Home Articles posted by v4news (Page 50)

ಖಾದಿ ಬಟ್ಟೆ ಖರೀದಿ ಮೂಲಕ ಬಿಜೆಪಿ ವತಿಯಿಂದ ಗಾಂಧೀಜಿ ಜಯಂತಿ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಹಾತ್ಮ ಗಾಂಧೀಜಿಯವರ ಜಯಂತಿ ಪ್ರಯುಕ್ತ ನಗರದ ಕಾರ್‌ ಸ್ಟ್ರೀಟ್ ನಲ್ಲಿರುವ ಖಾದಿ ಗ್ರಾಮೋದ್ಯೋಗ ಮಳಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಅವರು, ಖಾದಿ ಬಟ್ಟೆಯನ್ನು ಖರೀದಿ ಮೂಲಕ ಗಾಂಧಿ ಜಯಂತಿಯನ್ನ ಆಚರಣೆ ಮಾಡಲಾಯ್ತು, ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಮಹಾತ್ಮಾ

ಪೊಲೀಸ್ ಸಿಬ್ಬಂದಿ ಸಿದ್ಧಾರ್ಥ್ ಹೃದಯಾಘಾತದಿಂದ ನಿಧನ

ಪುತ್ತೂರು: ನೆಹರುನಗರ ರಕ್ತೇಶ್ವರಿ ನಿವಾಸಿ ಊರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದಾರ್ಥ್ ಅವರು ಅ.1 ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ. 2002 ನೇ ಬ್ಯಾಚಿನವರಾದ ಇವರು ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಂಗಳೂರಿನಲ್ಲಿ ಏಕಕಾಲದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

ಮಂಗಳೂರು: ಮಹಾತ್ಮಾ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಅಹಿಂಸೆಯ ಜೊತೆ ಜೊತೆಗೆ ಸ್ವಚ್ಛತೆ ಹಾಗೂ ನೈರ್ಮಲೀಕರಣಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಸ್ವಚ್ಛತೆ -ನೈರ್ಮಲೀಕರಣ ಒಂದು ಅಭಿಯಾನವಾಗಿ ದೇಶದಾದ್ಯಂತ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸುವುದು ಅವಶ್ಯಕವಾಗಿದೆ. ಆದ ಕಾರಣ ಅ. 2ರ ಗಾಂಧೀ ಜಯಂತಿಯ ಪ್ರಯುಕ್ತ ರಾಜ್ಯಾದ್ಯಂತ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆ ಮತ್ತು

ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ ನಿಧನ

ಬಂಟ್ವಾಳ : ಪತ್ರಕರ್ತ,ಸಾಹಿತಿ ಫಾರೂಕ್ ಗೂಡಿನಬಳಿ( 38) ಅವರು ಸುದೀರ್ಘ ಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ಗೂಡಿನಬಳಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ವಿವಿಧ ಪತ್ರಿಕೆಗಳಿಗೆ ಬಂಟ್ವಾಳದಿಂದ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿಯಾಗಿರುವ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗ್ರಾಪಂ.ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ

ಜಿಲ್ಲಾಡಳಿತ ಹಾಗೂ ಭಾರತ್ ಸೇವಾದಳದ ವತಿಯಿಂದ ಸರಳವಾಗಿ ಗಾಂಧಿ ಜಯಂತಿ ಆಚರಣೆ

ಕೋವಿಡ್ ಸೋಂಕು ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಭಾರತ್ ಸೇವಾದಳದ ವತಿಯಿಂದ ನಗರದ ಗಾಂಧಿ ಪಾಕ್೯ನಲ್ಲಿ ಅ.2 ರ ಶನಿವಾರ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಗಾಂಧಿ ಪ್ರತಿಮೆಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ,  ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಎಸ್ಪಿ ಋಷಿಕೇಷ್ ಭಗವಾನ್ ಸೋನಾವಣೆ,

ಗೋವು ಕಳ್ಳತನದ ವಿರುದ್ಧ ಹಿಂಜಾವೇ, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಗೋವು ಕಳ್ಳತನದ ವಿರುದ್ಧ ಹಿಂದು ಜಾಗರಣಾ ವೇದಿಕೆ ಹಾಗೂ ಹಿಂದು ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು. ಹಿಂದುಗಳ ಧಾರ್ಮಿಕ ನಂಬಿಕೆಗಳ ಪ್ರಕಾರ ಗೋವು ಆರಾಧ್ಯ ದೇವತೆ ಯಾಗಿದ್ದು ಗೋಮಾತೆ ಎಂದು ಕರೆಯಲ್ಪಡುತ್ತದೆ, ಅಂತಹ ಗೋಮಾತೆಯನ್ನು ಹಿಂಸಾತ್ಮಕವಾಗಿ ಕೊಂದು ಅದನ್ನು ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಿಂದುಗಳ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿದೆ. ಹಲವಾರು ಬಾರಿ ದೂರು ನೀಡಿದರೂ

ಅನೈತಿಕ ಪೊಲೀಸ್ ಗಿರಿ ವಿರುದ್ಧ ಯುವಜನತೆ ಧ್ವನಿ ಎತ್ತಬೇಕಾಗಿದೆ : ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ

ದ.ಕ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ದ್ವೇಷದ ರಾಜಕಾರಣ ಮತ್ತು ಅನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದೆ. ಇದರ ವಿರುದ್ಧ ಯುವಜನತೆ ಧ್ವನಿ ಎತ್ತಬೇಕಿದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದೊಂದು ವರ್ಷದಲ್ಲೇ 12 ಅನೈತಿಕ ಪೆÇಲೀಸ್ ಗಿರಿ

ಭರದಿಂದ ಸಾಗುತ್ತಿದೆ ಮುದೆಲ್ ಕಿರು ಚಿತ್ರದ ಚಿತ್ರೀಕರಣ

ಖ್ಯಾತ ತುಳು ಚಿತ್ರ ನಟ ರವಿ ರಾಮಕುಂಜ ನಿರ್ದೆಶನದ, ಸಂತೋಷ್ ಕುಮಾರ್ ಶೆಟ್ಟಿ ಛಾಯಾಗ್ರಹಣದ ಮುದೆಲ್ ” ಕಿರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಡಬ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕೂಲ್ ಕುಸಲ್ ಕ್ರಿಯೇಷನ್ ನ ಮೊದಲ ಕಿರು ಚಿತ್ರ ಇದಾಗಿದೆ. ರಮಾ ಬಿ.ಸಿ ರೋಡ್ ಸಂಭಾಷಣೆ ಸಹಕಾರದ ಖ್ಯಾತ ರಂಗಭೂಮಿ ಕಲಾವಿದ ತುಳು ಹಾಗೂ ಕನ್ನಡ ಚಿತ್ರ ನಟ ರವಿರಾಮಕುಂಜ ನಿರ್ದೆಶನ ಹಾಗೂ ಅಭಿನಯದ ಚಿತ್ರವಾಗಿದೆ. ತನ್ನ ಬರವಣಿಗೆಯ

ಭಂಡಾರ ದೇವಸ್ಥಾನಕ್ಕೆ ಹೋದ್ರೆ ಮತ್ತೆ ವಾಪಸು ತೆಗಿಯುವಂತಿಲ್ಲ ಆದೇಶ ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ : ಮಾಜಿ ಸಚಿವ ರಮಾನಾಥ ರೈ

ತುಳುನಾಡು ಉಭಯ ಜಿಲ್ಲೆಗಳ ವಿಶೇಷ ಸಂಸ್ಕೃತಿಗಳ ಜಿಲ್ಲೆಯಾಗಿದೆ. ದೈವಾರದನೆಯ ಒಂದು ವಿಶೇಷ ಸಂಸ್ಕೃತಿಯ ಜಿಲ್ಲೆ. ಧಾರ್ಮಿಕ ಪರಿಷತ್ ಬಿಜೆಪಿ ಆಡಳಿತ ವೇಳೆ ರಚಿಸಲಾಗಿತ್ತು. ಇದ್ರ ಅಡಿಯಲ್ಲಿ ದೈವಾರಾದನೆಯನ್ನು ಸೇರಿಸಲಾಗುತ್ತು. ಭಂಡಾರ ದೇವಸ್ಥಾನಕ್ಕೆ ಹೋದ್ರೆ ಮತ್ತೆ ವಾಪಸು ತೆಗಿಲಿಕ್ಕಿಲ್ಲ. ಇದು ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಸಕ್ರ್ಯೂಟ್ ಹೌಸ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ದೈವದ ಭಂಡಾರ

ಚುನಾವಣೆ ವೇಳೆ ಬಿಜೆಪಿ ನನ್ನ ಮೇಲೆ ಅಪಪ್ರಚಾರ ಮಾಡಿದೆ : ಮಾಜಿ ಸಚಿವ ರಮಾನಾಥ್ ರೈ ಆರೋಪ

ಚುನಾವಣೆಯ ವೇಳೆ ಬಿಜೆಪಿ ನನ್ನ ಮೇಲೆ ಅಪಪ್ರಚಾರ ಮಾಡಿದೆ. ಎರಡು ಭಾರಿ ಚುನಾವಣೆ ವೇಳೆ ಅಪಪ್ರಚಾರ ಮಾಡಿದ್ದಾರೆ. ಎರಡು ಹತ್ಯೆ ಬಗ್ಗೆ ನನ್ನ ಮೇಲೆ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಸೋಲಿಸಲು ಹತ್ಯೆಯ ಬಗ್ಗೆ ಅಪಪ್ರಚಾರ ಮಾಡಿದ್ರುಒಂದು ವೇಳೆ ನಾನು ಹತ್ಯೆ ಮಾಡಿದ್ರೆ ಜೈಲ್‍ನಲ್ಲಿ ಇರ್ತಿದ್ದೆ. ನಮ್ಮ ದೇಶದ ಕಾನೂನು ಅಷ್ಟು ಬಲಿಷ್ಠ ಆಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಮಂಗಳೂರಿನ ಸಕ್ರ್ಯೂಟ್ ಹೌಸ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.