Home Articles posted by v4news (Page 38)

ದುರ್ಗಾ ದೌಡ್ ಕಾರ್ಯಕ್ರಮಕ್ಕೆ ನಂದಿಕೂರಿನಲ್ಲಿ ಚಾಲನೆ

ಉಡುಪಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ನೆರಳಲ್ಲಿ ನಡೆಯುವ “ದುರ್ಗಾ ದೌಡ್ ” ಧಾರ್ಮಿಕ ಕಾರ್ಯಕ್ರಮಕ್ಕೆ ನಂದಿಕೂರು ಹಾಗೂ ಪಲಿಮಾರು ಘಟಕದಿಂದ ನೂರಾರು ಕಾರ್ಯಕರ್ತರು ನಂದಿಕೂರಿನಿಂದ ಬೈಕ್, ಕಾರು ಹಾಗೂ ಬಸ್ ಮೂಲಕ ತೆರಳಿದ್ದು ಅವರ ಜಾಥಕ್ಕೆ ಸ್ಥಳೀಯ ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಉಡುಪಿಯಲ್ಲಿ

ಬಳ್ಳಾಲ್‍ಬಾಗ್ ಫ್ರೆಂಡ್ಸ್ ವತಿಯಿಂದ ನಡೆದ ಊದು ಕಾರ್ಯಕ್ರಮ

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಮಂಗಳೂರು ದಸರಾ ಶೋಭಾಯಾತ್ರಗೆ ಬಳ್ಳಾಲ್‍ಭಾಗ್ ಫ್ರೆಂಡ್ಸ್ ವತಿಯಿಂದ 14ನೇ ವರ್ಷದ ಊದು ಇಡುವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಬಳ್ಳಾಲ್‍ಭಾಗ್ ಫ್ರೆಂಡ್ಸ್‍ನ ಉಪಾಧ್ಯಕ್ಷರಾದ ರಕ್ಷಿತ್ ಕೊಟ್ಟಾರಿ ನೇತೃತದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ದಸರಾ ಕಾರ್ಯಕ್ರಮದಲ್ಲಿ 14ನೇ ವರ್ಷದ ಹುಲಿಕುಣಿತಕ್ಕೆ ಚಾಲನೆ ನೀಡಿದ್ದೇವೆ. ಹುಲಿ ಕೋವಿಡ್ ನಿಯಮಾನುಸಾರ ನಡೆಯಲಿದೆ ಎಂದು

ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ : ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋದ ಪೋಷಕರು

ಮಂಗಳೂರು : ನಗರದ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಡಿಸ್ಚಾರ್ಜ್ ವೇಳೆ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸೆಪ್ಟಂಬರ್ ೨೮ ರಂದು ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಅಂಬ್ರೀನ್ ಅವರಿಗೆ ಮಂಗಳೂರಿನ ಲೇಡಿಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಆಸ್ಪತ್ರೆಯಲ್ಲಿ ಇದ್ದಷ್ಟು ದಿನ

ಶಾಸಕ ಉಮಾನಾಥ ಕೋಟ್ಯಾನ್ ಬಗ್ಗೆ ಅಪಪ್ರಚಾರ : ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲದಿಂದ ಖಂಡನೆ

ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ರಾಷ್ಟ್ರಾಭಿಮಾನ ಮತ್ತು ಹಿಂದುತ್ವವನ್ನು ಎತ್ತಿ ಹಿಡುವ ಪಕ್ಷವಾಗಿದೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡಾ ಇದರ ಕಾರ್ಯಕರ್ತರಿಂದಲೇ ಆಯ್ಕೆಯಾಗಿ ಬಂದು ಅಭಿವೃದ್ಧಿಯ ಜೊತೆಗೆ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಅವರ ಜನಪ್ರಿಯತೆಯನ್ನು ಸಹಿಸದ ರಾಜಕೀಯ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ-ಸುದ್ದಿ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿರುವುದನ್ನು ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲವು

ಸುರತ್ಕಲ್‌ ನಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಅಧಿಕೃತ ಕಚೇರಿ ಶುಭಾರಂಭ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಅವರ ದ್ವಿತೀಯ ಅಧಿಕೃತ ಕಚೇರಿ ಮಂಗಳೂರು ಮಹಾನಗರಪಾಲಿಕೆಯ ಸುರತ್ಕಲ್ ವಲಯ ಕಚೇರಿಯ ನೂತನ ಕಟ್ಟಡದಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ಬಿಜೆಪಿ ರಾಜ್ಯಾಧ್ಯಕ್ಷರೂ, ಸಂಸದರೂ ಆಗಿರುವ ಮಾನ್ಯ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕಾಳಪ್ಪ ಗೌಡ ಉದ್ಘಾಟಿಸಿದರು. ಈ ಸಂದರ್ಭ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಡಾ. ಭರತ್ ಶೆಟ್ಟಿ ಅವರು ಕಳೆದ ನಾಲ್ಕು

ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಎಂ ಗೆ ಮನವಿ

ಮಂಗಳೂರು: ಕೋರೋನಾ ಸೋಂಕಿನಿಂದ ಮೃತಪಟ್ಟ ಯಶವಂತ ಐಕಳ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು.‌ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಪ್ರೆಸ್

ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣ ಪತ್ರದಲ್ಲಿ ಎಡವಟ್ಟು, ಸೂಕ್ತ ತುರ್ತು ಕ್ರಮಕ್ಕಾಗಿ ಮನವಿ

ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪದವಿ/ಸ್ನಾತಕೋತ್ತರ ಪದವಿಯ ಖಾಸಗಿ ಕೋಟಾದ ಸೀಟುಗಳ ಪ್ರವೇಶ ಬಯಸುವ ವಿದ್ಯಾರ್ಥಿಗಳು‌ ತಾಲೂಕು ತಹಶೀಲ್ದಾರರಿಂದ ನಿಗದಿತ ನಮೂನೆಯಲ್ಲಿ (ಅನುಬಂಧ 4ಎ) ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣಪತ್ರ ಪಡೆದು, ಆನ್‍ಲೈನ್ ಕೌನ್ಸಿಲಿಂಗ್’ನ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಹಾಜರು ಪಡಿಸಬೇಕೆಂಬುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮ. ಆದರೆ, ನಿಗದಿತ ನಮೂನೆ (ಅನುಬಂಧ 4ಎ)ಯಲ್ಲಿ ಧಾರ್ಮಿಕ

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿ ಹುಡಿ : ಉತ್ತಮ ಇಳುವರಿ ಪಡೆಯುತ್ತಿರುವ ಕೃಷಿಕರು

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿ ಹುಡಿ ಬಳಸಿ ಉತ್ತಮ ಇಳುವರಿ ಪಡೆಯುವ ಮೂಲಕ ಪುತ್ತೂರು ತಾಲೂಕಿನ ಇಂಜಿನಿಯರಿಂಗ್ ಪದವೀಧರ ಕೃಷಿಕರೊಬ್ಬರ ಪ್ರಯೋಗ ಯಶಸ್ವಿಯಾಗಿದೆ. ಭೂಮಿಯನ್ನು ರಾಸಾಯನಿಕ ಮುಕ್ತವಾಗಿಸುವಲ್ಲಿ ಪರಿಣಾಮಕಾರಿ ಪ್ರಯೋಗಗಳು ಅಲ್ಲಲ್ಲಿ ರೈತರಿಂದಲೇ ನಡೆಯುತ್ತಿದ್ದು, ಪುತ್ತೂರಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಜಯಗುರು ಆಚಾರ್ ಸೆಗಣಿ ಹುಡಿ ಗೊಬ್ಬರದ ಮೂಲಕ ಸಾವಯವ ಕೃಷಿಗೆ ಹೊಸ ರೂಪ ನೀಡಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಗುಡ್‍ಬೈ ಹೇಳಿ

ಪ್ರೇತ ವೇಷದ ಮೂಲಕ ಹರಕೆ ತೀರಿಸುತ್ತಿರುವ ವ್ಯಕ್ತಿ

ನವರಾತ್ರಿ ಬಂತೆಂದರೆ ಸಾಕು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ದೇವಿ ಆರಾಧನೆಗಳು ನಡೆದರೆ, ಇನ್ನೊಂಡೆ ವಿವಿಧ ವೇಶಧಾರಿಗಳು ಮನೆ ಮನೆಗೆ ಆಗಮಿಸುವ ಮೂಲಕ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಇಂಥಹುದೇ ಒಂದು ವೇಷದ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ ಹದಿಮೂರು ವರ್ಷಗಳಿಂದ ಗಮನಸೆಳೆಯುತ್ತಿದ್ದಾರೆ. ವಿಶೇಷವಾದ ಪ್ರೇತದ ವೇಷದ ಮೂಲಕ

REPORT ON NAVARATHRI CELEBRATIONS 2021

College of Physiotherapy, Srinivas University organized Navratri celebration on 12th October, 2021 between 05.30 pm to 09.00 pm at the Srinivas Convention Hall, GHS road, Mangalore. Dr. CA. A. RaghavendraRao, Chancellor of Srinvas University and President of A. ShamaRao foundation; Dr. Ajay Kumar, Registrar (Development) of Srinivas University, Dr. S. Rajasekar, Dean,