Home Blog Left SidebarPage 912

ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ ಗುಮ್ಮಟನಗರಿ ಪೊಲೀಸರು

ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಏಳು ಜನ ಮನೆಗಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್ ತಿಳಿಸಿದ್ದಾರೆ. ರಮೇಶ ಕಾಳೆ, ಸುರೇಶ ಚವ್ಹಾಣ, ಪರಶುರಾಮ ಕಾಳೆ, ಕಿರಣ ಬೇಡಕೇರ, ದೇವದಾಸ್ ಚವ್ಹಾಣ , ತನ್ವೀರ್

ತಲೆಮರೆಸಿಕೊಂಡಿದ್ದ ಖೋಟಾ ನೋಟು ಪ್ರಕರಣದ ಆರೋಪಿಯ ಬಂಧನ

ಪುತ್ತೂರು: 19 ವರ್ಷಗಳ ಹಿಂದೆ ಖೋಟಾ ನೋಟು ಸಾಗಾಟದ ವೇಳೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸೆಂಟ್ಯಾರ್‌ನಲ್ಲಿ ಸಂಪ್ಯ ಪೊಲೀಸರಿಂದ ಬಂಧಿತರಾಗಿದ್ದ ನಾಲ್ವರು ಆರೋಪಿಗಳ ಪೈಕಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಯನ್ನು ಕುಂಬ್ಳೆಯಲ್ಲಿ ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಮುಳಿಯಾರ್ ಬೋವಿಕ್ಕಾನ ಪರಪಿಡಕ ನಿವಾಸಿ ಸಿದ್ದಿಕ್ ಯಾನೆ ಕಲಂದರ್ ಸಿದ್ದಿಕ್(41 ವ)ರವರು ಬಂಧಿತ ಆರೋಪಿ. 2002ರಲ್ಲಿ ಕಲಂದರ್

ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖ ಕಾಣುತ್ತಿದ್ದು, ಈಗಾಗಲೇ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಘೋಷಣೆ ಮಾಡಿದ್ದಾರೆ.ಜಿಲ್ಲೆಯಲ್ಲಿ ಪ್ರತಿದಿನ ವಿಧಿಸಿದ್ದ ನೈಟ್ ಕರ್ಫ್ಯೂ ಮುಂದುವರೆಯಲಿದೆ. ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಡಗು,

ಮಂಜೇಶ್ವರದಲ್ಲಿ ಕೇಂದ್ರದ ಜನವಿರೋಧಿ ನೀತಿ ಖಂಡಿಸಿ ಸಿಪಿಐಎಂನಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆದುರಾಗಿ ರಾಜ್ಯ ವ್ಯಾಪಕವಾಗಿ ಕೇಂದ್ರ ಸರಕಾರದ ಕಚೇರಿಗಳ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರದ ಹಲವೆಡೆಗಳಲ್ಲೂ ಪ್ರತಿಭಟನಾ ಧರಣಿ ನಡೆಯಿತು. ಸಿಪಿಐಎಂ ಕುಂಜತೂರು ಲೋಕಲ್ ಸಮಿತಿ ವತಿಯಿಂದ ಕುಂಜತ್ತೂರು ಅಂಚೆ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಸಿಪಿಐಎಂ ಮಂಜೇಶ್ವರ ಏರಿಯಾ ಸೆಕ್ರಟರಿ ಕೆ ವಿ ಕುಂಞಿರಾಮನ್ ಉದ್ಘಾಟಿಸಿ ಮಾತಾಡಿದರು. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ, ಕದಿರು ವಿನಿಯೋಗ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಾದ್ರಪದ ಶುಕ್ಲ ಹಸ್ತಾ ನಕ್ಷತ್ರದ ಶುಭದಿನವಾದ  ಇಂದು ಸಂಪ್ರದಾಯದಂತೆ ಕದಿರು ವಿನಿಯೋಗ ಉತ್ಸವ ನಡೆಯಿತು. ಸಾಂಪ್ರದಾಯಿಕ ಪದ್ಧತಿಯಂತೆ ಬೆಳಗ್ಗೆ ದೇವಳದ ಒಳಾಂಗಣದಲ್ಲಿ ನಿತ್ಯ ಬಲಿ ಉತ್ಸವದೊಂದಿಗೆ ಸರ್ವ ವಾದ್ಯದೊಂದಿಗೆ ಕೆರೆಯ ಬಳಿಯ ಅಶ್ವತ್ಥಕಟ್ಟೆಯ ಬಳಿಗೆ ಆಗಮಿಸಿ ಕಟ್ಟೆಯಲ್ಲಿ ತೆನೆ ಪೂಜೆ ನಡೆಯಿತು. ಬಳಿಕ ತೆನೆ ಕಟ್ಟುಗಳೊಂದಿಗೆ ದೇವಳದ ಒಳಾಂಗಣ ಪ್ರವೇಶಿಸಿ ಪೂಜೆ ನಡೆಯಿತು.

ಗ್ರಾಹಕರ ಬಳಿ ಮ್ಯಾನೇಜರ್ ಉಡಾಫೆ ವರ್ತನೆ ಆರೋಪ: ಹಟ್ಟಿಯಂಗಡಿ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಆಕ್ರೋಶ

ಕುಂದಾಪುರ: ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲ ಕೇಳಲು ಹೋದಾಗ ಮ್ಯಾನೇಜರ್ ಸಮರ್ಪಕ ಮಾಹಿತಿ ನೀಡದೇ ಉಡಾಫೆಯಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಹಟ್ಟಿಯಂಗಡಿ ಕರ್ನಾಟಕ ಬ್ಯಾಂಕಿಗೆ ಆಗಮಿಸಿದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಹಟ್ಟಿಯಂಗಡಿ ನಿವಾಸಿ ನಾಗರಾಜ ಪೂಜಾರಿ ಎನ್ನುವವರು ತಮ್ಮ ಮಗಳ ಉನ್ನತ ವಿದ್ಯಾಭ್ಯಾಸದ ಸಲುವಾಗಿ ಎಜುಕೇಶನ್ ಲೋನ್ ಕೇಳಲು ಮಂಗಳವಾರ ಕರ್ನಾಟಕ ಬ್ಯಾಂಕ್ ಹಟ್ಟಿಯಂಗಡಿ ಶಾಖೆಗೆ ತೆರಳಿದ್ದರು. ಈ ವೇಳೆ ಬ್ಯಾಂಕ್ ಮ್ಯಾನೇಜರ್

ದ.ಕ.ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಜಯಶೀಲ ಅಡ್ಯಂತಾಯ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಜಯಶೀಲ ಅಡ್ಯಂತಾಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯಶೀಲ ಅಡ್ಯಂತಾಯ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದು, ವಿವಿಧ ಸಾಮಾಜಿಕ , ಧಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಜಯಶೀಲ ಅಡ್ಯಂತಾಯ ಅವರು ದ.ಕ.ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅಡ್ಯಾರ್ ಗ್ರಾ.ಪಂನ ಸದಸ್ಯರಾಗಿ ಹಗೂ ಎಪಿಎಂಸಿ ನಿರ್ದೆಶಕರಾಗಿಯೂ ಸೇವೆಸಲ್ಲಿಸಿತ್ತಾರೆ.

ಕೇಂದ್ರದ ನೀತಿ ವಿರುದ್ಧ ಸಿಐಟಿಯು ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರ್ಕಾರ 15 ವರ್ಷಗಳ ಹಿಂದಿನ ವಾಹನಗಳನ್ನು ಗುಜುರಿಗೆ ಹಾಕಬೇಕೆಂಬ ಸರಕಾರದ ತೀರ್ಮಾನ ವನ್ನು ಪ್ರತಿಭಟಿಸಿ ರಿಕ್ಷಾ ಚಾಲಕರ ಯೂನಿಯನ್ citu ಬಂದ್ಯೋಡ್ ಅಂಚೆ ಕಛೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿತು. Aiks ರಾಜ್ಯ ಸಮಿತಿ ಸದಸ್ಯರಾದ ಕಾಂ ಕೆ .ಆರ್ ಜಯಾನಂದ ಧರಣಿಗೆ ಚಾಲನೆ ನೀಡಿ ಮಾತನಾಡಿದರು. ಜನವಿರೋಧಿಯಾಗಿರುವ ಕೇಂದ್ರ ಸರಕಾರದ ನಿಲುವಿನ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ದುಡಿದು ಜೀವಿಸುತ್ತಿರುವ ಜೀವಗಳ ಬಾಳಿಗೆ

ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಬಳಿಯ ಮನೆಗೆ ಕಳ್ಳರ ಲಗ್ಗೆ, ನಗ, ನಗದು ಕಳವು

ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಪಕ್ಕದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದು 12 ಸಾವಿರ ನಗದು ಮತ್ತು ಎರಡು ಗ್ರಾಂ ಚಿನ್ನದ ಆಭರಣ ಕದ್ದೊಯ್ದ ಘಟನೆ ನಡೆದಿದೆ. ಉಚ್ಚಿಲದ ನಿವಾಸಿ ಅಬ್ದುಲ್ ಮಲೀಕ್‌ನವರ ಬೈತುಲ್ ಅಲ್ ಸಫಾ ಮನೆಗೆ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು, ತಳ ಮಹಡಿ ಮತ್ತು ಮೇಲ್ಮಹಡಿಯ ಎರಡೂ ಕಡೆಗಳ ಬೀಗ ಮುರಿದು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 12 ಸಾವಿರ ರುಪಾಯಿ ನಗದು ಹಾಗೂ 2ಗ್ರಾಂ

“ಅಕ್ಷಮ್ಯ” ಚಿತ್ರದ ಟೀಸರ್ ಬಿಡುಗಡೆ

ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ನಿರ್ಮಾಣದ ಕನ್ನಡ ಚಿತ್ರ ಅಕ್ಷಮ್ಯ ಇದರ ಟೀಸರ್ ಬಿಡುಗಡೆ ಕಾರ್ಯಕ್ರಮ ನಗರದ ಮಾಲೇಮಾರ್ ಬಳಿಯ ಎಸ್ ಡಿಎಂ ಸ್ಟುಡಿಯೋದಲ್ಲಿ ನೆರವೇರಿತು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಟೀಸರ್ ಬಿಡುಗಡೆಗೊಳಿಸಿ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, “ಅಕ್ಷಮ್ಯ ಹೊಸಬರೇ ನಿರ್ಮಿಸಿದ ಒಂದು ಹೊಸ ಪ್ರಯತ್ನ. ಟೀಸರ್ ಕುತೂಹಲ ಮೂಡಿಸುತ್ತಿದ್ದು ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ. ಕನ್ನಡ