ಪುತ್ತೂರು: ಮಂಗಳೂರು-ಬೆಂಗಳೂರು ರಸ್ತೆ, ರೈಲ್ವೇ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಮಂಗಳೂರಿನಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ
ಮಹಿಳೆಯೋರ್ವರನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ಪೆರ್ನೆ ಗ್ರಾ.ಪಂ ವ್ಯಾಪ್ತಿಯ ಬಿಳಿಯೂರಿನ ದರ್ಖಾಸ್ ನಲ್ಲಿ ನಡೆದಿದೆ. ಕೊಲೆಯ ಬಗ್ಗೆ ಅಕ್ಕನ ಮಗನಾದ ಅಪ್ರಾಪ್ತ ಬಾಲಕನ ಮೇಲೆ ತೀವ್ರ ಸಂಶಯ ವ್ಯಕ್ತವಾಗಿದೆ. ದರ್ಖಾಸ್ ನ ಹೇಮಾವತಿ ಮೃತ ಮಹಿಳೆಯಾಗಿದ್ದು, ಜೂನ್ 16 ರಂದು ಮಧ್ಯರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದಾರೆ. ಈ
ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ನೂತನವಾಗಿ ರಚನೆಗೊಂಡ ವಿದ್ಯಾರ್ಥಿ ಮಂತ್ರಿ ಮಂಡಲದ ಪದಗ್ರಹಣ ಸಮಾರಂಭ ಮತ್ತು ವಿವಿಧ ಸಂಘಗಳ ಉದ್ಘಾಟನೆ ಕಾರ್ಯಕ್ರಮವು ನಡೆಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರ, ಅಮೃತ ಕ್ಯಾಂಪಸ್ಸಿನ ನಿರ್ದೇಶಕರಾದ ಶ್ರೀಯುತ ಯತೀಶ್ ಬೈಕಂಪಾಡಿ, ಶಾಲಾ ಪ್ರಾಂಶುಪಾಲೆ ಶ್ರೀಮತಿ ಅಕ್ಷತಾ ಆರ್ ಶೆಣೈ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ವಿದ್ಯಾರ್ಥಿ ಮಂತ್ರಿಮಂಡಲಕ್ಕೆ
ಉಳ್ಳಾಲ : ನಮ್ಮ ನಾಡ ಒಕ್ಕೂಟ ಇದರ ಆಶ್ರಯದಲ್ಲಿ ಮಂಗಳೂರು ಕಮ್ಯುನಿಟಿ ಸೆಂಟರ್ ತೊಕ್ಕೊಟ್ಟುವಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಆರಂಭಗೊಂಡಿತು. ವಿಧಾನ ಸಭಾ ಸ್ವೀಕರ್ ಯು ಟಿ ಖಾದರ್ ಫರೀದ್ ಮಂಗಳೂರು ಕಮ್ಯುನಿಟಿ ಸೆಂಟರ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಜನರಿಗೆ ಮೂಲಭೂತ ಸೌಕರ್ಯ ಗಳನ್ನು ಪಡೆಯಲು ಇಂತಹ ಸೇವೆ ಅವಶ್ಯಕತೆ ಇದೆ.ಶಿಕ್ಷಣ, ಉದ್ಯೋಗ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಅಗತ್ಯ ಇರುತ್ತದೆ.ಇದನ್ನು ನಮ್ಮ ನಾಡ ಒಕ್ಕೂಟ ಉಚಿತ ವಾಗಿ
ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯ ಹಾಗೂ ಹಿರಿಯ ನರರೋಗ ತಜ್ಞ ಡಾ.ರಾಜಾ ರವಿವಾರ ಹೃದಯಾಘಾತದಿಂದ ನಿಧನರಾದರು. ಮಣಿಪಾಲದ ರಾಜೀವನಗರದ ಮನೆಯಲ್ಲಿ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾದ ಇವರನ್ನು ಕೂಡಲೇ ಉಡುಪಿ ಆದರ್ಶ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಇವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೂಡುಬಿದಿರೆ: ಸಿಡಿಲು ಬಡಿದು ಹಾನಿಗೊಳಗಾಗಿದ್ದ ತೆಂಗಿನ ಮರವನ್ನು ಕಡಿಯಲು ಹತ್ತಿದ್ದ ಕೂಲಿ ಕಾರ್ಮಿಕರೊಬ್ಬರು ತೆಂಗಿನ ಮರ ತುಂಡಾಗಿ ಕೆಳಗೆ ಬಿದ್ದ ಪರಿಣಾಮವಾಗಿ ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಗ್ರಾಮದ ಬಸವನಕಜೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.ಸಾವನ್ನಪ್ಪಿದ ಕೂಲಿ ಕಾರ್ಮಿಕ ಅಲಂಗಾರು ಚಂದ್ರಾಪುರ ನಿವಾಸಿ ನವೀನ್ ಪ್ರಕಾಶ್ ರೋಡ್ರಿಗಸ್(40)ಎಂದು ತಿಳಿದು ಬಂದಿದೆ. ನಿವೃತ್ತ ಅಬಕಾರಿ ನಿರೀಕ್ಷಕ ದೇವೋಜಿ ರಾವ್ ಅವರ ಮನೆಯ ತೆಂಗಿನ ಮರಕ್ಕೆ
ಕಾರ್ಕಳ : ಪಂಡಿತರತ್ನ ಎತ್ತೂರು ಶಾಂತಿರಾಜ ಶಾಸ್ತ್ರಿ ಟ್ರಸ್ಟ್‌ನ ಆಶ್ರಯದಲ್ಲಿ ಇರ್ವತ್ತೂರಿನ ಭಗವಾನ್ ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಟ್ರಸ್ಟಿನ ವತಿಯಿಂದ “ಗ್ರಂಥ ಭಂಡಾರ ಸ್ಥಾಪನಾ”ಕಾರ್ಯಕ್ರಮ ನಡೆಯಿತು. ಕಾರ್ಕಳ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಶ್ರೀ ಜೈನಮಠ, ಮೂಡುಬಿದಿರೆ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲ್ ಮಾತನಾಡಿ, ಸಕಾರಾತ್ಮಕ ಮನೋಭಾವದೊಂದಿಗೆ ಜೀವನ ರೂಪಿಸಿಕೊಳ್ಳಿ. ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಪಡೆದ ಪದವಿ ವಿದ್ಯಾಭ್ಯಾಸದ ನೆರವಿನಿಂದ ಉತ್ತಮ ಜೀವನ ರೂಪಿಸಿಕೊಳ್ಳುವುದು ಪ್ರಮುಖವಾದುದು ಎಂದರು.ಸಭೆಯ
ಪುತ್ತೂರು ತಾಲೂಕು ಕುಂಬ್ರ ನಿವಾಸಿ ವಿದ್ಯಾ ರೈ ಎಂಬವರ ಸುಮಾರು 27 ಗ್ರಾಂ ತೂಕದ ಚಿನ್ನದ ಸರ ಪುತ್ತೂರು ಗಾಂಧಿ ಕಟ್ಟೆ ಬಳಿ ಕಳೆದುಕೊಂಡಿದ್ದರು. ಈ ಬಂಗಾರದ ಸರ ಕೊಡಿಪಾಡಿ ನಿವಾಸಿ ದಿನೇಶ್ ಭವನ ಲಾಡ್ಜ್ ನೌಕರರಿಗೆ ಸಿಕ್ಕಿದ್ದು ಅದನ್ನು ಪ್ರಾಮಾಣಿಕತೆಯಿಂದ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು ಬಳಿಕ ವಿದ್ಯಾ ರೈ ಅವರನ್ನು ಠಾಣೆಗೆ ಕರೆಯಿಸಿ ಅವರಿಗೆ ಹಸ್ತಾಂತರಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಅವರು ಪ್ರೆಸ್ ಕ್ಲಬ್ ಗೌರವ ಅತಿಥಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮ ವನ್ನು ಉದ್ಘಾಟಿಸಿದ ಮಹಾರಾಷ್ಟ್ರ ಕನ್ನಡಿಗ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ಐವನ್ ಡಿ ಸೋಜ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನ್ಲಿ




























