Home Articles posted by v4news (Page 40)

ವಿಟ್ಲದ ಇಡ್ಕಿದು ಎಂಬಲ್ಲಿ ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು

ವಿಟ್ಲ: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ಸವಾರರೋರ್ವರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ನಡೆದಿದೆ   ನಿಡ್ಪಳ್ಳಿ ಗ್ರಾಮದ ವಾಲ್ತಾಜೆ ನಾರಾಯಣ ನಾಯ್ಕ್ ರವರ ಪುತ್ರ, ರಿಬ್ಕೋ ಟ್ರೇಡಿಂಗ್ ಕಂಪೆನಿಯ ನೌಕರ ಸುರೇಶ್ ನಾಯ್ಕ್ ಮೃತ

ಪ್ರಾಯೋಗಿಕ ಕಂಬಳದಲ್ಲಿ ಮೂಡಿ ಬಂದ ಭರವಸೆಯ ಓಟಗಾರರಿಗೆ ಬಹುಮಾನ

ಮೂಡುಬಿದಿರೆ : ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಆಶ್ರಯದಲ್ಲಿ 6ನೇ ವರ್ಷದ ಶಿಬಿರಾರ್ಥಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕಡಲಕೆರೆಯ ಕೋಟಿ ಚೆನ್ನಯ ಜೋಡುಕರೆ ಕಂಬಳ ಕೆರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ರೆಂಜಾಳ ಡ್ರೀಮ್ ಹೌಸ್ ವಲೇರಿಯನ್ ಸಾಂತ್‌ಮೇರ್ (ಪ್ರ), ಬೈಂದೂರು ದುರ್ಗಾ ಫ್ರೆಂಡ್ಸ್ (ದ್ವಿ) ನೇಗಿಲು ವಿಭಾಗದ ಈದು ಬಟ್ಟೇನಿ ಶ್ರೀಧರ್ ಗಿರಿಯಪ್ಪ ಪೂಜಾರಿ(ಪ್ರ) ಮತ್ತು ಶ್ರೀ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನ ಪಡೆದ ಸಚಿವ ಅರಗ ಜ್ಞಾನೇಂದ್ರ

ಕುಂದಾಪುರ : ರಾಜ್ಯ ಗ್ರಹ ಸಚಿವ ಅರಗ ಜ್ಞಾನೇಂದ್ರ ಅವರು ಮಂಗಳವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಪ್ರಫುಲ್ಲಾ ಹಾಗೂ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ಶ್ರೀ ದೇವಿಗೆ ಚಂಡಿಕಾ ಹೋಮ ಸಹಿತ ವಿಶೇಷ ಪೂಜೆ ಸಲ್ಲಿಸಿದರು.ಸಚಿವ ಅರಗ ಜ್ಞಾನೇಂದ್ರ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ದೇವಸ್ಥಾನದ

ಕುಂಟಿಕಾನದಲ್ಲಿ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ : ಸ್ಕೂಟರ್ ಸವಾರನಿಗೆ ಗಾಯ

ಮಂಗಳೂರಿನ ಕುಂಟಿಕಾನದ ಎಜೆ ಆಸ್ಪತ್ರೆಯ ಮುಂಭಾಗದಲ್ಲಿ ಖಾಸಗಿ ಬಸ್‌ನ ಹಿಂಬದಿಗೆ ಸ್ಕೂಟರ್ ವಾಹನ ಢಿಕ್ಕಿಯಾಗಿದ್ದು, ಸ್ಕೂಟರ್ ಸವಾರ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಬಸ್‌ನ ಹಿಂಬದಿಗೆ ದ್ವಿಚಕ್ರ ವಾಹನ ಸವಾರ ಹಿಮ್ಮುಖವಾಗಿ ಢಿಕ್ಕಿಯಾಗಿದೆ. ಢಿಕ್ಕಿಯಾದ ರಭಸಕ್ಕೆ ದ್ವಿಚಕ್ರವಾಹನ ಸವಾರ ಬಸ್‌ನ ಅಡಿಗೆ ನುಗ್ಗಿದ್ದು, ಗಂಭೀರ ಗಾಯಗೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ -ಕಮ್ -ಹೀಟರ್ನ ನ ಕೊಡುಗೆ

ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ ಕಂ ಹೀಟರ್ ನ್ನು ಭಾರತೀಯ ಜೀವ ವಿಮಾ ನಿಗಮವು ಕೊಡುಗೆಯಾಗಿ ನೀಡಿದೆ. ಈ ಕಾರ್ಯ ಮಾದರಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾ ಪ್ರಸಾದ್ ಅವರು ಹೇಳಿದರು. ಭಾರತೀಯ ಜೀವವಿಮಾ ನಿಗಮದ 65ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ಪತ್ರೆಯ ಸುಪರಿಂಟೆಂಡೆಂಟ್ ಅವರು ವಾಟರ್ ಪ್ಯುರಿಫಯ್ಯರ್ ಕಂ ಹೀಟರ್ ಅನ್ನು ಸ್ವೀಕರಿಸಿ ಮಾತನಾಡಿದರು. ನಿಗಮದ ಮಂಗಳೂರು ಶಾಖೆಯ ಹಿರಿಯ ಪ್ರಬಂಧಕರಾದ ಶ್ರೀ ಎಚ್

ಮೂಡುಬಿದಿರೆ : ಎಸ್‌ ಕೆ ಎಸ್‌ ಎಸ್‌ ಎಫ್‌ ನಿಂದ ಪ್ರತಿಭಟನೆ

ಮೂಡುಬಿದಿರೆ: ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ನಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು. ವಾಗ್ಮಿ ಅಹ್ಮದ್ ನಹೀಮ್ ಪೈಝಿ ಮುಕ್ವೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿ ದೇಶ ಒಡೆಯುವ ಕೋಮುವಾದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಆಹಾರದ ಕಾರಣಕ್ಕಾಗಿ ನಮ್ಮ ಮೇಲೆ ದೌರ್ಜನ್ಯವೆಸಗುವ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದೇನೆ : ಶೇಖರಗೌಡ ಮಾಲಿಪಾಟೀಲ

ಕನ್ನಡದ ಗರಿಮೆ, ಹಿರಿಯೆಯ ಪ್ರತೀಕವಾದ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಲು ಸಮರ್ಥ ನಾಯಕತ್ವ ಅಗತ್ಯವಿದೆ. ಇಂಥ ಪ್ರಾತಿನಿಧಿಕ ಸಂಸ್ಥೆಗೆ ರಾಜ್ಯದ ಅನೇಕ ಹಿರಿಯ ಸಾಹಿತಿಗಳು, ಸಂಘಟಕರು, ಜನಪರ ಸಂಘಟನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳ ಒತ್ತಾಯದಿಂದ ಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದೇನೆ ಎಂದು ಶೇಖರಗೌಡ ಮಾಲಿಪಾಟೀಲ ಹೇಳಿದರು. ಮಂಗಳವಾರ ಕನ್ನಡ ಸಾಹಿತ್ಯ

ಕೊಟ್ಟಾರ ಚೌಕಿಯಲ್ಲಿ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭ

ಹೊಂಡಾ ಮೋಟಾರ್‍ಸ್‌ನವರ ಅತ್ಯುನ್ನತ ಶ್ರೇಣಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭಗೊಂಡಿತು. ನಗರದ ಕೊಟ್ಟಾರ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ದ್ವಿಚಕ್ರ ವಾಹನ ಪ್ರೀಯರ ನೆಚ್ಚಿನ ಶೋರೋಂ ಆಗಿರುವ ಹೊಂಡಾ ಮೊಟಾರ್‍ಸ್‌ನವರ ಹೊಂಡಾ ಬಿಗ್ ವಿಂಗ್ ನಗರದ ಕೊಟ್ಟಾರ್ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ಹೊಂಡಾ ಬಿಗ್ ವಿಂಗ್ ಮಳಿಗೆಯನ್ನು ಇಂಡಿಯನ್ ಐಡಲ್ 12 ರ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸಚಿನ್

ಉಪ್ಪಿನಂಗಡಿ: ಬಸ್ ಹರಿದು ತಾಯಿ, ಮಗು ಸಾವು

ಉಪ್ಪಿನಂಗಡಿ: ಅತೀ ವೇಗದಿಂದ ಬಸ್ ನಿಲ್ದಾಣದೊಳಗೆ ಬಂದ ಕೆಎಸ್ಸಾರ್ಟಿಸಿ ಬಸ್‌ನಡಿಗೆ ಸಿಲುಕಿ ತಾಯಿ ಹಾಗೂ ಆಕೆಯ ಒಂದು ವರ್ಷದ ಪುತ್ರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಸಿದ್ದೀಕ್ ಎಂಬವರ ಪತ್ನಿ ಶಾಹಿದಾ (25) ಹಾಗೂ ಆಕೆಯ ಒಂದು ವರ್ಷದ ಪುತ್ರ ಶಾಹೀಲ್ ಮೃತಪಟ್ಟ ದುರ್ದೈವಿಗಳು. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ