Home Blog Left SidebarPage 918

ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿಧಾನ ಮಂಗಳೂರಿನಲ್ಲಿ ಪ್ರಥಮ

ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿನೂತನ ತಂತ್ರಜ್ಞಾನವನ್ನು ಮಂಗಳೂರಿನ ಬೋಟ್ ಗೆ ಅಳವಡಿಕೆ ಮಾಡಲಾಗಿದೆ. ಈ ಮೂಲಕ ವಾರಗಟ್ಟಲೆ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸಲು ಹೋಗುವ ಮೀನುಗಾರರು ಇನ್ನು ಮುಂದೆ ತಮ್ಮ ನಿತ್ಯ ಬಳಕೆಯ ಅವಶ್ಯಕತೆಗೆ ಬೇಕಾದ ನೀರನ್ನು ಕೊಂಡೊಯ್ಯುವ ಪ್ರಮೇಯವೇ ಇಲ್ಲ. ಆಳ ಸಮುದ್ರ ಮೀನುಗಾರಿಕೆ ನಡೆಸುವ

ಸಾಹಿತ್ಯ ಎನ್ನುವುದು ಜೀವನದ ಅನುಭವ ದ್ರವ್ಯ: ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಚಂದ್ರಕಲಾ ನಂದಾವರ

ಮಂಗಳೂರು: ಸಾಹಿತ್ಯದ ಬರವಣಿಗೆ ಮತ್ತು ಸಾಹಿತ್ಯದ ಓದು ಮನುಷ್ಯನೊಳಗೆ ತನ್ನನ್ನು ತಾನು ಗುರುತಿಸಿಕೊಳ್ಳುವಂತಹ ಮತ್ತು ಸಮಾಜದೊಳಗೆ ತನ್ನನ್ನು ತಾನು ಬೆಸೆದುಕೊಳ್ಳುವಂತಹ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಎನ್ನುವುದು ಜೀವನದ ಅನುಭವಗಳ ದ್ರವ್ಯ ಎಂದು ಗಣಪತಿ ಪ.ಪೂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಹೇಳಿದರು. ಅವರು ನಗರದ ಸ್ಟೇಟ್ ಬ್ಯಾಂಕ್, ರಾವ್ ಆಂಡ್ ರಾವ್ ಸರ್ಕಲ್ ಬಳಿಯ ಸಹಕಾರಿ ಸಧನದಲ್ಲಿರುವ ಶಾಂತಿ ಪ್ರಕಾಶನ ಸಭಾಂಗಣದಲ್ಲಿಂದು ನಡೆದ

ಕಡಬದಲ್ಲಿ ಪೊಲೀಸ್ ಜೀಪು ಹಾಗೂ ಬೊಲೆರೋ ನಡುವೆ ಢಿಕ್ಕಿ: ಎಸ್.ಐ ಸಹಿತ ಹಲವರು ಅಪಾಯದಿಂದ ಪಾರು

ಕಡಬ ಎಸ್.ಐ. ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಪೊಲೀಸ್ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಮೀನುಗಾರಿಕಾ ದೋಣಿಗಳಿಗೆ ಉಪ್ಪು ನೀರು ಸಂಸ್ಕರಣಾ ಘಟಕ: ಸಚಿವ ಎಸ್. ಅಂಗಾರ

ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತಮ್ಮ ದೋಣಿಗಳಲ್ಲಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಅಳವಡಿಸುವುದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಈ ಘಟಕ ಅಳವಡಿಸಲು ಸಹಾಯಧನ ಒದಗಿಸುವ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ. ಮಂಗಳೂರು ಹಳೆ ಬಂದರು ಧಕ್ಕೆಯ ಅಳಿವೆಬಾಗಿಲು ಬಳಿ ದೋಣಿಯೊಂದರಲ್ಲಿ ಉಪ್ಪು ನೀರನ್ನು

ತುಳುಕೂಟ ಫೌಂಡೇಶನ್ ನಾಲಾಸೋಪಾರ ನೂತನ ಅಧ್ಯಕ್ಷರಾಗಿ ಶಶಿಧರ ಕೆ. ಶೆಟ್ಟಿ ಆಯ್ಕೆ

ನಾಲಾಸೋಪಾರ;; ತುಳು ಕೂಟ ಫೌಂಡೇಶನ್ ನಾಲಾಸೋಪಾರ ಇದರ ಸಭೆಯು. ಆಗಸ್ಟ್ 31ರಂದು ರಿಜನ್ಸಿ ಬ್ಯಾಂಕ್ವಿಟ್ ಹಾಲ್  ನಾಲಾಸೋಪಾರ (ಪೂರ್ವ )ದಲ್ಲಿ  ತುಳುಕೂಟ ಫೌಂಡೇಶನ್ ಅಧ್ಯಕ್ಷರಾದ  ರಮೇಶ್ ಶೆಟ್ಟಿ ಕಾಪು ಇವರ ಅದ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಕೋಶಾಧಿಕಾರಿಯವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಕಾರ್ಯದರ್ಶಿಯವರು ಲೆಕ್ಕಪತ್ರವನ್ನು ಮಂಡಿಸಿದರು ಈ ಸಂದರ್ಭದಲ್ಲಿ

ಮಂಗಳೂರಿನಲ್ಲಿ ಜ್ಞಾನ ಜ್ಯೋತಿ ಕೋಚಿಂಗ್ ಕ್ಲಾಸ್ ಉದ್ಘಾಟನೆ

ಜ್ಞಾನ ಜ್ಯೋತಿ ಕೋಚಿಂಗ್ ಕ್ಲಾಸ್ ಶ್ರೀ ಗೋಕರ್ಣನಾತೆಶ್ವರ ದೇವಸ್ಥಾನದ ಪ್ರವೇಶ ದ್ವಾರಾದ ಹತ್ತಿರ ಇರುವ ಶಿವಗಿರಿ ಅಪಾರ್ಟ್ಮೆಂಟ್ ಪ್ಲಾಟ್ ನಂಬರ್ 305ರಲ್ಲಿ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ ಉಪ ಕುಲಸಚಿವರು ಆಗಿರುವ ಡಾ. ಪ್ರಭಾಕರ್ ನೀರ್ ಮಾರ್ಗ ಅವರ ಅಮೃತ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ನಾರಾಯಣ ಗುರು ಪ್ರಥಮ ದರ್ಜೆ ಕಾಲೇಜು ಕುದ್ರೋಳಿ ಇದರ ಪ್ರಾಂಶುಪಾಲರು ಡಾ ವಸಂತ ಕುಮಾರ್, ಗೋಕರ್ಣೇಶ್ವರ ಕಾಲೇಜಿನ

ದ.ಕ.ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫೂ ರದ್ದಾಗಲಿ :ಸಿಪಿಐ(ಎಂ)

ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಎಲ್ಲಾ ವಿಭಾಗದ ಜನತೆಗೆ ವಿನಾಃ ಕಾರಣ ತೊಂದರೆ ನೀಡುವ ವಾರಾಂತ್ಯದ ಕರ್ಫ್ಯೂವನ್ನು ಕೂಡಲೇ ರದ್ದುಮಾಡಬೇಕೆಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಡಳಿತವನ್ನು ಒತ್ತಾಯಿಸಿದೆ. CPIM ಹಿರಿಯ ನಾಯಕರಾದ ಕಾಂ.ಕೆ ಆರ್ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಿಪಿಐ(ಎಂ)ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಅವೈಜ್ಞಾನಿಕ ಕರ್ಫೂನಿಂದಾಗಿ ಕೋರೋನ ನಿಯಂತ್ರಣ

ವೀಕೆಂಡ್ ಕರ್ಫ್ಯೂ ವಿರೋಧಿಸಿ ವ್ಯವಹಾರ ನಡೆಸಲು ಪುತ್ತೂರು ವರ್ತಕರ ಸಂಘ ತೀರ್ಮಾನ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟೀವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈ ವಾರವೂ ವೀಕೆಂಡ್ ಕರ್ಫೂ ಹೇರಲಾಗಿದೆ. ಆದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಇದೀಗ ವರ್ತಕರ ಸಂಘ ವಿರೋಧ ವ್ಯಕ್ತಪಡಿಸಲಾರಂಭಿಸಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ನಗರ, ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೇಟೆಗಳಲ್ಲಿ ಈ ವಾರ ವೀಕಂಡ್ ಕರ್ಫೂ ನಲ್ಲಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರೆದಿಟ್ಟು, ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವ ನಿರ್ಧಾರಕ್ಕೆ

ಬಸ್ ಮಾಲಕರ ಲಾಬಿಗೆ ಶರಣಾದ ಜಿಲ್ಲಾಡಳಿತ : ಸುನಿಲ್ ಕುಮಾರ್ ಬಜಾಲ್

ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತವಾಗಿ ಏರಿಸುವ ಮೂಲಕ ದ.ಕ.ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲಕರ ಲಾಬಿಗೆ ಶರಣಾಗಿದೆ. ಬೆರಳೆಣಿಕೆಯಷ್ಟು ಇರುವ ಬಸ್ ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸುವ ಜಿಲ್ಲಾಧಿಕಾರಿಗಳು,ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟವನ್ನು ಅರಿಯಲು ವಿಫಲರಾಗಿದ್ದಾರೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗೀ ಬಸ್ ಪ್ರಯಾಣ ದರಯೇರಿಕೆಯ ವಿರುದ್ಧ