ಪುತ್ತೂರು: 9 ತಿಂಗಳ ಹಿಂದೆ 2021 ರ ಜನವರಿ 3 ರಂದು ಪುತ್ತೂರಿನ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ 7 ಮಂದಿ ದಾರುಣ ಮೃತಪಟ್ಟಿದ್ದರು. ಇವರಿಗೆ ಈಗ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಮೃತಪಟ್ಟಿರುವ
ವಿದ್ಯಾರ್ಥಿ ನಿಲಯದಿಂದ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಕಾಣೆಯಾದ ಬಗ್ಗೆ ನಿನ್ನೆ ವರದಿಯಾಗಿತ್ತು, ಇಂದು ಆತ ಸಂಬಂಧಿಕರ ಮನೆಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ನಿನ್ನೆ ಕಡಬದ ಶ್ರೀ ರಾಮಕುಂಜೆಶ್ವರ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಮ್ ಎಂಬ ಅಪ್ರಾಪ್ತ ಬಾಲಕ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು, ನಂತರ ಮಧ್ಯಾಹ್ನ 12.40 ಕ್ಕೆ ಕಾಲೇಜು
ಪುತ್ತೂರು : ಕಳೆದ 20 ವರ್ಷಗಳಿಂದ ಅತೀ ಕಡಿಮೆ ಸಂಬಳದಲ್ಲಿ ಕನಿಷ್ಟ ವೇತನವೂ ಸಿಗದೆ ಶಾಲಾ ಮಕ್ಕಳಿಗೆ ಪ್ರೀತಿಯಿಂದ ಅಡುಗೆ ತಯಾರಿಸಿ ಬಡಿಸುತ್ತಿರುವ ಬಿಸಿಯೂಟ ನೌಕರರ ಬಗ್ಗೆ ಸರಕಾರದ ನಿರ್ಲಕ್ಷ ಕೂಡ ಸರಕಾರದ ಮಹಿಳಾ ದೌರ್ಜನ್ಯ ಆಗಿದೆ ಎಂದು ಹಿರಿಯ ಕಾರ್ಮಿಕ ಮುಖಂಡರಾದ ಬಿ.ಎಂ.ಭಟ್ ಹೇಳಿದರು. ಅವರು ಸೆ.20 ರಂದು ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ನೌಕರರ ಸಮಾವೇಶವನ್ನುದ್ದೇಶಿಸಿ ಮಾತಾಡಿ ಕೆಲವು ಅಸಂಘಟಿತ ಕಾರ್ಮಿಕರಿಗೆ ಕೊರೋನಾ ಪ್ಯಾಕೇಜು ನೀಡಿದ ಸರಕಾರ
ಪಕೋಡಾ ಮಾರಿಯೂ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಬಹುದು ಎಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ದೇಶದೆಲ್ಲೆಡೆ ಭಾರೀ ಪ್ರತಿಭಟನೆ, ವ್ಯಂಗ್ಯ ಪ್ರದರ್ಶನಗಳು ಕಂಡು ಬಂದಿತ್ತು. ಅದೇ ರೀತಿ ಪ್ರಧಾನಿಯ ಮಾತಿನಲ್ಲಿ ಸತ್ಯಾಂಶವಿದೆ ಎನ್ನುವುದನ್ನು ತೋರಿಸಿಕೊಟ್ಟ ಹಲವು ವಿಚಾರಗಳೂ ದೇಶದ ಜನರ ಗಮನಕ್ಕೂ ಬಂದಿತ್ತು. ಈ ನಡುವೆ ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಭಿಯಾಗಿ ಬದುಕು ಸಾಗಿಸುತ್ತಿರುವ ಸಾವಿರಾರು ಯುವಪಡೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ
ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಕಣಿಯೂರಿನ ಚೆನ್ನಪ್ಪ ಅಜಿಲಾಯ ಎಂಬವರ ಮೇಲೆ ಸ್ಥಳೀಯ ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಹೆಸರಿನಲ್ಲಿ ಅವರ ನಕಲಿ ಸಹಿ ಬಳಸಿ ಸುಳ್ಳು ದೂರು ನೀಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಸಿದ್ದಾರೆ. ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚೆನ್ನಪ್ಪ ಅಜಿಲಾಯ
ಪುತ್ತೂರು: ಶುಕ್ರವಾರ ಪುತ್ತೂರು ಹಾಗೂ ಕಡಬ ತಾಲೂಕಿನ ಸುಮಾರು 76 ಕಡೆಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದ್ದು, ನಗರಸಭೆ ವ್ಯಾಪ್ತಿಯೊಳಗೆ ಆರು ಕಡೆ ನಡೆಯಲಿದೆ. ಈ ಮೂಲಕ ನಗರಸಭಾ ವ್ಯಾಪ್ತಿಯನ್ನು ಲಸಿಕೆ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆ ಪಡೆಯದ ಎಲ್ಲಾ ಸಾರ್ವಜನಿಕರು ಲಸಿಕೆ ಪಡೆದು ಸಹಕರಿಸುವಂತೆ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ. ದ.ಕ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಖಾಸಗಿ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ನಡುವೆ ಬುಡೋಳಿಯ ಬೊಳ್ಳುಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ.ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಸುಮಾರು ೫ ಕಿ.ಮೀ ದೂರದಲ್ಲಿ ಲಾರಿಯನ್ನು ಬೆನ್ನಟ್ಟಿದ ತಂಡ
ಕೋವಿಡ್ ಹಿನ್ನೆಲೆಯಲ್ಲಿ ವಾರದ ಸಂತೆ ನಡೆಸಲಾರದೆ ಪುತ್ತೂರು ನಗರಸಭೆ ಆದಾಯಕ್ಕೆ ಕುತ್ತು ಬರುವ ಸ್ಥಿತಿ ನಿರ್ಮಾಣವಾಗಿದ್ದು, ಸಂತೆ ವರಿ ವಸೂಲಿಟೆಂಡರ್ ಪಡೆದುಕೊಂಡ ಬಿಡ್‌ದಾರರು ತಾವು ಕಟ್ಟಿದ ಹಣವನ್ನು ಮರಳಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಬಿಡ್‌ದಾರರನ್ನು ಕರೆಸಿ ಮಾತುಕತ ನಡೆಸಿ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಪುತ್ತೂರು ನಗರಸಭೆಯ ವಿಶೇಷ ಸಾಮಾನ್ಯ ಸಭೆ ನಿರ್ಣಯಿಸಿದೆ.ಅಧ್ಯಕ್ಷರಾದ ಜೀವಂಧರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ
ರಾಜ್ಯದಲ್ಲಿ ದೇವಸ್ಥಾನಗಳ ತೆರವು ಕಾರ್ಯಾಚರಣೆ ಸರಿಯಲ್ಲ. ಶತಮಾನಗಳ ಹಿಂದೆ ಆರಾಧಿಸಲ್ಪಟ್ಟ ದೇವಸ್ಥಾನಗಳನ್ನು ಕೆಡವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಮತ್ತೆ ವಿಮರ್ಶೆ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ತುಳು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಹೇಳಿದರು. ಅವರು ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಸರಕಾರ ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಕೆಲಸ ಮಾಡಬೇಕು.
ಪುತ್ತೂರು:ಪುತ್ತೂರಿನಲ್ಲಿ ಅಪ್ರಾಪ್ತರನ್ನು ಭಿಕ್ಷಾಟನೆಗೆ ಕಳುಹಿಸುವ ಮೂಲಕ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆಂಬ ದೂರಿನ ಮೇರೆಗೆ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯ ಅಧಿಕಾರಿಗಳು ನೆಲ್ಲಿಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ 6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಸಂಗೀತ ಎಂಬ ಮಹಿಳೆಯು ಇತ್ತೀಚೆಗೆ ಬಿಸಿ ರೋಡ್‌ನಲ್ಲಿ ಮಗುವೊಂದಕ್ಕೆ ಹಲ್ಲೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದು ಅಲ್ಲಿ ದಾಳಿ


















