Home Articles posted by v4news (Page 97)

ತುಳುವೆರ್ ಕುಡ್ಲ (ರಿ). ನೂತನ ಸಂಘಟನೆಯ “ಲೋಗೋ” ಬಿಡುಗಡೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ತುಳುವೆರ್ ಕುಡ್ಲ (ರಿ). ನೂತನ ಸಂಘಟನೆಯ “ಲೋಗೋ”ವನ್ನು ಬಿಡುಗಡೆ ಮಾಡಿದರು. ತುಳುಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಯಿತು ಹಾಗೂ “ತುಳು ಕೆಳಿಂಜ ಭಾರತ” ಎನ್ನುವ ತುಳುನಾಡಿಗೆ

ಕು. ಅಮನ, ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ “ಕಿರಿಯ ಕವಯಿತ್ರಿ” ಎಂದು ದಾಖಲೆಗೆ ಸೇರ್ಪಡೆ

ಕು. ಅಮನ, 8 ನೇ ತರಗತಿ, ಬಿಷಪ್ ಕಾಟನ್ ಗಲ್ರ್ಸ್ ಸ್ಕೂಲ್, ಬೆಂಗಳೂರಿನಲ್ಲಿ ಓದುತ್ತಿದ್ದು, ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್’ ನಲ್ಲಿ “ಕಿರಿಯ ಕವಯಿತ್ರಿ” ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ “ಗ್ರ್ಯಾಂಡ್ ಮಾಸ್ಟರ್” ಆಗಿ ದಾಖಲಾಗಿದೆ. ವಿವರಗಳು ಹೀಗಿವೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್: ಅತ್ಯಂತ ಕಿರಿಯ ಕವಯಿತ್ರಿ ಎಂಬ ದಾಖಲೆಯನ್ನು ಬೆಂಗಳೂರಿನ ಕು. ಅಮನ (ಜನನ ಜೂನ್ 20, 2008 ರಂದು) ಮಾಡಿದ್ದಾರೆ. ಅವರು 61 ಕವನಗಳ

ಪ್ರಾಧಿಕಾರ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಕ್ರಮ – ಸಚಿವ ಸುನಿಲ್ ಕುಮಾರ್

ಬೆಂಗಳೂರು :ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಬಲವರ್ಧನೆಗೆ ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,ಜೊತೆಗೆ ಅವು ಹೊಸ ದೃಷ್ಟಿಕೋನದಿಂದ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಮೂಲಕ ಸಂಸ್ಕೃತಿ ಕಟ್ಟುವ ಕೆಲಸಕ್ಕೆ ತೊಡಗಲು ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಅವರು ಇಂದು ಕನ್ನಡ ಮತ್ತು

ಉದ್ಯಾವರ ಸೇತುವೆಯಲ್ಲಿ ಕಾರು ಲಾರಿ ಅಪಘಾತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಉದ್ಯಾವರ ಸೇತುವೆಯಲ್ಲಿ ಲಾರಿ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬಹಳಷ್ಟು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.   ಕಾರು ಬಹುತೇಕ ಜಖಂಗೊಂಡು ಚಲಿಸದ ಕಾರಣ ಸ್ಥಳಕ್ಕೆ ಬಂದ ಕಾಪು ಪೊಲೀಸರು ಬಾರ ಎತ್ತುವ ಯಂತ್ರ ತರಿಸಿ ಕಾರನ್ನು ಸೇತುವೆ ಮೇಲಿಂದ ತೆರವುಗೊಳಿಸಲಾಯಿತು.

ಬಿಜೆಪಿ ಜಿಲ್ಲೆಗೆ ಹೊಸ ಯೋಜನೆಗಳನ್ನು ತಂದಿಲ್ಲ- ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಮಂಗಳೂರಿನ ಉರ್ವಸ್ಟೋರ್ ಬಳಿ ಇತ್ತೀಚಿಗೆ ಉದ್ಘಾಟನೆಗೊಂಡ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನವನ್ನು ಮಾಜಿ ಸಚಿವ ಬಿ.ರಮಾನಾಥ್ ರೈ ಸೇರಿದಂತೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ರು. ತದ ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅದರಲ್ಲೂ, ಹೊಸ ಜಿಲ್ಲಾಧಿಕಾರಿ ಕಚೇರಿ, ಜಿಲ್ಲೆಗೆ ಪಶುವೈದ್ಯಕೀಯ ಕಾಲೇಜು ನಿರ್ಮಾಣ, ಕೆಲವೊಂದು

ನಿರಪರಾಧಿಯಾಗಿ ಬಿಡುಗಡೆಗೊಂಡು ಕೊನೆಗೂ ಕುಟುಂಬ ಸೇರಿದ ಹರೀಶ್ ಬಂಗೇರ

ಕುಂದಾಪುರ: ಮೆಕ್ಕಾದ ಕುರಿತು ಅವಹೇಳನಕಾರಿ ಬರೆಹ ಪ್ರಕಟಿಸಿದ ಆರೋಪದಡಿ ಸೌದಿ ಅರೇಬಿಯಾದಲ್ಲಿ ಜೈಲುಪಾಲಾಗಿದ್ದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಕೊನೆಗೂ ಬಿಡುಗಡೆಗೊಂಡು ಗುರುವಾರ ಕುಟುಂಬ ಸಮೇತರಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜನಸೇವಾ ಟ್ರಸ್ಟ್ ಹಾಗೂ ಟೀಮ್ ಅಭಿಮತ ನೇತೃತ್ವದಲ್ಲಿ ಕೋಟೇಶ್ವರ ದೇವಸ್ಥಾನದವರೆಗೆ ಗುರುವಾರ ಮುಂಜಾನೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಯೂ ಪೂಜೆ ಸಲ್ಲಿಸಿ ಮನೆಗೆ ತೆರಳಿದರು. ತಾವು ವಾಸವಿದ್ದ

ವಕ್ಪ್ ಆಸ್ತಿ ಕಬಳಿಕೆ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ವಕ್ಫ್ ಮತ್ತು ಹಜ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಜರಾಯಿ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದೇನೆ.ರಾಜ್ಯದಲ್ಲಿ ವಕ್ಫ್ 105885 ಎಕರೆ ಜಮೀನು ಗುರುತಿಸಲಾಗಿದೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ಗೆ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಿಂದ ಮನವಿ

ಬಿಐಎಸ್ ಹಾಲ್‌ಮಾರ್ಕ್ ಕಡ್ಡಾಯದ ನಂತರದ ನಿಯಮಗಳಿಂದ ಚಿನ್ನದ ಕುಶಲಕರ್ಮಿಗಳು ಹಾಗೂ ಸಣ್ಣ ವ್ಯಾಪಾರಿಗಳ ಜೀವನದಲ್ಲಿ ಉಂಟಾದ ಸಂಕಷ್ಟವನ್ನು ಮಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಸಚಿವರಾಗಿರುವ ಶ್ರೀ ರಾಜೀವ ಚಂದ್ರಶೇಖರ ಅವರಲ್ಲಿ ದ.ಕ. ಚಿನ್ನದ ಕೆಲಸಗಾರರ ಸಂಘ ಹಾಗೂ ದೈವಜ್ಞ ಬ್ರಾಹ್ಮಣರ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಮುಖೇನ ಮನವಿಯನ್ನು ಸಲ್ಲಿಸಲಾಯಿತು.ಸಭೆಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಚಿನ್ನಾಭರಣ

ಕಾಫಿ ಪುಡಿಯಿಂದ ಅರಳಿದ ಕಟೀಲಿನ ಭ್ರಮರಾಂಭೆ

ಪೈಂಟಿಂಗ್, ಕ್ಯಾನ್ ವಾಸ್, ಅಶ್ವತ್ಥದ ಎಲೆ ಹಾಗೂ ಮೊಳೆಗಳನ್ನು ಬಳಸಿ ಚಿತ್ರಗಳನ್ನು ಬಿಡಿಸಿ ಹಲವಾರು ಕಲಾವಿದರು ಈಗ ಗಮನ ಸೆಳೆಯುತ್ತಿರುವ ಮಧ್ಯೆಯೇ ಇದೀಗ ಕಾಲೇಜು ವಿದ್ಯಾರ್ಥಿ ಶ್ರವಣ್ ಪೂಜಾರಿ ಮಾರ್ನಾಡು ಕಾಫಿ ಹುಡಿಯನ್ನು ಬಳಸಿ ಹಲವು ಗಣ್ಯರ ಚಿತ್ರ ಬಿಡಿಸಿದ್ದಲ್ಲದೆ, ನೆನೆದವರ ಮನದಲ್ಲಿ ನೆಲೆಯಾಗಿ, ನಂಬಿರುವ ಭಕ್ತರ ರಕ್ಷೆಯಾಗಿ, ಸಹಸ್ರಾರು ಭಕ್ತರ ಪೂಜೆ ಹಾಗೂ ಹರಕೆಗಳನ್ನು ಪಡೆದು, ಪರಿಮಳ ಭರಿತ ಮಲ್ಲಿಗೆ ಹೂವಿನಲ್ಲಿ ಸಿಂಗಾರಗೊಂಡು, ತುಳುನಾಡ ತಮೆರಿ ಎಂದೆ

ಅಪಘಾತವಾದರೂ ಆಂಬುಲೆನ್ಸ್ ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು!

ಕುಂದಾಪುರ: ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ಬೈಕ್ ಗಳೆರಡರ ಮಧ್ಯೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡು ಆಂಬುಲೆನ್ಸ್ ಮೂಲಕವೇ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ಕಾಲೇಜು ವಿದ್ಯಾರ್ಥಿಗಳಾದ ಶಿರೂರು ನಿವಾಸಿ ಮಸಾಯಿದ್ ಮತ್ತು ಗಂಗೊಳ್ಳಿ ನಿವಾಸಿ ವಾಜಿದ್ ಗಾಯಗೊಂಡು ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು. ಜಿಲ್ಲೆಯ ಗಡಿಭಾಗವಾದ ಶಿರೂರಿನಿಂದ