ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿ ಮೋರಿಯ ದಂಡೆಗೆ ಡಿಕ್ಕಿಯಾದ ಕಾರು: ಚಾಲಕ ಅಪಾಯದಿಂದ ಪಾರು

ಬಡಾ ಎರ್ಮಾಳು ಅಪೂರ್ವ ಲಾಡ್ಜ್ ಮುಂಭಾಗ ಕಾರೊಂದು ಚಾಲಕನ ನಿದ್ದೆಯ ಮಂಪರಿನಿಂದಾಗಿ ನಿಯಂತ್ರಣ ತಪ್ಪಿ ಮೋರಿಯೊಂದರ ದಂಡೆಗೆ ಡಿಕ್ಕಿಯಾಗಿ ಮುಗುಚಿ ಬಿದ್ದಿದ್ದು, ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಬಿಟ್ಟು ಮರಳಿ ಉಡುಪಿಗೆ ಹಿಂದಿರುಗಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಬಂದ ಹೆಜಮಾಡಿ ಟೋಲ್ ಸಿಬ್ಬಂದಿಗಳು ಸಹಿತ ಪೊಲೀಸರು ಹೆದ್ದಾರಿಗಡ್ಡವಾಗಿ ಉರುಳಿಬಿದ್ದ ಕಾರನ್ನು ಯಂತ್ರದ ಮೂಲಕ ತೆರವುಗಳಿಸಿ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತವಾಗಿಸಿದ್ದಾರೆ.