ಬಂಟ್ವಾಳ: ನೀರಿನ ಬಿಲ್ ಗೊಂದಲ, ಕ್ರಿಯಾಯೋಜನೆ ತಯಾರಿಕೆಯಲ್ಲಿ ತಾರತಮ್ಯ, ಪೌರಕಾರ್ಮಿಕ ದಿನಾಚರಣೆ ಊಟದ ವಿಚಾರ, ಅಸಂವಿಧಾನಿಕ ಪದ ಬಳಕೆ.. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜಟಾಪಟಿಗೆ ಕಾರಣವಾದ ಮುಖ್ಯಾಂಶಗಳು.. ಆದ್ಯತೆಯ ಕಾಮಗಾರಿ ಎಂದು ಹೇಳಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕಳೆದ ಒಂದು
ಬಂಟ್ವಾಳ: ನಿಲ್ಲಿಸಿದ್ದ ಲಾರಿ ಚಲಿಸಿ ಚಾಲಕ ಮೃತಪಟ್ಟ ಘಟನೆ ಬಿ.ಸಿ.ರೋಡಿನ ಕೈಕಂಬ ಸಮೀಪದ ಪರ್ಲಿಯಾ ಕೊಡಂಗೆ ಎಂಬಲ್ಲಿ ವೇಳೆ ನಡೆದಿದೆ. ಬಾಗಲಕೋಟ ಜಿಲ್ಲೆಯ ಜಾವೂರು ನಿವಾಸಿ ಬಾಲಪ್ಪ ಎ.ಜಾವೂರು ಮೃತಪಟ್ಟ ವ್ಯಕ್ತಿ.ಬಾಲಪ್ಪ ಅವರು ಇಲ್ಲಿನ ರಸ್ತೆ ಕಾಮಗಾರಿ ಗುತ್ತಿಗೆ ಸಂಸ್ಥೆಯೊಂದರಲ್ಲಿ ಕಳೆದ ಕೆಲ ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪರ್ಲಿಯಾ ಕೊಡಂಗೆ ಎಂಬಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು ಪ್ರಸ್ತುತ ಕಾಮಗಾರಿ
ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಲು ಆಗ್ರಹಿಸಿ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ಐತಿಹಾಸಿಕ ಚಳುವಳಿಗೆ ಸೆ. 26ನೇ ತಾರೀಖಿಗೆ ಹತ್ತು ತಿಂಗಳು ತುಂಬಲಿರುವ ಹಿನ್ನಲೆಯಲ್ಲಿ ಸಂಯುಕ್ತ ಹೋರಾಟ ಕಿಸಾನ್ ಮೋರ್ಚಾ ಸೆ.27ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು ಅಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಬಳಿಯಿಂದ
ಬಂಟ್ವಾಳ: ದೇಶದಲ್ಲಿ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿದ್ದು ಇದನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ ಪೂಜಾರಿ ಆರೋಪಿಸಿದರು. ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪೆಟ್ರೋಲ್ ಡೀಸೆಲ್ ಕಚ್ಛಾ ಸಾಮಾಗ್ರಿಗಳ ದರ ವಿದೇಶದಲ್ಲಿ ಸಂಪೂರ್ಣ ಇಳಿಕೆಯಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು
ಮಂಗಳೂರು: ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ ಮಂಗಳೂರು ಇತ್ತೀಚಿಗೆ ಮಂದಿರದಲ್ಲಿ ನಡೆದ ಕಳವು ಪ್ರಕರಣ, ಗರ್ಭಗುಡಿಯ ಪಾವಿತ್ರ್ಯತೆಗೆ ದಕ್ಕೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿವಂತೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳು ಸೇರಿ ಮಂಗಳೂರು ನಗರದ ಹೊರವಲಯದ ನೀರುಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ವಿಹೆಚ್‍ಪಿ ಮುಖಂಡ ಶರಣ್ ಪಂಪ್ವೆಲ್ ಮಾತನಾಡಿ, ಭಜನಾ ಮಂದಿರ ಕೇವಲ ಭಜನ ಕೇಂದ್ರ ಅಲ್ಲ ಅದು
ನಂಜನಗೂಡಿನಲ್ಲಿ ದೇವಸ್ಥಾನ ಕೆಡವಿರುವುದಕ್ಕೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರವೇ ನೇರ ಹೊಣೆ, 2008ರಲ್ಲಿ ಆದ ಸುಪ್ರೀ ಕೋರ್ಟ್ ಆದೇಶವನ್ನು ಪ್ರಯೋಗಕ್ಕೆ ಒಳಪಡಿಸಿದ್ದು ಬಿಜೆಪಿ ಸರಕಾರ, ಇದು ಸರಕಾರ ಪ್ರಾಯೋಜಿತ ಕಾರ್ಯಕ್ರಮ ಎಂದು ಎಂದು ಮಾಜಿ ಸಚಿವ ಬಿ.ರಮನಾಥ ರೈ ಆಕ್ರೋಶ ವ್ಯಕತಪಡಿಸಿದರು. ರಾಜ್ಯ ಬಿಜೆಪಿ ಸರಕಾರ ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸಿದ ಹಾಗೂ ಅನೇಕ ದೇವಸ್ಥಾನ, ದೈವಸ್ಥಾನ ಮತ್ತು ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವುದರ ವಿರುದ್ದ
ಬಂಟ್ವಾಳದ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ ಆಚರಣೆ ಸಂಪನ್ನಗೊಂಡಿತು. ಪ್ರತಿ ವರ್ಷ ಕನ್ಯಾ ಸಂಕ್ರಮಣದ ಮರು ದಿವಸ ನಡೆಯುವ ತೆನೆ ಹಬ್ಬ ಆಚರಣೆಗಾಗಿ ಕಾರಿಂಜದಿಂದ ಸುಮಾರು 9ಕಿ.ಮೀ. ದೂರವಿರುವ ಸರಪಾಡಿ ಹಲ್ಲಂಗಾರು ಗದ್ದೆಯೊಂದರಿಂದ ತೆನೆಗಳನ್ನು ತರಲಾಗುತ್ತಿದ್ದು, ಈ ಬಾರಿಯೂ ಸಂಪ್ರದಾಯದಂತೆ ನೆರವೇರಿಸಲಾಯಿತು. ಸೂರ್ಯೋದಯದ ಮುಂಚೆ ಶ್ರೀ ಕ್ಷೇತ್ರ ಕಾರಿಂಜದಿಂದ ವಾದ್ಯ ವೃಂದ ಸಹಿತ ಅರ್ಚಕರು, ತಂತ್ರಿಗಳು,
ಪರಿಸರ ಪ್ರೇಮಿಯೋರ್ವರು ಸಾರ್ವಜನಿಕವಾಗಿ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ದುಷ್ಕರ್ಮಿಗಳು ಕಿತ್ತೆಸೆದ ಘಟನೆ ಬಡಗಕಜೆಕಾರು ಗ್ರಾಮದ ದೆತ್ತಿಮಾರು ಎಂಬಲ್ಲಿ ಸಂಭವಿಸಿದ್ದು, ಈ ಬಗ್ಗೆ ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಇನ್ನು ರಾತೋರಾತ್ರಿ ಸ್ಥಳೀಯ ಐವರು ವ್ಯಕ್ತಿಗಳು ಕಿತ್ತೆಸೆದು ಧ್ವಂಸಗೊಳಿಸಿರುವುದಾಗಿ ಮಾರ್ಕ್ ಸೇರಾ ಅವರು ದೂರು ನೀಡಿದ್ದಾರೆ. ನೆಟ್ಟ ಗಿಡಗಳನ್ನು ಕಿತ್ತು ಬಿಸಾಕಿದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಂಡನೆ
ಕೇಂದ್ರ ಸರಕಾರ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಬಂದ್ ಸೆಪ್ಟಂಬರ್ 27ರಂದು ಬಿ.ಸಿ. ರೋಡ್‌ನಲ್ಲಿ ನಡೆಯಲಿದೆ. ಕೇಂದ್ರ ಸರಕಾರ ತಂದಿರು ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಬೆಳೆಗಳಿಗೆ ಕನಿಷ್ಟ ಬೆಂಬಲಬೆಲೆಯನ್ನು ಕಾನೂನಾತ್ಮಕ ಗೊಳಿಸಲು ಆಗ್ರಹಿಸಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರು ನಿರಂತರ ಹೋರಾಟಕ್ಕೆ ಸೆಪ್ಟೆಂಬರ್ 26ಕ್ಕೆ 10 ತಿಂಗಳು ತುಂಬುತ್ತದೆ.ಈ ನಿಟ್ಟಿನಲ್ಲಿ ಸಂಯುಕ್ತ
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಖಾಸಗಿ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ನಡುವೆ ಬುಡೋಳಿಯ ಬೊಳ್ಳುಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ.ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಸುಮಾರು ೫ ಕಿ.ಮೀ ದೂರದಲ್ಲಿ ಲಾರಿಯನ್ನು ಬೆನ್ನಟ್ಟಿದ ತಂಡ


















