Home Archive by category ರಾಜ್ಯ (Page 76)

ಹಾಸನ ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್‌ಡೌನ್: ಸಚಿವ ಗೋಪಾಲಯ್ಯ

ಹಾಸನ ಜಿಲ್ಲೆಯಲ್ಲಿ ಜೂನ್ 14 ರ ನಂತರವೂ ಒಂದು ವಾರ ಲಾಕ್ಡೌನ್ ಮುಂದುವರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ 16.97 ಇರುವುದರಿಂದ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಒಂದು ವಾರ

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ತಡೆಗೆ ಸಚಿವ ಕೋಟ ಆದೇಶ

ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಈ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಬಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮಾಧ್ಯಮದ ಮೂಲಕ ಹೇಳಿಕೆಯೊಂದನ್ನು ನೀಡಿದ್ದು,

ವೃತ್ತಿಪರ ಕೋರ್ಸ್‌ಗೆ ಸಿಇಟಿ ಅಂಕ ಮಾನದಂಡ : ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಲಾಗುವ ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಆಗಸ್ಟ್ 28 ಹಾಗೂ ಆಗಸ್ಟ್ 29ರಂದು ಸಿಇಟಿ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಇಂದು ನಡೆದ ಸಭೆ ಬಳಿಕ ಮಾತನಾಡಿದ ಅವರು, ಜೂನ್ 15ರಿಂದ ಸಿಇಟಿ ನೋಂದಣಿ ಆರಂಭವಾಗಲಿದೆ. ಆಗಸ್ಟ್ 28 ಹಾಗೂ ಆಗಸ್ಟ್ 29ರಂದು ಸಿಇಟಿ ನಡೆಯಲಿದ್ದು, ಮೊದಲ ದಿನ ಗಣಿತ, ಜೀವಶಾಸ್ತ್ರ ಪರೀಕ್ಷೆಗಳು ನಡೆಯುತ್ತದೆ. ಎರಡನೇ ದಿನ ರಸಾಯನಶಾಸ್ತ್ರ,

ಕೇಂದ್ರ ಸಚಿವ ಡಿವಿಎಸ್ ಭೇಟಿಯಾದ ಸಚಿವ ಕೋಟ: ಲಸಿಕೆ ಕುರಿತು ಚರ್ಚೆ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಕೋವಿಡ್ – 19 ಲಸಿಕೆ ಕೊರತೆ ಕುರಿತು ಚರ್ಚೆ ನಡೆಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋವಿಡ್ – 19 ಲಸಿಕೆ ಕೊರತೆ ಹಿನ್ನಲೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡರನ್ನು ದಕ್ಷಿಣ ಕನ್ನಡ ಜಿಲ್ಲಾ

ಕೋವಿಡ್ ವಾರಿಯರ್ಸ್‍ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ : ಸಚಿವ ಶ್ರೀಮಂತ್ ಪಾಟೀಲ್

ಬೆಳಗಾವಿ: ಸಚಿವ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಕೊರೊನಾ ವಾರಿಯರ್ಸ್‍ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಅಥಣಿ ಸುಗರ್ಸ್ ಕಾರ್ಖಾನೆ ಆವರಣದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ ವಿತರಿಸಲಾಯಿತು. ಸಚಿವರ ಆಪ್ತ ಕಾರ್ಯದರ್ಶಿಯಾದ ಸಚಿನ್ ದೇಸಾಯಿ ಅವರು ಮಾತನಾಡಿ,ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಸ್ಯಾನಿಟೈಜರ್

ಬಿಜಾಪುರದ ದೇವರಹಿಪ್ಪರಗಿಯಲ್ಲಿ ಅಕ್ರಮ ಮದ್ಯ ವಶ : ಅಬಕಾರಿ ಪೊಲೀಸರ ಕಾರ್ಯಾಚರಣೆ

ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ ಅಕ್ರಮ ಮಧ್ಯವನ್ನು ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಯಲಗೋಡ ಗ್ರಾಮದಲ್ಲಿ ಬಸ್ ನಿಲ್ದಾಣ ಹತ್ತಿರ ಇರುವ ಅಂಬಿಗರ ಚೌಡಯ್ಯ ಸರ್ಕಲ್ ಹತ್ತಿರ ಪತ್ರಾಸಡಿನಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 26 ಲೀಟರ್ ಮದ್ಯವನ್ನು ವಶಪಡಿಸಿ ಕೊಳ್ಳಲಾಗಿದೆ. ಅರೋಪಿ ರಾಜು ಬಾಷಾಸಾಬ ಎಂಬಾ ತಲೆಮರೆಸಿಕೊಂಡಿದ್ದಾನೆ. ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಮಾರ್ಗದರ್ಶನದಲ್ಲಿ ಹಾಗೂ ವಿಜಯಪುರದ ಅಬಕಾರಿ

ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ 1 ಲಕ್ಷ ಕೋವಿಡ್-19 ಉಚಿತ ಲಸಿಕೆ ಕೊಡುಗೆ

ಬೆಂಗಳೂರು: ವಿಶ್ವದಾದ್ಯಂತ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಹೆಚ್ಚು ರೀಟೇಲ್ ಔಟ್‌ಲೆಟ್‌ಗಳ ಜಾಲವನ್ನು ಹೊಂದಿರುವ ಆಭರಣ ರೀಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದೆ. ಇದರ ಅಂಗವಾಗಿ ಸಂಸ್ಥೆಯು 1,೦೦,೦೦೦ ಉಚಿತ ಕೋವಿಡ್-19 ಲಸಿಕೆಗಳನ್ನು ಕೊಡುಗೆ ನೀಡಲು ನಿರ್ಧರಿಸಿದರು. ಆಭರಣ ತಯಾರಕರು, ಸಿಬ್ಬಂದಿ, ಹೂಡಿಕೆದಾರರು ಮತ್ತು ಅವರ ಕುಟುಂಬ ಸದಸ್ಯರಿಗಲ್ಲದೇ

ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ 1 ಲಕ್ಷ ಕೋವಿಡ್-19 ಉಚಿತ ಲಸಿಕೆ ಕೊಡುಗೆ

ಬೆಂಗಳೂರು: ವಿಶ್ವದಾದ್ಯಂತ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಹೆಚ್ಚು ರೀಟೇಲ್ ಔಟ್‌ಲೆಟ್‌ಗಳ ಜಾಲವನ್ನು ಹೊಂದಿರುವ ಆಭರಣ ರೀಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದೆ. ಇದರ ಅಂಗವಾಗಿ ಸಂಸ್ಥೆಯು 1,೦೦,೦೦೦ ಉಚಿತ ಕೋವಿಡ್-19 ಲಸಿಕೆಗಳನ್ನು ಕೊಡುಗೆ ನೀಡಲು ನಿರ್ಧರಿಸಿದರು. ಆಭರಣ ತಯಾರಕರು, ಸಿಬ್ಬಂದಿ, ಹೂಡಿಕೆದಾರರು ಮತ್ತು ಅವರ ಕುಟುಂಬ ಸದಸ್ಯರಿಗಲ್ಲದೇ

ನಿಷೇಧಿತ ಮಾದಕ ವಸ್ತು ಸಾಗಾಟ ಪ್ರಕರಣ- ಮೂವರ ಬಂಧನ

ಕೇರಳ ರಾಜ್ಯಕ್ಕೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.  ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ನಿಷೇಧಿತ ಮಾದಕ ವಸ್ತು ಅಕ್ರಮ ಸಾಗಾಟದ ಖಚಿತ ಮಾಹಿತಿಯ ಮೇರೆಗೆ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಬಂಧಿತರಿಂದ 170 ಗ್ರಾಂ ತೂಕದ ಸುಮಾರು 10,20,000 ರೂಪಾಯಿ ಮೌಲ್ಯದ

ಸಾರ್ವಜನಿಕ ಸ್ಥಳದಕ್ಕೆ ತ್ಯಾಜ್ಯ ಎಸೆದವರ ವಿರುದ್ಧ ಕ್ರಮ : ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ

ಹೆದ್ದಾರಿ ಪಕ್ಕದಲ್ಲಿ ಕೋಳಿ ತ್ಯಾಜ್ಯ ಎಸೆದು, ಗ್ರಾಪಂ.ಗೆ ದಂಡ ಕಟ್ಟದಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಪ್ರಥಮ ಐದು ಸಾವಿರ ಮುಂದಿನ ಸಲ ಇಪ್ಪತ್ತೈದು ಸಾವಿರ ದಂಡ ವಿಧಿಸಿ ದಂಡ ಕಟ್ಟಲು ವಿಫಲವಾದರೆ ನನ್ನ ಗಮನಕ್ಕೆ ತನ್ನಿ ಎಂಬುದಾಗಿ ಉಡುಪಿ ಡಿ.ಸಿ. ಜಗದೀಶ್ ಹೆಜಮಾಡಿ ಗ್ರಾ.ಪಂ.ಅಧಿಕಾರಿಗಳಿಗೆ ಕಢಕ್ ಸೂಚನೆ ನೀಡಿದ್ದಾರೆ.  ಲಾಕ್‍ಡೌನ್ ಪರಿಸ್ಥಿಯನ್ನು ಪರಿಶೀಲನೆ ಮಾಡಿ ಅವ್ಯವಸ್ಥೆಯನ್ನು ಸರಿಪಡಿಸುವಂತ್ತೆ ಗ್ರಾ.ಪಂ.ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ