ಮುಂಡ್ಕೂರು;ಪ್ರತೀ ವರ್ಷ ರಕ್ತದಾನ ಶಿಬಿರ, ತರಬೇತಿ ಕಾರ್ಯಾಗಾರ, ಉಚಿತ ಯೋಗ ಶಿಬಿರ, ಶಾಶ್ವತ ಯೋಜನೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಜೇಸಿಯ ಕಂಪನ್ನು ಎಲ್ಲೆಡೆ ಪಸರಿಸಿರುವ ಘಟಕ ಜೇಸಿಐ ಮುಂಡ್ಕೂರು ಭಾರ್ಗವ. ಈ ವರ್ಷ ಪ್ರಶಾಂತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕೋವಿಡ್ ಸಮಯದಲ್ಲಿ ಅಶಕ್ತರಿಗೆ ಕಿಟ್ ವಿತರಣೆ, ಸಾಧಕ ಮಹಿಳೆಯರಿಗೆ ಅಭಿನಂದನಾ
ಮುಂಬೈ :ಬಿಲ್ಲವರ ಎಸೋಸಿಯೇಶನ್ ಮುಂಬಾಯಿ. ಕಾ0ದಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಅಗಷ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರವಿವಾರ ಕಾ0ದಿವಲಿಯ ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ ಆಟಿಡೊ0ಜೆ ಕೂಟ ಬಹಳ ವಿಜೃಂಭಣೆಯಿಂದ ಜರಗಿತು. ಅಂದಿನ ಕಾರ್ಯಕ್ರಮಕ್ಕೆ ಬಿಲ್ಲವರ ಎಸೋಸಿಯೇಶನಿನ ಉಪಾಧ್ಯಕ್ಷರಾದ ಶಂಕರ್ ಡಿ ಪೂಜಾರಿ, ಪ್ರಧಾನ ಕಚೇರಿಯ ಪ್ರತಿನಿಧಿಯಾದ ಹರೀಶ್ ಪೂಜಾರಿ ಕೋಕರ್ನೆ. ಜೊತೆ ಕೋಶಾಧಿಕಾರಿಯವರಾದ ಸದಾಶಿವ
ಪ್ರಸ್ತುತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯ, ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಮುಕ್ಕ ಇವರ ವತಿಯಿಂದ ಅಣುಕು ಸಿಇಟಿ ಪರೀಕ್ಷೆಯನ್ನು ಆಗಸ್ಟ್ 22 ಮತ್ತು 23 ರಂದು ಏರ್ಪಡಿಸಲಾಗಿದೆ. ಸಿಇಟಿ ಪರೀಕ್ಷೆಯನ್ನು ಎದುರಿಸುವ ಮಾಹಿತಿಯನ್ನು ಕೊಡಲಾಗುವುದೆಂದು ಕಾಲೇಜಿನ ಪ್ರಾಂಶುಪಾಲ ಡಾ. ಥಾಮಸ್ ಪಿಂಟೋ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪರೀಕ್ಷೆಗಳು
ಕರಾವಳಿಯಲ್ಲಿ ಕೆಲವು ವರ್ಷಗಳಿಂದ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಮಂಗಳೂರಿನಲ್ಲಿ ಎನ್‍ಐಎ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ಅಪ್ಘಾನಿಸ್ತಾನದಲ್ಲಿ
ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡ್ಯಾನಿಯೆಲ್ಲಾ ಆನ್‌ಎಲ್. ಚೆಯ್ನ್‌ರವರ ಸ್ಟಡೀಸ್ ಆನ್‌ದ ಬಯೋ ಡೈವರ್ಸಿಟಿ ಆಫ್ ಫುಡ್ ರಿಸೋರ್ಸಸ್ ಇನ್ ಮೇಘಾಲಯ ಎಂಬ ಮಹಾಪ್ರಬಂಧಕ್ಕೆ ಹೈದರಾಬಾದ್‌ನ ಓಸ್ಮಾನಿಯಾ ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.ಇವರು ಹೈದರಾಬಾದ್‌ನ ನ್ಯಾಶನಲ್‌ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್‌ನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್
ಮಂಗಳೂರು: ಗೋವು ಜಗತ್ತಿನೆಲ್ಲರ ತಾಯಿ. ಆಕೆಯ ಸೇವೆಯನ್ನು ಮಾಡ ಬೇಕಾದುದು ನಮಗೆ ಕರ್ತವ್ಯ. ನಮ್ಮ ತಾಯಿಯ ನಂತರದ ಸ್ಥಾನ ಆಕೆಗೇ ಹೋಗುತ್ತದೆ. ಮೂರು ಮೂರ್ತಿಗಳು, ಮೂವತ್ತು ಮೂರು ಕೋಟಿ ದೇವತೆಗಳು ಅಷ್ಟ ಲಕ್ಷ್ಮೀಯರು, ರತಿ, ವಾಣಿ, ಗಿರಿಜೆಯರು ನೆಲೆಗೊಂಡಿದ್ದಾರೆ ಆಕೆಯ ಮೈ ಮೇಲೆ ಹಾಗಾಗಿ ಆಕೆ ಸರ್ವತ್ರ ಪೂಜ್ಯಳು. ಸರ್ವವಂದ್ಯಳೂ ಆಗಿದ್ದಾಳೆ. ಅಂತಹಾ ಗೋಮಾತೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿ ಹೇಳಬೇಕಾದ ಅಗತ್ಯ ಇಂದಿದೆ. ಗೋವಿನ ಮಹತ್ವ, ಗೋವಿನಿಂದಾಗುವ
ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡಿರುವ ಕಾರಣದಿಂದ ಶಿರಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದು, ಇದರ ಮಾಹಿತಿ ತಿಳಿಯದೇ ಮಂಗಳೂರು ಕಡೆಯಿಂದ ಆಗಮಿಸಿರುವ ನೂರಾರು ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ನೂರಾರು ಮಂದಿ ಲಾರಿ ಚಾಲಕ, ಕ್ಲೀನರ್‌ಗಳು
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಸಾಲ ಮರುಪಾವತಿ ಮೊಬೈಲ್ ಆಪ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ನಿಗಮದ ಸಾಲ ಮರುಪಾವತಿ ಶೇ.90 ರಷ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಿಗಮವನ್ನು ಫೈನಾನ್ಸ್ ಕಾರ್ಪೊರೇಷನ್ ಆಗಿ ಪರಿವರ್ತಿಸಲು ಸಲಹೆ ನೀಡಿದರು. ಆ ಮೂಲಕ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸಲು ಸಾಧ್ಯವಾಗುವುದು ಹಾಗೂ ಹೆಚ್ಚು ಸಂಖ್ಯೆಯಲ್ಲಿ ಬಡ
ಕುಂದಾಪುರ: ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ನಿಮಿಷಕ್ಕೆ ಐನೂರು ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯದ ಆಕ್ಸಿಜನ್ ಘಟಕ ಈಗಾಗಲೇ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಉದ್ಘಾಟನೆಗೆ ಪೆಟ್ರೋಲಿಯಂ ಸಚಿವರು ಬರುತ್ತಾರೆಂಬ ಮಾಹಿತಿ ಇದೆ. ಹೀಗಾಗಿ ಸ್ವಲ್ಪ ದಿನದ ಬಳಿಕ ಈ ಘಟಕವನ್ನು ಉದ್ಘಾಟನೆ ಮಾಡುತ್ತೇವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು. ಕೇಂದ್ರ
ಕುಂದಾಪುರ: ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷದವರು ನೂತನ ಸಚಿವರ ಪರಿಚಯಕ್ಕೂ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಜನಾಶೀರ್ವಾದ ಯಾತ್ರೆ ಆರಂಭಿಸಿದ್ದೇವೆ. ನರೇಂದ್ರ ಮೋದೀಜಿಯವರ ಸರ್ಕಾರಕ್ಕೆ ಚಿಕ್ಕ ಕಪ್ಪು ಚುಕ್ಕೆಯೂ ಬಾರದಂತೆ ಅತ್ಯಂತ ಪಾರದರ್ಶಕವಾಗಿ ಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು. ಕೇಂದ್ರ ಸಚಿವೆಯಾಗಿ ಆಯ್ಕೆಗೊಂಡ ಬಳಿಕ


















