Home Blog Left SidebarPage 715

ಬೆಳ್ತಂಗಡಿ : ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ನೆರಿಯ ಗ್ರಾಮದ ಅರ್ಹ ಫಲಾನುಭವಿಗಳಿಗೆ ಕೆಲವು ಅಶಕ್ತರ ಮನೆಗೆ ಮನೆಯ ಹಕ್ಕು ಪತ್ರ ತಂದು ನೀಡಿದರು. ಹಕ್ಕು ಪತ್ರ ವಿತರಣಾ ಸಮಾರಂಭ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಕಾಳಿಕಾಂಬ ದೇವಸ್ಥಾನದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ನೆರಿಯ ಗ್ರಾಮದ ಹಲವಾರು

ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ಮರದಿಂದ ಬಿದ್ದು ಸಾವು

ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ಮೂರ್ತೆದಾರ ಮೃತಪಟ್ಟ ಘಟನೆ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆ. ವರ್ಣಬೆಟ್ಟು ಪಂಜಿಗುರಿಯ ನಿವಾಸಿ ಸುರೇಶ್ ಪೂಜಾರಿ(42ವ) ಸಾವನ್ನಪ್ಪಿದ ವ್ಯಕ್ತಿ. ಇವರು ಮಧ್ಯಾಹ್ನದ ವೇಳೆಗೆ ಶೇಂದಿ ತೆಗೆಯಲೆಂದು ಮನೆಯ ಹಿಂಭಾಗದಲ್ಲಿದ್ದ ತಾಳೆ ಮರಕ್ಕೆ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದಿರುವುದರಿಂದ ಮನೆಯವರು ಹುಡುಕಿಕೊಂಡು

ಪ್ರವೀಣ್ ನೆಟ್ಟಾರುಕೊಲೆ ಪ್ರಕರಣ : ನಿಷೇಧಿತ ಪಿಎಫ್ಐ ಮುಖಂಡರ ಬಂಧನ

ಸುಳ್ಯ : ಪ್ರವೀಣ್ ನೆಟ್ಟಾರು ಹತ್ಯೆ ಸಂಬಂದಿಸಿದಂತೆ ಇಂದು ಬೆಳಗ್ಗೆ ಎನ್.ಐ.ಎ ತಂಡ ನಿಷೇಧಿತ ಪಿಎಫ್ಐ ಮುಖಂಡರನ್ನು ಬಂಧಿಸಿ ಕರೆದೊಯ್ಯುದಿದ್ದಾರೆ. ನಿಷೇಧಿತ ಪಿಎಫ್ಐ ಮುಖಂಡರಾದ ಬೆಳ್ಳಾರೆಯ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಇಂದು ಬೆಳಗ್ಗೆ ಮೂರು ಗಂಟೆಗೆ ಕೋರ್ಟ್ ನಿಂದ ಸರ್ಚ್‌ ವಾರೆಂಟ್ ಪಡೆದು ಎನ್.ಐ.ಎ ತಂಡ ಬೆಳಗ್ಗೆ ಮೂರು ಗಂಟೆಗೆ ದಾಳಿ ಮಾಡಿ ಬಂಧಿಸಿ ತನಿಖೆಗಾಗಿ ಕರೆದುಕೊಂಡುಹೋಗಿದ್ದಾರೆ. ಸುಮಾರು 15 ವಾಹನದಲ್ಲಿ ಬಂದ 9 ಎನ್.ಐ.ಎ ತಂಡ

ಕೊಲ್ಲಮೊಗ್ರದಲ್ಲಿ ಮದ್ಯಮುಕ್ತ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಕೊಲ್ಲಮೊಗ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಅಕ್ರಮ ಮದ್ಯದಂಗಡಿ ತೆರೆದಿರುವ ಬಗ್ಗೆ ಪ್ರತಿಭಟನಾ ಸಭೆಯು ಕೊಲ್ಲಮೊಗ್ರದ ಮಯೂರ ಕಲಾ ಮಂದಿರದಲ್ಲಿ ನಡೆಯಿತು. ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ

ಬಿ.ಸಿ ರೋಡ್‌ನಲ್ಲಿ ತುಳು ನಾಟಕೋತ್ಸವ-2022 ಕಾರ್ಯಕ್ರಮ

ಬಂಟ್ವಾಳದ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರಲ್ಲಿ ತುಳು ನಾಟಕೋತ್ಸವ-2022 ನಡೆಯುತ್ತಿದ್ದು, ಆರನೇ ದಿನದಂದು ಅಭಿನಯ ಕಲಾವಿದೆರ್ ಕುಡ್ತಮುಗೇರು ಇವರಿಂದ ನನದಾದ ಒರಿಂಡ್ ನಾಟಕವು ಪ್ರದರ್ಶನಗೊಂಡಿತು.ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ಘಟಕದ ಆಯೋಜನೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ತುಳು ನಾಟಕೋತ್ಸವ 2022ನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ

ಪುತ್ತೂರಿನಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ ಯೋಜನೆ

ಪುತ್ತೂರು:ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಪುತ್ತೂರಿನಲ್ಲಿ ನಿರ್ಮಿಸುವ ಯೋಜನೆಯಿದ್ದು, ಈಗಾಗಲೇ ನಗರಸಭೆ ಈ ಕುರಿತು ಆಸಕ್ತಿ ವಹಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಅವರು ಪುತ್ತೂರು ನಗರಸಭೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಥೀಮ್ ಪಾರ್ಕ್ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ರಥವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಾಗತಿಸಿ, ಬಳಿಕ ನಟರಾಜ ವೇದಿಕೆಯಲ್ಲಿ ನಡೆದ ಸಭಾ

ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣ

ಬಂಟ್ವಾಳ: ಸುಮಾರು 135 ಕೋಟಿ ರೂ ವೆಚ್ಚದಲ್ಲಿ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣದ ಪೂರ್ವಭಾವಿ ಕೆಲಸಗಳು ಆರಂಭಗೊAಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರದಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಉಳಿಪ್ಪಾಡಿ ತಿಳಿಸಿದರು. ಕಾಮಗಾರಿ ನಡೆಯುವ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಶಿಲಾನ್ಯಾಸ ನೆರವೇರಿಸಿದ ಬಳಿಕ ಕೆಲಸಗಳು

ಬಿಸಿರೋಡು-ಪುಂಜಾಲಕಟ್ಟೆ ರಾಷ್ಟಿಯ ಹೆದ್ದಾರಿ ರಸ್ತೆ ಕಾಮಗಾರಿ : ಅಪಘಾತ ಸ್ಥಳಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಭೇಟಿ

ಬಂಟ್ವಾಳ: ಬಿಸಿರೋಡು-ಪುಂಜಾಲಕಟ್ಟೆ ರಾಷ್ಟಿಯ ಹೆದ್ದಾರಿ ರಸ್ತೆ ಕಾಮಗಾರಿ ಸಂಪೂರ್ಣ ವಾದ ಬಳಿಕ ಕೆಲವೊಂದು ಆಯಕಟ್ಟಿನ ಸ್ಥಳದಲ್ಲಿ ಅಪಘಾತಗಳು ನಡೆಯುತ್ತಿದ್ದು, ಈ ಸ್ಥಳಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಂಟ್ವಾಳ ಬೈಪಾಸ್ ರಸ್ತೆ, ಜಕ್ರಿಬೆಟ್ಟು, ಚೆಂಡ್ತಿಮಾರ್ ಈ ಮೂರು ಕಡೆಗಳಿಗೆ ಶಾಸಕ ರಾಜೇಶ್ ನಾಯಕ್ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ

ರಾಜ್ಯಮಟ್ಟದ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಆಚರಣೆ

ಬೆಂಗಳೂರು; ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕೌಶಲ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಈ ಯೋಜನೆಯಡಿ ಇರುವ ಉಜ್ವಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲು ನವೆಂಬರ್ 6 ರಂದು ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ವಿಶ್ವ ಕರ್ಮ ಕಾಷ್ಠಶಿಲ್ಪ ಅಧ್ಯಕ್ಷ ಎಮ್.ಜಿ. ನಾಗೇಶ್ ಆಚಾರ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರದ

ಪುರಸಭೆಯ ಪರವಾನಿಗೆ ಪಡೆಯದೆ ಕಾಲೇಜು ನಿರ್ಮಾಣ

ಮೂಡುಬಿದಿರೆ: ಪುರಸಭೆಯ ಷರತ್ತು ಉಲ್ಲಂಘನೆ ಮಾಡಿ ಸರಕಾರದ ಯಾವುದೇ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೇ ಕಾನೂನು ಬಾಹಿರವಾಗಿ ಜರಾತುಲ್ ಕುರಾನ್ ಕುರಾನಿಕ್ ಫ್ರೀ ಸ್ಕೂಲ್ ಮತ್ತು ಆಲ್ ಮಫಾಝ್ ವುಮೆನ್ಸ್ ಶೆರಿಯತ್ ಕಾಲೇಜನ್ನು ನಿರ್ಮಾಣ ಮಾಡಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯು ಮೂಡುಬಿದಿರೆ ಪುರಸಭೆಗೆ ಮನವಿ ನೀಡಿದರು. ಹಿಂ.ಜಾ.ವೇದಿಕೆಯ ಜಿಲ್ಲಾ ಸಹ ಸಂಯೋಜಕ್