Home Blog Left SidebarPage 93

ಮಂಗಳೂರು: ಕೂಳೂರು ಹಳೇ ಸೇತುವೆಯ ಬಳಿಯಿಂದ ಅಯ್ಯಪ್ಪ ಗುಡಿಯವರೆಗೆ ರಸ್ತೆ ದುರಸ್ಥಿ ಕಾಮಗಾರಿ: ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್ ಜಂಕ್ಷನ್‌ನಿಂದ ಅಯ್ಯಪ್ಪ ಗುಡಿಯವರೆಗೆ ದಿನಾಂಕಃ 22-07-2025 ಮಂಗಳವಾರ ರಾತ್ರಿ 8-00 ಗಂಟೆಯಿಂದ ದಿನಾಂಕಃ 25-07-2025 ಗುರುವಾರ ಬೆಳಿಗ್ಗೆ 8-00 ರವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ. ಹಾಗಾಗಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ

ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆಯಲಿರುವ “ಆಳ್ವಾಸ್ *ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಸಭೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಡುಬಿದಿರೆ ವತಿಯಿಂದ ಆಗಸ್ಟ್ 01 ಮತ್ತು 02 ತಾರೀಖಿನಂದು ಮೂಡುಬಿದಿರೆವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆಯಲಿರುವ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿಯಾಗಿ ಇಂದು ದಿನಾಂಕ 22-07-2025 ರಂದು ಹಿಂದೂ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ “ಉದ್ಯೋಗ ಮಾಹಿತಿ ಶಿಬಿರ” ಕಾರ್ಯಕ್ರಮವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು

ಸುಳ್ಯ:ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಸರಕಾರಿ ಪ್ರೌಢಶಾಲೆ ಅಜ್ಜಾವರ ಇದರ ಸಹಯೋಗದೊಂದಿಗೆ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧೀಯ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಅಧ್ಯಕ್ಷರಾಗಿರುವ ಶ್ರೀ ಚಂದ್ರಶೇಖರ ಪೇರಾಲು ವಹಿಸಿದ್ದರು. ಎಸ್. ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕಣೆಮರಡ್ಕ

ಆನೆ ದಾಳಿಯಿಂದ ಹಾನಿ ವಿಚಾರ: ಉಬರಡ್ಕ- ಮಿತ್ತೂರು, ರೆಂಜಾಳ ಗ್ರಾಮದ ಕೃಷಿಕರೊಂದಿಗೆ ಸಂವಾದ

ಕಾಡುಪ್ರಾಣಿಗಳಿಂದ ವಿಶೇಷವಾಗಿ ಆನೆ ದಾಳಿಯಿಂದ ಹಾನಿಗೊಳಗಾಗಿರುವ ಉಬರಡ್ಕ- ಮಿತ್ತೂರು ಗ್ರಾಮದ ಮತ್ತು ಮರ್ಕಂಜ ಗ್ರಾಮದ ರೆಂಜಾಳದ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವು ಉಬರಡ್ಕ C.A ಬ್ಯಾಂಕ್ ಸಭಾಂಗಣ ಮತ್ತು ಮರ್ಕಂಜದ ಸಭೆಯು ರೆಂಜಾಳ ವಿನಾಯಕ ಸಭಾಭವನದಲ್ಲಿ ನಡೆಯಿತು. ಹಲವಾರು ತಮ್ಮ ಕೃಷಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು, ಸರಕಾರದಿಂದ ಸಿಗುವ ಸವಲತ್ತುಗಳು, ಪರಿಹಾರಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದರು.ಸಭೆಯನ್ನು

ಕಾಪು : ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಇಲಾಖಾಧಿಕಾರಿಗಳೊಂದಿಗೆ ಸಭೆ

ಕಾಪು ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕಿನ 10 ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಇಲಾಖಾಧಿಕಾರಿಗಳೊಂದಿಗೆ ಇಂದು ದಿನಾಂಕ 21-07-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉಡುಪಿ ತಹಶೀಲ್ದಾರರ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಪೆರ್ಡೂರು, ಬೈರಂಪಳ್ಳಿ, ಕುಕ್ಕೆಹಳ್ಳಿ, ಅಂಜಾರು ಭಾಗದಲ್ಲಿ ಡೀಮ್ಡ್ ಫಾರೆಸ್ಟ್ ಇರುವುದರಿಂದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ಅರಣ್ಯ

ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ:ಕಾರು ಚಾಲಕ ಮೃತ್ಯು

ವಿಟ್ಲ: ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಚಾಲಕ ಅನೀಶ್ ಮೃತಪಟ್ಟಿದ್ದು ಹಾಗೂ ಆತನ ಸಹೋದರಿ ಮಹಿಳೆ ಮತ್ತು ಮಗು ಗಂಭೀರ ಗಾಯಗೊಂಡ ಘಟನೆ ವೀರಕಂಬ ಗ್ರಾಮದ ಕೆಲಿಂಜದಲ್ಲಿ ನಡೆದಿದೆ. ಕಲ್ಲಡ್ಕದಿಂದ ವಿಟ್ಲ ಕಡೆ ಬರುತ್ತಿದ್ದ ಆಲ್ಟೊ ಕಾರಿಗೆ ವಿಟ್ಲದಿಂದ ಕಲ್ಲಡ್ಕ ಕಡೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ನಡುವೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಚಾಲಕ ಹಾಗೂ ಸಹೋದರಿ ಮಹಿಳೆ ಹಾಗೂ ಮಗು ಗಂಭೀರ ಗಾಯ

ಕನ್ನಡ ಜಾನಪದ ಪರಿಷತ್ ಉಡುಪಿ ಮತ್ತು ಕುಂದಾಪುರ ಘಟಕದ ವತಿಯಿಂದ “ವಿಕಾಸಕ್ಕಾಗಿ ಜಾನಪದ” ಕಾರ್ಯಕ್ರಮ

“ಹಳ್ಳಿಯ ಶ್ರಮದ ಬದುಕು ಜಾನಪದ ಸಾಹಿತ್ಯದ ಮೂಲ. ಜೀವನಾನುಭವದ ವಿಶ್ವವಿದ್ಯಾನಿಲಯ. ಇಲ್ಲಿ ಬದುಕಿನ ಮೂಲ ಶಿಕ್ಷಣದ ಪಾಠವನ್ನು ಒಳಗೊಂಡ, ಅರಿವನ್ನು ವಿಸ್ತರಿಸುವ ಜೀವನಾನುಭವದ ಅಮೃತವಿದೆ. ನೋವು ನಲಿವುಗಳನ್ನು ಒಳಗೊಂಡಿರುವ ಜನಪದ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಶ್ರೀಮಂತ ಸಮೃದ್ಧ ಸಾಹಿತ್ಯ , ಈ ಜನಪದ ಸಾಹಿತ್ಯವನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜನಪದ ಪರಿಷತ್ ಉಡುಪಿ ಘಟಕ ಅಧ್ಯಕ್ಷರು ಡಾ.ಗಣೇಶ್ ಗಂಗೊಳ್ಳಿ ಹೇಳಿದರು. ಇವರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ ನ CSR ನಿಧಿಯಿಂದ ಹೈಟೆಕ್ ಶೌಚಾಲಯ ನಿರ್ಮಾಣ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ ನ CSR ನಿಧಿಯಿಂದ ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು. ಸತೀಶ್ ಎಮ್ ನಾಯಕ್ ನೂತನ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ ನ CSR ನಿಧಿಯಿಂದ ಶೌಚಾಲಯ 12 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯಾಗಿ ನಿರ್ಮಾಣವಾಗಿದೆ ಇದರ ಮುಖ್ಯ ಉದ್ದೇಶ ಶಾಲೆಯ ಪರಿಸರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು

ಮರವಂತೆ ಗ್ರಾಮ ಪಂಚಾಯತ್ ಪ್ರಾಯೋಜಕತ್ವದಲ್ಲಿ”ಸ್ವಚ್ಛ ಮರವಂತೆ-ಸುಂದರ ಮರವಂತೆ ” ಅಭಿಯಾನ

ಮರವಂತೆ ಗ್ರಾಮ ಪಂಚಾಯತ್ ಪ್ರಾಯೋಜಕತ್ವ ದಲ್ಲಿ”ಸ್ವಚ್ಛ ಮರವಂತೆ-ಸುಂದರ ಮರವಂತೆ ” ಅಭಿಯಾನ ಮರವಂತೆ ಗ್ರಾಮ ಪಂಚಾಯತ್ ವಠಾರದಲ್ಲಿ ಚಾಲನೆಯನ್ನು ನೀಡಲಾಯಿತು. ಬೈಂದೂರು ಕ್ಷೇತ್ರದ ಶಾಸಕರು ಗುರುರಾಜ್ ಗಂಟೆಹೊಳೆ ಯವರು ಸ್ವಚ್ಛತೆ ಅರಿವಿನ ಬಗ್ಗೆ ಕರಪತ್ರ ಬಿಡುಗಡೆ ಮಾಡುದರ ಮೂಲಕ ಚಾಲನೆ ನೀಡಿ ಮಾತನಾಡಿ ಸ್ವಚ್ಛತೆ ದೃಷ್ಟಿಯಿಂದ ಮರವಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ

ಮುಂಬೈ: ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಅಂಬಲ್ಪಾಡಿ ಗಣೇಶ್ ಕಾಂಚನ್ ಆಯ್ಕೆ

ಮುಂಬಯಿ ಮಹಾನಗರದ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಯಾದ ಕರ್ನಾಟಕ ರಾಜ್ಯ ಪ್ರಶಸ್ತಿ-೨೦೧೨ರ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಯ ೨೦೨೫-೨೦೨೮ರ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ರಚನೆಯಾಗಿದೆ. ಅಧ್ಯಕ್ಷರಾಗಿ ಅಂಬಲ್ಪಾಡಿ ಗಣೇಶ್ ಕಾಂಚನ್, ಉಪಾಧ್ಯಕ್ಷರಾಗಿ ಬೈಕಂಪಾಡಿಯ ಬಿ.ಕೆ. ಪ್ರಕಾಶ್ ಮತ್ತು ಒಡೆಯರಬೆಟ್ಟು ಅಶೋಕ್ ಎಸ್. ಸುವರ್ಣ ಅವರು ಆಯ್ಕೆಯಾಗಿದ್ದಾರೆ. ಪ್ರಪ್ರಧಾನ ಕಾರ್ಯದರ್ಶಿಯಾಗಿ ಬಪ್ಪನಾಡು ದಿಲೀಪ್ ಕುಮಾರ್