Home Articles posted by v4news (Page 76)

ವಿಟ್ಲದಲ್ಲಿ ಮೊಂತಿ ಫೆಸ್ಟ್ ಸಂಭ್ರಮ

ಸೂರಿಕುಮೇರು ಸೈಂಟ್ ಜೋಸೆಪ್ ಚರ್ಚ್ ನಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಬಹಳ ಸರಳ ರೀತಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು. ಫಾದರ್ ಗ್ರೆ ಗರಿ ಪಿರೇರಾ ದಿವ್ಯ ಬಲಿ ಪೂಜೆಯ ನೇತೃತ್ವ ವಹಿಸಿದ್ದರು. ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷರಾದ ಸ್ಟೀವನ್ ಮಾರ್ಟಿಸ್ ರವರ ಮಾರ್ಗದರ್ಶನದಲ್ಲಿ ಭಕ್ತಾದಿಗಳಿಗೆ ಕಬ್ಬು ಹಂಚಲಾಯಿತು. ಇನ್ನು ಫಾತಿಮಾ ಮಾತೆಯ

ವಾಲ್ತಾಜೆಯ ಪರಂಬೋಕು ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ: ಪೊಲೀಸರಿಂದ ದಾಳಿ

ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇರಳ ಗಡಿ ಭಾಗದಲ್ಲಿ ಸಾಲೆತ್ತೂರು ಗ್ರಾಮದ ವಾಲ್ತಾಜೆ ಪರಂಬೋಕು ಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ ಹತ್ತು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಲೆತ್ತೂರು ಗ್ರಾಮದ ವಾಲ್ತಾಜೆ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರವಾಗಿ ಮರಳು ನಡೆಸಲು ತಯಾರಿ ಮಾಡುತ್ತಿದ್ದ ಬಗ್ಗೆ ದಾಳಿ ನಡೆಸಲಾಗಿದೆ. ಈ ಸಂದರ್ಭ ಸೊತ್ತುಗಳಾದ ಹಿಟಾಚಿ-1,

ಗಣಪತಿ ಮೂರ್ತಿ 2-4 ಅಡಿ ನಿರ್ಬಂಧ ಹಿಂಪಡೆಯಲು ಸರಕಾರಕ್ಕೆ ಡಿ.ಕೆ. ಶಿವಕುಮಾರ್ ಆಗ್ರಹ

ಬೆಂಗಳೂರು: ‘ಗಣೇಶ ಹಬ್ಬಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ರಾಜ್ಯ ಸರಕಾರವು ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶ ಮೂರ್ತಿ ಇಡಬೇಕೆಂಬ ಅರ್ಥಹೀನ ನಿರ್ಬಂಧ ಹೇರುವ ಮೂಲಕ ಮೂರ್ತಿ ತಯಾರಕರ ಬದುಕಿನ ಜತೆ ಚೆಲ್ಲಾಟವಾಡಿದೆ. ತಕ್ಷಣ ಈ ಆದೇಶ ಹಿಂಪಡೆಯಬೇಕು ಅಥವಾ ಮೂರ್ತಿ ತಯಾರಿಕರಿಗೆ ಪರಿಹಾರ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. ‘ಕಳೆದ 2 ತಿಂಗಳಿಂದ ಗಣೇಶ ಮೂರ್ತಿ

V4STREAM ನ ಓಟಿಟಿಯಲ್ಲಿ ನಸೀಬ್ – ಏರೆಗುಂಡು ಏರೆಗಿಜ್ಜಿ ತುಳು ಸಿನಿಮಾ ರಿಲೀಸ್ #naseeb

ವಿ4 ಸ್ಟ್ರೀಮ್ ಓಟಿಟಿಯು ಕನ್ನಡ ಚಲನಚಿತ್ರವನ್ನು ತುಳು ಭಾಷೆಗೆ ಡಬ್ಬಿಂಗ್ ಮಾಡುವ ಮೂಲಕ ಸಿನಿ ಪ್ರೇಕ್ಷರನ್ನು ಮನರಂಜಿಸಿದೆ. ಇದೀಗ ಮೊಟ್ಟ ಮೊದಲ ಬಾರಿಗೆ ಕೊಂಕಣಿ ಭಾಷೆಯ `ನಶೀಬಾಚೊ ಖೆಳ್’ ಎನ್ನುವ ಸಿನಿಮಾವನ್ನು `ನಸೀಬ್ ಏರೆಗುಂಡು ಏರೆಗಿಜ್ಜಿ’ ಹೆಸರಲ್ಲಿ ಡಬ್ ಮಾಡಲಾಗಿದ್ದು, ಮೋಂತಿ ಫೆಸ್ಟ್‍ನ ದಿನದಂದು ವಿ4 ಸ್ಟ್ರೀಮ್‍ನಲ್ಲಿ ತೆರೆ ಕಂಡಿದೆ. ಕರ್ನಾಟಕದ ಮೊಟ್ಟ ಮೊದಲ ಓಟಿಟಿ ಪ್ಲಾಟ್ ಫಾಮ್ ವಿ4ಸ್ಟ್ರೀಮ್ ಪ್ರಯೋಗ ಕುತೂಹಲ ಮೂಡಿಸಿದೆ. ಸುಮಾರು

ಅಡಿಕೆ ಮರ ಏರುವ ಬೈಕ್ ಆವಿಷ್ಕಾರ

ಬಂಟ್ವಾಳ: ಅಡಿಕೆ ಮರ ಏರುವ ಬೈಕ್ ಆವಿಷ್ಕರಿಸಿ ಜಗತ್ತಿನ ಗಮನ ಸೆಳೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪ್ರಗತಿಪರ ಕೃಷಿಕ, ಸಂಶೋಧಕ ಗಣಪತಿ ಭಟ್ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಮುಂದಿನ ವಿಶ್ವ ಟಿ-20 ಕ್ರಿಕೆಟ್ ಟೂರ್ನಿ ಸಂದರ್ಭ ಭಾರತ ಗೆದ್ದು ಬರುವಂತೆ ಜಾಹೀರಾತಿನಲ್ಲಿ ಗಣಪತಿ ಭಟ್, ಭಾರತ ಕ್ರಿಕೆಟ್ ತಂಡದ ಸದಸ್ಯರಿಗೆ ಚಿಯರ್ಸ್ ಮಾಡಲಿದ್ದಾರೆ. ಸ್ಟಾರ್ ಸ್ಪೋಟ್ಸ್ ಚಾನಲ್ ಈ ಅವಕಾಶವನ್ನು ಗ್ರಾಮೀಣ ಭಾಗದ ಒರ್ವ ಕೃಷಿಕನಿಗೆ

ಮಾನವ ಸಂಬಂಧಗಳನ್ನುಗೌರವಿಸಲು ಪ್ರೇರೆಪಿಸುವ ಮೊಂತಿ ಹಬ್ಬ:ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಸಂದೇಶ

ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರಿಂದ ಮೊಂತಿ ಹಬ್ಬದ ಸಂದೇಶವನ್ನು ಸಾರಿದರು.  ಪ್ರಿಯರೇ ನಿಮಗೆಲ್ಲರಿಗೂ ಮಾತೆ ಮರಿಯಮ್ಮನವರ ಜನುಮದಿನದ ಶುಭಾಶಯಗಳು. ಸಪ್ಟೆಂಬರ್ 08 ರಂದುಆಚರಿಸುವ ಈ ಹಬ್ಬವು ಕರ್ನಾಟಕಕರಾವಳಿಯಕ್ರೈಸ್ತರಿಗೆ ಪ್ರತ್ಯೇಕವಾಗಿ ಕೊಂಕಣಿ ಭಾಷಿಗರಿಗೆ ಅತಿ ಪ್ರೀತಿಯದ್ದಾಗಿದೆ. ನಾವು ಈ ಹಬ್ಬವನ್ನು ‘ಮೊಂತಿ ಫೆಸ್ತ್’ ಅಂತ ಕರೆಯುತ್ತೇವೆ. ಕೊಂಕಣಿ ಸಂಸ್ಕೃತಿಯುಇದರಲ್ಲಿ ಅಡಕವಾಗಿದೆ. ಈ ಹಬ್ಬದ ವಿಶೇಷತೆ

ಪಡುಬಿದ್ರಿಯಲ್ಲಿ ಜಾತಿ ಧರ್ಮ ಮೀರಿ ನಡೆದ ಮುದ್ದು ಕೃಷ್ಣ ಸ್ಪರ್ಧೆ

ಪಡುಬಿದ್ರಿ: ಮಹಮ್ಮದ್ ನಿಯಾಜ್ ನೇತೃತ್ವದ ಪಡುಬಿದ್ರಿ ರೋಟರಿ ಕ್ಲಬ್, ಮಹಿಳಾ ವಿಭಾಗದ ಇನ್ನರ್ ವೀಲ್ ಕ್ಲಬ್ ಹಾಗೂ ಸಮುದಾಯ ದಳ ಈ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ, ಜಾತಿ ಧರ್ಮಗಳನ್ನು ಮೆಟ್ಟಿನಿಂತು ಎಲ್ಲಾ ಸಮುದಾಯದ ಮಂದಿ ಪಾಲ್ಗೊಂಡು ಎಂಬತ್ತಕ್ಕೂ ಅಧಿಕ ಪುಟಾಣಿ ಸ್ಪರ್ಧಾಳುಗಳ ಭಾಗವಹಿಸುವಿಕೆಯ ಮೂಲಕ ಪಡುಬಿದ್ರಿ ಆರ್. ಆರ್. ಕಲೋನಿಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ರೋಟರಿ ಸಂಸ್ಥೆಯ ಪ್ರಮುಖರಾದ ನವೀನ್

ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜಿ ಇಲ್ಲ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು,: ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು. ಅವರು ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ರಾಜ್ಯದ ಪೊಲೀಸ್ ಇಲಾಖೆ ಅತ್ಯಂತ ದಕ್ಷ, ನಿಷ್ಪಕ್ಷಪಾತ ಹಾಗೂ ನಿಷ್ಠುರವಾಗಿದ್ದು, ಈ ಪರಂಪರೆಯನ್ನು ಮುಂದುವರೆಸಬೇಕು. ಆಗ ಮಾತ್ರ ಜನಸಾಮಾನ್ಯರಿಗೆ ಸುರಕ್ಷತೆ ಹಾಗೂ

ಎಲೆಕ್ಟ್ರಿಕ್  ರಿಚಾರ್ಜ್ ಸೆಂಟರ್ ತೆರೆಯಲು ಆದ್ಯತೆ- ಸಚಿವ ಸುನೀಲ್‍ಕುಮಾರ್

ಬೆಂಗಳೂರು: ಈಗ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು ಬರುತ್ತಿರುವ ಕಾರಣ ಎಲೆಕ್ಟ್ರಿಕ್ ರಿಚಾರ್ಜ್ ಸೆಂಟರ್‍ಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತೆರೆಯಲಾಗುವುದು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶ್ರೀ ವಿ. ಸುನೀಲ್ ಕುಮಾರ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಇಂದು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಲು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ

ಹಾಸನ ಬಳಿಯಲ್ಲಿ ರಸ್ತೆ ಅಪಘಾತ : ಆಸ್ಪತ್ರೆಗೆ ಸಾಗಿಸಲು ನೆರವಾದ ನಳಿನ್ ಕುಮಾರ್

ರಾಜ್ಯ ಪ್ರವಾಸದಿಂದ ಮರಳಿ ಮಂಗಳೂರಿಗೆ ಬರುವಾಗ ಹಾಸನ ಬಳಿಯಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿದ್ದ ಸಾರ್ವಜನಿಕರನ್ನು ಸುರಕ್ಷಿತವಾಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನೆರವಾಗಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ತಕ್ಷಣವೇ ನಳಿನ್ ಕುಮಾರ್ ಕಟೀಲ್ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.