ಬೈಂದೂರು : ಜೇಸಿಐ ಉಪ್ಪುಂದ ಸುಪ್ರೀಮ್ ಜೇಸಿ ಸಪ್ತಾಹ- 2025 ಸಪ್ತ ಸಂಭ್ರಮ

ಜೇಸಿಐ ಉಪ್ಪುಂದ ಸುಪ್ರೀಮ್ ಜೇಸಿ ಸಪ್ತಾಹ- 2025-ಸಪ್ತ ಸಂಭ್ರಮ ನಾಗೂರು ಶ್ರೀಕೃಷ್ಣ ಲಲಿತಕಲಾ ಮಂದಿರ ನಾಗೂರಿನಲ್ಲಿ ಸಂಭ್ರಮದಲ್ಲಿ ನಡೆಯಿತು.
ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಟ್ರಸ್ಟಿ, ಉದ್ಯಮಿ ತ್ರಾಸಿ ಸುಧಾಕರ ಆಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಇಂದಿನ ಯುವ ಜನತೆ ಸುಂದರ ಸಮಾಜ ನಿರ್ಮಾಣದ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡಬೇಕು. ಎಲ್ಲವನ್ನೂ ಕೊಟ್ಟ ಸಮಾಜದ ಋಣವನ್ನು ತೀರಿಸುವ ನೆಲೆಯಲ್ಲಿ ಜಿಸಿಐನಂತಹ ಸಂಘಟನೆಗೆ ಸೇರುವ ಮೂಲಕ ಸಮಾಜಮುಖಿ ಕಾರ್ಯಗಳು ನಡೆಸಬೇಕು. ಉತ್ತಮ ಜನರ ಸಹವಾಸ, ಗೆಳೆತನ ಬೆಳೆಸಿಕೊಂಡರೆ ಮಾತ್ರ ಜೀವನ ಉತ್ತಮವಾಗಲು ಸಾಧ್ಯ ಎಂದರು.
ಜೇಸಿಐ ಸುಪ್ರೀಮ್ ಉಪ್ಪುಂದ ಅಧ್ಯಕ್ಷರಾದ ಜ್ಯೋತಿ ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಸಂಸ್ಥೆಯಿಂದ ಶೈಕ್ಷಣಿಕ ಸಾಮಾಜಿಕ ಹಾಗೂ ಹಲವಾರು ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಪ್ರತಿಯೊಂದು ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂದಿದೆ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಉಪ್ಪುಂದ ಪ್ರಕಾಶ ಭಟ್ ಇವರಿಗೆ ಉದ್ಯಮರತ್ನ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಕ್ಕಾಡಿ ಜಗದೀಶ ಪೂಜಾರಿ ಇವರಿಗೆ ಸಹಕಾರಿರತ್ನ, ಜೆಸಿಐ ಉಪ್ಪುಂದ ಸುಪ್ರಿಂ ನಿಕಟಪೂರ್ವಾಧ್ಯಕ್ಷೆ ಸುಮಾ ಆಚಾರ್ಯ ಇವರಿಗೆ ಕಮಲಪತ್ರ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್, ರಾಜ್ಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ, ಸಾಮಾಜಿಕ ಸಂಘಟಕ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಇವರಿಗೆ ಸಾಧನಾಶ್ರೀ, ಜೆಸಿಐ ಉಪ್ಪುಂದ ಸುಪ್ರಿಂ ಉಪಾಧ್ಯಕ್ಷ ರವಿರಾಜ್ ಪೂಜಾರಿ ಇವರಿಗೆ ಯುವರತ್ನ ಪ್ರಶಸ್ತಿ ಪ್ರದಾನಿಸಲಾಯಿತು.
ಉಪ್ಪುಂದ-ಬೈಂದೂರು ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ್ ಡಿ. ಆರ್. ಇವರನ್ನು ಸನ್ಮಾನಿಸಲಾಯಿತು.
ಸಪ್ತಾಹದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ಉದ್ಯಮಿ ರಘುರಾಮ ಕೆ. ಪೂಜಾರಿ ಶಿರೂರು, ಲೇಡಿ ಜೇಸಿ ಅಧ್ಯಕ್ಷೆ ವೀಣಾ ಆಚಾರ್ಯ, ಜತೆಕಾರ್ಯದರ್ಶಿ ಗೀತಾ ಶೆಟ್ಟಿ, ಜೆಜೆಸಿ ಅಧ್ಯಕ್ಷೆ ಪಂಚಮಿ ಆಚಾರ್ಯ ಇದ್ದರು. ಜೆಸಿಐ ಉಪ್ಪುಂದ ಸುಪ್ರಿಂ ಪೂರ್ವಾಧ್ಯಕ್ಷ ಮಂಜುನಾಥ ದೇವಾಡಿಗ ವಂದಿಸಿದರು.
