Home Articles posted by v4news (Page 35)

ಗೋಳಿತೊಟ್ಟು: ಟೆಂಪೋ, ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಸವಾರ ಮೃತ್ಯು

ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಿಂದ ಬಂದ ಟೆಂಪೋವೊಂದು ದ್ವಿಚಕ್ರ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಾಯಗೊಂಡ ಘಟನೆ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ ನಡೆದಿದೆ. ಮಂಗಳೂರಿನ ಕುಂಟಲ್ಪಾಡಿಪದವು ನಿವಾಸಿ ಸಚಿನ್ (29) ಮೃತ ದ್ವಿಚಕ್ರ ಸವಾರ. ಈತನೊಂದಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿಯ

ಕೊಣಾಜೆ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನ

ಉಳ್ಳಾಲ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಬಿಜೆಪಿ ಕಾರ್ಯಕರ್ತ, ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ

ಬಂಟ್ವಾಳದ ಮಂಡಾಡಿಯಲ್ಲಿ ಭಗವಧ್ವಜ, ಹನುಮಾನ ಚಿತ್ರಕ್ಕೆ ಹಾನಿ : ಪ್ರಕರಣ ದಾಖಲು

ಬಂಟ್ವಾಳದ ಎಸ್‍ಎಸ್ ಕಾಲೇಜಿನ ಬಳಿ ಇರುವ ಮಂಡಾಡಿ ಮಾರ್ಗಸೂಚಿ ಕಟ್ಟೆಹಾಗೂ ಅದರಲ್ಲಿದ್ದ ಭಗವಧ್ವಜ ಹಾಗೂ ಹನುಮನ ಚಿತ್ರವನ್ನು ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ನಡೆದಿದೆ. ಕಳೆದ 10-12 ವರ್ಷಗಳಿಂದ ಈ ಕಟ್ಟೆ ಇದ್ದು, ಕಳೆದ ಕೆಲವು ದಿನಗಳ ಹಿಂದೆ ವಿಶ್ವಹಿಂದೂಪರಿಷತ್ ಮಂಡಾಡಿ ಶಾಖೆಯು ನವೀಕರಣಗೊಳಿಸಿತ್ತು. ಇದನ್ನು ಸಹಿಸದ ದುಷ್ಕರ್ಮಿಗಳು ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಒಡೆದು ಹಾಕಿ, ಭಗವಧ್ವಜವನ್ನು ಕಿತ್ತೊಯ್ದಿದ್ದಾರೆ. ನಿನ್ನೆ ರಾತ್ರಿ 2 ಗಂಟೆ

ಮಂಜೇಶ್ವರದಲ್ಲಿ ಸಂಭ್ರಮದ ಇದ್ ಮಿಲಾದ್ ಆಚರಣೆ

ಮಂಜೇಶ್ವರ: ಪ್ರಸಿದ್ದವಾಗಿರುವ ಉದ್ಯಾವರ ಸಾವಿರ ಜಮಾಹತ್ ಖಿದ್ಮತುಲ್ ಇಸ್ಲಾಮ್ ಕಮಿಟಿಯ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು. ಅಸಯ್ಯದ್ ಶಹೀದ್ ವಲಿಯುಲ್ಲಾಯಿ (ಖ. ಸಿ) ರವರ ದರ್ಗಾ ಶೆರೀಫ್ ನಲ್ಲಿ ನಡೆದ ಪ್ರಾಥಣೆಯ ಬಳಿಕ ಮಸೀದಿ ಅಧ್ಯಕ್ಷ ಸೈಫುಲ್ಲಾ ತಂಘಲ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬಳಿಕ ಉದ್ಯಾವರ ಸಾವಿರ ಜಮಾಹತ್ ಖತೀಬ್ ಅಬ್ದುಲ್ ಕರೀಂ ಧಾರಿಮಿಯವರು ಮಸೀದಿ ಅಧ್ಯಕ್ಷರಿಗೆ

ಪಕ್ಷಿ ಸಂಕುಲದ ಉಳಿವಿಗಾಗಿ ದಂಪತಿಗಳಿಂದ ವಿಶಿಷ್ಟ ಕಾರ್ಯ

ಮಂಗಳೂರು: ಮಾನವನ ಅಭಿವೃದ್ಧಿಯ ತೆವಲಿಗೆ ಅದೆಷ್ಟೋ ಪ್ರಾಣಿ, ಪಕ್ಷಿ ಸಂಕುಲ, ಸೂಕ್ಷ್ಮಜೀವಿಗಳು ಬಲಿಯಾಗುತ್ತಿವೆ. ಕಾಡು ಕಡಿದು ನಾಡು ಮಾಡಿ ತನ್ನ ಇರವನ್ನು ಗಟ್ಟಿ ಮಾಡಿಕೊಂಡ ಮಾನವ ಪರಿಸರದ ಇತರ ಜೀವಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡ ಇದರಿಂದ ನೆಲೆಕಳೆದುಕೊಂಡು ಅದೆಷ್ಟೋ ಜೀವಿಗಳು ಕಣ್ಮರೆಯಾಗಿವೆ. ಆದರೆ ಪ್ರಾಣಿ – ಪಕ್ಷಿಗಳ ಮೇಲೆ ಕಾಳಜಿ ಇದ್ದವರು ಇಲ್ಲವೆಂದೇನೂ ಇಲ್ಲ. ಅದೇ ರೀತಿ ಇಲ್ಲೊಂದು ದಂಪತಿ ಪಕ್ಷಿಗಳು ಗೂಡು ಕಟ್ಟಲು ನೆರವಾಗುವ ಮೂಲಕ ಪಕ್ಷಿ

ವಕೀಲನ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ

ಮಂಗಳೂರು: ಇಂಟರ್ನ್‍ಶಿಪ್ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಖ್ಯಾತ ವಕೀಲ ಕೆ .ಎಸ್.ಎನ್.ರಾಜೇಶ್ ಭಟ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಸಂತ್ರಸ್ತ ವಿದ್ಯಾರ್ಥಿನಿಯು ವಕೀಲರ ವಿರುದ್ಧ ನಿನ್ನೆ ರಾತ್ರಿ ನೀಡಿದ ದೂರಿನ ಮೇರೆಗೆ ಮಂಗಳೂರು ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ವಕೀಲ ರಾಜೇಶ್ ಭಟ್ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್ ಎಲ್ ಬಿ

ಲಾಡ್ಜ್ ವೊಂದರಲ್ಲಿ ಯುವಕನ ಕೊಲೆ ಪ್ರಕರಣ : ಐವರ ಬಂಧನ

ನಗರದ ಪಂಪ್‌ವೆಲ್‌ನ ಲಾಡ್ಜ್ ಒಂದರಲ್ಲಿ ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕರ ನಡುವಿನ ಜಗಳದ ಸಂದರ್ಭ ನಡೆದ ಕೊಲೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್‌ನ ಜಾಯ್ಸನ್ ಯಾನೆ ಜೇಸನ್ (21), ಜೆಪ್ಪು ಬಪ್ಪಾಲ್‌ನ ಪ್ರಮೀತ್ ಡಿ (24), ವಾಮಂಜೂರಿನ ಕಾರ್ತಿಕ್ (21), ಪಚ್ಚನಾಡಿಯ ಪ್ರಜ್ವಲ್ (22), ದುರ್ಗೇಶ್ (22) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ 2021ರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಸಮಾಜದಲ್ಲಿ ಅರಿವಿನ ಕೊರತೆಯಿಂದ ಅಸಮಾನತೆ ಉಂಟಾಗಿದೆ.‌ಇದನ್ನು ಸರಿಪಡಿಸುವ ಜವಾಬ್ದಾರಿ ಮನಶ್ಶಾಸ್ತ್ರಜ್ಞರದ್ದಾಗಿರುತ್ತದೆ ಎಂದು ಮಹಾರಾಷ್ಟ್ರದ ವಾರ್ಧಾದ ಮಹಾತ್ಮಾ ಗಾಂಧಿ ಹಿಂದಿ ವಿಶ್ವವಿದ್ಯಾಲಯದ ಕುಲಪತಿ, ವಿಜ್ಞಾನಿ ಪ್ರೊ. ಗಿರೀಶ್ ಮಿಶ್ರಾ ನುಡಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ 2021ರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ “ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ” ರಾಷ್ಟ್ರೀಯ ವರ್ಚುವಲ್

ಪ್ರತಿಯೊಂದು ಕಾರ್ಯಕ್ಕೂ ಯೋಜನೆ ಬಹಳ ಮುಖ್ಯ – ಡಿ. ಹರ್ಷೇಂದ್ರ ಕುಮಾರ್

ಯಾವುದೇ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೇ ಕಾರ್ಯಕರ್ತರ ಕೈಗುಣಗಳ ಜೊತೆಗೆ ಅವರ ಉತ್ಸಾಹ ಮುಖ್ಯವಾಗಿರುತ್ತದೆ. ಅಂತಹ ಸಮಾರಂಭವು ಸದಾ ನೆನಪಿನಲ್ಲಿರುತ್ತದೆ. ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕರ್ನಾಟಕದ ಮೂರನೇ ರಾಜ್ಯ ಅಧಿವೇಶನದ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಸಮ್ಮೇಳನವನ್ನು ರೂಪಿಸುವುದು ಮಹಾ ಸಂಗತಿಯಲ್ಲ ಆದರೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ : ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಪ್ರಶಸ್ತಿ

ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಸೇವಾ ಯೋಜನೆ 2017-18, 2018-19 ಹಾಗೂ 2019-20 ಈ ಸಾಲಿನ ರಾಜ್ಯ ಪ್ರಶಸ್ತಿಗಳು ಪ್ರದಾನವನ್ನು 12.10.2021 ರಂದು ಮಾಡಿರುತ್ತದೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು 2018-19 ಹಾಗೂ 2019-20 ಸಾಲಿನ ಅತ್ಯುತ್ತಮ ಘಟಕ ಪ್ರಶಸ್ತಿಗಳನ್ನು ಪಡೆದಿರುತ್ತವೆ.ಈ ಘಟಕಗಳ ಯೋಜನಾಧಿಕಾರಿಗಳಾದ ಸಸ್ಯಶಾಸ್ತ್ರ