Home Blog Left SidebarPage 205

ಭಾರತಕ್ಕೆ ರೈಲಿನಲ್ಲಿ ಕಲ್ಲಿದ್ದಲು ಕಳುಹಿಸಿದ ರಶಿಯಾ

ಐಎನ್‌ಎಸ್‌ಟಿಸಿ- ಅಂತರರಾಷ್ಟಿçÃಯ ಬಡಗಣ ತೆಂಕಣ ಸಾಗಣೆ ನೇರದಾರಿಯ ಮೂಲಕ ಇದೇ ಮೊದಲ ಬಾರಿಗೆ ರಶಿಯಾದ ಕಲ್ಲಿದ್ದಲು ಭಾರತಕ್ಕೆ ಬಂತು.ರಶಿಯಾದಿದ ನೇರ ಭಾರತಕ್ಕೆ ಇಂಟರ್‌ನ್ಯಾಶನಲ್ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ ರಚನೆಯನ್ನು ರಶಿಯಾ 2000ದಲ್ಲಿ ಆರಂಭಿಸಿತ್ತು. ಆದರೆ ತಡವಾಗಿ ಆರಂಭವಾಗಿದೆ. ಇರಾನಿನ ಬಂದರ್ ಅಬ್ಬಾಸ್‌ವರೆಗೆ ರೈಲು ಹಾದಿ. ಅಲ್ಲಿಂದ ಹಡಗು.

ಶಿಬಾಜೆ, ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಯುವತಿ ಬಲಿ

ಬೆಳ್ತಂಗಡಿ: ಶಿಬಾಜೆ ಗ್ರಾಮದ ಬರ್ಗುಳದಲ್ಲಿ ವಿದ್ಯುತ್ ಶಾಕ್ ಗೆ ಯುವತಿ ಸಾವನ್ನಪ್ಪಿದ್ದು ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ತಂತಿ ಸರಿಪಡಿಸುವಂತೆ ಸಂಬಂಧ ಪಟ್ಟ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ಮನೆಯವರು ತಿಳಿಸಿದರೂ ಅವರು ನಿರ್ಲಕ್ಷಿಸಿದ್ದಾರೆ. ಅದ್ದರಿಂದ ಇವತ್ತು ಅಮಾಯಕ ಯುವತಿ ಬಲಿಯಾಗಿದ್ದಾಳೆ. ಈ ದುರಂತಕ್ಕೆ ಮೆಸ್ಕಾಂ ಇಲಾಖೆಯೇ ಕಾರಣ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು

ಉಡುಪಿ : ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ದೃಷ್ಟಿ (ಪ್ರದಾನ ಯೋಜನೆ 2024 2025 ಕರ್ನಾಟಕ ಸರಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಉಡುಪಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ನಾಡ, ಗ್ರಾಮ ಪಂಚಾಯತ್ ನಾಡ, ಶ್ರೀ ಮಹಾಗಣಪತಿ ಸೇವಾ ಸಮಿತಿ ಗುಡ್ಡೆ ಹೋಟೆಲ್, ನಾಡ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಶಿರೂರು ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಸುಧಾಕರ ಪೂಜಾರಿ ಬೆಳ್ಳಾಡಿ ಹೊಸವಕ್ಲು ಮನೆ ಸಂಯೋಜನೆಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ

ಖಾಸಗಿ ವೈಟ್ ಬೋರ್ಡ್ ವಾಹನಗಳ ಮೇಲೆ ಕ್ರಮಕ್ಕೆ ಆಗ್ರಹ

ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಖಾಸಗಿ ವೈಟ್ ಬೋರ್ಡ್ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಮಂಗಳೂರಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷ ಸುನೀಲ್ ಕುಮಾರ್ ಬಜಾಲ್ , ಪೊಲೀಸ್ ಇಲಾಖೆ ಹಾಗೂ ಆರ್ ಟಿ ಓ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು, ಇಲ್ಲದ್ರೆ ಆರ್ ಟಿಓ ಕಚೇರಿ ಮುತ್ತಿಗೆ ಹಾಕುವ ಅನಿವಾರ್ಯ ಬರುತ್ತೆ ಎಂದು ಎಚ್ಚರಿಕೆ ನೀಡಿದ್ರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿ

ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ ಜಲಾವೃತ

ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಉಡುಪಿ ಜಿಲ್ಲೆಯ ಅಲ್ಲಲ್ಲಿ ಕೃತಕ ನೆರೆ ಉಂಟಾಗಿದೆ. ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆ ಸುರಿದಿದ್ದು, ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ವರ್ಷವೂ ಇಲ್ಲಿ ನೆರೆಹಾವಳಿಯ ಸಮಸ್ಯೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಯೇ ಮನೆಯವರನ್ನ ಸುರಕ್ಷಿತ

ಉಳ್ಳಾಲದ ಮದನಿ ನಗರದಲ್ಲಿ ನಡೆದ ದುರಂತ ಹಿನ್ನೆಲೆ : ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ

ಉಳ್ಳಾಲದ ಮದನಿ ನಗರದಲ್ಲಿ ಕಂಪೌoಡ್ ಕುಸಿದು ನಾಲ್ವರು ಮೃತಪಟ್ಟ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆಗೆ ಸ್ಪೀಕರ್ ಖಾದರ್ ಅವರ ಜೊತೆಗಿದ್ದರು.ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಗ್ರಾ.ಪಂ ಅಧಿಕಾರಿಗಳ ಮೂಲಕ ಅಪಾಯಕಾರಿ ಪಾಯಿಂಟ್‌ಗಳನ್ನು ಸರ್ವೇ ನಡೆಸಲು ಸೂಚಿಸಲಾಗಿದೆ. ತೀವ್ರತರದಲ್ಲಿ ಅಪಾಯ ಇರುವ ಸ್ಥಳಗಳಲ್ಲಿ ತುರ್ತು ಪರಿಹಾರ ಕ್ರಮಕ್ಕೆ ಆದೇಶಿಸಲಾಗಿದೆ.

ಮಂಗಳೂರು : ಹೀರೋ ಮೋಟೋಕಾರ್ಪ್‌ನ ಎಕ್ಸ್‌ಕ್ಲೂಸಿವ್ ಎಲೆಕ್ಟ್ರಿಕ್ ಹೀರೋ ವಿಡಾ ಹಬ್ ಶೋರೂಂ ಮಂಗಳೂರಿನಲ್ಲಿ ಲೋಕಾರ್ಪಣೆ…

ಭಾರತೀಯ ಗ್ರಾಹಕರ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ ದ್ವಿಚಕ್ರವಾಹನಗಳ ಮಾರಾಟ ಮತ್ತು ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್‌ನ ವಿಡಾ ಹಬ್ ಎಕ್ಸ್‌ಕ್ಲೂಸಿವ್ ನೂತನ ಎಲೆಕ್ಟ್ರಿಕ್ ಶೋರೂಂ ಮಂಗಳೂರಿನ ವೆಲೆನ್ಸಿಯಾದಲ್ಲಿ ಲೋಕಾರ್ಪಣೆಗೊಂಡಿತು. ದೇಶದ ಅತ್ಯುನ್ನತ ದ್ವಿಚಕ್ರವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿರುವ ಹೀರೋ ಮೋಟೋಕಾರ್ಪ್ ಗ್ರಾಹಕರ ಮನೆಮಾತಾಗಿದೆ. ಪರಿಸರ ಸ್ನೇಹಿ ಹಾಗೂ ಇಂದಿನ ಗ್ರಾಹಕರಿಗೆ ಅಗತ್ಯವಾಗಿರುವ

ಈ ವಿಶ್ವದಲ್ಲಿ ನೀನೊಂದು ಬೊಟ್ಟು ಕೂಡ ಅಲ್ಲ

ನಮ್ಮೂರಿನ ಇಲ್ಲವೇ ಯಾವುದೇ ಒಂದು ಊರಿನ ಚಿತ್ರ ಅಲ್ಲವೇ ನೆಲಪಟ ಬಿಡಿಸಿದರೆ ಅದರಲ್ಲಿ ನೀವು ಇಲ್ಲವೇ ನಾವೊಂದು ಬೊಟ್ಟು.ಕರ್ನಾಟಕದ ಅಥವಾ ಭಾರತದ ಭೂಪಟ ಬರೆದರೆ ಪೇರೂರು ಇಲ್ಲವೇ ನಿಮ್ಮೂರು ಒಂದು ಬೊಟ್ಟು. ನಮ್ಮ ಲೋಕ ಭೂಪಟದಲ್ಲಿ ಕರ್ನಾಟಕ ಒಂದು ಬೊಟ್ಟು. ನೇಸರ ಸಂಸಾರದ ಚಿತ್ರದಲ್ಲಿ ಭೂಮಿಯೇ ಒಂದು ಬೊಟ್ಟು. ನಮ್ಮ ಬೆಂಗದಿರ ಕುಟುಂಬದಲ್ಲಿ ಎಂಟು ಗ್ರಹಗಳಿರುವುದು ನಮಗೆ ಗೊತ್ತು. ಆದರೆ ಹನ್ನೆರಡು ಗ್ರಹಗಳು ಇದ್ದು ನಾಲ್ಕನ್ನು ಸಣ್ಣದೆಂದು ಹೊರಗಿಡಲಾಗಿದೆ. ಇತರ

ಬನ್ನೂರು : ಧರೆ ಕುಸಿತ ಮನೆಗೆ ಹಾನಿ

ಪುತ್ತೂರಿನ ಬನ್ನೂರು ಜೈನರ ಗುರಿಯಲ್ಲಿ ಭಾರೀ ಮಳೆಗೆ ಧರೆ ಕುಸಿತಗೊಂಡು ಮನೆ ಹಾನಿಗೊಳಗಾಗಿದ್ದು ,ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಶಾಸಕರು ಮನೆಯ ಮಾಲಿಕ ಮಜೀದ್ ರವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಶಾಸಕರು ಬೆಂಗಳೂರಿನಲ್ಲಿದ್ದು ಘಟನಾ ಸ್ಥಳಕೆ ಶಾಸಕರ ಕಚೇರಿ ಸಿಬಂದಿಗಳು ಭೇಟಿ ನೀಡಿದ್ದು ಕುಟುಂಬಕ್ಕೆ ಕರೆಮಾಡಿದ ಶಾಸಕರು ಸಾಂತ್ವನ ಹೇಳಿದ್ದು ಸರಕಾರದಿಂದ ತಕ್ಷಣ ಪರಿಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

ಕಡಂದಲೆ : ಮನೆಯ ಮೇಲೆ ಮರ ಬಿದ್ದು ಹಾನಿ

ಮೂಡುಬಿದಿರೆ : ಕಡಂದಲೆ ಗ್ರಾಮ ವ್ಯಾಪ್ತಿಯ ಬಾರಬೆಟ್ಟುವಿನ ಅಣ್ಣಿ ಎಂಬವರ ಮನೆ ಮೇಲೆ ಬುಧವಾರ ಸಂಜೆ ಭಾರೀ ಗಾತ್ರದ ಮರವೊಂದು ಬಿರುಗಾಳಿಗೆ ಉರುಳಿ ಬಿದ್ದು ಮನೆಗೆ ತೀವ್ರ ಹಾನಿ ಯುಂಟಾಗಿದೆ. ಯಾವುದೇ ಜೀವಾಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಧಾವಿಸಿ ಮನೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು. ಸ್ಥಳಕ್ಕೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದಿನೇಶ್ ಕಂಗ್ಲಾಯಿ, ಪಿಡಿಓ ರಕ್ಷಿತಾ, ವಿಎ ಅನಿಲ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದರು.