ಮಂಗಳೂರು : ಗುರುಪೂರ್ಣಿಮೆಯು ವ್ಯಕ್ತಿಯೊಳಗಿನ ದೋಷಗಳನ್ನೆಲ್ಲ ಪರಿಹರಿಸಿ ಆತನನ್ನು ಸ್ವಯಂಪೂರ್ಣ ಮತ್ತು ಸರ್ವಾಂಗೀಣ ವ್ಯಕ್ತಿಯಾಗಿ ರೂಪಿಸುವ ದಿವ್ಯದಿನವಾಗಿದೆ. ಗುರು ಮತ್ತು ಗುರಿ ಎರಡೂ ಆತನನ್ನು ಗೊಂದಲರಹಿತನನ್ನಾಗಿ ಮಾಡುತ್ತದೆ ಎಂದು ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಹೇಳಿದರು. ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ
ಬೈಂದೂರು; ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತ್ರಾಸಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗುಜ್ಜಾಡಿ, ನಾಯಕವಾಡಿ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಮುದ್ರ ಅಲೆಗಳ ಆರ್ಭಟದಿಂದ ಉಂಟಾದ ಕಡಲ ತೀರದ ಹಾನಿಗಳ ಕುರಿತು ಸ್ಥಳೀಯರು ಹಾಗೂ ಊರಿನ ಪ್ರಮುಖರಿಂದ ಮಾಹಿತಿ ಪಡೆದು. ತುರ್ತು ಪರಿಹಾರದ ಕಾರ್ಯ ಬಗ್ಗೆ ಮುಂಜಾಗ್ರತಾ ಕ್ರಮದ ಕುರಿತು ಚರ್ಚೆ ನಡೆಸಿದರು. ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರದ
ಪುತ್ತೂರು: ಸರ್ವೆ ಗೌರಿ ಹೊಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್ (21) ಮೃತದೇಹ ಪತ್ತೆಯಾಗಿದೆ.ಸರ್ವೆಯ ಗೌರಿ ಹೊಳೆಯ ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ. ಜು.19ರ ರಾತ್ರಿಯಿಂದ ಸನ್ಮಿತ್ ಕಾಣೆಯಾಗಿದ್ದು, ಆತನ ಸ್ಕೂಟರ್ ಮತ್ತಿತರ ವಸ್ತು ಸರ್ವೆ ಗೌರಿ ಹೊಳೆಯ ಸಮೀಪ ಪತ್ತೆಯಾಗಿತ್ತು. ಮೃತ ಸನ್ಮಿತ್ ತಂದೆ ಚಂದ್ರಗೌಡ ನೀಡಿದ ದೂರಿನಂತೆ ನಿನ್ನೆ ಬೆಳಿಗ್ಗಿನಿಂದಲೇ ಪೊಲೀಸರು ಮತ್ತು
ಮಂಗಳೂರು: ಕುರುಬ ಸಮುದಾಯದ ವತಿಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದ ಶ್ರೀ ಐವನ್ ಡಿಸೋಜ ರವರಿಗೆ ಅಭಿನಂದಿಸಿ ಶುಭ ಕೊರಲಾಯಿತು.ಮೊದಲನೆಯ ಬಾರಿ ಶಾಸಕರಾಗಿದ್ದಾಗ ತಮ್ಮ ಸಮಾಜದ ಬೆಳವಣಿಗೆಗೆ ನೀಡಿದ ಸಹಕಾರದ ಬಗ್ಗೆ ಸ್ಮರಿಸಿ , ಮುಂದಿನ ದಿನಗಳಲ್ಲಿ ಕುರುಬ ಸಮುದಾಯದ ಜನರಿಗೆ ರೇಶನ್ ಕಾರ್ಡ್ ಶೈಕ್ಷಣಿಕವಾಗಿ ಸ್ಕಾಲರ್ಶಿಪ್ ನ ಹಾಗೂ ಇತರ ಸಮಸ್ಯೆಯ ಬಗ್ಗೆ ವಿವರಿಸಿದರು. ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಕುರುಬ ಸಮಾಜದ ನಾಯಕರು ಹಾಗೂ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಳಿಮಳೆ, ಕಡಲ್ಕೊರೆತ ಮತ್ತು ನೆರೆಯಿಂದ ಆಗಿರುವ ಹಾನಿಗಳಿಗೆ ಶೀಘ್ರವೇ ಪರಿಹಾರ ಒದಗಿಸಬೇಕು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಪೂರೈಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು ನಿರಂತರ ಮಳೆಯಿಂದ ನೆರೆ, ಪ್ರವಾಹದಿಂದ ಅನೇಕರ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿವೆ. ಕೆಲವು ಕಡೆಗಳಲ್ಲಿ ರಸ್ತೆ
ಮೀನುಗಾರರ ಬಹುದಿನಗಳ ಮನವಿಗೆ ಪೂರಕವಾಗಿ ಸ್ಪಂದನೆ ದೊರಕದ ಹಿನ್ನಲೆಯಲ್ಲಿ, ಇದೀಗ ಮೀನುಗಾರಿಕಾ ಸಲಕರಣಾ ಕೊಠಡಿ ಸಹಿತ ಮೂರು ತೆಂಗಿನ ಮರಗಳು ಕಡಲ ಒಡಲು ಸೇರಿದ್ದು, ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೆಲ ದಿನಗಳಿಂದ ಪಡುಬಿದ್ರಿ ನಡಿಪಟ್ಣ ಉಮಾಮಹೇಶ್ವರಿ ಡಿಸ್ಕೋ ಫಂಡಿಗೆ ಸೇರಿದ ಸುಮಾರು ೬೦ಲಕ್ಷ ರೂಪಾಯಿ ಮೌಲ್ಯದ ಮೀನುಗಾರಿಕಾ ಸಲಕರಣೆಗಳನ್ನು ಶೇಕರಣೆ ಮಾಡಲಾಗುತ್ತಿದ್ದ ಬೃಹತ್ ಶೆಡ್ಡ್ ಇದ್ದ ಪ್ರದೇಶದಲ್ಲಿ ಕಡಲು ಕೊರೆತ ತೀವ್ರಗೊಂಡಿದ್ದು ಈ ಬಗ್ಗೆ
ಬೈಂದೂರು: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮತ್ತು ನೆರೆಗೆ ತಾಲೂಕಿನ ಹಲವಾರು ಗ್ರಾಮಗಳ ತಗ್ಗುಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ಕೆಲವು ಗ್ರಾಮಗಳಲ್ಲಿ ಹಲವಾರು ಎಕರೆ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. ಸೌಪರ್ಣಿಕ ನದಿ ನೀರಿನ ಪ್ರಮಾಣ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದ್ದು ಐದು ದಿನಗಳಿಂದ ನೆರೆ ಇಳಿಮುಖ ಕಾಣದಿರುವ ಪರಿಸ್ಥಿತಿ ಉಂಟಾದಾಗ ಭತ್ತದ ಕೃಷಿ ನಾಶವಾಗಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ
ಮಂಗಳೂರು: ಮಡಗಾಂವ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲದ ವಿಶೇಷ ಮೆಮು ರೈಲು ಸೇವೆಯನ್ನು ಕೊಂಕಣ ರೈಲ್ವೆಯು ಮೂರು ದಿನಗಳ ಕಾಲ ಒದಗಿಸಲಿದೆ. ಈ ವಿಶೇಷ ರೈಲು ಜುಲೈ 20 (ಶನಿವಾರ), 21(ಭಾನುವಾರ) ಹಾಗೂ, 22ರಂದು (ಸೋಮವಾರ) ಈ ಎರಡು ಜಂಕ್ಷನ್ ಗಳ ನಡುವೆ ಸಂಚರಿಸಲಿದೆ. ಬೆಳಗ್ಗೆ 6:00 ಮಡಗಾಂವ್ ಜಂಕ್ಷನ್ ನಿಂದ ಹೊರಡುವ ಮೆಮು ರೈಲು ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಧ್ಯಾಹ್ನ 12:40ಕ್ಕೆ ಮಂಗಳೂರು
ಮಂಜೇಶ್ವರದ ಸ್ನೇಹಾಲಯವು ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾಗಿದ್ದು, ಕಳೆದ ಹತ್ತು ವರ್ಷದ ಹಿಂದೆ ಕಾಣೆಯಾಗಿದ್ದ ಪ್ರವೀಣ್ ಪುನಃ ಹೆತ್ತವರ ಮಡಿಲು ಸೇರಿದ ಘಟನೆ ಸ್ನೇಹಾಲಯದಲ್ಲಿ ನಡೆಯಿತು. ಮಂಗಳೂರಿನ ಅತ್ತಾವರದ ಕೆ.ಮ್.ಸಿ ಆಸ್ಪತ್ರೆಯ ಬಳಿಯಿಂದ ಸ್ನೇಹಾಲಯದ ಸಹೋದರ ಜೋಸೆಫ್ ಕ್ರಾಸ್ತಾರಾವರು ಪ್ರವೀಣನನ್ನು ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಆತ ಸ್ನೇಹಾಲಯದಲ್ಲಿ ಎಲ್ಲರ ಪ್ರೀತಿ ಪಾತ್ರನಾಗಿದ್ದ, ಆತನ ನಿಜ ಹೆಸರು ತಿಳಿಯದ
ಮೂಡುಬಿದಿರೆ: ಮಂಗಳೂರು-ಕಾರ್ಕಳ ಹೆದ್ದಾರಿಯ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಎಸ್‌ಕೆಎಫ್ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಪೋಯ್ಯದ ಪಲ್ಕೆ ಬಳಿ ಪ್ರವಾಹದಿಂದ ರಸ್ತೆ ಹಾಗೂ ಗದ್ದೆಗೆ ನೀರು ನುಗ್ಗಿ ಹಾನಿ, ಕೆಂಪುಲು ಬಳಿ ಮಳೆಯಿಂದ ರಸ್ತೆಗೆ ಹಾನಿ, ಕೆಸರ್ ಗದ್ದೆ ವಿಕ್ಟರ್ ಮನೆ ಬಳಿ ಮಳೆಯ ಪ್ರವಾಹ ದಿಂದ ಮೋರಿ ಬ್ಲಾಕ್ ಆಗಿ ಜಮೀನಿಗೆ ನೀರು ಬಂದು ಹಾನಿಯಾಗಿದೆ. ಅಂಬೂರಿ ಬಳಿಯ ಕಿರಣ್




























