Home ಕರಾವಳಿ Archive by category ಪುತ್ತೂರು (Page 83)

ಪುತ್ತೂರಿನಲ್ಲಿ ಜಾನುವಾರುಗಳ ಏಲಂ ಪ್ರಕ್ರಿಯೆಗೆ ವಿರೋಧ

ಜುಲೈ.29ರಂದು 64 ಜಾನುವಾರುಗಳನ್ನು ಏಲಂ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ನಕಲಿ ರೈತರ ಹೆಸರಿನಲ್ಲಿ ಜಾನುವಾರುಗಳನ್ನು ಪಡೆದುಕೊಂಡು ಅವುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುವ ಸಾಧ್ಯತೆಗಳಿವೆ. ಆದ ಕಾರಣ ಕೂಡಲೇ ಜಾನುವಾರುಗಳ ಏಲಂ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೆ. ಕೃಷ್ಣ ಪ್ರಸನ್ನ

ಪುತ್ತೂರಿನಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಣೆ

ಪುತ್ತೂರು: ಕಾರ್ಗಿಲ್ ಯುದ್ಧದ ಬಳಿಕ ರಾಷ್ಟ್ರ ಭಕ್ತಿಯ ಅನಾವರಣಗೊಂಡಿದ್ದು, ಕಾರ್ಗಿಲ್ ಯುದ್ಧದಲ್ಲಿ ಗಳಿಸಿದ ವಿಜಯವು ಎಲ್ಲಾ ದೇಶವಾಸಿಗಳಿಗೆ ಪ್ರೇರಣೆಯಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸಿದ ಸೈನಿಕರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಪುತ್ತೂರಿನ ಮಿನಿ ವಿಧಾನ ಸೌಧದ ಮುಂಬಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ

ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ವಿಶೇಷ ಸಾಧನೆ: ಸನ್ಮಾನ

ಪುತ್ತೂರು; 2020-21 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಆರು ನೂರು ಅಂಕಗಳಿಗೆ ಆರು ನೂರು ಅಂಕಗಳನ್ನು ಪಡೆದು ವಿಶೇಷ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಸಿ.ಪಿ( ಮಂಡ್ಯದ ಸಿ ಪ್ರಕಾಶ್ ಮತ್ತು ಸುಗುಣ ದಂಪತಿ ಪುತ್ರಿ), ಶಶಾಂಕ್ ಬಿ(ಕೆದಿಲದ ಸೀತರಾಮ ಭಟ್ ಮತ್ತು ಗಾಯತ್ರಿ ದಂಪತಿ ಪುತ್ರ),ಮನೋಜ್ ಎಸ್.ಆರ್(

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪುತ್ತೂರು: 20 ವರ್ಷಗಳ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಯಾರದಲ್ಲಿ ತಂಡವೊಂದರಿಂದ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದರು. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆಯವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿದ ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಗೋಪಾಲ್ ನಾಯ್ಕ್ ಮತ್ತು ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. 2020ನೇ ನ.20ರಂದು ಮಧ್ಯಾಹ್ನ

ಪುತ್ತೂರಿನಲ್ಲಿ ಅಕ್ರಮ ಗೂಡಂಗಡಿಗಳ ತೆರವು: ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ

ಪುತ್ತೂರು ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳ ತೆರವು ಕಾರ್ಯಾಚರಣೆಗೆ ಪುತ್ತೂರು ನಗರ ಸಭೆ ಜು.೨೩ರ ಬೆಳ್ಳಂಬೆಳಗ್ಗೆ ಮುಂದಾಗಿದೆ. ಜೆಸಿಬಿ ಮೂಲಕ ನಗರ ಸಭೆ ಪೌರಾಯುಕ್ತ ಹಾಗೂ ಇತರ ಅಧಿಕಾರಿಗಳ ಸಮಕ್ಷಮದಲ್ಲಿ ಆಕ್ರಮ ಶೆಡ್ ಗಳನ್ನೂ ಕೆಡವಲಾಗುತ್ತಿದೆ. ತಳ್ಳು ಗಾಡಿಯ ಅನುಮತಿ ಪಡೆದು, ಒಂದಷ್ಟು ಸಮಯದ ಬಳಿಕ ಅಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತಿದ್ದವರಿಗೆ ನಗರ ಸಭೆ ಈ ಮೂಲಕ ಇಂದು ನಸುಕಿನ ವೇಳೆ ಆಘಾತ ನೀಡಿದೆ. ಈ ಅಂಗಡಿಗಳು

ದಲಿತ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸೇಸಪ್ಪ ಬೆದ್ರಕಾಡು ರಾಜೀನಾಮೆ

ಕಳೆದ 15 ವರ್ಷಗಳಿಂದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಅಧ್ಯಕ್ಷನಾಗಿದ್ದು, ಇದೀಗ ನನ್ನ ಅವಧಿ ಆ.15 ಕ್ಕೆ ಪೂರ್ಣಗೊಳ್ಳಲಿದ್ದು, ದ.ಕ.ಜಿಲ್ಲಾ ಕಾರ್ಯದರ್ಶಿಯವರಿಗೆ ರಾಜೀನಾಮೆ ನೀಡಿದ್ದೇನೆ ಎಂದು ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಳೆದ ೧೫ ವರ್ಷಗಳ ಕಾಲ ಅಧ್ಯಕ್ಷನಾಗಿ ಸಂಘವನ್ನು ಕಟ್ಟಿ, ಬೆಳೆಸಿ, ಸಂಘದ, ಸಮುದಾಯದವರಿಗೆ ಪ್ರತಿಯೊಂದು ವಿಚಾರದಲ್ಲೂ ನ್ಯಾಯ ಒದಗಿಸಿಕೊಟ್ಟು

ಮೂಲಭೂತ ಸೌಕರ್ಯ ವಂಚಿತ ಸಿರಿಬಾಗಿಲು: ಸೇತುವೆ ಇಲ್ಲದೆ ಗ್ರಾಮದ ಜನರ ಪರದಾಟ

ಮಳೆಗಾಲ ಬಂತೆಂದರೆ ಸಾಕು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಿರಿಬಾಗಿಲು ಎನ್ನುವ ಗ್ರಾಮ ಇತರ ಪ್ರದೇಶಗಳ ಸಂಪರ್ಕವನ್ನೇ ಕಳೆದುಕೊಂಡು ದ್ವೀಪವಾಗಿ ಬಿಡುತ್ತದೆ. ಶಿರಾಢಿಘಾಟ್ ನ ಮಧ್ಯಭಾಗದಲ್ಲಿರುವ ಈ ಗ್ರಾಮದ ಸುತ್ತ ಮೂರು ಹೊಳೆಗಳು ಹರಿಯುತ್ತಿದೆ, ಸೇತುವೆಯಿಲ್ಲದ ಕಾರಣ ಮಳೆಗಾಲದಲ್ಲಿ ಈ ಹೊಳೆಗಳು ತುಂಬಿ ಹರಿಯುವ ಕಾರಣ ಇಲ್ಲಿನ ಜನರಿಗೆ ಅಗತ್ಯ ಕಾರ್ಯಗಳಿಗಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಲಾರದ ಸಮಸ್ಯೆ ಇಲ್ಲಿ ವರ್ಷದಿಂದ ವರ್ಷಕ್ಕೆ

ಪುತ್ತೂರಿನ ಕಜೆ ಎಂಬಲ್ಲಿ ಆವರಣಗೋಡೆ ಕುಸಿತ : ಅಪಾಯದ ಅಂಚಿನಲ್ಲಿ ಮನೆ

ಪುತ್ತೂರು ಕಜೆ ದೇವಿ ನಗರ ಎಂಬಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಸಂತೋಷ್ ಕುಲಾಲ್ ಅವರ ಮನೆಯ ಆವರಣ ಗೋಡೆ ಕುಸಿದಿದ್ದು ಮನೆಯು ಅಪಾಯದ ಅಂಚಿನಲ್ಲಿದೆ ಇಲ್ಲಿಗೆ ರೈ ಎಸ್ಟೇಟ್ ಮಾಲಕರಾದ ಅಶೋಕು ಕುಮಾರ ರೈ ಕೋಡಿಂಬಾಡಿ ಉದ್ಯಮಿಗಳು ಮಂಗಳೂರು ಇವರು ಭೇಟಿ ನೀಡಿ ವೀಕ್ಷಿಸಿದರು ಆವರಣಗೋಡೆ ಕಟ್ಟಲು ಅಂದಾಜು ಸುಮಾರು ಎಂಟು ಲಕ್ಷ ತಗುಲಲಿದ್ದು ಸರಕಾರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ತಾನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದರು

ಕರಾವಳಿಯಲ್ಲಿ ಭಾರೀ ಮಳೆ: ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಹಾನಿ

ವಿಟ್ಲ: ವಿಟ್ಲ ಹೋಬಳಿ ವ್ಯಾಪ್ತಿಯ ಹಲವೆಡೆ ಮಳೆಗೆ ಭಾರೀ ಹಾನಿ ಸಂಭವಿಸಿದೆ. ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ಗಾಳಿ ಮಳೆಗೆ ನೇಮಕ್ಕುರವರ ಮನೆಯ ಮೇಲಿನ ಬರೆ (ಅವರಣ ಗೋಡೆ) ಕುಸಿದು ಬಿದ್ದಿದ್ದು, ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಪಂಚಾಯತ್ ಸದಸ್ಯ ಯಾಕುಬು ಮತ್ತು ಗ್ರಾಮಕರಣಿಕ ಕರಿಬಸಪ್ಪ ಆಗಮಿಸಿ ಪರಿಶೀಲಿಸಿದರು. ಬೋಳಂತೂರು ಗ್ರಾಮದ ಅಬ್ದುಲ್ ಖಾದ್ರಿ ಅವರ ಮನೆಯ ಪಕ್ಕದ ತಡೆಗೋಡೆ ಕುಸಿದು ಬಿದ್ದಿದೆ. ಚೆನ್ನಪ್ಪ ಪೂಜಾರಿ ಅವರ ಮನೆಯ ಹಿಂಭಾಗದಲ್ಲಿರುವ

ಪುತ್ತೂರಿನ ಚೆಲ್ಯಡ್ಕ ಸೇತುವೆ ಎರಡನೇ ಬಾರಿಗೆ ಮುಳುಗಡೆ

ಪುತ್ತೂರು:ತಾಲೂಕಿನ ಏಕೈಕ ಮುಳುಗು ಸೇತುವೆಯಾಗಿರುವ ಚೆಲ್ಯಡ್ಕ ಸೇತುವೆ ಈ ವರ್ಷದ ಮಳೆಗಾಲದಲ್ಲಿ ಎರಡನೇ ಬಾರಿಗೆ ಮುಳುಗಡೆಯಾಗಿದೆ. ಜು.18ರಂದು ಮುಂಜಾನೆಯಿಂದಲೇ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದ್ದು ಸೇತುವೆಯು ಮುಳುಗಡೆಯಾಗಿದೆ. ಇದರಿಂದಾಗಿ ದೇವಸ್ಯ ಮೂಲಕ ಸಂಚರಿಸಬೇಕಾದ ಖಾಸಗಿ ಬಸ್‌ಗಳು ಹಾಗೂ ಇತರೇ ವಾಹಗಳಿಗೆ ಅಡಚಣೆ ಉಂಟಾಗಿದ್ದು ಸಂಟ್ಯಾರು ರಸ್ತೆಯ ಮೂಲಕ ಸುತ್ತುವರಿದು ಚಲಿಸುವಂತಾಗಿದೆ.