ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ)ಯಿಂದ 2024 ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಮತ್ತು ಎನ್‌ಸಿಸಿ ಮಾಜಿ ಕೆೆಡೆಟ್ ಆಗಿರುವ ಸಬ್ ಲೆಫ್ಟಿನೆಂಟ್ ಅನನ್ಯ ರಾವ್ ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದಾರೆ. ಮಂಗಳೂರಿನ ಅನನ್ಯರವರು ನಿವೃತ್ತ ಟೆಲಿಕಾಂ ಅಧಿಕಾರಿ ಸತೀಶ್ ರಾವ್ ಮತ್ತು ವೀಣಾ ರಾವ್ ದಂಪತಿ ಪುತ್ರಿ. ಎಳಿಮಲದ ಭಾರತೀಯ
ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 23 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡಮೊಗೆ. ಬೈಂದೂರು ವಲಯ ಉಡುಪಿ ಜಿಲ್ಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ಹೊಸ ಕಿರಣ ನ್ಯೂಸ್ ಚಾನೆಲ್ ಸಂಪಾದಕರಾದ ಶ್ರೀಯುತ ಕಿರಣ್ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಸರಳವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹಾಗು ಸಹಾಯ ಮನೋಭಾವದ ಕುರಿತು ಮಾತನಾಡಿದರು.
ಪೆರ್ನಾಜೆ:ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ).ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತುರಲ್ಲಿ ಜೂನ್ 15 ರಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು. ಆ ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ ತಮ್ಮ ಕೃಷಿ ಜೇನು ಕೃಷಿ ಜೇನುಗಡ್ಡ ಸಂಶೋಧನೆ ಬರಹ ಕಲಾ ಸೇವೆಗಾಗಿ ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಗೆ, ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು
ಕಡಬ :ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನೆ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಹೊಸ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿ ಮಾತನಾಡಿದ ಕಡಬ ಕ್ಲಸ್ಟರ್ ನ ಸಂಪನ್ಮೂಲ ಅಧಿಕಾರಿ ಶ್ರೀಯುತ ಗಣೇಶ್ ನಡುವಲ್ ವಿದ್ಯಾರ್ಥಿಗಳಿಗೆ ಉತ್ತಮ ಓದುಗಾರರಾಗಿ ,ಆತ್ಮಚರಿತ್ರೆಯನ್ನು ಓದಿ, ಕನಸುಗಳನ್ನು ಹೇಗೆ ಕಾಣಬೇಕು ಮತ್ತು ಕನಸುಗಳನ್ನು ಹೇಗೆ ನನಸಾಗಿಸಬೇಕು, ಜೊತೆಗೆ ಕಥೆಗಳನ್ನು ಬರೆಯುವ ರೂಢಿಯನ್ನು
ಮಣಿ ಶೆಣೈ ನಿರ್ದೇಶನದ ಮೈ ಡಿಯರ್ ಮೀನಾ ಕಾಮಿಡಿ ತುಳು ಆಲ್ಬಂ ಸಾಂಗ್ ಇತ್ತೀಚೆಗೆ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯಲ್ಲಿ ಅದ್ದೂರಿಯಾಗಿ ಆಕ್ಷನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ದೀಕ್ಷಾ ಎಸ್‌ಎಂ ಬ್ರಹ್ಮಾವರ ಇವರು ಕೇಂದ್ರ ಬಿಂದು ಆಗಿದ್ದು, ಎಏ ಪೇಟೆಬೆಟ್ಟು, ಕೀರ್ತಿ ಕುಮಾರ್ ಬೆಂಗ್ರೆ, ಕಿರಣ್ ಲೂಯಿಸ್, ಹಾಗೂ ಎಲ್ಲಾ ಆಕ್ಷನ್ ಕ್ರಿಯೇಷನ್ ತಂಡದ ಸದಸ್ಯರು ಅಭಿನಯಿಸಿದ್ದಾರೆ. ಮೈ
ದಿನಾಂಕ 08.05.2025 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಡುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ಸದ್ರಿ ಸ್ಥಳಕ್ಕೆ ಕೌಶಿಕ್ ಬಿ ಸಿ, ಪಿ ಎಸ್ ಐ, ವಿಟ್ಲ ಪೊಲೀಸ್ ಠಾಣೆ ರವರು ದಾಳಿ ಮಾಡಿದಾಗ, ಘಟನಾ ಸ್ಥಳದಲ್ಲಿ ಜುಗಾರಿ ಆಟದಲ್ಲಿ ತೊಡಗಿದ್ದವರು ಪತ್ತೆಯಾಗದಿದ್ದು, ಸ್ಥಳದಲ್ಲಿ ಮೋಟಾರು ಸೈಕಲ್ ಕಂಡುಬಂದಿರುತ್ತದೆ. ಪಿ ಎಸ್ ಐ ಕೌಶಿಕ್ ಬಿ ಸಿ ರವರು ಈ ಬಗ್ಗೆ ಕಾನೂನಾತ್ಮಕ ಕ್ರಮ ಜರುಗಿಸದೇ ಸದ್ರಿ ಬೈಕ್ ಮಾಲಕನಿಗೆ ಕರೆಮಾಡಿ ಠಾಣೆಗೆ
ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧೆಡೆ ಜೂ.12ರಂದು ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ. ಜೂ.12ರಂದು ಬೆಳಗ್ಗೆ 1000 ಅಪರಾಹ್ನ 3ರವರೆಗೆ 110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11 ಕೆವಿ ದಡ್ಡಲ್ ಕಾಡ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಸಿ.ಎ.ಪಿ.ಎಲ್ ಕಾಲೇಜು ಸುತ್ತಮುತ್ತ, ದಡ್ಡಲ್ ಕಾಡ್ ಜಂಕ್ಷನ್, ಕೋಟೆಕಣಿ ರಸ್ತೆ ಸುತ್ತಮುತ್ತ ಕೊಟ್ಟಾರ ಚೌಕಿ
ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಣಂಬೂರಿನ ಎನ್.ಎಂ.ಪಿ.ಎ. ಕಾರ್ಯದರ್ಶಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂ.9ರಂದು ರಾತ್ರಿ 8 ಗಂಟೆ ಸುಮಾರಿಗೆ ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತು ಅವರ ಇಬ್ಬರು ಸಹಚರರು ಕಾಮಗಾರಿಯ ಬಿಲ್ ಮಂಜೂರಾತಿ ವಿಚಾರವಾಗಿ ಎನ್.ಎಂ.ಪಿ.ಎ. ಕಚೇರಿಯ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಿಶಿಷ್ಟರ ಮೀಸಲು ಭೂಮಿಯಾಗಿರುವ ಡಿ. ಸಿ ಮನ್ನಾ ಭೂಮಿಯ ಮಂಜೂರಾತಿಗೆ ಸಂಬಂಧಿಸಿದ ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆ ದಿನಾಂಕ: 10-6-2025 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರು ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ನಾಯಕರು ಮತ್ತು ದಲಿತ ಸಂಘಟನೆಗಳ ಮುಖಂಡರ ಜೊತೆ ಸುಧೀರ್ಘ ಚರ್ಚೆಯನ್ನು ನಡೆಸಿದರು. ಬ್ರಿಟೀಷರು ಭಾರತಕ್ಕೆ ಬಂದಾಗ ಇಲ್ಲಿನ
ಕಳೆದ ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಯಕ್ಷ ಧ್ರುವ ಪಟ್ಲ ಫೌಂಡೇಷನ್ ನ ದಶಮಾನೋತ್ಸವದ ಅಂಗವಾಗಿ 2158 ಯಕ್ಷಗಾನ, ರಂಗಭೂಮಿ, ದೈವಾರಾಧನೆ ಮತ್ತು ಕಂಬಳ ಕಲಾವಿದರಿಗೆ ಅಂಚೆ ಅಪಘಾತ ವಿಮೆಯನ್ನು ಮಾಡಿಸುವ ಮೂಲಕ ಅವರ ಕುಟುಂಬಕ್ಕೆ ತಲಾ 10 ಲಕ್ಷದ ಸುರಕ್ಷತೆಯನ್ನು ಒದಗಿಸಲಾಯಿತು. ವಿಮಾ ಪ್ರೀಮಿಯಂ ನ್ನು ಪಟ್ಲ ಫೌಂಡೇಷನ್ ಪ್ರಾಯೋಜಿಸಿದ್ದು ಮಂಗಳೂರು ಅಂಚೆ ವಿಭಾಗದ ಸುಮಾರು 150 ಸಿಬ್ಬಂದಿಗಳು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತು ಮತ್ತು ಸಂಯಮದಿಂದ




























