ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಆಹಾರ ತಂತ್ರಜ್ಞಾನ ವಿಭಾಗದಿಂದ ” ನೋಶ್ ಅನ್ವೇಶನ್” ಎನ್ನುವ ಕಾರ್ಯಕ್ರಮ ನಡೆಯಿತು “ನೋಶ್” ಎಂದರೆ ಆಹಾರ . ನವೀನವಾದ ಮಾದರಿಯ ಹೊಸ ಉತ್ಪನ್ನಗಳನ್ನು ತಯಾರಿಸುವ ಕುರಿತಾಗಿ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಹೊಸ ಆಹಾರ ಉತ್ಪನ್ನಗಳನ್ನು ತಯಾರಿಸುವ ಸ್ಪರ್ಧೆಯನ್ನು
ಸುರತ್ಕಲ್ : ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆದ ಬ್ರಹ್ಮಕುಂಭಾಭಿಷೇಕ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಮಹಾ ಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ, ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ, ಕಟೀಲು ಹರಿನಾರಾಯಣ ದಾಸ ಆಸ್ರಣ್ಣರ ಉಪಸ್ಥಿತಿಯಲ್ಲಿ ನಡೆಯಿತು. ತಿಬಾರ್ ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗುತು ಮನೆಯವರು, ವಿವಿಧ ಉಪಸಮಿತಿಗಳ
ಮಂಗಳೂರು: ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮತ್ತು ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ಇವರ ಸಹಯೋಗದಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮೇ 11ರ ಶನಿವಾರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.ಮಂಗಳೂರಿನ ಜ್ಯೋತಿ ಸರ್ಕಲ್‌ನ ಮಹಿಳಾ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಮೂಡುಬಿದಿರೆಯ ಅಲ್ ಪುರ್ಕಾನ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ
ಬೇಸಿಗೆ ಸಮಯವನ್ನು ಕಳೆಯಲು ಪ್ರವಾಸ ಕೈಗೊಳ್ಳುವವರಿಗೆ ಸಿಹಿಸುದ್ದಿ..ಮಂಗಳೂರಿನ ವಾಮಂಜೂರಿನಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಬೇಸಿಗೆ ಸಮಯವನ್ನು ಕಳೆಯಲು ಸುಸಜ್ಜಿತ ರೀತಿಯಲ್ಲಿದ್ದು ವಿವಿಧ ಮನೋರಂಜನಾ ವಾಟರ್ ಗೇಮ್ಸ್ ಸೇರಿದಂತೆ ಕುದುರೆ ಸವಾರಿ, ಜಿಪ್ ಲೈನ್ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್. ಈ ಬಗ್ಗೆ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ….. ಮಂಗಳೂರಿನ ವಾಮಂಜೂರಿನ ಪಿಲಿಕುಳದ ಬಳಿಯಿರುವ ಮಾನಸ
ವಿಟ್ಲ: ವಿದ್ಯುತ್ ತಂತಿಗೆ ಸಿಲುಕಿ ನವಿಲು ಮೃತಪಟ್ಟ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ನವಿಲು ಮೃತಪಟ್ಟ ಬಗ್ಗೆ ಇಲ್ಲಿನ ರಿಕ್ಷಾ ಚಾಲಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಮೃತ ನವಿಲನ್ನು ಸ್ಥಳದಿಂದ ಅನಂತಾಡಿ ಆರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಹಸ್ತಾಂತರ ಮಾಡಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣ ಆರೋಪದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ವಿದೇಶದಿಂದ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದ್ದು, ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆದುಕೊಳ್ಳಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಕಣ್ಣಾವಲಿರಿಸಲಾಗಿದೆ. ಪ್ರಜ್ವಲ್ ಪತ್ತೆಗಾಗಿ ಈಗಾಗಲೇ ಲುಕ್‌ಔಟ್ ನೋಟಿಸ್ ಕೂಡಾ ಜಾರಿಯಾಗಿರುವುದರಿಂದ ಪ್ರಜ್ವಲ್ ಭಾರತಕ್ಕೆ
ವಿಟ್ಲ: ನಿಯಂತ್ರಣ ತಪ್ಪಿ ಕ್ರೇಟಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪವಾಡ ಎಂಬಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ಕಳೆದ 21 ದಿನಗಳ ಕಾಲ ನಡೆದ ಶ್ರೀ ಶಾರದ ಸದ್ವಿದ್ಯಾ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ಶಿಬಿರದ ಅನುಭವನ್ನು ಹಂಚಿಕೊಂಡರು.ವೇದಾಂತ ಪ್ರಾಧ್ಯಾಪಕರು ಕೇಂದ್ರಿಯ ಸಂಸ್ಕøತ ವಿಶ್ವವಿದ್ಯಾನಿಲಯ ರಾಜೀವ್ ಗಾಂಧಿ ಪರಿಸರ ಶೃಂಗೇರಿ ಡಾ.ಗಣೇಶ್ ಈಶ್ವರ ಭಟ್ ಅವರು ಮಾತನಾಡಿ,ಆರ್ಯುವೇದ ಮತ್ತು ವೇದ ಶಾಸ್ತ್ರ ಸೇರಿದಂತೆ ಸನಾತನ ಪರಂಪರೆನ್ನು ಹೊಂದಿರುವ ಭಾರತೀಯ ವಿದ್ಯೆಗೆ ಆಧುನಿಕ
ಬೈಂದೂರು:ರಾಷ್ಟ್ರಭಕ್ತರ ಬಳಗದ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಸುರ್ಕುಂದ ವಾರ್ಡ್ ಬೂತ್ ನಂ.34 ರಲ್ಲಿ ನಿತ್ಯ ಮೊಗವೀರ ಅವರ ಸಾರಥ್ಯದಲ್ಲಿ ವೆಂಕಟೇಶ ಕಲ್ಮಕ್ಕಿ,ಪ್ರಶಾಂತ್ ಮೊಗವೀರ ಹಾಗೂ ಸ್ಥಳೀಯರ ಸಹಕಾರದಲ್ಲಿ ಮಾಜಿ ಮುಖ್ಯ ಮಂತ್ರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪರವಾಗಿ ಮನೆ ಭೇಟಿ ಮಾಡಿ ಬಿರುಸಿನ ರೀತಿಯಲ್ಲಿ ಮತ ಪ್ರಚಾರವನ್ನು ಮಾಡಲಾಯಿತು.ಕಾರ್ಯಕರ್ತರು ಬಿರು ಬಿಸಿಲನ್ನು ಲೆಕ್ಕಿಸದೆ ಪ್ರಚಾರದ ಕಾರ್ಯದಲ್ಲಿ
ಉಳ್ಳಾಲ : ನಗರದ ಸಿಟಿ ಸೆಂಟರ್ ಮಾಲ್ ಗೆಂದು ತೆರಳಿದ್ದ ಚೆಂಬುಗುಡ್ಡೆ ನಿವಾಸಿ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾಗಿರುವ ಕುರಿತು ಮಂಗಳೂರು ಉತ್ತರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.ಚೆಂಬುಗುಡ್ಡೆ ಕೆರೆಬೈಲ್ ಗುಡ್ಡೆ ನಿವಾಸಿ ಸಫಾನ (27) ನಾಪತ್ತೆ ಯಾದವರು.ಎ.28 ರಂದು ತಾಯಿ ಜೊತೆಗೆ ಸಿಟಿಸೆಂಟರ್ ಗೆಂದು ತೆರಳಿರುವ ಸಫಾನ, ಬಳಿಕ ಮನೆಯತ್ತ ಬಾರದೇ ನಾಪತ್ತೆಯಾಗಿದ್ದಾಳೆ. ವಿವಾಹಿತೆಯಾಗಿರುವ ಸಫಾನ ಇಬ್ಬರು ಮಕ್ಕಳ ತಾಯಿಯಾಗಿದ್ದಾಳೆ. ಈಕೆಯನ್ನು




























