Home Articles posted by v4news (Page 74)

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಮುಸ್ಲಿಮ್ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದು, 2020ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು

ಪಣಂಬೂರು ಬೀಚ್‍ನಲ್ಲಿ ಮೀನುಗಾರಿಕಾ ಬೋಟ್ ಅವಘಡ: ಓರ್ವ ಸಮುದ್ರಪಾಲು:ನಾಲ್ವರ ರಕ್ಷಣೆ

ಮಂಗಳೂರು: ನಗರದ ಪಣಂಬೂರು ಬೀಚ್ ಬಳಿ ಮೀನುಗಾರಿಕೆಗೆಂದು ತೆರಳಿದ್ದ ಬೋಟ್ ಇಂದು ಬೆಳಗ್ಗೆ ದುರಂತಕ್ಕೀಡಾಗಿದೆ. ಪರಿಣಾಮ ಓರ್ವ ಮೀನುಗಾರ ನಾಪತ್ತೆಯಾಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ. ಮೀನುಗಾರಿಕೆಗೆ ತೆರಳಿರುವ ಶರೀಫ್ ನಾಪತ್ತೆಯಾದವರು. ಮೀನುಗಾರಿಕೆ ನಡೆಸಲು ಅಝರ್ ಎಂಬವರ ಮಾಲಕತ್ವದ ಎಫ್.ಎನ್.ಚಿಲ್ಡ್ರನ್ಸ್ ಗಿಲ್ ನೆಟ್ ದೋಣಿಯು ಸಮುದ್ರಕ್ಕೆ ತೆರಳಿತ್ತು. ಆದರೆ ಇಂದು ಬೆಳಗ್ಗೆ 7.30 ಸುಮಾರಿಗೆ ಈ ದೋಣಿಯು ಪಣಂಬೂರು ಬೀಚ್ ಬಳಿ ಬಿರುಗಾಳಿಯ ಹೊಡೆತಕ್ಕೆ

ನಿರರ್ಥಕ ಜಯಕ್ಕಿಂತ ಸಾರ್ಥಕ ಅಪಜಯ ಶ್ರೇಷ್ಠ: ಪ್ರೊ.ರಾಜಾರಾಮ ತೋಳ್ಪಾಡಿ

ಸಂಶೋಧನೆ ಎಂಬ ಜಟಿಲ ಮತ್ತು ಸಂಕೀರ್ಣವಾದ ಪರಿಕಲ್ಪನೆಯನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಾಡುವ ಮತ್ತು ಸಂಶೋಧನೆ ಅಂದರೆ ಏನು, ಸಂಶೋಧನೆಯನ್ನು ಉನ್ನತ ಶಿಕ್ಷಣವೆಂದು ಯಾಕೆ ಕರೆಯುತ್ತಾರೆ ಎಂಬುದನ್ನು ತಾತ್ವಿಕವಾಗಿ ವಿವೇಚನೆಗೆ ಒಳಪಡಿಸುವ ‘ಮಾರ್ಗಾನ್ವೇಷಣೆ’ ಪುಸ್ತಕವು ಒಂದು ಸಾಹಸೀ ಪ್ರಯೋಗವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ ನಿರ್ದೇಶಕರಾಗಿರುವ ಪ್ರೊ. ರಾಜಾರಾಮ ತೋಳ್ಪಾಡಿ ಹೇಳಿದರು. ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಮತ್ತು

ಆನೆಗುಡ್ಡೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಹಸ್ರ ನಾರಿಕೇಳ ಗಣಯಾಗ

ಕುಂದಾಪುರ: ಕೊರೋನಾ ಭೀತಿಯ ನಡುವೆಯೂ ಗಣೇಶ ಚತುರ್ಥಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ, ಸಂಭ್ರಮದಿಂದ ನಡೆದಿದ್ದು, ಭಕ್ತರು ಸಂಕಷ್ಟಹರ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡರು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರ ದಂಡು ಕಂಡುಬಂದಿತ್ತು. ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯದ ಒಳಗೆ ಗಣಪನ ದರ್ಶನಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಯಿತು. ಅರ್ಚಕರಿಂದ

ಬೊಕ್ಕಪಟ್ಣದ ಯುವಜನ ಅಕ್ಷಯ ವತಿಯಿಂದ 53ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರಿನ ಬೊಕ್ಕಪಟ್ಣದ ಯುವ ಜನ ಅಕ್ಷಯ ವತಿಯಿಂದ 53ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಬೊಕ್ಕಪಟ್ಣ ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟಿನ ಸಭಾಭವನದಲ್ಲಿ ಗಣಪನ ವಿಗ್ರಹವನ್ನ ಪ್ರತಿಷ್ಠಿಸಲಾಗಿದೆ. ಮೂರು ದಿನಗಳ ಕಾಲ ಪರ್ಯಂತ ಗಪಣನಿಗೆ ವಿಶೇಷ ಪೂಜೆ ನಡೆಯಲಿದೆ.ಆದಿತ್ಯವಾರದಂದು ವಿವಿಧ ಪೂಜೆ ಹಾಗೂ ಮಹಪೂಜೆಯೊಂದಿಗೆ ಮೆರವಣಿಗೆ ಮೂಲಕ ಶ್ರೀ ಬಹ್ಮ ಬೊಬ್ಬರ್ಯ ದೇವಸ್ಥಾನದ ಹಿಂದುಗಡೆಯಿರುವ ನದಿ ಕಿನಾರೆಯಲ್ಲಿ ಜಲಸ್ತಂಭನಗೊಳ್ಳಲಿದೆ. ಈ ವೇಳೆ

ಬೊಕ್ಕಪಟ್ಣ ದೋಸ್ತ್ ಕ್ರಿಕೆಟ್ ಟೀಮ್ ವತಿಯಿಂದ 45ನೇ ಸಾರ್ವಜನಿಕ ಗಣೇಶೋತ್ಸವ ಆಚರಣೆ

ಮಂಗಳೂರಿನ ಬೊಕ್ಕಪಟ್ಣ ದೋಸ್ತ್ ಕ್ರಿಕೆಟ್ ಟೀಮ್ ವತಿಯಿಂದ 45ನೇ ಸಾರ್ವಜನಿಕ ಗಣೇಶೋತ್ಸವವನ್ನ ಸರ್ಕಾರದ ಕೋವಿಡ್ – 19 ನಿಯಯಾವಳಿಯನ್ನ ಪಾಲಿಸಿಕೊಂಡು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಬೊಕ್ಕಪಟ್ಣದ ಯನ್.ಯಂ. ಸುವರ್ಣರ ವ್ಯಾಯಾಮ ಶಾಲಾ ಮುಂಭಾಗದಲ್ಲಿ ಗಣಪತಿ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಲಾಗಿದ್ದು, ಇಂದು ಮುಂಜಾನೆ ನಂದಾದೀಪ ಬೆಳಗಿಸುವೊಂದರೊಂದಿಗೆ ದೇವರ ಪ್ರತಿಷ್ಟಾಪನೆ ಮಾಡಲಾಯ್ತು. ಇಂದು ಸಂಜೆ ರಂಗಪೂಜೆ, ಮಹಾಪೂಜೆಯೊಂದಿಗೆ ಗಣಪನ ವಿಗ್ರಹವನ್ನು

ಡಾ.ಮಾಲತಿ ಶೆಟ್ಟಿ ಮಾಣೂರು ರವರು “ರಾಷ್ಟ್ರೀಯ ಕಣ್ಮಣಿ ರಾಷ್ಟ್ರ ಪ್ರಶಸ್ತಿ ” ಗೆ ಆಯ್ಕೆ

ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ,ಸಾಹಿತಿ,ಸಮಾಜ ಸೇವಕಿ ಡಾ.ಮಾಲತಿ ಶೆಟ್ಟಿ ಮಾಣೂರುರವರು ಬೆಂಗಳೂರಿನ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ನೀಡುವ ” ರಾಷ್ಟ್ರೀಯ ಕಣ್ಮಣಿ” ರಾಷ್ಟ್ರ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 25 ರಂದು ಬೆಂಗಳೂರಿನಲ್ಲಿ ಸಂಸ್ಥೆಯ 29 ನೇ ವಾರ್ಷಿಕೋತ್ಸವದ ಸಮಾರಂಭದ ವೇಳೆ ಗಣ್ಯರ ಸಮ್ಮುಖದಲ್ಲಿ

ಕಾರ್ಕಳದ ಬಸ್ ನಿಲ್ದಾಣದ ಪರಿಸರದಲ್ಲಿ ಸಂಭ್ರಮದಿಂದ ಗಣೇಶೋತ್ಸವ ಆಚರಣೆ

ಕಾರ್ಕಳ: ಇಂದು ಶುಕ್ರವಾರ, ಎಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಆದರೆ ಕೋವಿಡ್ ಕಾರಣದಿಂದ ಹಿಂದಿನ ಸಡಗರ ಇಲ್ಲದೆ ಜನರು ಹಾಗೂ ಸಂಘಟಕರು ಅತಿ ಜಾಗರೂಕತೆಯಿಂದ ಹಬ್ಬವನ್ನು ಸರಕಾರ ಮತ್ತು ಜಿಲ್ಲಾಡಳಿತದ ಆದೇಶದಂತೆ ಆಚರಿಸುವುದು ಕಂಡುಬಂತು. ಈ ಸಂದರ್ಭದಲ್ಲಿ ೧೪ ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಕಾರ್ಕಳ ಬಸ್ ನಿಲ್ದಾಣ ಪರಿಸರದಲ್ಲಿ ಎಲ್ಲ ಜಾತಿಯ ಹಾಗೂ ಎಲ್ಲ ಧರ್ಮದವರನ್ನು ಸೇರಿಸಿಕೊಂಡು ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ

ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ ಗುಮ್ಮಟನಗರಿ ಪೊಲೀಸರು

ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಏಳು ಜನ ಮನೆಗಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್ ತಿಳಿಸಿದ್ದಾರೆ. ರಮೇಶ ಕಾಳೆ, ಸುರೇಶ ಚವ್ಹಾಣ, ಪರಶುರಾಮ ಕಾಳೆ, ಕಿರಣ ಬೇಡಕೇರ, ದೇವದಾಸ್ ಚವ್ಹಾಣ , ತನ್ವೀರ್ ಹೊನ್ನುಟಗಿ, ದಶರಥ ಹೊಸಮನಿ ಬಂಧಿತರು. ಇನ್ನೂ ಬಂಧಿತರಿಂದ 16ಲಕ್ಷ ಮೌಲ್ಯದ 360 ಗ್ರಾಂ ಚಿನ್ನ, 200

ತಲೆಮರೆಸಿಕೊಂಡಿದ್ದ ಖೋಟಾ ನೋಟು ಪ್ರಕರಣದ ಆರೋಪಿಯ ಬಂಧನ

ಪುತ್ತೂರು: 19 ವರ್ಷಗಳ ಹಿಂದೆ ಖೋಟಾ ನೋಟು ಸಾಗಾಟದ ವೇಳೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸೆಂಟ್ಯಾರ್‌ನಲ್ಲಿ ಸಂಪ್ಯ ಪೊಲೀಸರಿಂದ ಬಂಧಿತರಾಗಿದ್ದ ನಾಲ್ವರು ಆರೋಪಿಗಳ ಪೈಕಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಯನ್ನು ಕುಂಬ್ಳೆಯಲ್ಲಿ ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಮುಳಿಯಾರ್ ಬೋವಿಕ್ಕಾನ ಪರಪಿಡಕ ನಿವಾಸಿ ಸಿದ್ದಿಕ್ ಯಾನೆ ಕಲಂದರ್ ಸಿದ್ದಿಕ್(41 ವ)ರವರು ಬಂಧಿತ ಆರೋಪಿ. 2002ರಲ್ಲಿ ಕಲಂದರ್