Home ಕರಾವಳಿ Archive by category ಬಂಟ್ವಾಳ (Page 37)

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದ ಶಾಸಕ ರಾಜೇಶ್ ನಾಯಕ್

ಬಂಟ್ವಾಳ: ಉಡುಪಿ ಜಿಲ್ಲೆಯ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ ನಿಂದ ಕೇರಳದ ಕಾಸರಗೋಡಿಗೆ ವಿದ್ಯುತ್ ವಿತರಣಾ ಲೈನ್ ಮತ್ತು ಟವರ್ ನಿರ್ಮಾಣದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ ಭೂಮಿ ಕಳೆದುಕೊಳ್ಳಲಿರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಹಾಗೂ ಪರಿಹಾರದ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಗಮನ

ಬಂಟ್ವಾಳದ ಹೆಗಡೆಗುಳಿಯಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯ ರಕ್ಷಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯೊಂದನ್ನು ಬಂಟ್ವಾಳದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಲು ಯಶಸ್ವಿಯಾಗಿದೆ. ಶುಕ್ರವಾರ ತಡರಾತ್ರಿವರೆಗೂ ಈ ಕಾರ್ಯಾಚರಣೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಉಪಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ ಮಾರ್ಗದರ್ಶನದಲ್ಲಿ ನಡೆದಿದ್ದು. ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ

ದಡ್ಡಲಕಾಡು ಶಾಲೆಯ ನೂತನ ವಿದ್ಯಾರ್ಥಿ ಮಂಡಲ ರಚನೆ

ಬಂಟ್ವಾಳ: ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಮಂತ್ರಿ ಮಂಡಲ ರಚಿಸಲಾಯಿತು. ನೂತನ ವಿದ್ಯಾರ್ಥಿ ನಾಯಕರು, ವಿರೋಧ ಪಕ್ಷ ನಾಯಕರು ಹಾಗೂ ಮಂತ್ರಿಮಂಡಲದ ಸಚಿವರಿಗೆ ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಪ್ರಮಾಣ ವಚನ ಭೋದಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಮಂತ್ರಿ ಮಂಡಲದ ಸಚಿವರಿಗೆ ಶುಭ ಕೋರಿ ಮಾತನಾಡಿ ಶಾಲೆಯ ಆಗು ಹೋಗುಗಳ ಬಗ್ಗೆ ಮಂತ್ರಿಮಂಡಲದ ಸಚಿವರು ಗಮನ ಹರಿಸುವಂತೆ

ಫರಂಗಿಪೇಟೆಯ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

ಬಂಟ್ವಾಳ: ಫರಂಗಿಪೇಟೆಯ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ರೋಟರಿ ಕ್ಲಬ್ ಫರಂಗಿಪೇಟೆಯ ಸಹಕಾರದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಫರಂಗಿಪೇಟೆಯ ಅಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರುಗುತ್ತು ಶುಭಹಾರೈಸಿದರು. ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಸದಸ್ಯ ಎ.ಕೆ.ಗಿರೀಶ್ ಶೆಟ್ಟಿ, ಆಡಳಿತ ಮಂಡಳಿಯ ಕಾರ್ಯದರ್ಶಿ ಜಯರಾಂ ಶೇಖ, ಶ್ರೀರಾಮ ವಿದ್ಯಾ ಸಂಸ್ಥೆಯ ಸಂಚಾಲಕ ಗೋವಿಂದ ಶೆಣೈ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ

ಕ್ಯಾಟರಿಂಗ್ ಪಿಕ್‍ಅಪ್ ವಾಹನ ಅಪಘಾತ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

ಬಂಟ್ವಾಳ: ಕ್ಯಾಟರಿಂಗ್ ಆಹಾರ ಸಾಗಾಟದ ಪಿಕ್ ಅಪ್ ವಾಹನವೊಂದರ ವೀಲ್ ಎಂಡ್ ತುಂಡಾದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ತುಂಬೆ ಸಮೀಪದ ರಾಮಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಮತ್ತು ಆಶಿತ್ (21) ಮೃತಪಟ್ಟಿದ್ದಾರೆ. ಸಿಂಚನ್ ಮತ್ತು ಸುದೀಪ್ ಗಾಯಗೊಂಡಿದ್ದಾರೆ. ಇವರ ಪೈಕಿ ಓರ್ವ ಗಂಭೀರ ಗಾಯಗೊಂಡಿದ್ದು ಮಂಗಳೂರು ಖಾಸಗಿ

ಚಾಲಕನ ನಿಯಂತ್ರಣ ತಪ್ಪಿ ಆಳಕ್ಕೆ ಉರುಳಿದ ಗ್ಯಾಸ್ ಟ್ಯಾಂಕರ್

ವಿಟ್ಲ: ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದು ಹೆದ್ದಾರಿಯ ಬದಿಯ 30 ಅಡಿ ಅಳಕ್ಕೆ ಉರುಳಿ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ.ಬೆಂಗಳೂರು ಕಡೆಯಿಂದ ಗ್ಯಾಸ್ ಖಾಲಿ ಮಾಡಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯಿಂದ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಪ್ರಪಾತದಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದು, ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಮಾಣಿ-

ಕಾರಿಂಜ ದೇವಸ್ಥಾನದ ಒಳಗೆ ಪಾದರಕ್ಷೆ ಹಾಕಿ ಪಾವಿತ್ರ್ಯತೆಗೆ ಧಕ್ಕೆ

ಕಾರಿಂಜ ದೇವಸ್ಥಾನದ ಒಳಗೆ ಪಾದರಕ್ಷೆ ಹಾಕಿಕೊಂಡು ಪ್ರವೇಶ ಮಾಡಿರುವುದು ದೇವಳದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ಇದು ಭಕ್ತರ ಮನಸ್ಸಿಗೂ ಬೇಸರ ತರುವ ವಿಚಾರವಾಗಿದ್ದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಪೋಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಶಾಸಕರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಅಂಗಣಕ್ಕೆ ಅನ್ಯ ಧರ್ಮದ ಯವಕರ ಗುಂಪು ಪ್ರವೇಶಿಸಿ ದೇವಸ್ಥಾನದ ಪಾವಿತ್ರ್ಯತೆಗೆ

ಬಡ ದಲಿತ ಕುಟುಂಬಕ್ಕೆ ಮನೆ ನಿರ್ಮಿಸಿ‌ ಕೊಡುವಂತೆ ಒತ್ತಾಯಿಸಿ ಮನವಿ

ಬಂಟ್ವಾಳ : ಬುಡೋಳಿ ಗ್ರಾಮದ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕೇಶವ ಎಂಬವರ ಆದಿ ದ್ರಾವಿಡ ದಲಿತ ಜನಾಂಗಕ್ಕೆ ಸೇರಿದ ಕುಟುಂಬವು ಮನೆ ಕಳೆದುಕೊಂಡು ಗುಡಿಸಲಿನಲ್ಲಿ‌ ವಾಸ ಮಾಡುತ್ತಿದ್ದು ಗ್ರಾಮ ಪಂಚಾಯತ್ ನಿಂದ ವಸತಿ ಯೋಜನೆಯಡಿಯಲ್ಲಿ ಮನೆ ಸಿಗುವ ಭರವಸೆ ನೀಡಿ ಹಳೆಯ ಮನೆಯನ್ನು ಕೆಡವಲಾಗಿದ್ದು ಈಗ ಯಾವುದೇ ಯೋಜನೆ ಕೂಡಾ ಸಿಗದೆ ಗುಡಿಸಲಿನಲ್ಲಿ ಈ ಕುಟುಂಬ ಜೀವನ ನಡೆಸುತ್ತಿದ್ದು ಭಾಗ್ಯಜ್ಯೋತಿ ಯೋಜನೆಯಡಿ ಇದ್ದ ವಿದ್ಯುತ್ ಸಂಪರ್ಕ ಕೂಡಾ ಈಗ ಕಡಿತ

ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ ಶ್ರೀ ವ್ಯಾಘ್ರ ಚಾಮುಂಡಿ ದೈವದ ದೈವಸ್ಥಾನದ ಶಿಲಾನ್ಯಾಸ

ಬಂಟ್ವಾಳ: ನಾವೂರು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಹೊರಾಂಗಣದ ನೈಋತ್ಯ ದಿಕ್ಕಿನಲ್ಲಿ ನೂತನವಾಗಿ ನಿರ್ಮಿಸಲ್ಪಡುವ ಶ್ರೀ ವ್ಯಾಘ್ರ ಚಾಮುಂಡಿ ದೈವದ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆಯಿತು. ಬೆಳಗ್ಗಿನ 10.15 ರ ಧನುರ್ಲಗ್ನ ಸುಮುಹೂರ್ತದಲ್ಲಿ ತಂತ್ರಿಗಳಾದ ಶ್ರೀ ಪಾದ ಪಾಂಗಣ್ಣಾಯ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಶಿಲಾನ್ಯಾಸ ನೆರೆವೇರಿಸಿದರು. ಈ ಸಂದರ್ಭ ದೇವಸ್ಥಾನದ ಅರ್ಚಕರಾದ ವೆಂಕಟದಾಸ್ ಭಟ್,

ಸಿಲಂಬಂ ಸ್ಪರ್ಧೆಯಲ್ಲಿ ವೆನಿಲ್ಲಾ ಮಣಿಕಂಠರವರಿಗೆ ಚಿನ್ನದ ಪದಕ

ಬಂಟ್ವಾಳ: ವಿಶಾಖಪಟ್ಟಂನಲ್ಲಿ ಅ.21 ಮತ್ತು 22 ರಂದು ನಡೆದ ರಾಷ್ಟ್ರೀಯ ಮಟ್ಟದ ಪ್ರಾಚೀನ ಯುದ್ಧ ವಿದ್ಯೆ ಸಿಲಂಬಂ ಸ್ಪರ್ಧೆಯಲ್ಲಿ ವೆನಿಲ್ಲಾ ಮಣಿಕಂಠ ಅವರು ಭಾಗವಹಿಸಿ ಡಬಲ್ ಸ್ಟಿಕ್ ಹಾಗೂ ವಾಲ್ ವೀಚು ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಅಲ್ಲದೆ ಮುಂದಿನ ಅಂತರಾಷ್ಟೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವೆನಿಲ್ಲಾ ಮಣಿಕಂಠ ಅವರು ಪ್ರಸಕ್ತ ಮಂಗಳೂರಿನ ಎನ್‌ಐಟಿಕೆಯಲ್ಲಿ ಎಂಟೆಕ್ ವ್ಯಾಸಂಗ ಮಾಡಿತ್ತಿದ್ದು ರಾಜೇಶ್