Home ಕರಾವಳಿ Archive by category ಉಡುಪಿ (Page 4)

ಕಾಪು ಮಾರುಕಟ್ಟೆ ವತಿಯಿಂದ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆ

ಕಾಪು ಮಾರುಕಟ್ಟೆ ವತಿಯಿಂದ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಪು ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಬೈಂದೂರು: ಪೊಲೀಸ್‌ ಇಲಾಖೆಯ ಮಹತ್ವಕಾಂಕ್ಷೆಯ ದೃಷ್ಟಿ ಯೋಜನೆ ಉದ್ಘಾಟನೆ

ಉಡುಪಿ ಜಿಲ್ಲಾ ಪೊಲೀಸ್‌ ಹಾಗೂ ಆರಕ್ಷಕ ಠಾಣೆ ಬೈಂದೂರು ಇದರ ವತಿಯಿಂದ ಪೊಲೀಸ್‌ ಇಲಾಖೆಯ ಮಹತ್ವಕಾಂಕ್ಷೆಯ ದೃಷ್ಟಿ ಯೋಜನೆ ಉದ್ಘಾಟನೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠ ಹರಿರಾಂ ಶಂಕರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಯೇ ಪ್ರಥಮ ಬಾರಿಗೆ ದೃಷ್ಟಿ ಎಂಬ ವಿನೂತನ ಕ್ರಮ ಅಳವಡಿಸುತ್ತಿದ್ದೇವೆ. ದೃಷ್ಟಿ ಯೋಜನೆಯನ್ನು

ಕುಂದಾಪುರ : ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿತ್ರಾಸಿ-ಮರವಂತೆ ಗ್ರಾಮದ ಗಡಿ ಗುರುತು

ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಬೈಂದೂರು ತಾಲೂಕಿನ ಮರವಂತೆ ಈ ಎರಡು ಸ್ಥಳಗಳ ಮಧ್ಯಭಾಗದ ಗಡಿ ಗುರುತು ಮಾಡುವ ಕಾರ್ಯ ರಾಷ್ಟ್ರೀಯ ಹೆದ್ದಾರಿಯ 66 ಬಳಿ ನಡೆದಿದೆ.ತ್ರಾಸಿ ಮತ್ತು ಮರವಂತೆ ಮಧ್ಯ ಭಾಗದ ನಡುವೆ ತ್ರಾಸಿ ಗ್ರಾಮದ ಗಡಿ ಗುರುತು ಮಾಡಿಕೊಡುವಂತೆ ತ್ರಾಸಿ ಗ್ರಾಮ ಪಂಚಾಯತ್ ಮನವಿ ಮೇರೆಗೆ ಕುಂದಾಪುರ ತಹಶೀಲ್ದಾರ್ ಅವರು ರಾಷ್ಟ್ರೀಯ ಯ ಹೆದ್ದಾರಿ 66ರ ಬಳಿ ತ್ರಾಸಿ ಗ್ರಾಮದ ಗಡಿ ಹಾಗೂ ಅದೇ ಹೆದ್ದಾರಿಯ ಮರವಂತೆ ಈ ಎರಡು ಸ್ಥಳಗಳು ಸಂಧಿಸುವ ಗಡಿ […]

ಬೆಂಗಳೂರು: ದ.ಕ, ಉಡುಪಿ ಜಿಲ್ಲೆಯ ಗಣಿ ಇಲಾಖೆಯ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ , ಅಧಿಕಾರಿಗಳ ಸಭೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲೆಯಲ್ಲಿನ ಗಣಿ ಇಲಾಖೆಯ ಸಮಸ್ಯೆಗಳ ಬಗ್ಗೆ ಇಂದು ವಿಧಾನಸೌಧದ ಕೊಠಡಿ ಸಂಖ್ಯೆ106ರಲ್ಲಿ ನಡೆದ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಕೆಂಪು ಕಲ್ಲು ಹಾಗೂ ಮರಳು ಗಣಿಗಾರಿಕೆಗೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಕಾಪು ಕ್ಷೇತ್ರದ 67 ಫಲಾನುಭವಿಗಳಿಗೆ ವಿವಿಧ ಸವಲತ್ತು – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಣೆ

2024-25 ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ ಗರಿಷ್ಠ 8000 ವರೆಗೆ ಉಚಿತ ಸುಧಾರಿತ ಉಪಕರಣಗಳು ಕಾಪು ಕ್ಷೇತ್ರದ 67 ಫಲಾನುಭವಿಗಳಿಗೆ ಮಂಜೂರಾಗಿದ್ದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಕಾಪು ಶಾಸಕರ ಕಚೇರಿಯಲ್ಲಿ ಸಾಂಕೇತಿಕವಾಗಿ 9 ಫಲಾನುಭವಿಗಳಿಗೆ ವಿತರಿಸಿದರು.

ಕಾಪು ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಪು ತಾಲೂಕಿನ ಬಗರ್ ಹುಕುಂ (ಅಕ್ರಮ – ಸಕ್ರಮ) ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಇಂದು ಕಾಪು ತಹಸೀಲ್ದಾರ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ನಮೋನೆ 53 ಮತ್ತು 57 ಅಡಿಯಲ್ಲಿ ಸಲ್ಲಿಸಿದ 9 ಕಡತಗಳಿಗೆ ಖಾಯಂ ಮಂಜೂರಾತಿ ನೀಡಲಾಯಿತು. 2 ಕಡತಗಳನ್ನು ಸಮಿತಿಯುಲ್ಲಿ ಮಂಡಿಸಲಾಯಿತು. ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿಗಳು ಕಾಪು ತಹಶೀಲ್ದಾರರಾದ

ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ: ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿ ವತಿಯಿಂದ ಶ್ರೀ ವರ ಲಕ್ಷ್ಮೀ ವ್ರತ ಆಚರಣೆ

ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಪಾದೆಬೆಟ್ಟು ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆಯುಶ್ರೀ ದುರ್ಗಾದೇವಿ ಮಂದಿರದಲ್ಲಿ ಜರುಗಿತು. ಶ್ರೀ ವರಲಕ್ಷ್ಮಿ ವ್ರತಾಚರಣೆ ಪ್ರಯುಕ್ತ ವಿಶೇಷ ಪೂಜೆಯು ಸುಮಂಗಲಿಯರಿಂದ ವಿಜ್ರಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಪಾದೆಬೆಟ್ಟು ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು

ಮಣಿಪಾಲ: ಮಾಹೇ ವತಿಯಿಂದ ಸಸ್ಯಶ್ಯಾಮಲ: ಗಿಡ ನೆಡುವ ಕಾರ್ಯಕ್ರಮ

ಮಣಿಪಾಲ: ವಿಶ್ವವಿದ್ಯಾಲಯವಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸ್ವಯಂಸೇವಕ ಸಂಸ್ಥೆಯ ವತಿಯಿಂದ ಹಸಿರು ಉಪಕ್ರಮ “ಸಸ್ಯಶ್ಯಾಮಲ”ವನ್ನು ಯಶಸ್ವಿಯಾಗಿ ಪ್ರಾರಂಭಿಸಿದರು. ಮಾಹೆ ಕ್ಯಾಂಪಸ್‌ನಲ್ಲಿ ನಡೆಯಲಿರುವ ೬ ನೇ ರಾಷ್ಟ್ರೀಯ ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಕುರಿತ ಸಮ್ಮೇಳನಕ್ಕೆ ಅರ್ಥಪೂರ್ಣ ಮುನ್ನುಡಿಯಾಗಿ ಕಾರ್ಯನಿರ್ವಹಿಸಿತು. ಈ ಕಾರ್ಯಕ್ರಮವು ಹೆಬ್ರಿ ಹೆದ್ದಾರಿಯಲ್ಲಿರುವ ಶಿವಪುರ ಗ್ರಾಮದಲ್ಲಿ 2ಕಿಲೋಮೀಟರ್ ರಸ್ತೆ ವಿಭಜಕಗಳ

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ : ಶಾಲೆಗೆ ನೂತನ ವಾಹನ ಹಸ್ತಾಂತರ

ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಂಟಕಲ್ಲು ಇದರ ಶಾಲೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಇಂದು ಶತಮಾನೋತ್ಸವದ ಮನವಿ ಪತ್ರ ಬಿಡುಗಡೆ ಹಾಗೂ ಶಾಲೆಗೆ ನೂತನ ವಾಹನ ಹಸ್ತಾಂತರ ಮತ್ತು ಬೆಂಚು-ಡೆಸ್ಕುಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶತಮಾನೋತ್ಸವ ವೇದಿಕೆ ಅನಾವರಣ, ಶತಮಾನೋತ್ಸವ ಸಮಿತಿ ಕಛೇರಿ ಉದ್ಘಾಟನೆ, ಶಾಲಾ ಮಕ್ಕಳಿಗೆ ಸಮವಸ್ತ್ರ- ಐ.ಡಿ. ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರಾದ ಗುರ್ಮೆ ಸುರೇಶ್

ಬೆಳ್ಮಣ್ :ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕ ಸೇವೆ ಮತ್ತು ಬ್ಯಾಂಕಿAಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಆಗಸ್ಟ್ 9, 2025 ರಂದು ಬೆಳ್ಮಣ್ ಶಾಖೆಯಲ್ಲಿ ತನ್ನ 9 ನೇ ಎಟಿಎಂ ಅನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಎಟಿಎಂ ಅನ್ನು ಬೆಳ್ಮನ್‌ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ನ ಮಾಲೀಕ ಶ್ರೀ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.