ಪುತ್ತೂರು: ಆ 24 ರಂದು ರಾತ್ರಿ ಪುತ್ತೂರಿನ ದರ್ಬೆಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್’ಹಾಕಿಸುತ್ತಿದ್ದ ಸಂದರ್ಭ ತಂಡವೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೃತ್ಯವೊಂದರ ಸಾಕ್ಷಿ ನುಡಿಯುವ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ತನಿಖೆಯಿಂದ
ಪರಿಸರ ಉಳಿಸಬೇಕು, ಪರಿಸರ ಬೆಳೆಸಬೇಕು ಎನ್ನುವುದು ಕೇವಲ ಭಾಷಣ ಹಾಗೂ ಸೆಮಿನಾರ್ ಗಳಿಗೆ ಸೀಮಿತವಾಗಿದೆ. ಫೀಲ್ಡ್ ಗೆ ಇಳಿದು ಪ್ರಕೃತಿಯನ್ನು ಸಂರಕ್ಷಿಸುವ ಕೆಲಸಗಳು ಕೇವಲ ಬೆರಳೆಣಿಕೆಯ ಜನರಿಂದ ಮಾತ್ರ ಆಗುತ್ತಿದೆ. ಇಂಥಹುದೇ ಒರ್ವ ಪರಿಸರ ಸಂರಕ್ಷಕ ಹಾಗೂ ಕೃತಕ ಕಾಡುಗಳ ಸೃಷ್ಟಿಕರ್ತ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಮನೆಯ ಸಣ್ಣ ಜಾಗದಲ್ಲೇ ದಟ್ಟ ಕಾಡುಗಳನ್ನು ಹೇಗೆ ಬೆಳೆಸಬಹುದು ಎನ್ನುವುದಕ್ಕೆ ಮಾದರಿಯಾಗಿರುವ ಈ ವ್ಯಕ್ತಿ ಯಾರು ಹಾಗೂ ಇವರ ಸಾಧನೆಯೇನು
ಪುತ್ತೂರು: ಕೋವಿಡ್ ಬಂದ ಮೇಲೆ ಸಾರ್ವಜನಿಕರಲ್ಲಿ ಸರಕಾರಿ ಆಸ್ಪತ್ರೆಯ ಬಗ್ಗೆ ಹೆಚ್ಚು ವಿಶ್ವಾಸ ಬರುವಂತೆ ನಮ್ಮ ವೈದ್ಯರು ಮಾಡಿದ್ದಾರೆ ಈ ನಿಟ್ಟಿನಲ್ಲಿ ಅವರಿಗೆ ಮೊದಲಾಗಿ ಅಭಿನಂದನೆ ಸಲ್ಲಿಸಬೇಕು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ಕಡಿಮೆ ಶೇ.1.94 ಪಾಸಿಟಿವ್ ರೇಟ್ ಇರುವುದು ನಮ್ಮ ತಾಲೂಕಿನಲ್ಲಿ ಈ ನಿಟ್ಟನಲ್ಲಿ ಮುಂಬರುವ ದಿನಗಳಲ್ಲಿ ಶಾಲೆಯನ್ನು ಆರಂಭಿಸುವ ಕುರಿತು ಚರ್ಚಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ತಾಲೂಕು ಆರೋಗ್ಯ
ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವಿಟ್ಲ ಮೂಲದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪುತ್ತೂರು: ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವೃದ್ದರೊಬ್ಬರು ಅಸು ನೀಗಿದ ಘಟನೆ ನಡೆದಿದೆ. ಮೃತರನ್ನು ಕೇಶವ ನಾಯ್ಕ ಎಂದು ಗುರುತಿಸಲಾಗಿದೆ. ಮೃತರ ಸಂಬಂಧಿಕರು ವಿಟ್ಲ ಮೂಲದವರು ಎನ್ನಲಾಗಿದೆ. ಸಂಬಂಧಿಕರು ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸರು ಮನವಿ
ಸಣ್ಣ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕೃಷಿ ಉತ್ಪಾದಕ ಸಂಘ: ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
ದೇಶದ ಎಲ್ಲಾ ಸಣ್ಣ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘ ಆರಂಭಿಸಲಾಗುವುದು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಭಾರತ ಸಣ್ಣ ರೈತರನ್ನೇ ಹೊಂದಿರುವ ದೇಶವಾಗಿದ್ದು, ದೇಶದ ಎಲ್ಲಾ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಉತ್ಪಾದಕ ಸಂಘವನ್ನು ಆರಂಭಿಸಲು ಸೂಚನೆ ನೀಡಿದ್ದಾರೆ. ದೇಶದ
ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡಿರುವ ಕಾರಣದಿಂದ ಶಿರಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದು, ಇದರ ಮಾಹಿತಿ ತಿಳಿಯದೇ ಮಂಗಳೂರು ಕಡೆಯಿಂದ ಆಗಮಿಸಿರುವ ನೂರಾರು ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ನೂರಾರು ಮಂದಿ ಲಾರಿ ಚಾಲಕ, ಕ್ಲೀನರ್‌ಗಳು
ಪುತ್ತೂರು: ಜಾತಿ, ಧರ್ಮದ ಹೆಸರಿನಲ್ಲಿ ಗಲಭೆ ನಡೆಸುತ್ತಾ ಬರುತ್ತಿರುವ ಇದೀಗ ಸಾವರ್‌ಕರ್ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳಿಗೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಸ್‌ಡಿಪಿಐ ಫ್ಯಾಸಿಸಂನ ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದರು. ಅವರು ಎಸ್‌ಡಿಪಿಐ ವತಿಯಿಂದ ಪುತ್ತೂರಿನ ದರ್ಬೆಯಲ್ಲಿ ನಡೆದ ಪ್ರತಿಭಟನೆಯನ್ನು
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಪ್ರಸ್ತುತ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಸಂಬಂಧ ಸರಕಾರದ ಆದೇಶದನ್ವಯ ಮತ್ತು ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿ ಕೋವಿಡ್ 19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144(3) ರಂತೆ ನಿರ್ಬಂಧಗಳನ್ನು ಹೊರಡಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು
ಸ್ವಾತಂತ್ರ್ಯೋತ್ಸವದ ದಿನದಂದು ಪುತ್ತೂರು ತಾಲೂಕು ಕಬಕ ಗ್ರಾಮ ಪಂಚಾಯತ್ ಆವರಣದಲ್ಲಿ, ಕೇಂದ್ರ ಸರ್ಕಾರದ ಅಜಾದಿ ಕಾ ಅಮೃತ ಮಹೋತ್ಸವದ ಆಚರಣೆ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಹಾಗೂ ಭಾರತ ಮಾತೆಯ ಭಾವಚಿತ್ರವಿರುವ ವಾಹನದ ಚಲನೆಗೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರಿಗೆ ನ್ಯಾಯಲಯ ಜಾಮೀನು ಮುಂಜೂರು ಮಾಡಿದೆ. ಬಂಧನಕ್ಕೆ ಒಳಗಾದ ಕೇವಲ 48 ಗಂಟೆಗಳ ಒಳಗಡೆ ಆರೋಪಿಗಳಿಗೆ ಜಾಮೀನು ದೊರೆತಿದೆ. ಈ ಪ್ರಕರಣವೂ ಸಾರ್ವಜನಿಕ ವಲಯದಲ್ಲಿ ಭಾರೀ
ವಿಟ್ಲ: ರಾಕ್ಷಸ ಪ್ರವೃತ್ತಿ ಕಂಪನಿ ಎದುರಿಗೆ ಸಿಗುವ ರೈತರನ್ನು ನಾಶ ಮಾಡಲು ಮುಂದಾಗಿದೆ. ಇತಿಹಾಸದ ದಿನದಲ್ಲಿ ಹಾಗೂ ಇತ್ತೀಚಿನದ ದಿನದಲ್ಲಿ ದೇವರನ್ನು ಪ್ರಾರ್ಥಿಸಿದಾಗ ಪ್ರತ್ಯಕ್ಷವಾಗಿ ರಾಕ್ಷಸರನ್ನು ವಧಿಸಿದ ಘಟನೆಗಳಿದೆ. ಎರಡನೇ ಹಂತದಲ್ಲಿ ರೈತಾಪಿ ವರ್ಗವನ್ನು ಧಮನಿಸುವ ದುಷ್ಟರ ನಿಗ್ರಹಕ್ಕಾಗಿ ದೈವ ದೇವರ ಬಳಿ ದೂರು ನೀಡುವ ಕಾರ್ಯ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡುಕಂಬಳಗುತ್ತು ಹೇಳಿದರು.


















