Home ಕರಾವಳಿ Archive by category ಪುತ್ತೂರು (Page 8)

ಉಪ್ಪಿನಂಗಡಿ: ಮನೆಯ ತೋಟದ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಅವಿವಾಹಿತ ಯುವಕನೊಬ್ಬ ತನ್ನ ಮನೆಯ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆಯಿದೆ . ಇಲ್ಲಿನ ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ (28) ಆತ್ಮಹತ್ಯೆಗೈದ ಯುವಕ. ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ

ನೆಲ್ಯಾಡಿ: ಚಲಿಸುತ್ತಿರುವ ಲಾರಿಯಿಂದ ಜಿಗಿದು ಸಾವು

ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಚಲಿಸುತ್ತಿರುವ ಲಾರಿಯಿಂದ ಜಿಗಿದು ನಿರ್ವಾಹಕ ಸಾವನ್ನಪ್ಪಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಲಕ್ಷ್ಮಣನ್ ಸೆಂಗುತ್ತುವನ್(46) ಚಿನ್ನತೂಬುರ್ ನಾಗಪಟ್ಟಿನಮ್, ತಮಿಳುನಾಡಿನ ವ್ಯಕ್ತಿ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿಯಿಂದ ಕಲ್ಲಂಗಡಿಯನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದ ಲಾರಿಯು ಗುಂಡ್ಯ ಸಮೀಪದ ಅಡ್ಡಹೊಳೆ ತಲುಪುತಿದ್ದಂತೆ ಏಕಾಏಕಿಯಾಗಿ

ಸುಳ್ಯ. ಅರೆಭಾಷೆ ಕಾಮಿಡಿ ರಿಯಾಲಿಟಿ ಶೋದ ಮೊದಲ ಆಡಿಷನ್ ನ ಉದ್ಘಾಟನಾ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,  v4 ನ್ಯೂಸ್  ಹಾಗೂ ಎಂ.ಬಿ. ಫೌಂಡೇಶನ್ ಸಹಯೋಗದಲ್ಲಿ‌ ಅರೆಭಾಷೆ ಕಾಮಿಡಿ ಇದರ ಮೊದಲ ಆಡಿಷನ್ ನ ಉದ್ಘಾಟನಾ ಕಾರ್ಯಕ್ರಮವು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ  ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರೆಭಾಷೆಯ ಸಂಸ್ಕೃತಿ ಆಚಾರ

ಪುತ್ತೂರು: ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಮಾಸಿಕ ಸಭೆ

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಸ್ಪರ್ಧೆ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಜಿಲ್ಲಾ ಕೇಂದ್ರ ಘೋಷಣೆ ಸಹಿತ ಹಲವು ನಿರ್ಣಯಗಳ ಅಂಗೀಕಾರ ಪುತ್ತೂರು: ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ತಾಲೂಕಿನಾದ್ಯಂತ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ , ಪರಿಹಾರ ಕಾರ್ಯಗಳ ಬಗ್ಗೆ ಯೋಜನೆ ರೂಪಿಸಲು

ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್

ಪುತ್ತೂರು: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ಆಗಮಿಸಲಿದ್ದಾರೆ. ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರು ವರ್ಗಾವಣೆಗೊಂಡ ಬಳಿಕ ಶ್ರವಣ್ ಕುಮಾರ್ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳನ್ನು

ಪುತ್ತೂರು : ಕೋಟಿ ಚೆನ್ನಯ ಕಂಬಳ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧವಾಗಿರುವ ಪುತ್ತೂರಿನ 32ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಮಾ.1ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ಕಂಬಳವನ್ನು ಉತ್ತಮವಾಗಿ ನಡೆಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಹೇಳಿದರು. ಅವರು ಶನಿವಾರ ಪುತ್ತೂರು ದೇವಳದ ವಠಾರದಲ್ಲಿ ಕಂಬಳದ ಆಮಂತ್ರಣ ಪತ್ರಿಕೆಯನ್ನು

ಆಶೀರ್ವಾದ ಸಂಸ್ಥೆಯ ಸ್ವರ್ಣ ಉಳಿತಾಯ ಯೋಜನೆ:ಪ್ರತೀ ತಿಂಗಳ ಹಣ ಪಾವತಿಸಿ, ಬಹುಮಾನ ಗೆಲ್ಲಿ..!

ಕನಸು ಯಾರಿಗಿಲ್ಲ,ಕೋಟಿ ಗಟ್ಟಲೆ ಆಸ್ತಿ ಮಾಡುವ ಕನಸಲ್ಲ ,ನಮ್ಮ ನಾಳೆಯ ಸುಂದರ ಕನಸಿಗಾಗಿ,ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಹೌದಲ್ವಾ,ಜೀವನ ತುಂಬಾ ಚಿಕ್ಕದು ಸುಂದರ ಜೀವನಕ್ಕಾಗಿ ಜೀವನವಿಡೀ ಕಷ್ಟಪಡುತ್ತಾ ಇದ್ದರೂ ಜೀವನಕ್ಕೆ ಸಾಕಾಗಲ್ಲ, ಎಷ್ಟೇ ದುಡಿದರೂ ದುಂದು ವೆಚ್ಚ ಆಗ್ತಾ ಇರುತ್ತೆ,ಹಣ ಕೈಯಲ್ಲಿ ಬರುತ್ತೆ ಅಷ್ಟೆ ವೇಗವಾಗಿ ಹೊರಟೋಗುತ್ತೆ, ಆಗ ನಮ್ಮ ಕನಸುಗಳು ಮುಂದಿನ ಆಲೋಚನೆಗಳು ಆಲೋಚನೆಗಳಾಗಿಯೇ ಉಳಿದುಬಿಡುತ್ತದೆ,ಆದರೆ ಕೈ ಹಿಡಿಯೋದು ಅಂದರೆ ನಾವು ನಮ್ಮ ಕಷ್ಟ

ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನ

ಕಡಬ :ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನವನ್ನು (Science Model) ಏರ್ಪಡಿಸಲಾಗಿತ್ತು.ಕುಮಾರಸ್ವಾಮಿ ಪಿ ಯು ಕಾಲೇಜ್, ಸುಬ್ರಮ್ಮಣ್ಯ ಇದರ ಪ್ರಾಂಶುಪಾಲರಾದ ಡಾ l ಸಂಕೀರ್ತ್ ಹೆಬ್ಬಾರ್ ಇವರು ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಸುವುದರೊಂದಿಗೆ ವಿಜ್ಞಾನದ ಕುರಿತು ಸಂವಾದ ಕಾರ್ಯಕ್ರಮವನ್ನು

ಪುತ್ತೂರು : ಬೈಕ್, ರಿಕ್ಷಾ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರ ಸಾವು

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಫೆ.4ರಂದು ರಾತ್ರಿ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.ಕೆಮ್ಮಿಂಜೆ ಬೈಲು ದಿ.ಪುರುಷೋತ್ತಮ ಎಂಬವರ ಪುತ್ರ ಚೇತನ್(46ವ)ರವರು ಮೃತಪಟ್ಟವರು. ಘಟನೆಯಿಂದ ಬೈಕ್‍ನಲ್ಲಿ ಸಹಸವಾರ ಮನೀಷ್(10ವ)ರವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ತೌಸಿಕ್ ಅವರು ಗಾಯಗೊಂಡಿದ್ದಾರೆ.

ಪುತ್ತೂರು: ಕಂಪೌಂಡರ್ ನರಸಿಂಹ ಭಟ್ ಅಸ್ತಂಗತ

ಪುತ್ತೂರು: ‘ದಾಲ ಪೊಡ್ಯೋರ್ಚಿ ಪೂರ ಕಮ್ಮಿ ಆಪುಂಡು ಹಹಹ’ ಎಂದೇ ಪುತ್ತೂರು ಸಹಿತ ಹತ್ತೂರಿನ ಜನಮನ ಗೆದ್ದ ನಗುಮೊಗದ ಕಂಪೌಂಡರ್ ಡಾಕ್ಟರ್ ಎಂದೇ ಖ್ಯಾತರಾದ ಹಾರಾಡಿ ನಿವಾಸಿ ಕಂಪೌಂಡರ್ ನರಸಿಂಹ ಭಟ್ (82ವ) ಅವರು ಫೆ.3 ರ ರಾತ್ರಿ ಅಸ್ತಂಗತರಾಗಿದ್ದಾರೆ. ತನ್ನ 16ನೇ ವಯಸ್ಸಿನಿಂದ ಪುತ್ತೂರಿನ ಚಿಕಿತ್ಸಾಲಯವೊಂದರಲ್ಲಿ ಕಾಂಪೌಂಡ‌ರ್ ಆಗಿ 68 ವರ್ಷ ಸೇವೆ ಸಲ್ಲಿಸಿದ ನರಸಿಂಹ ಭಟ್ ಅವರು ನಿವೃತ್ತಿಗೊಂಡು ಮನೆಯಲ್ಲಿದ್ದರು. ಮೃತರು ಪತ್ನಿ ಕಾವೇರಮ್ಮ,