Home ಕರಾವಳಿ Archive by category ಉಡುಪಿ (Page 2)

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಳ್ಳೂರ್ 11 : 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಳ್ಳೂರ್ 11 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮ ನಡೆಯಿತು. ಗಣೇಶೋತ್ಸವ ಸಂಭ್ರಮದಲ್ಲಿ ಗಣೇಶನ ವಿಗ್ರಹವನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಕಲಶ ಸ್ಥಾಪಿಸಿ, ಅರಿಶಿನ, ಕುಂಕುಮ, ಗಂಧ, ಗರಿಕೆ, ಹೂವು, ಅಗರಬತ್ತಿ, ವೀಳ್ಯದೆಲೆ, ಅಡಿಕೆ, ಬೆಲ್ಲ, ಫಲಪುಷ್ಪ, ಹಾಗೂ 21

ಉದ್ಯಾವರ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಉದ್ಯಾವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಉದ್ಯಾವರ ಇದರ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಮತ್ತು ಉದ್ಯಾವರ ಯುವಕ ಮಂಡಲ (ರಿ.) ಉದ್ಯಾವರ ಇದರ 62ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಆಗಸ್ಟ್ 27 ಬುಧವಾರ ದಂದು ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನೆರವೇರಿತು. ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಉಡುಪಿ:ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ಕಾರ್ಯಕ್ರಮ

ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ತೆಗೆಯುವುದು ಮತ್ತು ಸಾಗಾಣಿಕೆಗೆ ನಿರ್ಬಂಧ ಹೇರಿರುವ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ಅ ರಾ ಪ್ರಭಾಕರ ಪೂಜಾರಿ ಮುಂದಾಳತ್ವದಲ್ಲಿ ಇಂದು ಜಾಥಾ ಕಾರ್ಯಕ್ರಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಘಟಕದ ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ ಪೂಜಾರಿ ಜಾಥಾ ಕಾರ್ಯಕ್ರಮದಲ್ಲಿ

ಕಾರ್ಕಳ:ಕಾಳು ಪಾಣಾರ ಅವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ

ಕಾರ್ಕಳ: ತುಳುನಾಡಿನ ಕಂಬಳವು ಒಂದು ಕ್ರೀಡೆ ಮಾತ್ರವಲ್ಲ, ಅದು ಜಾತ್ಯತೀತವಾಗಿ ಮತ್ತು ಮೇಲುಕೀಳು ಎಂಬ ಭಾವನೆಯಿಲ್ಲದೆ, ಸಮಾಜದ ಎಲ್ಲ ಜನರು ಒಂದೆಡೆ ಸೇರುವ ತೌಳವ ಆಚರಣೆಯಾಗಿದೆ. ಕಂಬಳದಲ್ಲಿ ಗೆಲ್ಲುವ-ಸೋಲುವ ಸ್ಪರ್ಧೆ ಇದ್ದರೂ ಅಂತಿಮವಾಗಿ ಇದು ಸಮಾಜದ ಸರ್ವರನ್ನು ಒಂದಾಗಿಸುತ್ತದೆ’ ಎಂದು ಕಂಬಳದ ವಿದ್ವಾಂಸರಾದ ಗುಣಪಾಲ ಕಡಂಬ ಅವರು ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಸೆಂಟರ್‌

ಭಜನಾ ಮಂದಿರದ ಕಾಮಗಾರಿಗಳ ಮನವಿ ಪತ್ರ ಬಿಡುಗಡೆ

ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಆರ್ಬಿಕೋಡಿ 80 ಬಡಗುಬೆಟ್ಟು ಇದರ ಭಜನಾ ಮಂದಿರದ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಚೇರಿ ಹಾಗೂ ಇತರ ಕಾಮಗಾರಿಗಳ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮನವಿ ಪತ್ರ ಬಿಡುಗಡೆ ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಆರ್ಬಿಕೋಡಿ 80 ಬಡಗುಬೆಟ್ಟು ಇದರ ಭಜನಾ ಮಂದಿರದ ವಠಾರದಲ್ಲಿ ಶಾಶ್ವತ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಚೇರಿ ಹಾಗೂ ಇತರ ಕಾಮಗಾರಿಗಳ “ಮನವಿ ಪತ್ರ ಬಿಡುಗಡೆ

ಉಡುಪಿ:ಅಂತರ ರಾಜ್ಯ ಕಳ್ಳನ ಬಂಧನ

ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಮತ್ತು ಬೈಂದೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಮೂಕಾಂಬಿಕಾ ಸಹಕಾರಿ ಸೇವಾ ಸಂಘ ಸೊಸೈಟಿ ದರೋಡೆ ಪ್ರಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಠಾಣಾ ಪೊಲೀಸರು ದ.ಕ ಜಿಲ್ಲೆಯ ಪುತ್ತೂರು ಬನ್ನೂರಿನ ನೌಶಾದ್ (ಹಾಲಿ ವಾಸ ಮಡಿಕೇರಿ ಜಿಲ್ಲೆಯ ಕುಶಾಲನಗರ) ಎಂಬಾತನನ್ನು ಬಂಧಿಸಿದ್ದು ಆತನಿಂದ ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ

ಕರಾವಳಿ ಪ್ರವಾಸೋದ್ಯಮ ಕುರಿತ ಜಿಲ್ಲಾ ಜನ ಪ್ರತಿನಿಧಿಗಳ ಸಭೆ

ಕರಾವಳಿ ಪ್ರವಾಸೋದ್ಯಮ ಕುರಿತಾಗಿ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಸಭಾಧ್ಯಕ್ಷರು, ಸಚಿವರ ಉಪಸ್ಥಿತಿಯಲ್ಲಿ ನಡೆದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಕರಾವಳಿಯ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉಪಮುಖ್ಯಮಂತ್ರಿ ಶ್ರೀ

ಕಾಪು ಕಾಂಗ್ರೆಸ್ ವತಿಯಿಂದ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಜಯಂತಿ ಆಚರಣೆ

ಕಾಪು ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತದ ಪೂರ್ವ ಪ್ರಧಾನಮಂತ್ರಿ, “ಭಾರತದ ಆಧುನಿಕ ವಿಕಸನ ಶಿಲ್ಪಿ” ಎಂದು ಕರೆಯಲ್ಪಡುವ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ದಿಗ್ಗಜ ನಾಯಕ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹುಟ್ಟುಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, “ರಾಜೀವ್ ಗಾಂಧಿ ಅವರು ಭಾರತದ ತಂತ್ರಜ್ಞಾನ ಕ್ರಾಂತಿಯ ಮುಂಚೂಣಿಗರಾಗಿದ್ದು,

ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಗೆ  ಗೋಲ್ಡ್ ಅವಾರ್ಡ್ 

ಉಡುಪಿ: ನಗರದ ಹೆಸರಾಂತ ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಕೀನ್ಯಾದ ಮಸೈಮಾರಾದಲ್ಲಿ ಸೆರೆಹಿಡಿದಿರುವ ಎರಡು ಚೀತಾಗಳು ತನ್ನ ಬೇಟೆಯನ್ನು ಬೆನ್ನು ಹತ್ತುವ “ಹಂಗರ್ ವರ್ಸಸ್ ಹೋಪ್” ಛಾಯಾಚಿತ್ರಕ್ಕೆ ಓರಾ ಡಿ ಫ್ರೇಮ್ ಸರ್ಕ್ಯುಟ್ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ವಿಭಾಗದಲ್ಲಿ ಕ್ಲಬ್ ಗೋಲ್ಡ್ ಅವಾರ್ಡ್ ಪಡೆದಿರುತ್ತಾರೆ. ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿರುವ ಈ ಸ್ಪರ್ಧೆಯು ಪ್ರತಿಷ್ಟಿತ ಎಫ್. ಐ. ಎ. ಪಿ

ಉಡುಪಿ: ಮುಂದಿನ 5 ದಿನಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮುಂದಿನ 5 ದಿನಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆ.18 ಮತ್ತು 19 ರಂದು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯಾದ್ಯಂತ ರಾತ್ರಿಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು ಜಿಲ್ಲೆಯ ಅಂಗನವಾಡಿ ,ಪ್ರಾಥಮಿಕ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ರಜೆ ಘೋಷಣೆ ಮಾಡಿದ್ದಾರೆ.ಮುಂದಿನ ಎರಡು ದಿನ ಅರಬ್ಬಿ