Home Blog Left SidebarPage 1013

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್  ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕೆಂದು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ HP ಪೆಟ್ರೋಲ್ ಪಂಪ್ ಹತ್ತಿರ ಪ್ರತಿಭಟನೆ ಮಾಡಲಾಯಿತು. ತಿಕೋಟಾ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿರೇಶ ಸಿಂಧೂರ

ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆ ಅಗಲೀಕರಣ: ಹಲವಾರು ಸಮಸ್ಯೆಗಳು ಸೃಷ್ಠಿ

ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಮಳೆಗಾಲದ ಈ ಸಮಯದಲ್ಲಿ ರಸ್ತೆ ಅಭಿವೃದ್ದಿಯಿಂದಾಗಿ ಹಲವರು ಸಮಸ್ಯೆಗಳು ತಲೆದೋರಿವೆ. ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಗೇಟು ಬಳಿ ಮನೆಯಂಗಳವೇ ನೀರು ಹರಿದು ಹೋಗುವ ಚರಂಡಿಯಾಗಿ ಪರಿವರ್ತನೆಯಾದರೆ, ರಸ್ತೆ ಪಕ್ಕದ ಅಡಿಕೆ ತೋಟದಲ್ಲಿ ನೀರು ತುಂಬಿ ಕೊಂಡು ಕೃಷಿ ನಾಶವಾಗುವ ಭೀತಿ ಎದುರಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ಮನೆ ಅಂಚಿನವರೆಗೂ ಸಾಗಿದ್ದು ತಡೆಗೋಡೆ

 ಅರ್ಕುಳ ಶ್ರೀ ವರದೇಶ್ವರ ದೇವಸ್ಥಾನದ ಡ್ರೈನೇಜ್ ಸಮಸ್ಯೆ: ಶಾಸಕ ಡಾ ವೈ ಭರತ್ ಶೆಟ್ಟಿ ಭೇಟಿ

ಇತಿಹಾಸ ಪ್ರಸಿದ್ಧ ಸುಮಾರು 800 ವರ್ಷಗಳಷ್ಟು ಪ್ರಾಚೀನ ಸ್ವಯಂಭೂ ಅರ್ಕುಳ  ಶ್ರೀವರದೇಶ್ವರ ದೇವಸ್ಥಾನ ಬಳಿ ರೈಲ್ವೆ ಇಲಾಖೆಯವರು ಗೋಡೆಕಟ್ಟುವ ಕಾಮಗಾರಿ ಸಂದರ್ಭದಲ್ಲಿ ದೇವಸ್ಥಾನದ ಡ್ರೈನೇಜ್ ವ್ಯವಸ್ಥೆಗೆ ಲೋಪವಾಗಿತ್ತು. ಇದರ ಪರಿಣಾಮ ದೇವಸ್ಥಾನದ ಅಂಗಣ ತುಂಬಾ ಮಳೆನೀರು ತುಂಬಿಕೊಂಡಿತ್ತು. ಈ ವಿಷಯವನ್ನು ಅರ್ಕುಳ  ಗ್ರಾಮಸ್ಥರು ಶಾಸಕರಾದ ಡಾ ವೈ ಭರತ್ ಶೆಟ್ಟಿಯವರಲ್ಲಿ ತಿಳಿಸಿದಾಗ  ಕೂಡಲೇ ಸ್ಪಂದಿಸಿ  ರೈಲ್ವೆ ಇಲಾಖೆಯವರೊಂದಿಗೆ ಮಾತನಾಡಿ ತ್ವರಿತ ವಾಗಿ

ಕದ್ರಿ ವಾರ್ಡ್‍ನ ಜನತೆಗೆ ಆಹಾರದ ಸಾಮಾಗ್ರಿ ವಿತರಣೆ

ಕದ್ರಿ ವಾರ್ಡಿನ ಕಾರ್ಪೋರೇಟರ್ ಆದ ಕದ್ರಿ ಮನೋಹರ್ ಶೆಟ್ಟಿ ಇವರ ವಿನಂತಿಯ ಮೇರೆಗೆ ಕದ್ರಿ ದಕ್ಷಿಣ 33ನೇ ವಾರ್ಡಿನಲ್ಲಿ ಕೊರೊನಾ ಸಮಯದಲ್ಲಿ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯವಾಗಲೆಂದು ಆಹಾರದ ಕಿಟ್‍ಗಳನ್ನು ಒದಗಿಸಿದರು. ಉದ್ಯಮಿ ಗಣೇಶ್ ಶಿರ್ವ ದುಬಾಯಿ ಇವರ ಸಹಕಾರದೊಂದಿಗೆ ಜೊತೆಯಾಗಿ ಕದ್ರಿ ವಾರ್ಡಿನ ತರಕಾರಿ ವ್ಯಾಪಾರಸ್ಥರಾದ ಸುದೀರ್ ಕದ್ರಿ ಮಾರ್ಕೆಟ್ ಹಾಗೂ ಸುನಿಲ್ ಕೊಟ್ಟಾರಿ ಇವರು ತರಕಾರಿಯ ಕಿಟ್‍ಗಳನ್ನು ಒದಗಿಸಿದರು. ಈ ಸಂದರ್ಭದಲ್ಲಿ ವಾರ್ಡಿನ

ಎಸ್.ಸಿ.ಡಿ.ಸಿಸಿ ಬ್ಯಾಂಕ್ ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಸಮಾರಂಭ ನಗರದ ಕೊಡಿಯಾಲ್ ಬೈಲ್ ನ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಜರುಗಿತು ಮಂಗಳೂರಿನ ಕೊಡಿಯಾಲ್‍ಬೈಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರಿಗೆ ಆಹಾರದ ಕಿಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ವಿತರಿಸಿದ್ರು. ಈ ವೇಳೆ ಮಾತನಾಡಿದ ಅವರು,ಕೊರೋನಾ ಸಂಕಷ್ಟದ

ಮರಳು ಮಾಫಿಯಾವೇ ಮರವೂರು ಸೇತುವೆ ಬಿರುಕಿಗೆ ಕಾರಣ: ಅಭಯಚಂದ್ರ ಜೈನ್

ಮರುವೂರು ಸೇತುವೆ ಬಿರುಕು ಬಿಟ್ಟಿರುವುದು ಆಘಾತಕಾರಿ ವಿಚಾರವಾಗಿದೆ. ಮರಳು ಮಾಫಿಯಾವೇ ಈ ಅವಘಡಕ್ಕೆ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದರು. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಜೆಸಿಬಿ ಮೂಲಕ ಸೇತುವೆ ಸುತ್ತಮುತ್ತ ಹೂಳೆತ್ತುವ ನೆಪದಲ್ಲಿ ಇಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದು ಈ ದುರಂತಕ್ಕೆ ಕಾರಣ ಎಂದು

ಪೆರ್ಲದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೊಲ್/ಡಿಸೇಲ್ ವಿತರಣೆ

ಕೋರೋನ ಮಹಾಮಾರಿಯಿಂದ  ಜಗತ್ತೇ ತತ್ತರಿಸಿದ ಸಂದರ್ಭದಲ್ಲಿ ಲಾಕ್ ಡೌನ್ ಘೊಷಿಸಿದಾಗ ಸಂಕಷ್ಟಕ್ಕೀಡಾದವರ ಸಹಾಯಕ್ಕೆ ಸಮರೋಪಾದಿ ಕಾರ್ಯಗಳು ನಡೆದವು. ಹಲವಾರು ಸಂಘಟನೆಗಳು, ಸಹೃದಯಿಗಳು,ಕೊಡುಗೈ ದಾನಿಗಳು ಸಂತ್ರಸ್ತರ ನೆರವಿಗೆ ಬಂದರು. ಆದರೆ ಇದೇ ಸಂದರ್ಭಕ್ಕನುಗುಣವಾಗಿ ಇಲ್ಲೊಬ್ಬರು ದುಬೈ ಉದ್ಯೋಗಿ ತನ್ನ ಮಾಲೀಕತ್ವದಲ್ಲಿರುವ ಊರಿನ ಪೆಟ್ರೊಲ್ ಬಂಕ್ ಮೂಲಕ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೊಲ್/ಡಿಸೇಲ್ ವಿತರಿಸುವ ಮೂಲಕ ರಿಕ್ಷಾ ಚಾಲಕರಿಗೆ ತಮ್ಮ ಕೈಲಾದ ಕೊಡುಗೆ

ಮರವೂರು ಸೇತುವೆಯಲ್ಲಿ ಬಿರುಕು: ಸಂಚಾರ ಸ್ಥಗಿತ

ಮಂಗಳೂರು ನಗರದಿಂದ ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ-ಕಟೀಲು ಸಂಪರ್ಕ ಕಲ್ಪಿಸುವ ಮರವೂರು ಸೇತುವೆಯಲ್ಲಿ ಬಿರುಕು ಕಂಡು ಬಂದಿದ್ದು, ಸಂಚಾರ ಸ್ಥಗಿತಗೊಂಡಿದೆ. ಕರಾವಳಿ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನದಿಂದ ಭಾರೀ ಮಳೆಯಾಗುತ್ತಿದೆ. ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಮರವೂರು ಸೇತುವೆಯ ಮೊದಲ ಪಿಲ್ಲರ್ ಬಳಿ ಸುಮಾರು ಮೂರು ಅಡಿಗಳಷ್ಟು ಸೇತುವೆ ಕುಸಿದಿದೆ. ಮಂಗಳೂರಿನಿಂದ ಬಜಪೆ ವಿಮಾನ ನಿಲ್ದಾಣ, ಕಟೀಲು ದೇವಸ್ಥಾನ, ಕಿನ್ನಿಗೋಳಿ ಮುಂತಾದ ಕಡೆಗಳಿಗೆ

ಎರ್ಮಾಳಿನ ಅಕ್ರಮ ಮರಳು ಅಡ್ಡೆಗೆ ತಹಶಿಲ್ದಾರ್ ದಾಳಿ

ತೆಂಕ ಎರ್ಮಾಳು ಗ್ರಾ.ಪಂ. ವ್ಯಾಪ್ತಿಯ ಖಾಸಗಿ ಪಟ್ಟಾ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾದ ಸುಮಾರು 8೦೦ ಟನ್ ಸಿಲಿಕಾ ಮರಳನ್ನು ಕಾಪು ತಹಶಿಲ್ದಾರ್ ಪ್ರತಿಭಾ ಆರ್. ತಂಡ ದಾಳಿ ನಡೆಸಿ ವಶಕ್ಕೆ ಪಡೆದು, ಮುಂದಿನ ಕಾನೂನು ಪ್ರಕ್ರಿಯೆಗಾಗಿ ಭೂ ಮತ್ತು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಗಿರೀಶ್ ಎಂಬಾತ ಪಟ್ಟಾ ಸ್ಥಳದಲ್ಲಿ ಅಕ್ರಮವಾಗಿ ಸಿಲಿಕಾ ಮರಳು ದಾಸ್ತಾನು ಮಾಡಿದ ಬಗ್ಗೆ ಮಾಹಿತಿ ತಿಳಿದ ಕಾಪು ತಹಶಿಲ್ದಾರ್ ತಂಡ ದಾಳಿ ನಡೆಸಿದೆ. ತಂಡದಲ್ಲಿ ಕಾಪು ಆರ್.

ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಬಿಗಿ: ಇಬ್ಬರ ಬಂಧನ

ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ಬಿಗಿಗೊಳಿಸಿರುವ ಮಂಗಳೂರು ಪೊಲೀಸರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ ಹಾಗೂ ಹಿಮಾಚಲ ಪ್ರದೇಶದ ಯುವಕನೊಬ್ಬನನ್ನು ಡ್ರಗ್ಸ್‌ನೊಂದಿಗೆ ಬಂಧಿಸಿದ್ದಾರೆ. ಬಂಧಿತ ಒಮನ್ ಪ್ರಜೆ ಅಹ್ಮದ್ ಮುಸಬಾ ಅಲ್ ಮಹಾಮಾನಿ (34) ಹಾಗೂ ಹಿಮಾಚಲ ಪ್ರದೇಶದ ರಾಮ್ (22) ಎಂದು ಗುರುತಿಸಲಾಗಿದೆ. ಈ ಮಧ್ಯೆ ನಗರದ ಹೊಟೇಲೊಂದರಲ್ಲಿ ಹಿಮಾಚಲ ಪ್ರದೇಶದ ರಾಮ್ ಜತೆ ಬಂಧಿಸಲಾಗಿದ್ದು, ಬಂಧಿತರಿಂದ ಎಂಡಿಎಂಎ ಹಾಗೂ ಗಾಂಜಾ