Home ಕರಾವಳಿ Archive by category ಪುತ್ತೂರು (Page 6)

ಪುತ್ತೂರು: ಫಿಕ್ಸೆಲ್ ಕ್ರಿಯೇಟಿವ್ ಪುತ್ತೂರು 8ನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರಿನಲ್ಲಿ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಫಿಕ್ಸೆಲ್ ಕ್ರಿಯೇಟಿವ್ ಪುತ್ತೂರು ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಪ್ರಜ್ವಲ್ ಪುತ್ತೂರು ಮಾಲಕತ್ವದಲ್ಲಿ ಫಿಕ್ಸೆಲ್ ಕ್ರಿಯೇಟಿವ್ ಕಾರ್ಯಾಚರಿಸುತ್ತಿದ್ದು, ಎಲ್‌ಇಡಿ ವಿಡಿಯೋ ವಾಲ್, ಟಿವಿ & ಪ್ರೋಜೆಕ್ಟರ್, ವಿಡಿಯೋಗ್ರಫಿ, ಲೈವ್ ವಿಡಿಯೋ ಮಿಕ್ಸಿಂಗ್, ಇಂಡಸ್ಟ್ರೀಯಲ್ ಅರ್ತಿಂಗ್,

ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : ಆರೋಪಿಗಳಿಗೆ ಹೈಕೋರ್ಟಿನಲ್ಲಿ ಹಿನ್ನಡೆ, ಜಾಮೀನು ಅರ್ಜಿ ವಜಾ

ಪುತ್ತೂರು : ಪುತ್ತೂರಿನಲ್ಲಿ ನಡೆದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ಹೈಕೋರ್ಟ್ ನೀಡಿದೆ. ಎರಡನೇ ಬಾರಿಯೂ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ, ಆದೇಶಿಸಿದೆ. ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಾದ ಚೇತನ್, ಮನಿಷ್, ಕೇಶವ, ಮಂಜುನಾಥ್ ಅವರು ಎರಡನೇ ಬಾರಿ ಹೈಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್

ಪುತ್ತೂರಿನ ಕನ್ನಡದ ಕಟ್ಟಾಳು ಸೀತಾರಾಮ ರೈ ಬನ್ನೂರು ನಿಧನ

ಪುತ್ತೂರು: ಪುತ್ತೂರಿನ ಕನ್ನಡದ ಕಟ್ಟಾಳು ಬನ್ನೂರು ನಿವಾಸಿ ಸೀತಾರಾಮ ರೈ ಬನ್ನೂರು(76ವ)ರವರು ಜು.15 ರಂದು ನಿಧನರಾದರು. ಪುತ್ತೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಹಿತ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಿದ್ದ ಸೀತಾರಾಮ ರೈ ಬನ್ನೂರು ಅವರು ಹೃದಯಾಘಾತಕ್ಕೊಳಗಾಗಿ ಹಲವು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ಪುತ್ರಿ ರೋಜಾ, ಪುತ್ರರಾದ ಬ್ಲಾಕ್ ಕಾಂಗ್ರೆಸ್‌

ಕಡಬ: ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

ಕಡಬ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆಯಿತು. ಮಂಗಳೂರು ವೃತ್ತ ಪರೀಕ್ಷಾರ್ಥಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಿಕೆ, ಮಾಧ್ಯಮಗಳು ನಮ್ಮ ಸುತ್ತ-ಮುತ್ತ ನಡೆಯುವ ಆಗು-ಹೋಗುಗಳನ್ನು ತಿಳಿಸುವ ಜೊತೆಗೆ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಭರಪೂರ

ಯಶಸ್ವಿನಿ ವಿಮಾ ಯೋಜನೆ ಪುತ್ತೂರಿನ ಖಾಸಗಿ ಆಸ್ಪತ್ರೆಗಳಿಗೂ ಅನ್ವಯ ಮಾಡಿ; ಸಹಕಾರ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:ಯಶಸ್ವಿನಿ ವಿಮಾ ಸೌಲಭ್ಯದಡಿಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸೌಲಭ್ಯವನ್ನು ಒದಗಿಸುವಂತೆ ಸಹಕಾರ ಸಚಿವ ಟಿ ರಾಜಣ್ಣ ಅವರಿಗೆ ಶಾಸಕ ಅಶೋಕ್ ರೈ ಅವರಿಗೆ‌ಮನವಿ ಸಲ್ಲಿಸಿದರು. ಗುರುವಾರ ಬೆಂಗಳೂರಿನಲ್ಲಿ ಸಚಿವರನ್ಬು ಭೇಟಿಯಾದ ಶಾಸಕ ಅಶೋಕ್ ರೈ ಅವರು ಸಹಕಾರ ಇಲಾಖೆಯ ಯಶಸ್ವಿನಿ ವಿಮಾ ಸೌಲಭ್ಯವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿರುವುದರಿಂದ ವಿಮೆ ಹೊಂದಿರುವವರಿಗೆ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಅನುದಾನ ನೀಡುವಂತೆ ಸಚಿವರಿಗೆ ಶಾಸಕರಿಂದ ಮನವಿ

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಅವರು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಮನವಿ ಸಲ್ಲಿಸಿದರು.ಕರ್ನಾಟಕದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ದಿ ಮಾಡುವ ಬಗ್ಗೆ ಈಗಾಗಲೇ ತೀರ್ಮಾನವನ್ನು ಕೈಗೊಳ್ಳಲಾಗಿದೆ. ದಿನಂಪ್ರತಿ ಸಾವಿರಾರು ಮಂದಿ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಿದ್ದು ,ದೇವಸ್ಥಾನ ಅಭಿವೃದ್ದಿಪಡಿಸುವ

ಜುಲೈ 28: ತುಕರಾಮ ಬಾಯಾರು ನಿರ್ದೇಶನದ 918 ಕನ್ನಡ ಕಿರುಚಿತ್ರ ಬಿಡುಗಡೆ

ಪುತ್ತೂರು : ತುಕಾರಾಮ ಬಾಯಾರು ನಿರ್ದೇಶನದ “918” ಎಂಬ ಕನ್ನಡ ಕಿರುಚಿತ್ರವು ಜುಲೈ 28ರಂದು ಬೆಳಿಗ್ಗೆ 11:30ಕ್ಕೆ ಬ್ರಹ್ಮ ಪ್ರೋಡಕ್ಷನ್ ಯುಟ್ಯೂಬ್ ಚಾನೆಲ್, V4 ಚಾನೆಲ್ ಮಂಗಳೂರು, ಹಾಗೂ ಉಡುಪಿ ಸ್ಪಂದನ ಟೀವಿ ವಾಹಿನಿಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.ಇದರ ಮರುಪ್ರಸಾರ ರಾಜ್ಯದ ಕೆಲವು ವಾಹಿನಿಗಳಲ್ಲಿ ಪ್ರಸಾರವಾಗಲಿದೆ. ಉದಯ್ ಕುಮಾರ್ ಆಚಾರ್ಯ ಬಾಯಾರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ನಾಯಕ ನಟರಾಗಿ ಸಂದೇಶ್ ಆಚಾರ್ಯ, ನಾಯಕಿ ಕವಿತಾ

ಪುತ್ತೂರು: ನಾಪತ್ತೆಯಾದ ಪುತ್ತೂರಿನ ವಿದ್ಯಾರ್ಥಿನಿ ಪತ್ತೆ

ಪುತ್ತೂರು: ಪಡೂರು ಗ್ರಾಮದ ಮುಂಡಾಜೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪುತ್ತೂರು ಪಟ್ಟೂರು ಮುಂಡಾಜೆ ನಿವಾಸಿ ಗಿರಿಜಾ ದೇವಿ, ಮಂಟು ಪಾಸ್ವಾನ ದಂಪತಿ ಪುತ್ರಿ ರೂಪ (19ವ) ಜು.1ರಂದು ನಾಪತ್ತೆಯಾಗಿದ್ದರು. ಇದೀಗ ಅವರು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರೂಪ ಅವರ ತಾಯಿ ಮಂಗಳೂರಿನ ನರ್ಸಿಂಗ್ ಹೋಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಂದೆ ಉಡುಪಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದು,

ಪುತ್ತೂರು: ಮದುವೆಯಾಗುವುದಾಗಿ ವಂಚನೆ ಮಾಡಿದ ಪ್ರಕರಣದ ಆರೋಪಿ ಪೊಲೀಸ್‌ ವಶಕ್ಕೆ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು ಪೊಲೀಸರು ಮೈಸೂರು ಸಮೀಪ ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ. ಹೈಸ್ಕೂಲ್ ಓದುವ ಸಂದರ್ಭ ಸಹಪಾಠಿಯಾಗಿದ್ದು ಪ್ರಸ್ತುತ ಪದವಿ

ಪುತ್ತೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆ ಉದ್ಘಾಟನೆ

ಪುತ್ತೂರು: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆಯು ಪುತ್ತೂರು ಮುಖ್ಯರಸ್ತೆ ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಶ್ರೀ ಲಕ್ಷ್ಮಾಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿರುವ ಮಾಜಿ ಮಂತ್ರಿ ಜೆ.ಕೃಷ್ಣ ಪಾಲೆಮಾರ್ ಮತ್ತು ಜಿ.ಎಲ್ ಗ್ರೂಪ್‌ನ ಅಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಅವರು ಉದ್ಘಾಟಿಸಿದರು. ಶ್ರೀ ಲಕ್ಷಣಾನಂದ