Home Blog Left SidebarPage 915

ಪಂಜಿಮೊಗರುವಿನಲ್ಲಿ ಕೋವಿಡ್ ಲಸಿಕೆ ಶಿಬಿರಕ್ಕೆ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನಾಗರಿಕರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ  ಪ್ರಧಾನ ಮಂತ್ರಿಯವರ ಉಚಿತ ಕೋವಿಡ್ ಲಸಿಕಾ ಯೋಜನೆಯಡಿ ಉಚಿತ ಕೋವಿಡ್ ಲಸಿಕಾ ಶಿಬಿರ ನಡೆಯಿತು. ಪಂಜಿಮೊಗರುವಿನ ಕೂಳೂರು ಮೊಹಿದ್ದೀನ್ ಜುಮಾ ಮಸೀದಿ ಆವರಣದಲ್ಲಿ ಸೋಮವಾರ ಶಿಬಿರಕ್ಕೆ ಶಾಸಕರು ಚಾಲನೆ

ಉಪ್ಪಿನಂಗಡಿ:ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿ, ಬಾಲಕ ಮೃತ್ಯು, ತಾಯಿ ಸ್ಥಿತಿ ಗಂಭೀರ

ಉಪ್ಪಿನಂಗಡಿ: ಬುಲೆಟ್ ಟ್ಯಾಂಕರ್‌ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಹಾಗೂ ಅವನ ತಾಯಿ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಬೈಪಾಸ್‌ನಲ್ಲಿ ನಡೆದಿದೆ. ಉಪ್ಪಿನಂಗಡಿ ಸಮೀಪದ ಕಲ್ಲೇರಿ ನಿವಾಸಿ ಅದ್ವೀತ್ (16) ಮೃತಪಟ್ಟ ಬಾಲಕ. ಅಂಗನವಾಡಿಯಲ್ಲಿ ಟೀಚರ್ ಆಗಿರುವ ಬಾಲಕನ ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ತನ್ನ ತಾಯಿಯ ಜೊತೆ ತೆರಳುತ್ತಿದ್ದ ವೇಳೆ

ಉದ್ಯಮಿ ಕಜಂಗೆ ಸುದರ್ಶನ್ ಜೈನ್ ನಿಧನ

ಮೂಡುಬಿದರೆ ಎಸ್‌ಜೆಆರ್ ಟಿಂಬರ್ಸ್ ಮಾಲಕ, ರಿಯಲ್ ಎಸ್ಟೇಟ್ ಉದ್ಯಮಿ ಕಜಂಗೆ ಸುದರ್ಶನ್ ಜೈನ್(56) ಅವರು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದರೆ ರೋಟರಿ ಮಾಜಿ ಕಾರ್ಯದರ್ಶಿ, ಜೈನ್ ಮಿಲನ್ ಉಪಾಧ್ಯಕ್ಷರಾಗಿ, ಧಾರ್ಮಿಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೂಡುಬಿದರೆಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದರ್ಶನ್ ಅವರಿಗೆ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಸಕ ಉಮಾನಾಥ

ಉಪ್ಪಿನಂಗಡಿಯಲ್ಲಿ ಮೀನು ಅಂಗಡಿಗೆ ಬೆಂಕಿ ಹಚ್ಚಿದ್ದ ಪ್ರಕರಣ : ಹಿಂಜಾವೇಯಿಂದ ಪ್ರತಿಭಟನೆ

ಉಪ್ಪಿನಂಗಡಿ: ಹಳೇಗೇಟು ಬಳಿ ಕೆಲ ದಿನಗಳ ಹಿಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹಸಿ ಮೀನು ಮಾರಾಟದ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಸೆ. 6ರಂದು ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ ಮುಂದೆ ಧರಣಿ ನಡೆಯಿತು. ಬೆಂಕಿ ಹಚ್ಚಿರುವ ಘಟನೆ ಖಂಡಿಸಿ ಹಿಂದೆ ರಾಸ್ತಾರೋಕೋ ನಡೆಸಲಾಗಿತ್ತು. ಅಲ್ಲದೆ, ಉಗ್ರ ಪ್ರತಿಭಟನೆಗೆ ನಿರ್ಧರಿಸಲಾಗಿತ್ತು. ಪೊಲೀಸ್ ಇಲಾಖೆಯ ಮನವಿ ಮೇರೆಗೆ ಪ್ರತಿಭಟನೆ ಕೈ

ಔಷಧೀಯ ಸಸ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ: ಮಾಜಿ ಶಾಸಕ ಜೆ.ಆರ್ ಲೋಬೋ

ಮಂಗಳೂರು: ನಗರ ಪ್ರದೇಶದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹೇಳಿದರು.ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನ ಪ್ರಯುಕ್ತ ಕುದ್ರೋಳಿ ಗುರು ಬೆಳದಿಂಗಳು ಸೇವಾ ಸಂಸ್ಥೆಯಿಂದ ಔಷಧೀಯ ಸಸ್ಯಗಳ ನೆಡುವ ಸರಣಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಜೆಪ್ಪು ಸೇಂಟ್ ಜೋಸೆಫ್ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇಂಟ್ ಜೋಸೆಫ್ ಸೆಮಿನರ್ ರೆಕ್ಟರ್ ರೊನಾಲ್ಡ್ ಸೆರಾವೋ, ಆಡಳಿತ ಅಧಿಕಾರಿ ರೆ.ಫಾ.ಲಸ್ರಾದೊ,

ಅಂಬುಲೆನ್ಸ್ ಇಲ್ಲದೆ ಸೊರಗುತ್ತಿದೆ ಮೂರೂ ಟೋಲ್ ಪ್ಲಾಜಾಗಳು

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಜನರಿಂದ ಸುಂಕ ಪಡೆಯುವ ಟೋಲ್ ಪ್ಲಾಜಾಗಳಲ್ಲಿ ಅಗತ್ಯವಾಗಿ ಇರಲೇ ಬೇಕಾದ ಅಂಬುಲೆನ್ಸ್ ಗಳು ಗ್ಯಾರೇಜ್ ನಲ್ಲಿ ಚಿರ ವಿಶ್ರಾಂತಿಯಲ್ಲಿದ್ದು, ಕಾನೂನು ಮೀರಿ ವ್ಯವಹಾರಿಸುತ್ತಿರುವ ಇವರನ್ನು ಕೇಳುವವರೇ ಇಲ್ಲವಾಗಿದೆ. ಮಂಗಳೂರು ಜಿಲ್ಲೆಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿ ಕಾರ್ಯಚರಿಸುತ್ತಿದ್ದ ಒಬಿರಾಯನ ಕಾಲದ ಅಂಬುಲೆ೦ನ್ಸ್ ಗಳು ಕೆಟ್ಟು ಹೋಗಿ ಗ್ಯಾರೇಜ್ ಸೇರಿ ಎರಡು ತಿಂಗಳೇ ಕಳೆದರೂ

ಆತುರವಾಗಿ ಶಿಕ್ಷಣ ನೀತಿ ಜಾರಿ ಮಾಡಿಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಾರಾಸಗಟಾಗಿ ತಳ್ಳಿಹಾಕಿದಲ್ಲದೆ, ಇದು ಅರ್ಥರಹಿತ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದ ಟೀಕೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು

ಸೆ.10 ರಂದು ಬಿ.ಸಿ.ಸಿ.ಐ(ಯು.ಎ.ಯಿ) ವತಿಯಿಂದ ‘ಡಿಜಿಟಲ್ ರೆವಲ್ಯೂಶನ್’ ವೆಬಿನಾರ್

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ ಸೆಪ್ಟೆಂಬರ್ 10ರಂದು ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್’ಶಿಪ್’ ಎಂಬ ವಿಷಯದಲ್ಲಿ ವೆಬಿನಾರ್ ಹಮ್ಮಿಕೊಂಡಿದೆ. ಬ್ಯುಸಿನೆಸ್ ನೆಟ್ವರ್ಕಿಂಗ್ ಮೂಲಕ ಸಮಾಜದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಆ ಮೂಲಕ ವ್ಯಾಪಾರ ಸಬಲೀಕರಣ ಹಾಗೂ ಸಮಾಜ ಸೇವೆ ನಡೆಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಯುಎಇಯಲ್ಲಿ

ಬಜಾಲ್ ನಿವಾಸಿ ವಾಲ್ಟರ್ ಮೊಂತೆರೋ ವಿಧಿವಶ:ಸೆ.6ರಂದು ಹೋಲಿ ಸ್ಪಿರಿಟ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ

ಮಂಗಳೂರಿನ ಬಜಾಲ್ ನಿವಾಸಿಯಾಗಿರುವ ವಾಲ್ಟರ್ ಮೊಂತೆರೋ(77) ಅವರು ಭಾನುವಾರದಂದು ನಿಧನರಾದರು. ಅವರು ಪುತ್ರಿಯರಾದ ವಾಣಿ ಐವನ್, ಸವಿತಾ ಲ್ಯಾನ್ಸಿ, ಸುನಿತಾ ನೋಬರ್ಟ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಸೆಪ್ಟಂಬರ್ 6ರಂದು ಬೆಳಗ್ಗೆ 9.30ಕ್ಕೆ ಬಜಾಲ್‌ನ ಇವಾನಿ ಹೌಸ್‌ನಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ 10 ಗಂಟೆಗೆ ಬಜಾಲ್‌ನ ಹೋಲಿ ಸ್ಪಿರಿಟ್ ಚರ್ಚ್‌ನಲ್ಲಿ ವಿಶೇಷ ಪೂಜೆ ನೆರವೇರಿದ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.  

ಸಜೀಪಮೂಡ‌ದಲ್ಲಿ ಪುರುಷಾಮೃಗದ ಅಪರೂಪದ ಶಿಲ್ಪವುಳ್ಳ ಬಂಗರಸನ ಶಾಸನ ಪತ್ತೆ

ದಕ್ಷಿಣ ಕನ್ನಡ‌ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಅನ್ನಪಾಡಿ ಬಾಲಗಣಪತಿ ದೇವಾಲಯದ ಬಳಿಯ ದಿ. ಮೋನಪ್ಪ ಪೂಜಾರಿಯವರ ತೋಟದಲ್ಲಿರುವ ಶಾಸನವನ್ನು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಇದರ ಅಧ್ಯಕ್ಷರಾದ ಡಾ| ತುಕಾರಾಮ ಪೂಜಾರಿಯವರು ಹಾಗೂ ಬಂಟ್ವಾಳ ತಾಲೂಕು ಪಂಚಾಯತಿನ ಮಾಜಿ ಅಧ್ಯಕ್ಷರಾದ ಶ್ರೀ ಯಶವಂತ ದೇರಾಜೆ ಅವರು ಈ ಮೊದಲು ಪತ್ತೆ ಮಾಡಿರುತ್ತಾರೆ. ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ – ಉಡುಪಿ (ಎನ್.ಟಿ‌.ಸಿ- ಎ.ಒ.ಎಂ ನ ಅಂಗ