Home Blog Left SidebarPage 129

ಕಾಣೆಯಗಿದ್ದಾರೆ

ಕಾಣೆಯಗಿದ್ದಾರೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಚೌಡ್ಲು ಎಂಬಲ್ಲಿನ ಸುಂದರ ಕಿಬ್ಬೆಟ್ಟ ಇವರ ಮಗ ಕವನ್ ಕೆ ಎಸ್(25) ಸುಮಾರು ಮೂರು ತಿಂಗಳುಗಳಿಂದ ನಾಪತ್ತೆಯಾಗಿದ್ದು ಇವರ ಬಗ್ಗೆ ಯಾರಿಗಾದರೂ ಸುಳಿವು ಅಥವಾ ಮಾಹಿತಿ ಸಿಕ್ಕಿದಲ್ಲಿ ತಕ್ಷಣ ಪೊಲೀಸ್‌ ಇಲಾಖೆಗೆ ತಿಳಿಸಬೇಕಾಗಿ ವಿನಂತಿ. ಸಂಪರ್ಕಿಸಿ : 90081 22869, 9740004961, 7349596586

ರಾಜ್ಯದ್ದು “ಈಗ ಬರ್ಕೊ-ಆಮೇಲೆ ಹರ್ಕೊ” ಬಜೆಟ್ :- ಶಾಸಕ ಕಾಮತ್

ಬಜೆಟ್ ಎಂಬುದು ಕೇವಲ ಬಿಳಿ ಹಾಳೆ ಅಲ್ಲ ಎಂದು ಬಜೆಟ್ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಂದೊಂದು ಘೋಷಣೆ ಕೇಳುತ್ತಿದ್ದರೆ “ಈಗ ಬೇಕಾದ್ದನ್ನು ಬರೆದುಕೊಂಡು ಘೋಷಣೆ ಮಾಡೋದು, ಆಮೇಲೆ ಅದನ್ನು ಹರಿದು ಹಾಕೋದು” ಎನ್ನುವಂತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ಹೇಳಿದರು. ಓಲೈಕೆ ರಾಜಕಾರಣದ ಕರಿ ಛಾಯೆ ಇಲ್ಲೂ ಎದ್ದು ಕಾಣುತ್ತಿದ್ದು ಹಿಂದುಳಿದ, ಶೋಷಿತ ವರ್ಗಗಳ ಕಡೆಗಣನೆ ಮಾಡಲಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ್

ಕರಾವಳಿ, ಮೀನುಗಾರರು ಹಾಗೂ ಮೀನುಗಾರಿಕೆಯನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್‌:ಶಾಸಕ ಗುರುರಾಜ್‌ ಗಂಟಿಹೊಳೆ

ಬೈಂದೂರು : ಮೀನುಗಾರಿಕೆ, ಮೀನುಗಾರರನ್ನು ಮತ್ತು ಕರಾವಳಿಯನ್ನು ದ್ವೇಷಿಸುವ ಬಜೆಟ್‌ ಇದಾಗಿದೆ. ರಾಜ್ಯದ ಆರ್ಥಿಕತೆಗೆ ತನ್ನದೆ ಕೊಡುಗೆ ನೀಡುತ್ತಾ ಬರುತ್ತಿರುವ ಮೀನುಗಾರಿಕೆ ವಲಯದ ಉತ್ತೇಜನಕ್ಕೆ ಯಾವುದೇ ಯೋಜನೆಯನ್ನು ಘೋಷಣೆ ಮಾಡಿಲ್ಲ. ಅಲ್ಲದೆ, ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಎಂದು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಸಾಕಷ್ಟು

ದ.ಕ.ಜಿಲ್ಲೆಗೆ ಐತಿಹಾಸಿಕ ಬಜೆಟ್: ಹರೀಶ್ ಕುಮಾರ್

“ದ.ಕ.ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟದೊಂದಿಗೆ ಮಂಡಿಸಿದ ಐತಿಹಾಸಿಕ ಬಜೆಟ್ ಆಗಿದೆ. ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವೈದ್ಯಕೀಯ ಕಾಲೇಜ್ ಮಂಜೂರು, ಶೈಕ್ಷಣಿಕ, ಆರೋಗ್ಯ, ಕ್ರೀಡೆ, ಜಲಸಾರಿಗೆ, ಮೀನುಗಾರಿಕಾ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಗಳಿಗೆ ಭರಪೂರ ಅನುದಾನ ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಉತ್ತಮ ಬಜೆಟ್.” ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಬಜೆಟ್ – ಗ್ರಾಮ ಪಂಚಾಯತ್ ಸದಸ್ಯರಿಗೆ ಅನ್ಯಾಯ, ಕನ್ನಡಿಗರಿಗೆ ನಿರಾಶೆ :ಕಿಶೋರ್ ಕುಮಾರ್ ಪುತ್ತೂರು

ಕರ್ನಾಟಕ ಸರ್ಕಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ಗ್ರಾಮೀಣ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗೆ ತೀವ್ರ ನಿರಾಸೆಯನ್ನುಂಟುಮಾಡಿದೆ. ಗ್ರಾಮ ಪಂಚಾಯತ್ ಸದಸ್ಯರ ಭತ್ಯೆ, ಪ್ರಯಾಣ ಭತ್ಯೆ , ದೂರವಾಣಿ ಭತ್ಯೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಯೋಜನೆಗಳೇ ಇಲ್ಲ. ನಕ್ಸಲ್ ಪ್ರಭಾವಿತ ಗ್ರಾಮಗಳಿಗೆ ಸಹಾಯ ಪ್ಯಾಕೇಜ್ ನೀಡುವ ಬದಲು ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ. ಈ ಬಜೆಟ್

ಓಂ ಕ್ರಿಕೆಟರ್ಸ್ ಪಾವಂಜೆ -16ನೇ ವಾರ್ಷಿಕೋತ್ಸವ

ಹಳೆಯಂಗಡಿ, ಓಂ ಕ್ರಿಕೆಟರ್ಸ್ ಪಾವಂಜೆ ವತಿಯಿಂದ 16ನೇ ವಾರ್ಷಿಕೋತ್ಸವವನ್ನು ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ವೇದಿಕೆಯಲ್ಲಿ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಬ್ರಹ್ಮಶ್ರೀ ನಾರಾಯಣ ಗುರು ಸಂಘ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ನಾನಿಲ್, ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪಾವಂಜೆ ಇಲ್ಲಿನ ಆಡಳಿತ ಮೊಕ್ತೇಸರರಾದ ಶ್ರೀ

ಸುಳ್ಯ: ಮಾ.15ರಿಂದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ

ಸುಳ್ಯ:ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ 18ರ ತನಕ ನಡೆಯಲಿದೆ.4 ದಿನದ ದೈವಂಕಟ್ಟು ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿದೆ ಎಂದು ಮಹೋತ್ಸವ ಸಮಿತಿಯ ಮಹೋತ್ಸವ ಸಮಿತಿಯ ಅಧ್ಯಕ್ಷ ಸುಧಾಕರ ರೈ ಹಾಗೂ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ

ಮಾಣಿ: ಪೆರಾಜೆ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಇಲ್ಲದೆ ಕಡತಗಳು ಬಾಕಿ:ಸ್ಥಳೀಯರಿಂದ ಹಿಡಿಶಾಪ

ಮಾಣಿ ಪೆರಾಜೆ ಗ್ರಾಮ ಪಂಚಾಯತ್ ದಿಕ್ಕು ದೆಸೆ ಇಲ್ಲದ ಗ್ರಾಮ ಪಂಚಾಯತ್ ಆಗಿದೆ. ವಿದ್ಯಾರ್ಥಿಗಳು, ಸ್ಥಳೀಯರು, ಜಮೀನು ಖರೀದಿಸಿದವರು, ಪಹಣಿ ಪತ್ರಿಕೆ, ತಮ್ಮ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ- ಹೀಗೆ ನೂರಾರು ಕೆಲಸಗಳಿಗೋಸ್ಕರ ಪ್ರತಿದಿನವೂ ಗ್ರಾಮ ಪಂಚಾಯತ್ ಕಚೇರಿಗೆ ಬಂದು “ಬಂದ ದಾರಿಗೆ ಸುಂಕವಿಲ್ಲ” ಎಂಬಂತೆ ಬೇಸರದಿಂದ ಹಿಂದೆ ವಾಪಾಸಾಗುತ್ತಿದ್ದಾರೆ. ಸ್ಥಳೀಯ ಶಾಸಕರು, ಸಂಸದರು, ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಮಾಣಿ ಪೇರಾಜೆ

“ಶಿವಾಜಿಯನ್ನು ವಿರೋಧಿಸುವವರು ನಾಟಕ ನೋಡಿ!“ – ವಿಜಯ್ ಕುಮಾರ್ ಕೊಡಿಯಾಲ್ ಬೈಲ್

ಮಂಗಳೂರು: “ಶಿವಾಜಿ ಹಿಂದೂ ಧರ್ಮದ ರಕ್ಷಕ ಆದರೆ ಅನ್ಯಧರ್ಮದ ದ್ವೇಷಿಯಲ್ಲ. ಇತಿಹಾಸವನ್ನು ತಿರುಚಿದವರು ಮಾತ್ರ ಅಪಚಾರ ಮಾಡುತ್ತಿದ್ದಾರೆ ಶಿವಾಜಿಯನ್ನು ಅರಿತವರು ಅವರಂತಹ ಒಬ್ಬ ಒಳ್ಳೆಯ ಸಾಮ್ರಾಟನನ್ನು ಕೊಂಡಾಡುತ್ತಾರೆ. ಶಿವಾಜಿಯ ಸಂಪೂರ್ಣ ಕಥೆ ತಿಳಿದುಕೊಂಡರೆ ಅವರೆಂತಹ ಅನ್ಯಧರ್ಮ ಸಹಿಷ್ಣು ಎನ್ನುವುದು ತಿಳಿಯುತ್ತದೆ. ಶಿವಾಜಿಯ ಬಗ್ಗೆ ತಿಳಿಯದವರು ನಮ್ಮ ಮುಂದಿನ ಚಾರಿತ್ರಿಕ ನಾಟಕ “ಶಿವಾಜಿ”ಯನ್ನು ನೋಡಬೇಕು. ಅವರ ಶಿವಾಜಿ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ“

ಸುಬ್ರಹ್ಮಣ್ಯ : ಕೆ.ಎಸ್.ಎಸ್. ಕಾಲೇಜಿನಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ,ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ,ಕೆ ಎಸ್ ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ,ರೋವರ್ಸ್ ಅಂಡ್ ರೆಂಜರ್ಸ್ ಘಟಕ ,ಯೂತ್ ರೆಡ್ ಕ್ರಾಸ್ ಘಟಕ , ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಆಂತರಿಕ ಗುಣಮಟ್ಟ ಕೋಶ ಗಳ ಜಂಟಿ ಆಶಯದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು. ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ