ಕಡಬ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಆಚಾರ್ಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿರುವುದು ಖಂಡನೀಯ. ಈ ಹೇಯ ಕೃತ್ಯ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿ.ಹಿಂ.ಪ. ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಆಗ್ರಹಿಸಿದರು. ಅವರು ಕಡಬದ ಮುಖ್ಯ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ) ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬಿಲ್ಲವ ವಧು ವರಾನ್ವೇಷಣೆ-೨೦೨೩ ಪುತ್ತೂರಿನ ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿದರು. ಮದುವೆಯಾಗುವ ಯುವಕ ಯುವತಿಯರಿಗೆ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಯುವವಾಹಿನಿ ಘಟಕ ಮಾಡುತ್ತಿದೆ. ಈ
ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಆದಂತಹ ವಿನಯ್ ಕುಮಾರ್ ಸೊರಕೆ ರವರ ತಾಯಿ ಸುನೀತಿ ಅಚ್ಯುತ ಸೊರಕೆ (91) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದ್ದಾರೆ. ಇವರು ಮೂರು ಜನ ಪುತ್ರರು,ಎರಡು ಜನ ಪುತ್ರಿಯರು, ಎಂಟು ಮೊಮ್ಮಕ್ಕಳು,ಹಾಗೂ ಮೂರು ಮರಿ ಮಕ್ಕಳನ್ನು ಅಗಲಿದ್ದಾರೆ.ಇವರ ಅಂತ್ಯ ಸಂಸ್ಕಾರವನ್ನು ಇಂದು ಮದ್ಯಾಹ್ನ 1.30 ರ ನಂತರ ತಮ್ಮ ಸ್ವಗೃಹವಾದ ಪುತ್ತೂರು ತಾಲೂಕಿನ ಸರ್ವೇ ಗ್ರಾಮದ ಸೊರಕೆ ಯಲ್ಲಿ ನಡೆಯುವುದು ಎಂದು ತಿಳಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಕುಮಾರ ಧಾರ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿ ರಭಸದಿಂದ ನೀರು ಹರಿಯುತ್ತಿರುವುರಿಂದ ಪವಿತ್ರ ಸ್ನಾನ ಘಟ್ಟ ಮುಳುಗಡೆಯಾಗಿದೆ.ಹೀಗಾಗಿ ಭಕ್ತಾದಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ದ.ಕ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ.ಈಗಾಗ್ಲೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ನೈಸರ್ಗಿಕ ವಿಕೋಪ ಮುನ್ಸೂಚನೆಯಂತೆ ಆರೆಂಜ್ ಅಲರ್ಟ್
ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪುತ್ತೂರಿನಲ್ಲಿ ಭಾರೀ ಭೂಕುಸಿತ ಉಂಟಾದ ಘಟನೆ ನಡೆದಿದೆ. ಮನೆ ಮಂದಿ ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಬಾವಿ ಕುಸಿದಿದ್ದು, ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಕೆ ಎಂಬಲ್ಲಿ ಘಟನೆ ನಡೆದಿದೆ. ಬಾವಿ ಕುಸಿದ ಹಿನ್ನಲೆಯಲ್ಲಿ ಹೊಸ ಮನೆಯೂ ಕುಸಿಯುವ ಅಪಾಯದಲ್ಲಿದೆ. ಬಪ್ಪಳಿಕೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯಾಗಿದ್ದು, ಭೂ ಕುಸಿತದಿಂದಾಗಿ ಪರಿಸರದ ಜನ ಆತಂಕದಲ್ಲಿದ್ದಾರೆ. ಅಗ್ನಿಶಾಮಕ ದಳ ದವರು ಮನೆ ಮಂದಿಯನ್ನು
ಮಣಿಪುರ ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಗಲಭೆ ನಡೆಯುತ್ತಿದ್ದು, 100 ಕ್ಕೂ ಮಿಕ್ಕಿದ ಜನ ಸಾವನ್ನಪ್ಪಿದ್ದು, ಗಲಭೆಯನ್ನು ತಡೆಯುವಲ್ಲಿ ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಪುತ್ತೂರು ಕ್ರಿಶ್ಚಿಯನ್ ಕಮ್ಯುನಿಟಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಹೇಳಿದರು. ಪುತ್ತೂರು ಪ್ರೆಸ್‍ಕ್ಲಬ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಣಿಪುರದಲ್ಲಿ ಮಿಥೈ ಮತ್ತು ಕುಕ್ಕೀ ಜನಾಂಗಗಳ ಮಧ್ಯೆ ನಿರಂತರ ಗಲಭೆ
ಪುತ್ತೂರು: ಕರಾವಳಿಯಾದ್ಯಂತ ಭಾರೀ ಮಳೆಯಾಗಿದ್ದು, ಪುತ್ತೂರಿನಲ್ಲಿ ಸುರಿದ ಮಳೆಗೆ ಚೆಳ್ಯಡ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಪುತ್ತೂರು- ಪಾಣಾಜೆ- ಪೆರ್ಲ ಸಂಪರ್ಕಿಸುವ ರಸ್ತೆ ಚೆಳ್ಯಡ್ಕ ಎಂಬಲ್ಲಿ ಈ ಸೇತುವೆಯಿದ್ದು, ಮಳೆಗಾಲ ಸಂದರ್ಭದಲ್ಲಿ ಹೆಚ್ಚಿನ ಸಮಯ ಈ ಸೇತುವೆ ಮುಳುಗಡೆಯಾಗುತ್ತಿದ್ದು, ಈ ಬಾರಿಯ ಮಳೆಗೆ ಮೊದಲ ಬಾರಿಗೆ ಈ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾದ ಹಿನ್ನಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಶೇಧಿಸಲಾಗಿದ್ದು, ಆ ಭಾಗದ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇವರ ಆಶ್ರಯದಲ್ಲಿ ಬಿಲ್ಲವ ವಧು-ವರಾನ್ವೇಷಣೆ ಕಾರ್ಯಕ್ರಮವು ಜುಲೈ 9ರಂದು ಪುತ್ತೂರು ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜುಲೈ 9ರ ಭಾನುವಾರದಂದು ಬೆಳಿಗ್ಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಅವರು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕರಾವಳಿ ಭಾಗದಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಧಾರಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜು.4 ರ ಇಂದು ಮಧ್ಯಾಹ್ನದಿಂದ ಜು.5 ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.4ರ ಮಧ್ಯಾಹ್ನ ಬಳಿಕ ಮುಂದಿನ ಕೆಲವು ಗಂಟೆಗಳ ಕಾಲ ಬಲವಾದ ಮೇಲ್ಮೈ ಮಾರುತಗಳು ಬೀಸಲಿದ್ದು, ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಉತ್ತಮ ನಿರ್ಣಯ ಕೈಗೊಂಡಿರುವುದು ಸಂತೋಷದ ವಿಚಾರವಾಗಿದ್ದು,ಇದಕ್ಕಿಂತಹ ಉತ್ತಮ ಬೇರೊಂದಿಲ್ಲ. ಹೀಗೆಂದು ಹೇಳಿದರು ನಿವೃತ್ತ ಏರ್ ವೇಸ್ ಮಾರ್ಷಲ್ ರಮೇಶ್ ಕಾರ್ಣಿಕ್. ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ವತಿಯಿಂದ ಭಾನುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರುವ ಅಭ್ಯರ್ಥಿಗಳಿಗೆ ಗ್ರೌಂಡ್ ತರಬೇತಿ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸೇನೆಗೆ ಸೇರುವುದರಿಂದ ಅವರ




























