Home ಕರಾವಳಿ Archive by category ಬಂಟ್ವಾಳ (Page 38)

ಬಂಟ್ವಾಳದ ಮಂಡಾಡಿಯಲ್ಲಿ ಭಗವಧ್ವಜ, ಹನುಮಾನ ಚಿತ್ರಕ್ಕೆ ಹಾನಿ : ಪ್ರಕರಣ ದಾಖಲು

ಬಂಟ್ವಾಳದ ಎಸ್‍ಎಸ್ ಕಾಲೇಜಿನ ಬಳಿ ಇರುವ ಮಂಡಾಡಿ ಮಾರ್ಗಸೂಚಿ ಕಟ್ಟೆಹಾಗೂ ಅದರಲ್ಲಿದ್ದ ಭಗವಧ್ವಜ ಹಾಗೂ ಹನುಮನ ಚಿತ್ರವನ್ನು ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ನಡೆದಿದೆ. ಕಳೆದ 10-12 ವರ್ಷಗಳಿಂದ ಈ ಕಟ್ಟೆ ಇದ್ದು, ಕಳೆದ ಕೆಲವು ದಿನಗಳ ಹಿಂದೆ ವಿಶ್ವಹಿಂದೂಪರಿಷತ್ ಮಂಡಾಡಿ ಶಾಖೆಯು ನವೀಕರಣಗೊಳಿಸಿತ್ತು. ಇದನ್ನು ಸಹಿಸದ ದುಷ್ಕರ್ಮಿಗಳು ನಿನ್ನೆ ತಡರಾತ್ರಿ 2

ಬಂಟ್ವಾಳ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಅಪಾರ ಹಾನಿ

ಬಂಟ್ವಾಳ: ಮಂಗಳವಾರ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಉಂಟಾಗಿ ನಷ್ಟ ಸಂಭವಿಸಿದೆ. ಅರಳ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದು ಜನಹಿತಾಯ ವಿದ್ಯಾಸಂಸ್ಥೆಗೆ ಸೇರಿದ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದೆ. ಸಜೀಪನಡು ಗ್ರಾಮದ ದೇರಾಜೆ ಬರೆ ಎಂಬಲ್ಲಿ ಲೀಲಾ ಸಂಜೀವ ಪೂಜಾರಿಯವರ ಮನೆ ಸಮೀಪದ ಗುಡ್ಡ ಜರಿದು ಬಿದ್ದು ಮನೆಯ ಸುತ್ತ ಆವರಿಸಿಕೊಂಡಿದೆ. ಅರಳ ಗ್ರಾಮದ ಸುಂದರ ಎಂಬವರ ಮನೆಯ ಮೇಲೆ ಆವರಣ ಗೋಡೆ ಕುಸಿದು

ವಿಟ್ಲ: ಕೆರೆಗೆ ಹಾರಿ ಯುವತಿ ಆತ್ಮಹತ್ಯೆ

ವಿಟ್ಲ: ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಸಮೀಪದ ಮನೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ರವರ ಮಗಳು ನಿಶ್ಮಿತಾ(22) ಎಂದು ಗುರುತಿಸಲಾಗಿದೆ.ನಿಶ್ಮಿತಾ ರವರು ಡೆಂಟಲ್ ಕ್ಲಿನಿಕ್ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ಸಂಜೆಯಿಂದ ಕಾಣೆಯಾಗಿದ್ದಳು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅ.11 ರಂದು

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇ ಸ್ಟ್ಯಾಂಪಿಂಗ್ ಬಿಡುಗಡೆ

ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಜೀಪಮೂಡ ಇದರ ಸಿದ್ದಕಟ್ಟೆ ಶಾಖೆಯಲ್ಲಿ ಇ ಸ್ಟ್ಯಾಂಪಿಂಗ್ ಬಿಡುಗಡೆ ಸಮಾರಂಭ ನಡೆಯಿತು. ನ್ಯಾಯವಾದಿ ಸುರೇಶ್ ಶೆಟ್ಟಿ ಇ ಸ್ಟ್ಯಾಂಪಿಂಗ್ ಬಿಡುಗಡೆಗೊಳಿಸಿದರು. ಅವರು ಮಾತನಾಡಿ ಇಲ್ಲಿ ಇಸ್ಟ್ಯಾಂಪಿಂಗ್ ಆರಂಭಿಸಿರುವುದರಿಂದ ಗ್ರಾಮೀಣ ಜನರಿಗೆ ತುಂಬಾ ಅನುಕೂಲವಾಗಲಿದೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕೆಲಸಗಳಿಗೂ ಈ ಸ್ಟ್ಯಾಂಪ್ ಅಗತ್ಯವಾಗಿರುವುದರಿಂದ ಜನರು ನಗರಕ್ಕೆ ಹೋಗಬೇಕಾಗುತ್ತದೆ. ಠಸೆ ಪೇಪರ್

ದಾನಿಗಳ ನೆರವನ್ನು ಎದುರು ನೋಡುತ್ತಿದೆ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬ

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬವೊಂದು ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ದಾನಿಗಳ ನೆರವನ್ನು ಎದುರು ನೋಡುತ್ತಿದೆ. ಈ ಮನೆಯಲ್ಲಿ ವಾಸವಿರುವ ಮೂರು ಮಂದಿಯನ್ನು ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಮುಂದೇನು ಎನ್ನುವ ದಾರಿ ಕಾಣದೆ ಕಂಗೆಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸೇಸಮ್ಮ ಪೂಜಾರ್ತಿಯವರದ್ದು ಬಡ ಕುಟುಂಬ. ಸೇಸಮ್ಮ ಅವರ ಹಿರಿಯ ಮಗಳು ವೇದ ಎಲ್ಲರಂತೆ ಲವಲವಿಕೆಯಿಂದ

ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ ನಿಧನ

ಬಂಟ್ವಾಳ : ಪತ್ರಕರ್ತ,ಸಾಹಿತಿ ಫಾರೂಕ್ ಗೂಡಿನಬಳಿ( 38) ಅವರು ಸುದೀರ್ಘ ಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ಗೂಡಿನಬಳಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ವಿವಿಧ ಪತ್ರಿಕೆಗಳಿಗೆ ಬಂಟ್ವಾಳದಿಂದ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿಯಾಗಿರುವ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗ್ರಾಪಂ.ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ

ಮೀನಿನ ವ್ಯಾಪಾರಿಯ ಅಪಹರಣ: ವಿಟ್ಲ ಪೊಲೀಸ್ ಠಾಣೆಗೆ ದೂರು

ವಿಟ್ಲ: ಕೊಳ್ನಾಡು ಗ್ರಾಮದ ಕೆ.ಪಿ ಬೈಲು ನಾರ್ಶ ಎಂಬಲ್ಲಿ ಮೀನಿನ ವ್ಯಾಪಾರಿಯೊಬ್ಬರನ್ನು ಅಪರಿಚಿತರ ತಂಡವೊಂದು ಅಪಹರಣ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.   ಕೊಳ್ನಾಡು ಗ್ರಾಮದ ಕೆ ಪಿ ಬೈಲು ನಾರ್ಶ ನಿವಾಸಿ ಮಹಮ್ಮದ್ ಅನ್ಸಾರ್(34) ಅಪಹರಣಗೊಳಗಾದ ವ್ಯಕ್ತಿಯಾಗಿದ್ದು, ಈ ಬಗ್ಗೆ ಅವರ ಪತ್ನಿ ಅಪ್ಸ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಹಮ್ಮದ್ ಅನ್ಸಾರ್ (31) ಎಂಬವರು ಮೀನಿನ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಬೇರೆ

ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಶಕ್ತಿ, ಬೂತ್ ಅಧ್ಯಕ್ಷನೇ ಆತ್ಮ : ನಳಿನ್ ಕುಮಾರ್ ಕಟೀಲ್ ಹೇಳಿಕೆ

ಬಂಟ್ವಾಳ: ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಶಕ್ತಿ. ಬೂತ್ ಅಧ್ಯಕ್ಷನೇ ಆತ್ಮ. ಬೂತ್ ಅಧ್ಯಕ್ಷರಿಗೆ ಶಕ್ತಿ ತುಂಬಿ, ಗೌರವಿಸುವ ಉದ್ದೇಶದಿಂದ ಪ್ರತೀ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಪಕ್ಷದ ವತಿಯಿಂದ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಪುದು ಶಕ್ತಿ ಕೇಂದ್ರದ ವತಿಯಿಂದ

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ : ನೀರಿನ ಬಿಲ್ ಗೊಂದಲ, ಅಸಂವಿಧಾನಿಕ ಪದ ಬಳಕೆ

ಬಂಟ್ವಾಳ: ನೀರಿನ ಬಿಲ್ ಗೊಂದಲ, ಕ್ರಿಯಾಯೋಜನೆ ತಯಾರಿಕೆಯಲ್ಲಿ ತಾರತಮ್ಯ, ಪೌರಕಾರ್ಮಿಕ ದಿನಾಚರಣೆ ಊಟದ ವಿಚಾರ, ಅಸಂವಿಧಾನಿಕ ಪದ ಬಳಕೆ.. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜಟಾಪಟಿಗೆ ಕಾರಣವಾದ ಮುಖ್ಯಾಂಶಗಳು.. ಆದ್ಯತೆಯ ಕಾಮಗಾರಿ ಎಂದು ಹೇಳಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಹಣ ಮಾಡಿದ್ದು ಬಿಟ್ಟರೆ ಅಭಿವೃದ್ದಿ ಕಾರ್ಯ ಏನು ಮಾಡಿಲ್ಲ ಎಂದು ವಿಪಕ್ಷ ಸದಸ್ಯ

ಬಿ.ಸಿ. ರೋಡ್‍ನ ಕೊಡಂಗೆಯಲ್ಲಿ ನಿಲ್ಲಿಸಿದ್ದ ಲಾರಿ ಚಲಿಸಿ ಚಾಲಕ ಮೃತ್ಯು

ಬಂಟ್ವಾಳ: ನಿಲ್ಲಿಸಿದ್ದ ಲಾರಿ ಚಲಿಸಿ ಚಾಲಕ ಮೃತಪಟ್ಟ ಘಟನೆ ಬಿ.ಸಿ.ರೋಡಿನ ಕೈಕಂಬ ಸಮೀಪದ ಪರ್ಲಿಯಾ ಕೊಡಂಗೆ ಎಂಬಲ್ಲಿ ವೇಳೆ ನಡೆದಿದೆ. ಬಾಗಲಕೋಟ ಜಿಲ್ಲೆಯ ಜಾವೂರು ನಿವಾಸಿ ಬಾಲಪ್ಪ ಎ.ಜಾವೂರು ಮೃತಪಟ್ಟ ವ್ಯಕ್ತಿ.ಬಾಲಪ್ಪ ಅವರು ಇಲ್ಲಿನ ರಸ್ತೆ ಕಾಮಗಾರಿ ಗುತ್ತಿಗೆ ಸಂಸ್ಥೆಯೊಂದರಲ್ಲಿ ಕಳೆದ ಕೆಲ ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪರ್ಲಿಯಾ ಕೊಡಂಗೆ ಎಂಬಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು ಪ್ರಸ್ತುತ ಕಾಮಗಾರಿ