Home Articles posted by v4news (Page 44)

ಅನಿಮಲ್ ಪ್ರಿಂಟ್ ಮೂಲಕ ಗಮನ ಸೆಳೆದ ಡಾ, ಜ್ಯೋತಿ ಬೆಹಲ್

ಬೆಂಗಳೂರಿನ ಜನಪ್ರಿಯ ಫ್ಯಾಶನ್ ಡಿಸೈನರ್ ಡಾ.ಜ್ಯೋತಿ ಬೆಹಲ್ ಅವರು ವೈವಿಧ್ಯಮಯ ಫ್ಯಾಶನ್ ಶೂಟ್‍ಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಶಿವ ರೂಪಿಣಿಯಾಗಿ ಮಿಂಚಿದ್ದ ಅವರು ಇದೀಗ ಅನಿಮಲ್ ಪ್ರಿಂಟ್ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದಾರೆ. ತಾವೇ ಡಿಸೈನ್ ಮಾಡಿದ ಅನಿಮಲ್ ಪ್ರಿಂಟ್ ಡಿಸೈನರ್ ವೇರ್ ಗೆ ಸ್ವತಾ: ಡಾ.ಜ್ಯೋತಿ ಬೆಹಲ್ ಅವರು ಮೊಡೆಲ್ ಆಗಿ ಪೊಟೋ

ಚೆಲುವಿನ ಚುಲುಬುಲೀಸ್ ಮಹಿಳೆಯರಿಂದ ದಾಂಡಿಯಾ ಸಂಭ್ರಮ

ಕೊರೊನಾ ಕಾರಣದಿಂದಾಗಿ ಅದೆಷ್ಟೋ ಮಂದಿ ಕಳೆದ ಎರಡು ವರ್ಷಗಳಿಂದ ಮನೆಯ ಹೊರಗಿನ ಆಯೋಜನೆಯ ಸಾಂಸ್ಕøತಿಕ ಕಾರ್ಯಕ್ರಮ , ಸಂಭ್ರಮದಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಸನ್ನಿವೇಶವು ಸಹಜ ಸ್ಥಿತಿಗೆ ಬರುತ್ತಿದ್ದು, ಸಾಂಸ್ಕøತಿಕ ಕಲರವ ಸಂಭ್ರಮ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನ ಚೆಲುವಿನ ಚುಲುಬುಲೀಸ್ ಮಹಿಳಾ ತಂಡದವರು ಖ್ಯಾತ ಡಿಸೈನರ್ ಹಾಗೂ ಮೋಡೆಲ್ ಪ್ರಿಯಾ ಕುಮಾರ್ ನೇತೃತ್ವದಲ್ಲಿ ದಾಂಡಿಯಾ ನೃತ್ಯ ಆಯೋಜನೆಯ ಮೂಲಕ ನವರಾತ್ರಿಯವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ಮಂಗಳೂರು ನಗರದ ಕೊಲೊಸೊ ಕಾಲೇಜಿನ ವಿದ್ಯಾರ್ಥಿನಿ ನೀನಾಳ ಸಾವಿನ ತನಿಖೆಗೆ ಎಸ್.ಎಫ್.ಐ. ಒತ್ತಾಯ

ಮಂಗಳೂರು ನಗರದ ಕೊಲೊಸೊ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಜನೆ ಮಾಡುತ್ತಿದ್ದ ಕಾಸರಗೋಡು ಮೂಲದ ವಿದ್ಯಾರ್ಥಿನಿ ನೀನಾ ಹಾಸ್ಟೇಲ್‌ನ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿದೆ. ವಿದ್ಯಾರ್ಥಿನಿಯು ಆತ್ಮಹತ್ಯೆಗೈಯಲು ಹಾಸ್ಟೆಲ್‌ನಲ್ಲಿ ನೀಡುವ ಮಾನಸಿಕ ಕಿರುಕುಳವೇ ಕಾರಣ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು ಪೊಲೀಸ್ ಇಲಾಖೆ ವಿದ್ಯಾರ್ಥಿ ನೀನಾಳ

ಮೋರ್ಗನ್ಸ್ ಗೇಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಸುಧೀಂದ್ರ ಪ್ರಭು ಸಾವು

ನಗರದ ಮೋರ್ಗನ್ಸ್‌ಗೇಟ್‌ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಶುಕ್ರವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ.ಉದ್ಯಮಿ ರಾಜೇಶ್ ಪ್ರಭು ಎಂಬಾತನ ಪುತ್ರ ಸುಧೀಂದ್ರ (16) ಮೃತ ಬಾಲಕ. ಅ.5ರಂದು ತಂದೆಯಿಂದಲೇ ಗುಂಡೇಟಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುಧೀಂದ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಆತನ ಮೆದುಳು ನಿಷ್ಕ್ರಿಯಗೊಂಡ ವಿಷಯವನ್ನು ವೈದ್ಯರು ಘೋಷಿಸಿದ್ದರು. ಶುಕ್ರವಾರ ನಸುಕಿನಜಾವ

ಶೃಂಗೇರಿಗೆ ಪ್ರಯಾಣ ಬೆಳೆಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ರಾಷ್ಟ್ರಪತಿ ರಾಮನಾಥ ಕೋವಿಂದ್  ಅವರ ಮೂರು ದಿನಗಳ ಕರ್ನಾಟಕ ರಾಜ್ಯ ಪ್ರವಾಸದ ಸಂದರ್ಭದಲ್ಲಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಮೈಸೂರಿಗೆ ತೆರಳಿ ಗುರುವಾರ ರಾತ್ರಿ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಕರಾವಳಿಯ ಆತಿಥ್ಯವನ್ನು ಸ್ವೀಕರಿಸಿ ಇಂದು ಬೆಳಗ್ಗೆ 10.45ಕ್ಕೆ ಶೃಂಗೇರಿಗೆ ಪ್ರಯಾಣ ಬೆಳೆಸಿದರು. ಗುರುವಾರ ಸಂಜೆ 6:50ಕ್ಕೆ ಭಾರತೀಯ ವಾಯು ಪಡೆಯ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಳಿದಾಗ ಗೌರವ

ಪಡುಬಿದ್ರಿ:ವಿಷದ ಹಾವು ಕಡಿದು ವ್ಯಕ್ತಿ ಸಾವು

ಪಡುಬಿದ್ರಿ: ತೆನೆ ಹಬ್ಬಕ್ಕಾಗಿ ಗದ್ದೆಗೆ ತೆನೆ ತರಳು ಹೋಗಿದ್ದ ವ್ಯಕ್ತಿಗೆ ವಿಷ ಜಂತು ಕಡಿದು ಸಾವನ್ನಪ್ಪಿದ ಘಟನೆ ಎರ್ಮಾಳು ನಟ್ಟಿ ಮನೆ ಎಂಬಲ್ಲಿ ನಡೆದಿದೆ. ಎರ್ಮಾಳು ಮಲ್ಲಕ್ಕ ನಟ್ಟಿ ಮನೆ ನಿವಾಸಿ ಚಂದ್ರಶೇಖರ ಪೂಜಾರಿ (44) ಇವರೇ ಈ ದುರ್ದೈವಿ. ಗುರುವಾರ ನಡೆಯಲಿದ್ದ ತೆನೆ ಹಬ್ಬಕ್ಕೆ ತಮ್ಮದೇ ಕೃಷಿ ಗದ್ದೆಗೆ ತೆನೆ ತರಲು ಹೋದಾಗ ಏನೋ ಕಾಲಿಗೆ ಕಡಿದ ಅನುಭವವಾಗಿದ್ದು ಮನೆಗೆ ಬಂದ ಅವರು ಪತ್ನಿ ಉಷಾ ಅವರಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಅವರು ಪರಚಿದಂತಿದ್ದ

ಸಿನಿಮಾ ನಿರ್ಮಾಣ ಕಾರ್ಯಾಗಾರಕ್ಕೆ ಚಾಲನೆ

ಸಿನಿಮಾಒಂದುಮೂಲಸ್ವರೂಪವನ್ನು ಉಳಿಸಿಕೊಂಡು ಕಾಲದಿಂದ ಕಾಲಕ್ಕೆ ವಿಕಸನ ಹೊಂದುತ್ತಿರುವ ಒಂದು ಪ್ರಭಲ ಸಮೂಹ ಮಾಧ್ಯಮ. ಸಿನಿಮಾ ನಿರ್ಮಾಣದ ಮಜಲುಗಳನ್ನು ಅರಿಯಲು, ಪಾಯೋಗಿಕ ತರಬೇತಿ ನೀಡಲು ಈ ಕಾರ್ಯಾಗಾರ ಒಂದು ಅತ್ಯುತ್ತಮ ಯೋಜನೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ಸತೀಶ್ ಚಂದ್ರ ಅಭಿಪ್ರಾಯ ಪಟ್ಟರು. ಇಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಬಿವೋಕ್ – ಡಿಜಿಟಲ್ ಮಾಧ್ಯಮ ಮತ್ತು ಸಿನಿಮಾ ನಿರ್ಮಾಣ(ಡಿಎಂಎಫ಼್) ವಿಭಾಗ, ಭೋಧಿ

ಉಳ್ಳಾಲ : ಮನೆಗೆ ನುಗ್ಗಿ ಬೆಲೆ ಬಾಳುವ ಸೊತ್ತು ಕಳವು

ಉಳ್ಳಾಲ: ಮನೆಗೆ ನುಗ್ಗಿದ ಕಳ್ಳರು ಲಕ್ಷ ಬೆಲೆಬಾಳುವ ಸೊತ್ತುಗಳನ್ನು ಕಳವು ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ. ವಿದೇಶದಲ್ಲಿ ವಾಸವಿರುವ ಸುಜಾತಾ ಎಂಬವರ ಮನೆಯಲ್ಲಿ ಕಳವು ನಡೆದಿದೆ.ಲಕ್ಷ ಬೆಲೆಬಾಳುವ ಮೂರು ಕಂಚಿನ ದೀಪಗಳನ್ನು ಕಳ್ಳರು ಕಳವು ನಡೆಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ತಿಳಿದು ಕಳ್ಳರು ಕೃತ್ಯ ಎಸಗಿದ್ದಾರೆ. ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಸೊತ್ತುಗಳಿಗಾಗಿ ಹುಡುಕಾಡಿ ಬಳಿಕ ಏನೂ

ವೆನ್ಲಾಕ್ ಆಸ್ಪತ್ರೆಯಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕ ಲೋಕಾರ್ಪಣೆ

ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವಠಾರದಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು. ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿ.ಎಂ ಕೇರ್ ನಿಧಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 16 ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯ

ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ರಕ್ಷಿತಾ ಪ್ರೇಮ್

ಉಳ್ಳಾಲ: ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಅವರು ಕುತ್ತಾರು ಕೊರಗಜ್ಜ ಕಟ್ಟೆಗೆ ಮಂಗಳವಾರ ಭೇಟಿ ನೀಡಿದರು. ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಕೊರಗಜ್ಜನ ಬಳಿ ಹರಕೆ ಹೊತ್ತ ಹಿನ್ನೆಲೆಯಲ್ಲಿ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ರಕ್ಷಿತಾ ಪ್ರೇಮ್, ಸದ್ಯ ಝೀ ಕನ್ನಡ ವಾಹಿನಿ ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ರಕ್ಷಿತಾ