Home Blog Left SidebarPage 92

ಬೈಂದೂರು: ಆಗಸ್ಟ್‌ 3ರಂದು “ಕೆಸರಲ್ಲೊಂದಿನ ಗಮ್ಮತ್‌” ಕಾರ್ಯಕ್ರಮ

ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ, ಬೈಂದೂರು ನೇತ್ರತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ “ಕೆಸರಲ್ಲೊಂದಿನ ಗಮ್ಮತ್‌”ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರನ್ನು ಒಂದೇ ಸೂರಿನಡಿ ಸೇರಿಸಿ, ಹೆಸರೇ ತಿಳಿಸುವಂತೆ ಗಡ್ಜ್‌ ಗಮ್ಮತ್‌ ಮಾಡುವ ಪರಿಕಲ್ಪನೆ

ಕಡಬ: ಆರೋಗ್ಶ ಸುಧಾರಣೆಗಾಗಿ ಧರ್ಮಸ್ಥಳ ಯೋಜನೆಯಿಂದ ಸಹಾಯಧನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಲ್ಶ ಗ್ರಾಮದ ಸನ್ನಿದಿ ಪ್ರಗತಿಬಂಧು ತಂಡದ ಸದಸ್ಶರಾದ ಯಾದವ ರವರಿಗೆ ಕ್ರಿಟಿಕಲ್ ಇನ್ಲೇಸ್ ಯೋಜನೆಯಡಿಯಲ್ಲಿ ರೂ.25000 ಸಹಾಧನವನ್ನು ಆರೋಗ್ಶ ಸುಧಾರಣೆಗಾಗಿ ವಿತರಿಸಿ ಸಾಂತ್ವಾನ ತಿಳಿಸಲಾಯಿತು.ಬಲ್ಶ ಗ್ರಾಮದ ಯಾದವರವರು ಕೆಲಸ ಮಾಡುವ ಸಂದರ್ಭ ಆಕಸ್ಮೀಕವಾಗಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು ಸೋಂಟದ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ದುರ್ಗಾವತಿ ಹಾಗೂ

ಸುಳ್ಯ : ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

ಸುಳ್ಯ:ಪತ್ರಕರ್ತರು ಸುದ್ದಿ ಮಾಡುವಾಗ ಸತ್ಯ, ನಿಖರತೆಗೆ ಒತ್ತು ನೀಡಬೇಕು, ಯಾವುದೇ ವಿಷಯವನ್ನುಪರಾಂಭರಿಸಿ, ಸತ್ಯವನ್ನು ಅರಿತು ವರದಿ ಮಾಡಬೇಕು ಎಂದು ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದ್ದಾರೆ.ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜನರಿಗೆ ಮಾಹಿತಿ, ಶಿಕ್ಷಣ

ಬಂಟ್ವಾಳ : ಹಿರಿಯ ರಂಗಭೂಮಿ ಕಲಾವಿದ ಚಿ. ರಮೇಶ್ ಕಲ್ಲಡ್ಕ ನಿಧನ

ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗಭೂಮಿ ಕಲಾವಿದ, ತುಳು ರಂಗಭೂಮಿಯ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ (68) ಅವರು ಜು.23ರ ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.

ಜುಲೈ 24ರಂದು ಹೊಟೇಲ್ ಡಿಂಕಿ ಡೈನ್ ಆವರಣದಲ್ಲಿ ಆಟಿ ಅಮಾವಾಸ್ಯೆಯ ಕಷಾಯ ಮತ್ತು ಮೆಂತೆ ಗಂಜಿ ಉಚಿತವಾಗಿ ವಿತರಣೆ

ಹೊಟೇಲ್ ಡಿಂಕಿ ಡೈನ್‌ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನ ಸಂಸ್ಕಾರ ಭಾರತಿ ಮಂಗಳೂರು ಸಹಯೋಗದೊಂದಿಗೆ ಆಟಿ ಅಮಾವಾಸ್ಯೆಯ ವಿಶೇಷ ಕಷಾಯ ಮದ್ದನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಂಗಳೂರಿನ ಜನತೆಗೆ ಕಳೆದ 10 ವರ್ಷಗಳಿಂದ ಈ ಸೇವೆಯನ್ನು ತುಳುವ ಬೊಳ್ಳಿ ಪ್ರತಿಷ್ಠಾನ ಡಿಂಕಿ ಡೈನ್ ಹೋಟೆಲ್ ನ ಸಂಪೂರ್ಣ ಸಹಭಾಗಿತ್ವದೊಂದಿಗೆ ನಡೆಸಿಕೊಂಡು ಬರುತ್ತಿದೆ. ಈ ಬಾರಿ 11 ನೇ ವರ್ಷ ಎಲ್ಲರೂ ಬಂದು ಆಟಿ ಅಮಾವಾಸ್ಯೆಯ ಈ ವಿಶೇಷ ಕಷಾಯ ಮತ್ತು ಮೆಂತೆ ಗಂಜಿಯನ್ನು ಉಚಿತವಾಗಿ

ಬಡಾಗ್ರಾಮ ಪಂಚಾಯತ್ 11 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿಗೆ ಚಾಲನೆ

ಪಡುಬಿದ್ರಿ : ಉಚ್ಚಿಲ ಬಡಾಗ್ರಾಮ ಪಂಚಾಯತ್ ಮತ್ತು ಬಾಡಿಫೈ ಸಹಯೋಗದಲ್ಲಿ ೧೧ ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿಗೆ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್ ದೀಪ ಬೆಳಗಿಸಿ ಚಾಲನೆಯನ್ನು ನೀಡಿ ಶುಭವನ್ನು ಹಾರೈಸಿದರು. ಬಾಡಿ ಫೈ ಸಂಸ್ಥೆ ಮುಖ್ಯಸ್ಥ ನರೇಂದ್ರ ಕುಂದಾಪುರ ಮಾತನಾಡಿ, ಯಾವುದೇ ಔಷಧವಿಲ್ಲದೆ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗೆ ಉಚಿತ ಥೆರಪಿ ಸಹಾಯಕ. ಈ ಥೆರಪಿಯ ಮೂಲಕ ಪಾದದಲ್ಲಿರುವ ಆಕ್ಯೂಪ್ರೆಷರ್ ಪಾಯಿಂಟ್‌ನ್ನು

ಮಂಗಳೂರು:ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್‌ನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ 6 ಮತ್ತು ಬಾರ್ 6ಬಿಡುಗಡೆ

ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ ೬ ಮತ್ತು ಬಾರ್ ೬ ಬಿಡುಗಡೆಗೊಂಡಿತು. ವಾ.ಓ೦೧: ಹೊಸ ಹೊಸ ತಂತ್ರಜ್ಞಾನದ ಮೂಲಕ ಗ್ರಾಹಕರ ಮನಗೆದ್ದಿರುವ ಸೋನಿ ಸೆಂಟರ್ ಇದೀಗ ಉತ್ಕೃಷ್ಟವಾದ  ಆಡಿಯೋ ವಿಶ್ಯುವಲ್ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ 6 ಮತ್ತು ಬಾರ್ 6 ಬಿಡುಗಡೆಗೊಳಿಸಿದೆ. ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್

ಗುಜರಾತ್‌ನ ಮಿಲಿಟರಿ ಆಸ್ಪತ್ರೆಯ ಇನ್‌ಚಾರ್ಜ್ ಆಗಿ ಲೆಫ್ಟಿನಂಟ್ ಕರ್ನಲ್ ರುಕಿಯಾ ಶಾಫಿ ಬೀಜದಕಟ್ಟೆ ನೇಮಕ

ನಿವೃತ ಯೋಧ ಶಾಫಿ ಬೀಜದಕಟ್ಟೆ ಯವರ ಧರ್ಮ ಪತ್ನಿ ಲೆಫ್ಟಿನೆಂಟ್ ಕರ್ನಲ್ ರುಕಿಯಾ ಶಾಫಿ ಬೀಜದಕಟ್ಟೆ ಯವರು ಗುಜರಾತಿನ ಧ್ರನಂಗಧಾರ ಮಿಲಿಟರಿ ಅಸ್ಪತ್ರೆಯ ಇನ್ಚಾರ್ಜ್ ಆಗಿ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಇವರು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ನಿವಾಸಿಯಾಗಿರುವ ದಿ. ಸೈದು ಹಾಜಿ ಮತ್ತು ಆಸಿಯಮ್ಮ ದಂಪತಿಗಳ ಪುತ್ರ ಹಾಗೂ ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಯವರ ಸಹೋದರ ಶಾಫಿ ಬೀಜದಕಟ್ಟೆ ಅವರ ಪತ್ನಿ ದೀರ್ಘಕಾಲದಿಂದ ಸೇನೆ ವೈದ್ಯಕೀಯ

ಉಪರಾಷ್ಟ್ರಪತಿ ಧನಕರ್ ರಾಜೀನಾಮೆ ಅಂಗೀಕಾರ

ಉಪರಾಷ್ಟ್ರಪತಿ ಜಗದೀಪ್ ದನ್ಕರ್ ನೀಡಿದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವೀಕರಿಸಿದ್ದಾರೆ.ಹುದ್ದೆ ಬಿಟ್ಟ ದನ್ಕರ್ ಅವರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಿದ ಪ್ರಧಾನಿ ಮೋದಿಯವರು ಆರೋಗ್ಯ ಬೇಗ ಸುಧಾರಿಸಲಿ ಎಂದು ಹಾರೈಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಹಾಜರಿದ್ದರು.೭೪ರ ಪ್ರಾಯದ ದನ್ಕರ್ ಅವರು ಆರೋಗ್ಯ ಸಮಸ್ಯೆ ಕಾರಣವನ್ನು ಮುಂದಿಟ್ಟು ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ೨೦೨೨ರ ಆಗಸ್ಟ್‌ನಲ್ಲಿ

ಭಾರತೀಯ ವಾಯುಪಡೆಗೆ ಮೂರು ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ

ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯಾಧುನಿಕ ತಂತ್ರಜ್ಞಾನದ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಇಂದು ಭಾರತೀಯ ಸೇನೆಗೆ ಬಂದು ಸೇರಿದವು. ಈ ಅಪಾಚೆ ಹೆಲಿಕಾಪ್ಟರ್‌ಗಳು ಕಾಮೊ ಎಂದರೆ ಪರಿಸರಕ್ಕೆ ಹೊಂದಿ ಅಡಗುವ ಬಣ್ಣ ಹೊಂದಿವೆ ಎಂದು ಹೇಳಲಾಗಿದೆ. ವಾಯು ಪಡೆಗೆ ಎಂದು ಹೇಳಲಾಗಿದ್ದರೂ ಈ ಮೂರು ಹೆಲಿಕಾಪ್ಟರ್‌ಗಳನ್ನು ಭಾರತೀಯ ಸೇನೆಯ ಅದರಲ್ಲೂ ಭೂಸೇನೆಯ ಅಗತ್ಯಕ್ಕೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಈ ಹೆಲಿಕಾಪ್ಟರ್ ಅಮೆರಿಕದ ಟರ್ಬೋ ಶಾಪ್ಟ್ ದಾಳಿ ಮಾಡುವ ಹೆಲಿಕಾಪ್ಟರ್