Home Archive by category ಹಾನಿ (Page 3)

ಸುಳ್ಯ:ಮನೆಗೆ ನುಗ್ಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಓರ್ವ ವಶಕ್ಕೆ

ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ವಾಸವಾಗಿರುವ ಪುನೀತ್ ಎಂಬ ಯುವಕನ ಮೇಲೆ ರಾತ್ರಿ ಯುವಕರ ತಂಡವೊಂದು ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ವರದಿಯಾಗಿದೆ.ಅರಂಬೂರಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಹಲ್ಲೆಗೊಳಗಾದ ಯುವಕ. ರಾತ್ರಿ ಗಂಟೆ 9.30 ರ ವೇಳೆಗೆ ಆರಂಬೂರಿನಲ್ಲಿರುವ ಮನೆಗೆ ನಾಲ್ವರು ಯುವಕರು ಬೈಕಿನಲ್ಲಿ ಏಕಾಏಕಿಯಾಗಿ ಬಂದು

ದಿಲ್ಲಿ ಮುಖ್ಯಮಂತ್ರಿಯ ಕೆನ್ನೆಗೆ ಏಟು.ಸಭೆಯಲ್ಲಿ ರೇಖಾ ಗುಪ್ತ ಮೇಲೆ ಹಲ್ಲೆದಾಳಿಕೋರನನ್ನು ಬಂಧಿಸಿದ ಪೋಲೀಸರು

ದಿಲ್ಲಿಯ ಮಖ್ಯಮಂತ್ರಿ ಮನೆ ಕಚೇರಿ ಬಳಿ ಕೂಟವೊಂದರ ಜೊತೆಗೆ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಮಾತನಾಡುವಾಗ ಅಪರಿಚಿತನೊಬ್ಬನು ನುಗ್ಗಿ ಬಂದು ಅವರ ಕೆನ್ನೆಗೆ ಹೊಡೆದಿದ್ದಾನೆ.ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಜನ್ ಸುನ್‌ವಯ್ ಎಂಬ ಜನರ ಅಹವಾಲು ಸ್ವೀಕರಿಸುವಾಗ ಈ ಘಟನೆ ನಡೆದಿದೆ ಎಂದಿರುವ ದಿಲ್ಲಿ ಬಿಜೆಪಿ ಘಟಕವು ಘಟನೆಯನ್ನು ಖಂಡಿಸಿದೆ. ನುಗ್ಗಿದ ವ್ಯಕ್ತಿಯು ಮುಖ್ಯಮಂತ್ರಿಯ ಕೂದಲು ಎಳೆದು, ಕೆನ್ನೆಗೆ ಒಂದು ಬಾರಿಸಿ ತೂರಿ ಹೋದುದಾಗಿ ಹೇಳಲಾಗಿದೆ. ಈ

ಬೀದಿ ನಾಯಿಗಳ ಸಾಮ್ರಾಜ್ಯದ ಐದು ರಾಜ್ಯಗಳು ಯಾವುವು?

ಒಡಿಶಾ, ಜಮ್ಮು ಮತ್ತು ಕಾಶ್ಮೀರ ಉತ್ತರ ಪ್ರದೇಶ, ಮಹಾರಾಷ್ಟ, ಕೇರಳ ರಾಜ್ಯಗಳು ಸಾವಿರ ಮಂದಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳಾಗಿವೆ.ನಗರಗಳಲ್ಲಿ ತಿರುಗುತ್ತ, ಪ್ರವಾಸಿ ತಾಣಗಳಲ್ಲಿ ಬೆದರಿಸುತ್ತ, ತಮ್ಮದೇ ಗುಂಪು ಕಟ್ಟಿಕೊಂಡು, ತಮ್ಮದೊಂದು ಜಾಗ ಎಲ್ಲೆ ಗುರುತಿಸಿಕೊಂಡು ಯಾರಿಗೂ ಹೆದರದೆ ತಿರುಗುವ ಬೀದಿ ನಾಯಿಗಳ ಸಮಸ್ಯೆ ಇಡೀ ದೇಶವನ್ನು ಕಾಡುತ್ತಿದೆ.¸ಸಾವಿರ ಜನರಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯ ಒಡಿಶಾ. ಇಲ್ಲಿ ಒಂದು ಸಾವಿರ ಜನರಿಗೆ

ಜಮ್ಮು-ಕಾಶ್ಮೀರದ: ಕಥುವಾ ಜಿಲ್ಲೆಯ ಮೇಘಸ್ಫೋಟ: ನಾಲ್ವರು ಸಾವು, ಹಲವರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜೋಡ್ ಘಾಟಿ ಎಂಬ ಗ್ರಾಮದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಇಂದು ಬೆಳಗಿನ ಜಾವ ಮೇಘಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಪರಿಣಾಮ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ

ಮೂಡುಬಿದಿರೆ : ಬೆಳುವಾಯಿ ಪ್ಲೈ ಓವರ್ ಗೆ ಕಾರು ಢಿಕ್ಕಿ : ಓವ೯ ಬಲಿ, ಮೂವರು ಗಂಭೀರ

ಮೂಡುಬಿದಿರೆ: ಅತೀ ವೇಗದಿಂದ ಚಲಿಸುತ್ತಿದ್ದ ಕಾರೊಂದು ಬೆಳುವಾಯಿ ಪ್ಲೈ ಓವರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಓವ೯ ಸಾವನ್ನಪ್ಪಿದ್ದು, ಉಳಿದ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ವೇಣೂರು ಪೆಮು೯ಡ ನಿವಾಸಿ ಸುಮಿತ್ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು: ಚಾಲಕ ಅಪಾಯದಿಂದ ಪಾರು

ಚಾಲಕನ ನಿಯಂತ್ರಣ ತಪ್ಪಿ ಕಾರೋಂದು ಪಲ್ಟಿಯಾಗಿ ಸರ್ವೀಸ್ ರಸ್ತೆಯಿಂದ ಪಕ್ಕದ ಕಮರಿಗೆ ಉರುಳಿದ ಘಟನೆ ಸುರತ್ಕಲ್ ಎನ್‌ಐಟಿಕೆ ಬಳಿ ನಡೆದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಪ್ರಯಾಣಿಕರಿಲ್ಲದ ಕಾರಣ ಬಹುದೊಡ್ಡ ದುರಂತ ತಪ್ಪಿ ಹೋಗಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕಾರು ಪಲ್ಟಿಯಾದ ರಭಸಕ್ಕೆ ನಜ್ಜುಗುಜ್ಜಾಗಿದೆ. ಓವರ್ ಸ್ಪೀಡ್ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಮಳೆ ಹಾನಿಗೆ ತಕ್ಷಣ ಸ್ಪಂದಿಸಿ: ದ.ಕ. ಜಿಲ್ಲಾಡಳಿತಕ್ಕೆ ಸಚಿವ ದಿನೇಶ್ ಗುಂಡೂರವ್ ಸೂಚನೆ

ಮಂಗಳೂರು: ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಕಮಿಷನರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಸಚಿವರು, ಅಧಿಕಾರಿಗಳು ಸ್ಥಳದಲ್ಲಿದ್ದು, ಮಳೆ ಹಾನಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ

ಮಂಗಳೂರು:ಮುಂದುವರಿದ ಮಳೆ: ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ, ಸಂಚಾರಕ್ಕೆ ಅಡ್ಡಿ

ಮಂಗಳೂರು: ನಗರದಲ್ಲಿ ಭಾರಿ ಮಳೆ ಮುಂದುವರಿದಿದೆ. ನಗರದ ಹೊರ ವಲಯದ ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಜರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಜಲಾವೃತವಾಗಿದ್ದ ಕೊಡಿಯಾಲ್ ಬೈಲ್, ಜಪ್ಪಿನಮೊಗರು ಮತ್ತಿತರ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿದಿದೆ. ಮನೆಯೊಳಗೆ ತುಂಬಿದ್ದ ಕೆಸರು ನೀರನ್ನು ಸ್ವಚ್ಛಗೊಳಿಸುವಲ್ಲಿ ಈ ಪ್ರದೇಶದ ನಿವಾಸಿಗಳು ನಿರತರಾಗಿದ್ದಾರೆ. ರಾತ್ರಿಯೂ ಬಿಟ್ಟು ಬಿಟ್ಟು

ಮಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್- 6 ಮಂದಿಯ ಬಂಧನ

ಸಾಮಾಜಿಕ ಮಾಧ್ಯಮಗಳ ಮೂಲಕ ಕೋಮು ದ್ವೇಷ ಹರಡುವುದರ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಮಂಗಳೂರು ನಗರ ಪೊಲೀಸರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಮಾಜಿಕ ಸಾಮರಸ್ಯವನ್ನು ಕದಡುವ ಗುರಿಯನ್ನು ಹೊಂದಿರುವ ಪ್ರಚೋದನಕಾರಿ ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ ಐವರನ್ನು ಬಂಧಿಸಿದ್ದಾರೆ. ಗುಪ್ತಚರ ಮಾಹಿತಿಯ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ನಗರ ಆಯುಕ್ತರು, ಪ್ರಚೋದನಾಕಾರಿ ಪೋಸ್ಟ್‌ಗಳಿಗೆ ಕಾರಣರಾದವರನ್ನು ಗುರುತಿಸಲು ಮತ್ತು ಬಂಧಿಸಲು

ಅಸ್ಸಾಂನಲ್ಲಿ ಭಾರಿ ಮಳೆ: ಪ್ರವಾಹ-ಭೂಕುಸಿತ; ಎಂಟು ಮಂದಿ ಸಾವು

ಅಸ್ಸಾಂನಲ್ಲಿ ಕೂಡಾ ಭಾರಿ ಮಳೆಯಾಗುತ್ತಿದ್ದು, ರಸ್ತೆ ಸಾರಿಗೆ ಹಾಗೂ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ. ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಹಾಗೂ ಭೂಕುಸಿತದಲ್ಲಿ ಈವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 78,000ಕ್ಕೂ ಹೆಚ್ಚು ಮಂದಿ ತೊಂದರೆಗೊಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ 10 ನದಿಗಳು ಅಪಾಯ ಮಟ್ಟ ಮೀರಿ