Home Blog Left SidebarPage 167

ಜಮ್ಮು ಮತ್ತು ಕಾಶ್ಮೀರ – ಖಾತೆ ತೆರೆದ ಎಎಪಿ – ದೋಡಾದಲ್ಲಿ ಗೆಲುವು

ಹೊಸ ರಾಜ್ಯಗಳಿಗೆ ವಿಸ್ತರಿಸಿಕೊಳ್ಳುವ ಆಮ್ ಆದ್ಮಿ ಪಕ್ಷದ ಪ್ರಯತ್ನವು ಜಮ್ಮು ಮತ್ತು ಕಾಶ್ಮೀರದಲ್ಲಿ ಫಲ ನೀಡಿದೆ.ದೋಡಾ ವಿಧಾನ ಸಭಾ ಕ್ಷೇತ್ರದಲ್ಲಿ ಮೆಹ್ರಾಜ್ iಲಿಕ್ ಅವರು ಎಎಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅವರು ಬಿಜೆಪಿಯ ಅಭ್ಯರ್ಥಿ ಗಜಯ್ ಸಿಂಗ್ ರಾಣಾರನ್ನು ಸೋಲಿಸಿದರು. ೩೬ರ ಮಲಿಕ್ ಅವರು ರಾಜ್ಯಪಾಲರ ಆಡಳಿತದ ಕಟು ಟೀಕಾಕಾರರಾಗಿ ಜನಪ್ರಿಯತೆ

ಎನ್‌ಸಿಯ ಓಮರ್ ಅಬ್ದುಲ್ಲಾ ಮತ್ತೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ

ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಓಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ಇಂಡಿಯಾ ಮೈತ್ರಿ ಕೂಟವು ಸ್ಪಷ್ಟಪಡಿಸಿದೆ.ಶೇಖ್ ಅಬ್ದುಲ್ಲಾ, ಅವರ ಮಗ ಫಾರೂಕ್ ಅಬ್ದುಲ್ಲಾ ಹಾಗೂ ಮೊಮ್ಮಗ ಓಮರ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರು. ಈಗ ಅಲ್ಲಿ ಇಂಡಿಯಾ ಮೈತ್ರಿ ಕೂಟವು ಬಹುಮತ ಸಾಧಿಸಿದೆ; ಅದರಲ್ಲಿ ಎನ್‌ಸಿ ಬಹುತೇಕ ಸ್ಥಾನಗಳನ್ನು ಗೆದ್ದಿದೆ. ಈಗ ಓಮರ್ ಅಬ್ದುಲ್ಲಾರು ಜಮ್ಮು

ಸಚಿನ್ ತೆಂಡೂಲ್ಕರ್ – ಬ್ಯಾಂಕ್ ಆಫ್ ಬರೋಡಾ ಜಾಗತಿಕ ಬ್ರಾಂಡ್ ಅಂಬಾಸಿಡರ್

ಮುಂಬೈ, ಅಕ್ಟೋಬರ್ 07, 2024: ಬ್ಯಾಂಕ್ ಆಫ್ ಬರೋಡಾ ತನ್ನ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಘೋಷಿಸಿದೆ. ಶ್ರೇಷ್ಠತೆ ಮತ್ತು ವಿಶ್ವಾಸದ ಹಂಚಿಕೆಯ ಮೌಲ್ಯಗಳಲ್ಲಿ ಬೇರೂರಿರುವ ಈ ಪಾಲುದಾರಿಕೆಯು ಬ್ಯಾಂಕಿನ ರೂಪಾಂತರ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. “ಪ್ಲೇ ದಿ ಮಾಸ್ಟರ್‌ಸ್ಟ್ರೋಕ್” ಎಂಬ ಶೀರ್ಷಿಕೆಯ ಮೊದಲ ಅಭಿಯಾನವು ಒಂದು ಶತಮಾನದ ಪರಂಪರೆಯನ್ನು ಹೊಂದಿರುವ

ಇದು ಪ್ರತಿಯೊಬ್ಬ ಹುಡುಗಿಯ ಹೋರಾಟ – ವಿನೇಶಾ ಪೋಗಟ್

ಪ್ರತಿಯೊಬ್ಬ ಮಹಿಳೆಯು ಹೋರಾಟದಲ್ಲಿ ತೊಡಗಿದ್ದು, ತನ್ನ ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡು, ಮುನ್ನಡೆಯಬೇಕು ಎಂದು ಹೊಸ ಶಾಸಕಿ ಕುಸ್ತಿಪಟು ವಿನೇಶಾ ಪೋಗಟ್ ಹೇಳಿದರು. ಇದು ಪ್ರತಿಯೊಬ್ಬ ಹುಡುಗಿಯ ಹೋರಾಟ. ಪ್ರತಿಯೊಬ್ಬ ಮಹಿಳೆಯು ತನ್ನ ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನನಗೆ ದಕ್ಕಿರುವ ಗೆಲುವು ಹೋರಾಟದ ಗೆಲುವಾಗಿದೆ, ಸತ್ಯದ ಗೆಲುವಾಗಿದೆ. ಈ ದೇಶ ನನಗೆ ನೀಡಿರುವ ಪ್ರೀತಿ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೊಸದಾಗಿ ವಿಧಾನಸಭೆ

ಕಾಂತಾವರ ಕನ್ನಡ ಸಂಘದ ನಾಲ್ಕು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

ಮೂಡುಬಿದಿರೆ :ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಸರಸ್ವತಿ ಬಲ್ಲಾಳ್ ಮತ್ತು ಡಾ.ಸಿ.ಕೆ.ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಬಂಟ್ವಾಳದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಸ್ಥಾಪಕರಾದ

ಕಾರ್ಕಳದಲ್ಲಿ ದಸರಾ ಎಕ್ಸೇಂಜ್ ಮತ್ತು ಫೈನಾನ್ಸ್ ಉತ್ಸವ ಶುಭಾರಂಭ

ದಸರಾ ಎಕ್ಸೇಂಜ್ ಮತ್ತು ಫೈನಾನ್ಸ್ ಉತ್ಸವದ ಅಂಗವಾಗಿ ಸ್ಪಾಟ್ ಬುಕ್ಕಿಂಗ್ ಆಫರ್,ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಕಾರನ್ನು ಖರೀದಿಸಬಹುದು.ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಬುಕ್ಕಿಂಗ್ ಸೌಲಭ್ಯ ಇದೆ.ಹಳೆ ವಾಹನ ಬದಲಾವಣೆಗೆ ಉತ್ತಮ ಬೆಲೆ ನೀಡಲಾಗುತ್ತದೆ.100% ಆನ್ ರೋಡ್ ಫಂಡಿಂಗ್,ಕಡಿಮೆ ನಗದು ಪಾವತಿ ಜೊತೆಗೆ 0 ಡೌನ್ ಪೇಮೆಂಟ್ ನಲ್ಲಿ ತಮ್ಮ ಕನಸಿನ ಕಾರ್ ಖರೀದಿಸಲು ಅವಕಾಶ ಇದೆ.ಹೈರೈಡರ್ ಕಾರ್ ಮತ್ತು ಫಾರ್ಚುನರ್ ಕಾರ್ ಮೇಲೆ

ಕುಂದಾಪುರದ ಗೇರುಕಟ್ಟೆ ಸಮೀಪ ಸಿಡಿಲು ಬಡಿದು ಮನೆಗೆ ಭಾಗಶಃ ಹಾನಿ

ಕುಂದಾಪುರ: ನಿನ್ನೆ ರಾತ್ರಿ ಬಡಿದ ಸಿಡಿಲಿಗೆ ಮನೆಯೊಂದು ಭಾಗಶಃ ಬಿರುಕು ಬಿಟ್ಟು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗೇರುಕಟ್ಟೆ ಸಮೀಪ ನಡೆದಿದೆ. ಗೇರುಕಟ್ಟೆ ನಿವಾಸಿ ಫಕೀರ ಸಾಹೇಬರ ವಠಾರದ ಅಬ್ದುಲ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಚಾವಣಿ, ವಿದ್ಯುತ್ ಪರಿಕರಗಳು ಹಾಗೂ ಮನೆಯ ಕೆಲವು ಸಾಮಾಗ್ರಿಗಳು ಭಾಗಶಃ ಹಾನಿಯಾಗಿದೆ. ಈ ಘಟನೆಯ ವೇಳೆ ಅಬ್ದುಲ್ ದಂಪತಿಗಳು ತಮ್ಮ ಮಗನ ಮನೆಯಲ್ಲಿ ಇದ್ದುದರಿಂದ ಅಪಾಯದಿಂದ

ಕಾರು ಚಾಲಕನ ನಿದ್ದೆಯ ಮಂಪರು ತೆಂಕ ಎರ್ಮಾಳಿನಲ್ಲಿ ಸರಣಿ ಅಪಘಾತ

ತೆಂಕ ಎರ್ಮಾಳು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಒರ್ವ ಗಾಯಗೊಂಡು ಮೂರು ವಾಹನಗಳು ಜಖಂಗೊಂಡಿದೆ. ಗೂಡ್ಸ್ ಟೆಂಪೆÇವೊಂದು ಎರ್ಮಾಳು ಜಂಕ್ಷನ್ ನ ಸತ್ಕಾರ್ ಹೊಟೇಲ್ ಮುಂಭಾಗ ರಸ್ತೆ ಬಿಟ್ಟು ನಿಂತಿದ್ದು, ಮಂಗಳೂರು ಕಡೆಯಿಂದ ವೇಗವಾಗಿ ಬಂದ ಹೊಂಡಾ ಸಿಟಿ ಕಾರೊಂದು ನೇರವಾಗಿ ರಸ್ತೆಬಿಟ್ಟು ಕೆಳಗಿಳಿದು ಗೂಡ್ಸ್ ಟೆಂಪೋಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಟೆಂಪೋ ಹೊಟೇಲ್ ನ ಮುಂಭಾಗಕ್ಕೆ ಹಾರಿ ಅಲ್ಲೇ ನಿಲ್ಲಿಸಲಾಗಿದ್ದ ಅಟೋ

ಭಾರತೀಯ ಸಾಂಪ್ರದಾಯಿಕ ಯುದ್ಧ ಕಲೆ ಥಾಂಗ್ – ತಾ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಗ್ರಾಮೀಣ ಪ್ರತಿಭೆ

ಬಂಟ್ವಾಳ: ಮಧ್ಯಪ್ರದೇಶದ ಥಾಂಗ್-ತಾ ಅಸೋಸಿಯೆಷನ್ ವತಿಯಿಂದ‌ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ತಾಂಗ್- ತಾ( ಮಣಿಪುರ ಕಳರಿ ಫೈಟ್) ಚಾಂಪಿಯನ್ ಶಿಪ್ ನಲ್ಲಿ ಸುಂಕದಕಟ್ಟೆ ನಿರಂಜನಾನಂದ ಸ್ವಾಮಿ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದ ಪ್ರಥಮ‌ ವರ್ಷದ ಡಿಪ್ಲೋಮ ವಿದ್ಯಾರ್ಥಿ ಸತೀಶ್ ಎಸ್. ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅ.5 ರಿಂದ ಅ.7 ರವರೆಗೆ ತಾಂಗ್- ತಾ ಫೆಡರೇಷನ್ ಆಫ್ ಇಂಡಿಯದ ಸಹಕಾರದೊಂದಿಗೆ ನಡೆದ ಈ

ಮಂಗಳೂರು: ಸಾಮಾಜಿಕ ಮುಂದಾಳು ಮುಮ್ತಾಜ್ ಆಲಿ ಮೃತದೇಹ ಪತ್ತೆ

ಮರ್ಮ ರೀತಿಯಲ್ಲಿ ನಾಪತ್ತೆಯಾಗಿದ್ದ ಮಂಗಳೂರು ಬಡಗಣ ಕ್ಷೇತ್ರದ ಮಾಜೀ ಶಾಸಕ ಮೊಯ್ದಿನ್ ಬಾವಾ ಅವರ ಸಹೋದರ ಮಮ್ತಾಜ್ ಆಲಿ ಖಾನ್ ಅವರ ಮೃತ ದೇಹವು ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಪಕ್ಕದಲ್ಲೇ ಪತ್ತೆಯಾಗಿದೆ. ಅವರ ಕಾರು ಅಪಘಾತ ಆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಕೀ ಮತ್ತು ಮೊಬಾಯಿಲ್ ಕೂಡ ಸಿಕ್ಕಿತ್ತು. ಮಮ್ತಾಜ್ ಆಲಿ ಖಾನ್ ತಾಕೊಲೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿತ್ತು. ರಕ್ಷಣಾ ತಂಡಗಳು ಕೂಡಲೆ ಹುಡುಕಾಟದಲ್ಲಿ ತೊಡಗಿದರೂ ಒಂದು ದಿನದಷ್ಟು ಕಾಲ