್ಸವ ಸಂಭ್ರಮದಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿದ ಘಟನೆ ನಡೆಯಿತು. ಮಂಗಳೂರು ನಗರದ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಸಚಿವ ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಲ್ಪಟ್ಟಿತು. ಬಳಿಕ ಅಧಿಕಾರಿಗಳು ಎಡವಟ್ಟು ಸರಿಪಡಿಸಿದರು.

ಹರೇಕಳ : ಸಿಡಿಲು ಬಡಿದು ಯುವಕ ಮೃತ್ಯು

ಕೊಣಾಜೆ : ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾನದಬೆಟ್ಟು ಎಂಬಲ್ಲಿ ರವಿವಾರ ಸಂಜೆ ಸಂಭವಿಸಿದೆ.ಮೃತ ಯುವಕನನ್ನು ಹರೇಕಳ ಗಾನದಬೆಟ್ಟು ಎಂಬಲ್ಲಿಯ ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹ್ಮಾನ್ (33) ಎಂದು ಗುರುತಿಸಲಾಗಿದೆ.ರಹ್ಮಾನ್ ಅವರು ಗದ್ದೆಯಲ್ಲಿ ಕಟ್ಡಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ಸಿಡಿಲು ಬಡಿದಿದ್ದು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ

ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ. ರಾಜೀವ್ ಮೆಂಡನ್ ನಿಧನ

ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ. ರಾಜೀವ್ ಮೆಂಡನ್ ನಿಧನ ಮಂಗಳೂರು ತಾಲೂಕಿನ ತೊಕ್ಕೊಟ್ಟು ಭಟ್ನಗರ ನಿವಾಸಿ ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ.ರಾಜೀವ್ ಮೆಂಡನ್ (87) ಅವರು ಶನಿವಾರ ನಿಧನರಾದರು .ಅವರು ಒಬ್ಬರು ಮಗಳು ಮತ್ತು ಇಬ್ಬರು ಮೊಮ್ಮಕಳನ್ನು ಅಗಲಿದ್ದಾರೆ. ರಾಜೀವ್ ಮೆಂಡನ್ ಅವರು ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಸ್ಥಾಪಕರಲ್ಲೊಬ್ಬರು . ವ್ಯಾಯಾಮ ಶಾಲೆಯ ಮುಖ್ಯ ಶಿಕ್ಷಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರು ತೊಕ್ಕೊಟ್ಟು

ಒಬ್ಬರೆ ವ್ಯಕ್ತಿಗೆ ಎರಡನೇ ಬಾರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಮಾರಂಭದ ಈ ಬಾರಿಯ ಪ್ರಶಸ್ತಿ ವಿತರಣಾ ಸಂದರ್ಭದ ಪ್ರಶಸ್ತಿ ವಿಜೇತರನ್ನು ಗುರುತಿಸುವಲ್ಲಿ ರಾಜಕಾರಣಿಗಳ ಒತ್ತಡದ ನಡುವೆ ಇಲಾಖೆ ಎಡವಟ್ಟು ಮಾಡಿಕೊಂಡು ಒಂದೇ ವ್ಯಕ್ತಿಗೆ ಎರಡೆರಡು ಬಾರಿ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. .ಪದವಿನಂಗಡಿಯ ಜಾನಪದ ಕಲಾವಿದ ಪಂಬದ ಸಮುದಾಯದ ಭಾಸ್ಕರ ಬಂಗೇರ ಇವರಿಗೆ 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು ಈ ಬಾರಿಯೂ ಕೂಡ ಇವರು ಪ್ರಶಸ್ತಿಗೆ ಆಯ್ಕೆಯಾಗಿರುವುದು