ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರ ಚರ್ಚ್ ಬಳಿಯ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೆ.23 ರಂದು ಬೆಳಕಿಗೆ ಬಂದಿದೆ. ಕೃಷ್ಣನಗರ ಬಳಿಯ ಗೋಪಾಲ ಎಂಬವರ ಅಂಗಡಿಗೆ ಕಳ್ಳರು ಪಕ್ಕದ ಮರ ಏರಿ ಶೀಟ್ ಜಾರಿಸಿ ಒಳನುಗ್ಗಿ ಅಂಗಡಿಯಲ್ಲಿ ದಾಸ್ತಾನಿದ್ದ 2 ಗೋಣಿ ಸಿಗರೇಟು ಪ್ಯಾಕೇಟ್ ಮತ್ತು ಗುಡ್ಕಾ ಹಾಗು ಡ್ರಾವರ್ ನಲ್ಲಿ ಇದ್ದ ಚಿಲ್ಲರೆ ಹಣವನ್ನು
ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯ ಅಡಿಯಲ್ಲಿ ವೆನ್ಲಾಕ್ ಆವರಣದಲ್ಲಿ ಆಯುಷ್ ಸಂಯುಕ್ತ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ಸೆ.25ರಂದು ಸಂಜೆ 3.30ಕ್ಕೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರದ ಆಯುಷ್ ಸಂಪುಟ ದರ್ಜೆ ಸಚಿವರಾದ ಸರ್ಬಾನಂದ ಸೋನೋವಾಲ್ ಅವರು ಆಯುಷ್ ಸಂಯುಕ್ತ ಆಸ್ಪತ್ರೆಯನ್ನು
ಉಡುಪಿ:ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಇಂದಿನಿಂದ ಹೆರಿಟೇಜ್ ಜುವೆಲ್ಲರಿಯ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಉಡುಪಿಯ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಉಡುಪಿ ಮಳಿಗೆಯಲ್ಲಿ ಪ್ರಪಥಮ ಬಾರಿಗೆ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳ ಸಂಗ್ರಹಗಳೊಂದಿಗೆ ಬ್ರಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಅಜೆಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ವಿದ್ಯಾ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಪಠ್ಯದ ಕಲಿಕೆಯ ಜೊತೆಗೆ ಜೀವನ ಕೌಶಲಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ ಎಂದು ಮಂಗಳೂರಿನ ಸಮಾಜ ಸೇವಾ ಸಂಸ್ಥೆ ಹಿದಾಯ: ಫೌಂಡೇಶನ್’ನ ಸ್ಥಾಪಕಾಧ್ಯಕ್ಚ ಖಾಸಿಮ್ ಅಹ್ಮದ್ ಹೆಚ್.ಕೆ. ಅಭಿಪ್ರಾಯಪಟ್ಟರು. ಅವರು ನೀಟ್/ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಇಂದು ಹಮ್ಮಿಕೊಂಡಿದ್ದ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು
ಕೇಂದ್ರ ಸರ್ಕಾರವು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ ( ಎಸ್.ಟಿ ) ಮೀಸಲಾತಿಗೆ ಸೇರ್ಪಡೆಗೋಳಿಸಿದೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಎಸ್ .ಟಿ ಪ್ರಮಾಣ ಪತ್ರ ಕೊಡುತ್ತಿವೆ ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ಮೀಸಲಾತಿಯಿಂದ ದೂರವಿಟ್ಟು ತಳವಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಇದರಿಂದ ಶೈಕ್ಷಣಿಕ ಮತ್ತು ಸರ್ಕಾರಗಳ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇಷ್ಟಾದರು ಸರ್ಕಾರ ನಮ್ಮ ತಳವಾರ ಸಮುದಾಯದವನ್ನು ಪರಿಗಣಿಸುತ್ತಿಲ್ಲ ಎಂದು ರನ್ನಬೆಳಗಲಿ ಪಟ್ಟಣದ
ಮಂಗಳೂರು ನಗರ ಪೊಲೀಸ್ ಕಮೀಷನರ್ ರೇಟ್ ವ್ಯಾಪ್ತಿಯ ಶ್ವಾನಪಡೆಗೆ ಬೆಂಗಳೂರಲ್ಲಿ ತರಬೇತಿ ಮುಗಿಸಿದ ರಾಣಿ ಬಂದಿದ್ದಾಳೆ. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಅವರು ರಾಣಿಯ ಹ್ಯಾಂಡ್ಲರ್‍ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ರು. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಶ್ವಾನದಳದಲ್ಲಿ ಇದುವರೆಗೆ ಒಂದು ಸ್ನಿಫರ್ ಶ್ವಾನವಿತ್ತು. ಶ್ವಾನ ಯಾವುದೇ ಅಪರಾಧ ಪ್ರಕರಣಗಳನ್ನ ಪತ್ತೆ ಮಾಡುವುವಲ್ಲಿ ಸಹಕಾರ ಮಾಡುತ್ತದೆ. ಗಣ್ಯ
ದೇಶದಲ್ಲಿ ಉಗ್ರರ ವಿಧ್ವಂಸಕ ಕೃತ್ಯ ಸಾಧ್ಯತೆ ಬೆನ್ನಲ್ಲೇ ಮಂಗಳೂರು ಏರ್ ಪೋರ್ಟ್ ಸುತ್ತಮುತ್ತ ಅಲರ್ಟ್ ಮಾಡಲಾಗಿದೆ. ಏರ್‍ಪೋರ್ಟ್ ಭದ್ರತೆಯ ಸಿಐಎಸ್‍ಎಫ್ ಹಾಗೂ ಬಜ್ಪೆ ಪೊಲೀಸರಿಂದ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನು ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ಮಾಹಿತಿ ನೀಡಲು ಅಧಿಕಾರಿಗಳು ಸ್ಥಳೀಯರಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಮಾತನಾಡಿ, ಅಂತಾರಾಷ್ಟ್ರೀಯ
ಪುತ್ತೂರು: 9 ತಿಂಗಳ ಹಿಂದೆ 2021 ರ ಜನವರಿ 3 ರಂದು ಪುತ್ತೂರಿನ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ 7 ಮಂದಿ ದಾರುಣ ಮೃತಪಟ್ಟಿದ್ದರು. ಇವರಿಗೆ ಈಗ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ಪರಿಹಾರಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ
ಕಾರ್ಕಳ: ವಿಸ್ತೃತ ಬಸ್ ನಿಲ್ದಾಣ ಹಾಗೂ ಬಂಡೀಮಠ ಬಸ್ ನಿಲ್ದಾಣಗಳೆರಡನ್ನು ಸಮಾನವಾಗಿ ಸದ್ಭಾವಕೆ ಮಾಡುವಂತೆ ರಾಜ್ಯ ಹೈಕೋರ್ಟ್ ಅದೇಶ ನೀಡಿ ವರ್ಷಗಳೆ ಕಳೆದು ಹೋಗಿದೆ. ಹೈಕೋರ್ಟ್ ಅದೇಶಕ್ಕೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಗೌರವಿಸಿಲ್ಲ. ಈ ಕುರಿತು ಅರ್ಜಿದಾರರು ಮತ್ತೇ ನ್ಯಾಯಾಲಯಕ್ಕೆ ಮೋರೆ ಹೋದರೆ ಪುರಸಭಾ ಸದಸ್ಯರು ಸಹಿತ ಅಧಿಕಾರಿಗಳು ಕಾನೂನಿನ ಕುಣಿಕೆಯಲ್ಲಿ ಸಿಲುಕಬೇಕಾದಿತ್ತೆಂದು ಕಾರ್ಕಳ ಪುರಸಭಾ ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಹೇಳಿದರು. ಕಾರ್ಕಳ
ಉಡುಪಿ ಮಂಗಳೂರು ಗಡಿಭಾಗ ಹೆಜಮಾಡಿ ಗ್ರಾಮಸಭೆಯಲ್ಲಿ ಶಾಂಭವಿ ಹೊಳೆಯಲ್ಲಿ ರಾಜರೋಷವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಮಟ್ಕಾದಂಧೆಯ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸಿದ್ದು, ಸಭೆಯಲ್ಲಿದ್ದ ಅಧಿಕಾರಿಗಳಲ್ಲಿ ತಕ್ಷಣವೇ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಮಾಜಿ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ವಾಮನ್ ಕೋಟ್ಯಾನ್, ಅವಳಿ ಜಿಲ್ಲೆಗಳ ಗಡಿಭಾಗ ಇದಾಗಿದ್ದು ದ.ಕ. ಜಿಲ್ಲಾ ಪರವಾನಿಗೆ ಪಡೆದಿರುವ ಮಂದಿ ಉಡುಪಿ