Home ಕರಾವಳಿ Archive by category ಪುತ್ತೂರು (Page 86)

ಪುತ್ತೂರು ನಗರಸಭೆ ಕಚೇರಿ ಕಟ್ಟಡ, ಮಳೆ ನೀರು ಕೊಯ್ಲು ಅಳವಡಿಕೆಗೆ ಶಿಲನ್ಯಾಸ

ಪುತ್ತೂರು: ಕುಡಿಯುವ ನೀರು ಯೋಜನೆಗಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೂ ದಿನದ ೨೪ ಗಂಟೆಗಳ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪಡೆಯುವಲ್ಲಿ ಸ್ವಾವಲಂಭಿಗಳಾಲು ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಅವರು ಸೋಮವಾರ ಪುತ್ತೂರು ನಗರಸಭೆಯ ವತಿಯಿಂದ

ಪುತ್ತೂರಿನಲ್ಲಿ ಅನಾರೋಗ್ಯದಿಂದ ಬಾಣಂತಿ ಮೃತ್ಯು

ಪುತ್ತೂರು: ೨ ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಅನಾರೋಗ್ಯದಿಂದಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೃಷ್ಣನಗರದಲ್ಲಿ ನಡೆದಿದೆ. ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಬ್ಬಂದಿಯಾಗಿರುವ ದಿಲೀಪ್ ಅವರ ಪತ್ನಿ ಅಕ್ಷತಾ ನಾಯ್ಕ್ ಮೃತಪಟ್ಟವರು. ಅಕ್ಷತಾ ಅವರು ಪುತ್ತೂರು ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಂಬಂಧಿಸಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕುಂಬ್ರದ ಶಾಲೆಯ ಮೈದಾನದಲ್ಲಿ ನಳನಳಿಸಲಿದೆ ಭತ್ತದ ಪೈರು

ಶಾಲೆಯ ಮೈದಾನದಲ್ಲಿ ಮಕ್ಕಳ ಕಲರವ ಕೇಳಿಸೋದು ಸಾಮಾನ್ಯ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈ ಶಾಲೆಯ ಮೈದಾನದಲ್ಲಿ ಇನ್ನು ನಾಲ್ಕು ತಿಂಗಳ ಕಾಲ ಮಕ್ಕಳ ಕಲರವ ನಿಲ್ಲಲಿದ್ದು, ಈ ಸ್ಥಾನವನ್ನು ನಳನಳಿಸುವ ಭತ್ತದ ಪೈರುಗಳು ತುಂಬಲಿದೆ. ಸಂಘ-ಸಂಸ್ಥೆಗಳ ಸಹಕಾರದಿಂದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಈ ಭತ್ತದ ಗದ್ದೆ ಸಿದ್ಧಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಭತ್ತದ ಗಿಡಗಳ ನಾಟಿಯೂ ಆರಂಭಗೊಳ್ಳಲಿದೆ. ಹೌದು ರಾಜ್ಯದಲ್ಲೇ ಮೊದಲ ಬಾರಿಗೆ ಈ

ಸ್ವಚ್ಚ ಪರಿಸರ ನಿರ್ಮಾಣ ಮಲೇರಿಯಾ ನಿಯಂತ್ರಣದಲ್ಲಿ ಯಶಸ್ವಿಗೆ ದಾರಿ- ಡಾ. ದೀಪಕ್ ರೈ 

ಪುತ್ತೂರು: ದೇಶದಲ್ಲಿ ಸೊಳ್ಳೆಗಳ ಮೂಲಕ ಹರಡುವ ಹಲವು ರೋಗಗಳಿದ್ದು, ಈ ಪೈಕಿ ಮಲೇರಿಯಾ ರೋಗವೂ ಒಂದಾಗಿದೆ. ನಮ್ಮ ಸುತ್ತ ಮುತ್ತ ನೀರು ನಿಲ್ಲದಂತೆ ಮಾಡಿ ಸ್ವಚ್ಚ ಪರಿಸರ ನಿರ್ಮಾಣ ಮಾಡುವುದರಿಂದ ಮಲೇರಿಯಾ ನಿಯಂತ್ರಣದಲ್ಲಿ ನಾವು ಯಶಸ್ವು ಕಾಣಲು ಸಾಧ್ಯ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು. ಅವರು ದ.ಕ.ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಪುತ್ತೂರು ಇದರ ವತಿಯಿಂದ ಮಲೇರಿಯಾ

ಪುತ್ತೂರಿನಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ

ರಾಜ್ಯದಾದ್ಯಂತ ಇಂದಿನಿಂದ ಎರಡು ದಿನಗಳ ವೀಕೆಂಡ್ ಕರ್ಫೂ ಜಾರಿಯಲ್ಲಿದ್ದು, ಇಂದು ಮತ್ತೆ ನಾಳೆ ಸಂಪೂರ್ಣ ಬಂದ್ ಇರಲಿದೆ, ದಕ್ಷಿಣಕನ್ನಡ ಜಿಲ್ಲೆಯಲ್ಲೂ ವೀಕೆಂಡ್ ಕರ್ಫೂ ಜಾರಿಯಲ್ಲಿದ್ದು, ಹಾಲು, ಪೇವರ್ ಅಂಗಡಿ,ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಅಗಿದೆ. ಅನಗತ್ಯ ತೆರಳುವ ವಾಹನಗಳಿಗೆ ಪೋಲೀಸರಿಂದ ದಂಡ ವಿಧಿಸಿದ್ದಾರೆ. ಪುತ್ತೂರಿನಲ್ಲಿ ಪೋಲೀಸರ ಬಿಗಿ ಕಾವಲು ಏರ್ಪಡಿಸಿದ್ದಾರೆ. ವೀಕೆಂಡ್ ಕರ್ಫೂವನ್ನು ಪೊಲೀಸರು ಕಟ್ಟು ನಿಟ್ಟಾಗಿ

ಕಡಬದಲ್ಲಿ ಅಡಿಕೆ ಚೀಲ ಕದ್ದೊಯ್ದ ಪ್ರಕರಣ: ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಕಡಬ :ಸುಲಿದು ಮಾರಾಟ ಮಾಡಲು ಅಂಗಳದಲ್ಲಿ ಇಟ್ಟಿದ್ದ ಅಡಿಕೆ ಚೀಲವೊಂದನ್ನು ಬೈಕ್ ನಲ್ಲಿ ಬಂದು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಅಡಿಕೆ ಚೀಲದೊಂದಿಗೆ ರಂದು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಅಲೆಪ್ಪಾಡಿಯ ಸುಕೇಶ ಎಂಬವರ ಮನೆಯಿಂದ ಅಡಿಕೆ ಚೀಲ ಕಳವಾಗಿತ್ತು.ಆರೋಪಿ ಪರಮೇಶ್ವರ್ ಎಂಬಾತನನ್ನು ಇಂದು ಮುಂಜಾನೆ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಿ ಆತನು ಕಳವು ಮಾಡಿದ ಅಡಿಕೆಯನ್ನು ಮತ್ತು ಕಳವಿಗೆ ಉಪಯೋಗಿಸಿದ

ಕೆಮ್ಮಾರ: ಇಲಿಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗು ಸಾವು

ಇಲಿ ಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಪುತ್ರಿ, ಎರಡೂವರೇ ವರ್ಷದ ಶ್ರೇಯಾ ಮೃತಪಟ್ಟ ಮಗು. ಜೂ.19ರಂದು ಬೆಳಿಗ್ಗೆ ಮಗುವಿನ ತಂದೆ, ತಾಯಿ ನಾಯಿ ಗೂಡಿನ ಮೇಲಿದ್ದ ಪಿವಿಎಸ್ ಪೈಪು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕ್ಲೀನ್ ಮಾಡಿದ್ದು ಇದರಲ್ಲಿ ಎರಡು-ಮೂರು ತಿಂಗಳ ಹಿಂದೆ ತಂದಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು. ಮನೆಯವರು ಕೆಲಸ

ಸವಣೂರಿನಲ್ಲಿ ಕೋವಿಡ್ ಕಾರ್ಯಪಡೆಯ ಸಭೆ

ಸವಣೂರು: ಕೋವಿಡ್ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು.ಹೋಂ ಐಸೋಲೇಶನ್ ನಿಂದ ಇತರರಿಗೆ ಹರಡುವ ಸಾಧ್ಯತೆ ಜಾಸ್ತಿ.ಆದ್ದರಿಂದ ಕಡ್ಡಾಯವಾಗಿ ಪಾಸಿಟಿವ್ ಬಂದವರನ್ನೂ ಕೇರ್ ಸೆಂಟರ್ ಗೆ ಸೇರಿಸಬೇಕು. ಕುರಿತು ಎಲ್ಲರೂ ಗಮನಹರಿಸಬೇಕೆಂದು ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಸವಣೂರು ಗ್ರಾ.ಪಂ.ನಲ್ಲಿ ಕೋವಿಡ್ ಕಾರ್ಯಪಡೆಯ ವರದಿ ಪರಿಶೀಲನೆ ನಡೆಸಿ ಮಾತನಾಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್ ಕೇರ್ ಸೆಂಟರ್ ಗೆ

ಪುತ್ತೂರಿನಲ್ಲಿ ಹಡಿಲು ಗದ್ದೆಯ ಬೇಸಾಯ: ಶಾಸಕ ಸಂಜೀವ ಮಠಂದೂರು ಚಾಲನೆ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ವಿನೂತನ ಯೋಜನೆಯ ಅಂಗವಾಗಿ ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಕುರಿಯ ನೇತೃತ್ವದಲ್ಲಿ ಹಡಿಲು ಗದ್ದೆಯನ್ನು ಬೇಸಾಯ ಮಾಡಬೇಕು ಎನ್ನುವ ಕೋರಿಕೆಯ ಮೇರೆಗೆ ಕುರಿಯ ಗ್ರಾಮದ ಮುಳಿಯ ಶ್ಯಾಮ ಭಟ್ ಅವರ ಕುಟುಂಬದ ಗದ್ದೆಯಲ್ಲಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಕೃಷಿ ಆಂದೋಲನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ

ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು ದಾಖಲು

ಪುತ್ತೂರು: ಖಾಸಗಿ ನರ್ಸಿಂಗ್ ಹೋಮ್‌ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಐ.ಎಂ.ಎ ಡಾ.ಗಣೇಶ್ ಪ್ರಸಾದ್ ದೂರು ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ದಂದೆ ನಡೆಯುತ್ತಿದೆ. ಸುಲಿಗೆ ನಿಲ್ಲಿಸದಿದ್ದರೆ ಜನರಿಗೆ ಹೇಳಿ ಹೊಡೆಸುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಈ ಮುನ್ನ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ಆಧಾರದ ಮೇಲೆ ನರ್ಸಿಂಗ್ ಹೋಮ್ ಗಳ ಬಗ್ಗೆ