Home Blog Left SidebarPage 98

ಛಾಯಾಗ್ರಾಹಕ ಅಶ್ವತ್ಥಾಮ ಆಚಾರ್ಯ ನಿಧನ

ಮೂಡುಬಿದಿರೆ : ಸೌತ್‌ಕೆನರಾ ಹೋಂ ಇಂಡಸ್ಟ್ರೀಸ್‌ನ ನಿವೃತ್ತ ಉದ್ಯೋಗಿ, ಕಾಳಿಕಾಂಬಾ ದೇವಸ್ಥಾನದ ಬಳಿಯ ನಿವಾಸಿ, ಸೃಜನಶೀಲ ಛಾಯಾಗ್ರಾಹಕ ಅಶ್ವತ್ಥಾಮ ಆಚಾರ್ಯ (73) ಬುಧವಾರ ರಾತ್ರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.ಹವ್ಯಾಸಿ ಛಾಯಾಗ್ರಾಹಕರಾಗಿದ್ದ ಅವರು ನಿವೃತ್ತಿಯ ಬಳಿಕ ಮೂಡುಬಿದಿರೆಯಲ್ಲಿ ದುರ್ಗಾ

ಆರದಿರಲಿ ಬದುಕು ಆರಾಧನ ತಂಡದಿಂದ ಜೂನ್ ತಿಂಗಳ 99 ನೇ ಯೋಜನೆಯ ಸಹಾಯಧನ ಹಸ್ತಾಂತರ

ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ 99 ನೇ ಯೋಜನೆಯ ಸಹಾಯ ಹಸ್ತ ವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಕ್ಕಾರು ನಿವಾಸಿ ಯಾದ ವಿನೋದ್ ಅವರಿಗೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಅವರಿಗೆ ಮಾನವಿಯತೆ ನೆಲೆಯಲ್ಲಿ ಅವರ ಕಷ್ಟವನ್ನು ಮನಗಂಡು ಆರದಿರಲಿ ಬದುಕು ಆರಾಧನ ತಂಡದಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನಲ್ಲಿ ಇಪ್ಪತ್ತೈದು ಸಾವಿರ ರೂಪಾಯಿ ಗಳ ಸಹಾಯಧನ ನೀಡಲಾಯಿತು. ಈ

ನಡೂರು ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆ

ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆ ನಡೂರು ಜುಲೈ 1 ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯ್ತು. ಆಡಳಿತ‌ ಮಂಡಳಿಯ ಅಧ್ಯಕ್ಷರಾದ ಮನೋಹರ್ ಹೆಗ್ಡೆ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರಾತ್ಯಕ್ಷತೆ ಮೂಲಕ ತೋರಿಸಲಾಯ್ತು. ಅಲ್ಲದೆ ವೈದ್ಯರ ಸೇವೆಯು ಅಮೂಲ್ಯವಾದುದು ಹಾಗೂ ಆಸ್ಪತ್ರಗಳು ಸಾರ್ವಜನಿಕ ಆಸ್ತಿ ಎಂಬುವುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲಾಯ್ತು ಎಂದರು. ಈ ಸಂದರ್ಭದಲ್ಲಿ

ಕೋಝಿಕ್ಕೋಡ್ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಅಡ್ವಾನ್ಸ್‌ಡ್ ರೋಬೋಟಿಕ್ ಲೇಸರ್ ಯುರೋಲಜಿ ಸೆಂಟರ್ ಕಾರ್ಯಾರಂಭ

ಕೋಝಿಕ್ಕೋಡ್: ಇಲ್ಲಿನ ಪ್ರಸಿದ್ಧ ಬೇಬಿ ಮೆಮೋರರಿಯಲ್ ಹಾಸ್ಪಿಟಲ್ ನಲ್ಲಿ ನೂತನವಾಗಿ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಕಾರ್ಯಾರಂಭಗೊಂಡಿತು. ರೋಬೋಟಿಕ್ಸ್ ಸರ್ಜರಿಯಿಂದ ಹಲವು ಉತ್ತಮ ಪ್ರಯೋಜನಗಳಿವೆಯೆಂದು ಬೇಬಿ ಮೆಮೋರಿಯಲ್ ಹಾಸ್ಪಿಟಲ್ಸ್ ಗ್ರೂಪ್ ಚೇರ್ಮೆನ್ ಡಾ.ಕೆ.ಜಿ. ಅಲೆಕ್ಸಾಂಡರ್ ಹೇಳಿದರು.ಇದೇ ಸಂದರ್ಭ ಅಡ್ವಾನ್ಸ್‌ಡ್ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಅವರು ಉದ್ಘಾಟಿಸಿದರು.ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪ್ ಬೆಳವಣಿಗೆಯ

ಉಡುಪಿ: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವತಿಯಿಂದ ಪ್ರತಿಭಟನೆ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಳೆದ 2 ವರ್ಷಗಳಿಂದ ಜನರಿಗೆ ಉತ್ತಮ ಮತ್ತು ಕ್ರಿಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರವು ಹೆಚ್ಚುತ್ತಿದ್ದು, ಸ್ವಜನಪಕ್ಷಪಾತ ತುಂಬಿ ತುಳುಕುತ್ತಿದೆ.ಈ ಬಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಮತ್ತು ಮುಖಂಡರುಗಳು ರಾಜ್ಯ ಸರ್ಕಾರದ ಮತ್ತು ಸಚಿವರುಗಳ ವಿರುದ್ಧ ಬಹಿರಂಗವಾಗಿ ಸಾಕ್ಷಿ ಸಮೇತ ಪದಾಖಲೆಗಳೊಂದಿಗೆ

ಪತ್ರಿಕಾ ದಿನಾಚರಣೆ :ಮೋಗ್ಲಿಂಗ್ ಸ್ಮಾರಕ ನಿರ್ಮಾಣವಾಗಲಿ – ಸದಾಶಿವ ಉಳ್ಳಾಲ್

ಮಂಗಳೂರು : ಕನ್ನಡದ ಪ್ರಥಮ ಪತ್ರಿಕೆ ‘ಮಂಗಳೂರ ಸಮಾಚಾರ’ ಮಂಗಳೂರಿನಲ್ಲಿ ಆರಂಭಗೊಂಡ ಹಿನ್ನೆಲೆಯಲ್ಲಿ ಪತ್ರಿಕೆಯ ಸ್ಥಾಪಕ ಸಂಪಾದಕ ಹರ್ಮನ್ ಮೋಗ್ಲಿಂಗ್ ಅವರ ಸ್ಮಾರಕ ಮಂಗಳೂರಿನಲ್ಲಿ ನಿರ್ಮಾಣವಾಗುವುದು ಅಗತ್ಯ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಅಭಿಪ್ರಾಯಪಟ್ಟರು.ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮಂಗಳೂರಿನ ಬಲ್ಮಠದ ಥೀಯೊಲಾಜಿಕಲ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ ಸಂಪಾದಕ

ಸುಳ್ಯ: ಮಂಡೆಕೋಲು ಶಾಲೆಯಲ್ಲಿ ‘ಯಕ್ಷಧ್ರುವ -ಯಕ್ಷಶಿಕ್ಷಣ’ ಯಕ್ಷಗಾನ ಶಿಕ್ಷಣ ಅಭಿಯಾನಕ್ಕೆ ಚಾಲನೆ

ಸುಳ್ಯ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಮಂಗಳೂರು ವತಿಯಿಂದ ಯಕ್ಷಗಾನ ಶಿಕ್ಷಣ ಅಭಿಯಾನ ‘ಯಕ್ಷಧ್ರುವ- ಯಕ್ಷ ಶಿಕ್ಷಣ’ ಕಾರ್ಯಕ್ರಮ ಮಂಡೆಕೋಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಮಂಡೆಕೋಲು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವಾರ ಯಕ್ಷಗಾನ ತರಬೇತಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ಅಪ್ಪಯ್ಯ‌ ಮಣಿಯಾಣಿ ಅಕ್ಕಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಡೆಕೋಲು ಶಾಲಾ‌ ಎಸ್‌ಡಿಎಂಸಿ

ಪುತ್ತೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆ ಉದ್ಘಾಟನೆ

ಪುತ್ತೂರು: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆಯು ಪುತ್ತೂರು ಮುಖ್ಯರಸ್ತೆ ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಶ್ರೀ ಲಕ್ಷ್ಮಾಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿರುವ ಮಾಜಿ ಮಂತ್ರಿ ಜೆ.ಕೃಷ್ಣ ಪಾಲೆಮಾರ್ ಮತ್ತು ಜಿ.ಎಲ್ ಗ್ರೂಪ್‌ನ ಅಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಅವರು ಉದ್ಘಾಟಿಸಿದರು. ಶ್ರೀ ಲಕ್ಷಣಾನಂದ

ದೆಹಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮೈ ಭಾರತ್ ನ ಯುವ ರಾಯಭಾರಿಯಾಗಿ ಶ್ರೀಕಾಂತ್ ಪೂಜಾರಿ‌ ಬಿರಾವು ನೇಮಕ

ಪುತ್ತೂರು: ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮ ದಲ್ಲಿ ಮೈ ಭಾರತ್ ನವದೆಹಲಿಯ ಮೈ ಭಾರತ್ ನ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲು ದಕ್ಷಿಣ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶ್ರೀಕಾಂತ್ ಪೂಜಾರಿ ಬಿರಾವು ಕರ್ನಾಟಕದಿಂದ ಆಯ್ಕೆಯಾಗಿ ಪ್ರತಿನಿದಿಸಲಿದ್ದಾರೆ.ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಮೈ ಭಾರತ್ (ನೆಹರು ಯುವ ಕೇಂದ್ರ) ನವದೆಹಲಿ ಇದರ ವತಿಯಿಂದ ದೇಶದ ಪ್ರತಿ ರಾಜ್ಯದಿಂದ 15 ವರ್ಷ ದಿಂದ 28 ವರ್ಷ ವಯೋಮಿತಿ ವರೆಗಿನ

ಕೂರತ್ ತಂಜಳ್ ಉರೂಸ್ ಅನ್ನದಾನ… ನಿರೀಕ್ಷೆಗೂ ಮೀರಿ ಹರಿದು ಬರುತ್ತಿರುವ ಜನಸಾಗರ

ಪುತ್ತೂರು: ಖುರತುಸ್ಸಾದಾತ್ ಕೂರತ್ ತಂಜಳ್ ಉರೂಸ್ ಪ್ರಯುಕ್ತ ಜೂ.29ರಂದು ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕ ಅನ್ನದಾನ ವಿತರಣೆ ನಡೆಯುತ್ತಿದ್ದು ರಾಜ್ಯದ ವಿವಿಧ ಕಡೆಗಳಿಂದ ಮತ್ತು ಕೇರಳದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅನ್ನದಾನ ಸ್ವೀಕರಿಸುತ್ತಿದ್ದಾರೆ.ಬೆಳಗ್ಗಿನಿಂದಲೇ ಕೂರತ್‌ನಲ್ಲಿ ಜನರು ಕಿಕ್ಕಿರಿದು ಸೇರಿದ್ದು, ಮದ್ಯಾಹ್ನದ ವೇಳೆಯಂತೂ ಸವಣೂರುವರೆಗೂ ಟ್ರಾಫಿಕ್ ಜಾಂ ಉಂಟಾಗಿತ್ತು. ಸ್ವಯಂ ಸೇವಕರು ಮತ್ತು ಪೊಲೀಸರು ಟ್ರಾಫಿಕ್ ಕಂಟ್ರೋಲ್