ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ಸಮುದ್ರದ ರಭಸಕ್ಕೆ ದೋಣಿ ಮಗಚಿ ಬಿದ್ದಿದ್ದು, ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯರಾದ ಯೋಗೇಶ್ ರವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಿಯರಾದ ಪ್ರವೀಣ್, ಉದಯ್ ಯವರ ಜೊತೆ ಸೇರಿ ಲೈಫ್ ಜಾಕೇಟ್ ನೀಡಿ ನಾಲ್ಕುರು ಮೀನುಗಾರರ
ಮಧ್ಯ ಪೋಲೆಂಡಿನ ರಾಡೊಮ್‌ನಲ್ಲಿ ಏರ್ ಶೋ ನಡೆಸಲು ಮುನ್ ತಾಲೀಮು ನಡೆಸುತ್ತಿದ್ದ ವೇಳೆ ಎಫ್- 16 ಫೈಟರ್ ಜೆಟ್ ವಿಮಾನವು ನೆಲಕ್ಕುರುಳಿದ ಪರಿಣಾಮವಾಗಿ ಪೈಲಟ್ ಸಾವು ಕಂಡರು. ಪೋಲೆಂಡ್ ಸೇನೆಯು ಪ್ರತಿ ವರುಷದಂತೆ ಏರ್ ಶೋ ನಡೆಸಲು ಪೋಲೆಂಡಿನ ರಾಡೊಮ್ ನಗರದಲ್ಲಿ ತಾಲೀಮು ನಡೆಸಿತ್ತು. ಏರ್ ಫೋರ್ಸಿನ ಎಫ್- 16 ಫೈಟರ್ ಜೆಟ್ ವಿಮಾನವು ಹಾರಾಟದ ನಡುವೆ ಕೆಳಕ್ಕುರುಳಿ ಸೇನಾ ಪೈಲಟ್ ಸ್ಥಳದಲ್ಲೇ ಸಾವು ಕಂಡರು. ಇದನ್ನು ವಿಷಾದದಿಂದ ಪೋಲೆಂಡ್ ಉಪ ಪ್ರಧಾನಿ ವ್ಲಾಡೈಸ್ಲಾವ್
ನೋಯ್ಡಾದಲ್ಲಿ ವರದಕ್ಷಿಣೆ ಬಾಕಿಗಾಗಿ ಆರು ವರುಷದ ಮಗನ ತಾಯಿಯನ್ನು ಗಂಡನ ಮನೆಯವರು ಜೀವಂತ ಸುಟ್ಟು ಕೊಂದುದರ ಸಂಬಂಧ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.ಆರು ವರುಷದ ಹುಡುಗನ ಹೇಳಿಕೆ ಹೀಗಿದೆ. ಮೊದಲು ಅವರ ಅಮ್ಮನ ಮೇಲೆ ಏನೋ ಸುರಿದರು. ಅನಂತರ ಕೆನ್ನೆಗೆ ಹೊಡೆದರು. ಅಪ್ಪ ಲೈಟರ್‌ನಿಂದ ಬೆಂಕಿ ಹಚ್ಚಿದಾಗ ಅಮ್ಮ ದಗದಗ ಬೆಂಕಿಯಲ್ಲಿ ಅರಚುತ್ತ ಸುಟ್ಟು ಹೋದಳು. ನನ್ನನ್ನು ಗಟ್ಟಿಯಾಗಿ ಮುಖ ಅಮುಕಿ ಹಿಡಿದುಕೊಂಡಿದ್ದಾರೆ. ಗಂಡನ ಮನೆಯಲ್ಲಿ ಬೆಂಕಿ ಇಡಲ್ಪಟ್ಟು
ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ವೀರೇಂದ್ರ ಮಾಲಿಕತ್ವದ ಮನೆ, ಕಚೇರಿ, ಜೂಜು ಅಡ್ಡೆಗಳು ಸೇರಿ ಇಡಿ- ಜಾರಿ ನಿರ್ದೇಶನಾಲಯವು 30 ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಶಾಸಕ ವೀರೇಂದ್ರ ಮತ್ತು ಅವರ ಸಹೋದರ ಬೆಟ್ಟಿಂಗ್ ಜಾಲ ನಡೆಸುತ್ತಿರುವುದಾಗಿ ಹೇಳಲಾಗಿದೆ. ಗೋವಾದಲ್ಲಿ ಕ್ಯಾಸಿನೋ ಹೊಂದಿರುವುದಾಗಿಯೂ, ಕ್ಯಾಸಿನೋಗಳ ಪಾಲುದಾರಿಕೆ ಹೊಂದಿರುವುದಾಗಿಯೂ, ಜೂಜು ಅಡ್ಡೆಗಳ ಮಾಲಕತ್ವ ಹೊಂದಿರುವುದಾಗಿಯೂ ಹೇಳಲಾಗುತ್ತಿದೆ. ಜಾರಿ
ಬೀದಿ ನಾಯಿಗಳು ಮತ್ತೆ ಬೀದಿಗೆ ಬಂದು ತಿರುಗಾಡಬಹುದು ಆದರೆ ಬೀದಿಯಲ್ಲಿ ಬೀದಿ ನಾಯಿಗಳಿಗೆ ತಿನಿಸು ಕೊಡುವುದು ಅಪರಾಧ ಎಂದು ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ಬದಲಿಸಿ ತೀರ್ಪಿತ್ತಿದೆ.ಎಲ್ಲ ಬೀದಿ ನಾಯಿಗಳಿಗೆ ನಾಯಿ ಮನೆ ಕಟ್ಟುವುದು ಕಷ್ಟ ಎಂದು ದಿಲ್ಲಿಯ ಬಿಜೆಪಿ ಸರಕಾರವು ಹೇಳಿತ್ತು. ನಾಯಿ ಪ್ರಿಯರುಗಳು ಬೀದಿ ನಾಯಿಗಳ ಮೇಲೆ ಕಠಿಣ ಕ್ರಮ ಸರಿಯಲ್ಲ ಎಂದು ವಾದಿಸಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯಾ
ಮಧ್ಯ ಪ್ರದೇಶದಲ್ಲಿ ಹಂಚಿದ ಲಾಡು ಪೊಟ್ಟಣದಲ್ಲಿ ಎಲ್ಲರಿಗೂ ಎರಡು ಲಾಡು ಸಿಕ್ಕರೆ, ಒಬ್ಬ ಸಾಮಾನ್ಯನಿಗೆ ಒಂದು ಲಾಡು ಸಿಕ್ಕಿತ್ತು. ಆತನು ಮುಖ್ಯಮಂತ್ರಿಗಳ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದ; ಪಂಚಾಯತ್ ಒಂದು ಕಿಲೋ ಸಿಹಿ ತಪ್ಪು ದಂಡ ಕೊಟ್ಟಿತು.ಈ ಘಟನೆಯು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿಸ್ವಾತಂತ್ರ‍್ಯ ದಿನಾಚರಣೆಯಂದು ನಡೆದಿದೆ. ಕಮಲೇಶ್ ಕುಶ್ವಾಹನಿಗೆ ಮಾತ್ರ ಒಂದು ಲಾಡು ಕೊಡಲಾಗಿತ್ತು ಆತನು ಒಂದಿದೆ, ಎರಡು ಕೊಡಿ ಎಂದರೂ ಸಂಘಟಕರು ಕೊಟ್ಟಿಲ್ಲ. ಆತನು
ಉತ್ತರ ಪ್ರದೇಶ ರಾಜ್ಯದ ಬಹರೀಕ್‍ನ ದಾಕಿಯಾ ಗ್ರಾಮದಲ್ಲಿ ಹುಡುಗನೊಬ್ಬನನ್ನು ಹಿಡಿದ ಮೊಸಳೆಯ ಜೊತೆಗೆ ಹೋರಾಡಿ ಮಹಿಳೆಯೊಬ್ಬಳು ಮಗನನ್ನು ರಕ್ಷಿಸಿಕೊಂಡ ಸಾಹಸಗಾತೆ ನಡೆದಿದೆ.ದಾಕಿಯಾ ಗ್ರಾಮದ ವೀರೂ ಎಂಬ ಬಾಲಕನು ಕಾಲುವೆಯ ಪಕ್ಕದಲ್ಲಿ ಆಟವಾಡುತ್ತಿದ್ದ. ಆಗ ಹಾರಿ ಬಂದ ಮೊಸಳೆಯೊಂದು ಐದರ ಆ ಹುಡುಗನ್ನು ಲಬಕ್ಕ ಹಿಡಿದು ನೀರಿಗೆ ಎಳೆಯಿತು. ಹುಡುಗ ಕೂಗಿಕೊಂಡಾಗ ತಾಯಿ ಮಾಯಾ ಓಡಿ ಬಂದಿದ್ದಾಳೆ. ಏಳು ಅಡಿ ಉದ್ದದ ಮೊಸಳೆಯನ್ನ ಹಿಡಿದು ಗುದ್ದಿದ ಮಹಿಳೆ ಮಾಯಾ ಅದರ
ಶಾಸಕರೊಬ್ಬರು ತನಗೆ ಪೋಲಿ ಸಂದೇಶ ಕಳುಹಿಸಿದ್ದಾರೆಂದು ಮಲಯಾಳಂ ನಟಿ ರಿನಿ ಜಾರ್ಜ್ ಅವರು ಆನ್‍ಲೈನ್ ಸಂದರ್ಶನದಲ್ಲಿ ಮಾಡಿರುವ ಆರೋಪ ವೈರಲ್ ಆಗಿದೆ; ಬಿಜೆಪಿಯು ಕಾಂಗ್ರೆಸ್‍ನತ್ತ ಬೊಟ್ಟು ಮಾಡಿದೆ.ರಿನಿ ಜಾರ್ಜ್ ಅವರ ವೈರಲ್ ಆಗಿರುವ ಆನ್‍ಲೈನ್ ಇಂಟರ್‍ವ್ಯೂ ಪ್ರಕಾರ ಆ ಶಾಸಕ, ತಾರಾ ಹೋಟೆಲಿನಲ್ಲಿ ರೂಮ್ ಕಾದಿರಿಸಿ ಕಾಯುವೆ, ಬರಬೇಕು ಎಂದು ಹೇಳಿರುವುದಾಗಿಯೂ ವಿವರಿಸಲಾಗಿದೆ. ರಿನಿ ಜಾರ್ಜ್ ಆ ಶಾಸಕರ ಹೆಸರು ಇಲ್ಲವೇ ಯಾವ ಪಕ್ಷಕ್ಕೆ ಸೇರಿದವರು ಎಂದು ಹೇಳಲು
ಕರ್ನಾಟಕದ ಹಾಸನ ಜಿಲ್ಲೆಯ ಚಂದನಹಳ್ಳಿಯಲ್ಲಿ ವಿವಾಹಿತನೊಬ್ಬನು ಮಹಿಳೆಯೊಬ್ಬಳ ಸಂಗ ಬಯಸಿದ್ದು, ಆಕೆ ನಿರಾಕರಿಸಿದಳೆಂದು ಕೆರೆಗೆ ವಾಹನ ನುಗ್ಗಿಸಿ ಆಕೆಯನ್ನು ಸಾಯಿಸಿರುವುದು ತಿಳಿದು ಬಂದಿದೆ.ಆರೋಪಿ ರವಿ ಮದುವೆಯಾಗಿರುವ ವ್ಯಕ್ತಿ. ಆತ ಬಯಸಿ ಆತನಿಂದ ಸಾವು ಕಂಡವಳು ತಿಳಿದವಳೇ ಆದ 32ರ ಶ್ವೇತಾ. ಗಂಡನಿಂದ ಬೇರಾಗಿರುವ ಶ್ವೇತಾ ತನ್ನ ಹೆತ್ತವರೊಂದಿಗೆ ಬದುಕುತ್ತಿದ್ದಳು. ಕಳೆದ ಕೆಲವು ತಿಂಗಳುಗಳಿಂದ ರವಿ ಆಕೆಯ ಬೆನ್ನು ಹತ್ತಿದ್ದ. ನನ್ನ ಲಿವಿಂಗ್ ಸಂಗಾತಿಯಾಗು.
ಭಾರತದಲ್ಲಿ ಪ್ರತಿ ವರುಷ ಆನ್‍ಲೈನ್ ಗೇಮ್ ಆಡಿ 45 ಕೋಟಿ ಭಾರತೀಯರು 20,000 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.ಕಳೆದೊಂದು ದಶಕದಿಂದ ಭಾರತದಲ್ಲಿ ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಈಗ ಕಾನೂನು ಮೂಲಕ ಆನ್‍ಲೈನ್ ಗೇಮಿಂಗ್ ತಡೆಯಲು ನಿಯಮಾವಳಿ ತರಲಾಗುತ್ತಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಬೆಳೆದಿದ್ದು, ಹಲವರು ಸಾಲಗಾರರಾಗಿದ್ದಾರೆ. ಮತ್ತೆ ಕೆಲವರು ಸಾಲಗಾರರ ಕಾಟ ತಾಳಲಾಗದೆ ಆತ್ಮಹತ್ಯೆ



























