Home Articles posted by v4news (Page 26)

ಇಂಜಿನಿಯರಿಂಗ್ ಕಾಲೇಜಿನಲ್ಲಿ ರ್‍ಯಾಗಿಂಗ್ ಆರೋಪ : ವಿದ್ಯಾರ್ಥಿಗಳು ಅಮಾನತು

ಮೂಡುಬಿದಿರೆ : ಇಲ್ಲಿನ ತೋಡಾರು ಸಮೀಪದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿ ಗುಂಪುಗಳ ಮಧ್ಯೆ ಗುರುವಾರ ಹೊಡೆದಾಟ ನಡೆದು ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆಆಸ್ಪತ್ರೆಗೆ ದಾಖಲಾದವರು. ಹೊಡೆದಾಟದಲ್ಲಿ ವಿದ್ಯಾರ್ಥಿಗಳಾದ ಸಹಾಝ್ ಮತ್ತು ಮಹಮ್ಮದ್ ಎಂಬವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರು. ಎಂಜಿನಿಯರಿಂಗ್ ಕಾಲೇಜಿನಲ್ಲಿ ಮುಂದಿನ ಶನಿವಾರ ಸಂಪ್ರದಾಯ ದಿನ

ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆ : ಗರ್ಭಿಣಿಯರಲ್ಲಿ ಪೋಷಣೆ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮ

ಮಂಗಳೂರಿನ ಎಸ್‍ಸಿಎಸ್ ಸಮೂಹ ಸಂಸ್ಥೆಗಳ ಅಂಗವಾದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಸೈಂಟ್ ಆನ್ಸ್ ಕಾಲೇಜ್ ಆಫ್ ಎಜ್ಯುಕೇಶನ್ ಅಟೊನೊಮಸ್‍ನಲ್ಲಿ ‘ಗರ್ಭಿಣಿಯರಲ್ಲಿ ಪೋಷಣೆ” ವಿಷಯದ ಕುರಿತು ಜಾಗೃತಿ ಉಪನ್ಯಾಸ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಆಯುರ್ವೇದ ದಿನ ಹಾಗೂ ಆಯುಷ್ ಇಲಾಖೆ – ಎನ್. ಸಿ.ಐ.ಎಸ್. ಎಮ್ ನಿಂದ ನಿರ್ದೇಶಿಸಲಾದ “ಆಜಾದಿ ಕಾ ಅಮೃತ್ ಮಹೋತ್ಸವ್” ಎಂಬ ಯೋಜನೆಯ ಸಲುವಾಗಿ, ಕರ್ನಾಟಕ

ಪಬ್ ಗಳಲ್ಲಿ ಹ್ಯಾಲೋವೀನ್ ಪಾರ್ಟಿ ನಿಲ್ಲಿಸುವಂತೆ ಕಮಿಷನರಿಗೆ ಮನವಿ

ಪಬ್ ಗಳಲ್ಲಿ ನಡೆಯಲಿರುವ ಮಾದಕದ್ರವ್ಯ Halloween (ಹ್ಯಾಲೋವೀನ್)ಪಾರ್ಟಿ ನಿಲ್ಲಿಸುವಂತೆ ಪೊಲೀಸ್ ಕಮಿಷನರಿಗೆ ಮನವಿ – ಬಜರಂಗದಳ ದುರ್ಗಾವಾಹಿನಿ ಮಂಗಳೂರು ನಗರದಲ್ಲಿ ಇವತ್ತು ಕಾನೂನು ಬಾಹಿರವಾಗಿ ಪಬ್ ಗಳು ಕಾರ್ಯಾಚರಿಸುತ್ತಿದ್ದು ತಡರಾತ್ರಿಯ ವರೆಗೆ ತೆರೆದಿರುತ್ತದೆ ಮತ್ತು ಸಣ್ಣ ಪ್ರಾಯದ ಯುವಕ -ಯುವತಿಯರು ಪಬ್ ಗಳಿಗೆ ಹೋಗಿ ಕುಣಿದು, ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿರುತ್ತವೆ. ಇದೆ ಸಂಧರ್ಭದಲ್ಲಿ ಒಕ್ಟೋಬರ್ 30

ಕಾಪು ಲೈಟ್ ಹೌಸ್ ಬೀಚ್‌ನಲ್ಲಿ ಗೀತ ಗಾಯನ

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕಾಪು ಲೈಟ್ ಹೌಸ್ ಬೀಚ್‌ನಲ್ಲಿ ‘ಕನ್ನಡಕ್ಕಾಗಿ ನಾವು’ ಸಮೂಹ ಗಾಯನ ಅಭಿಯಾನ ಕನ್ನಡದ ಶ್ರೇಷ್ಟತೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಮೂರು ಗೀತೆಗಳನ್ನು ಹಾಡುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ನಡೆಯಿತು. ಕಾಪು ತಹಶಿಲ್ದಾರ್‌ಶ್ರೀನಿವಾಸ ಮೂರ್ತಿ ಕುಲಕರ್ಣಿ ತಮಟೆ ಬಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ

ಮಾತಾಡು ಕನ್ನಡ : ಸಾಮೂಹಿಕ ಕನ್ನಡ ಗೀತೆ ಗಾಯನ

ಮಲ್ಪೆ : 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸರಕಾರದ ಆಶಯದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಗ್ರಾಮಪಂಚಾಯತ್ ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಮಾತನಾಡು ಕನ್ನಡ ಕಾರ್ಯಕ್ರಮದಲ್ಲಿ ಸಾಮೂಹಿಕ ಗೀತ ಗಾಯನ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಐದು ದಿನಗಳ ಕಾರ್ಯಕ್ರಮವನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಗೀತಾ

ತಣ್ಣೀರುಬಾವಿ ತೀರದಲ್ಲಿ ಲಕ್ಷ ಕಂಠಗಳ ಗೀತ ಗಾಯನ

ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಅ. 28ರ ಗುರುವಾರ ಬೆಳಿಗ್ಗೆ 11 ಗಂಟೆಗೆ ತಣ್ಣೀರುಬಾವಿ ಬೀಚ್‍ನಲ್ಲಿ ಕನ್ನಡ ಭಾಷೆಯ ಮಹತ್ವ ಸಾರುವ ಲಕ್ಷ ಕಂಠಗಳ ಸಮೂಹ ಗೀತ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೀತಗಾಯನ ಕಾರ್ಯಕ್ರಮವನ್ನು ಡೊಂಗರಕೇರಿಯ ಕೆನರಾ ಪ್ರೌಢಶಾಲೆ,

ಡಾ. ಪ್ರವೀಣ್ ಪುತ್ರ ರಚಿಸಿದ “ವಾರಿಯರ್ಸ್ ಆಫ್ ದಿ ಬ್ಲೂ” ಪೈಂಟಿಂಗ್ ಪ್ರದರ್ಶನ

ಮಂಗಳೂರು ಕರಾವಳಿ ಚೋತ್ರ ಕಲಾ ಚಾವಡಿ ಬಲ್ಲಾಲ್‌ಭಾಗ್ ವತಿಯಿಂದ ವಾರಿಯರ್ಸ್ ಆಫ್ ದಿ ಬ್ಯೂ ಡಾ. ಪ್ರವೀಣ್ ಪುತ್ರ ಅವರು ಮೀನುಗಾರಿಕೆಯ ಬಗ್ಗೆ ರಚಿಸಿದ ಪೈಂಟಿಂಗ್‌ನ ಪ್ರದರ್ಶನ ನಡೆಯಿತು. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಕರಾವಳಿ ಚೋತ್ರ ಕಲಾ ಚಾವಡಿಯ ಸೆಕ್ರೆಟರಿ ಡಾ. ಎಸ್.ಎಮ್ ಶಿವಪ್ರಕಾಶ್ ಅವರು, ಕಲಾವಿದ ಪ್ರವೀಣ್ ಪುತ್ರ ಅವರು, ಸುಮಾರು 2 ಸಾವಿರಕ್ಕೂ ಹೆಚ್ಚು ಪೈಂಟಿಂಗ್‌ಗಳನ್ನು ರಚಿಸಿ ಎಲ್ಲರ ಮನಸನ್ನು ಗೆದ್ದಿದ್ದಾರೆ. ಮೀನುಗಾರ ಸಮುದಾಯದವರ

ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ ಶ್ರೀ ವ್ಯಾಘ್ರ ಚಾಮುಂಡಿ ದೈವದ ದೈವಸ್ಥಾನದ ಶಿಲಾನ್ಯಾಸ

ಬಂಟ್ವಾಳ: ನಾವೂರು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಹೊರಾಂಗಣದ ನೈಋತ್ಯ ದಿಕ್ಕಿನಲ್ಲಿ ನೂತನವಾಗಿ ನಿರ್ಮಿಸಲ್ಪಡುವ ಶ್ರೀ ವ್ಯಾಘ್ರ ಚಾಮುಂಡಿ ದೈವದ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆಯಿತು. ಬೆಳಗ್ಗಿನ 10.15 ರ ಧನುರ್ಲಗ್ನ ಸುಮುಹೂರ್ತದಲ್ಲಿ ತಂತ್ರಿಗಳಾದ ಶ್ರೀ ಪಾದ ಪಾಂಗಣ್ಣಾಯ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಶಿಲಾನ್ಯಾಸ ನೆರೆವೇರಿಸಿದರು. ಈ ಸಂದರ್ಭ ದೇವಸ್ಥಾನದ ಅರ್ಚಕರಾದ ವೆಂಕಟದಾಸ್ ಭಟ್,