Home ಕರಾವಳಿ Archive by category ಬಂಟ್ವಾಳ (Page 41)

ಬಂಟ್ವಾಳ: ವೇತನ ಪಾವತಿಯಾಗದ ಕಾರಣ ಕ್ಯಾಂಟೀನ್ ಬಂದ್‍ಗೊಳಿಸಿ ಪ್ರತಿಭಟನೆ

ವೇತನ ಪಾವತಿಯಾಗದ ಕಾರಣ ಕ್ಯಾಂಟೀನ್ ಬಂದ್ ಗೊಳಿಸಿ ಪ್ರತಿಭಟನೆ ನಡೆಸುತ್ತಿರುವ ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳ ಸಂಕಷ್ಟಕ್ಕೆ ಸ್ಪಂದಿಸಿರುವ ಮಾಜಿ ಸಚಿವ ಬಿ. ರಮನಾಥ ರೈ ಆಹಾರದ ಕಿಟ್ ನೀಡುವ ಭರವಸೆ ನೀಡಿದ್ದಾರೆ. ಬುಧವಾರ ಕ್ಯಾಂಟೀನ್ ಗೆ ಭೇಟಿ ನೀಡಿದ ಅವರು ಇಂದಿರಾ ಕ್ಯಾಂಟೀನ್ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ತಿಳಿಸಿದರು. ಈ

ಪೈಪ್ ಲೈನ್‌ಗೆ ಕನ್ನ ಕೊರೆದು ಪೆಟ್ರೋಲ್ ಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ಸೊರ್ನಾಡು ಎಂಬಲ್ಲಿ ಸಾರ್ವಜನಿಕ ಸ್ವಾಮ್ಯಕ್ಕೊಳಪಟ್ಟ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್ ಲೈನ್‌ಗೆ ಕನ್ನ ಕೊರೆದು ಪೆಟ್ರೋಲಿಯಂ ಉತ್ಪನ್ನ ಕಳವು ನಡೆಸಿ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸ್ಥಳೀಯ ಅರ್ಬಿ ನಿವಾಸಿ ಐವನ್ ಚಾರ್ಲ್ ಪಿಂಟೋ(43) ಹಾಗೂ ಆತನಿಗೆ ಸಹಕರಿಸಿದ ಆರೋಪದಡಿ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್

ಎಸೆಸೆಲ್ಸಿ ಫಲಿತಾಂಶ: ಬಂಟ್ವಾಳದ ಎನ್. ಪ್ರತೀಕ್ ಮಲ್ಯ ಪೂರ್ಣ ಅಂಕ

ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿರುವ ಎಸ್‌ವಿಎಸ್ ದೇವಳ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ 625 ಅಂಕ ಪಡೆದುಕೊಂಡು ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಇಲ್ಲಿನ ತ್ಯಾಗರಸ್ತೆಯ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ಎನ್.ರಾಧಿಕ ಮಲ್ಯ ಅವರ ಪುತ್ರರಾಗಿರುವ ಪ್ರತೀಕ್ ಮುಂದೆ ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ತನ್ನ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ, ಪೋಷಕರು, ಮನೆಯವರ ಬೆಂಬಲವೇ

ಬೋರ್‍ವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂಬ ಆರೋಪ : ವ್ಯಕ್ತಿಯೋರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ

ಬಂಟ್ವಾಳ: ಬೊರೆವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂದು ಆರೋಪಿಸಿ ವ್ಯಕ್ತಿಯೊರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಲ್ಲದೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ ಘಟನೆ ಸಂಗಬೆಟ್ಟು ಗ್ರಾಮದ ಅಳಿಕೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಲ್ವಿನ್ ರಿಚರ್ಡ್ ಫಲೇರಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳೀಯ ನಿವಾಸಿ ಅನಿಲ್ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.ರಿಚರ್ಡ್ ಫಲೇರಾ ತನ್ನ ತಂದೆಯಿಯೊಂದಿಗೆ ಅಳಿಕೆ ಎಂಬಲ್ಲಿ

ವೀಕೆಂಡ್ ಕರ್ಪ್ಯೂಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ

ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಘೋಷಿಸಿದ ವೀಕೆಂಡ್ ಕರ್ಪ್ಯೂಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಟ್ಟುನಿಟ್ಟಿನ ಕರ್ಪ್ಯೂ ಪಾಲನೆಯಾಗದ ಹಿನ್ನಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ಸರಕಾರಿ ಅಂಗಡಿ, ಬಸ್, ಕಾರು, ರಿಕ್ಷಾ ಸಹಿತ ಖಾಸಗಿ ವಾಹನಗಳ ಸಂಚಾರ ಎಂದಿನಂತೆಯೇ ಇತ್ತು. ಕೆಲವೊಂದು ಅಂಗಡಿ, ಕಚೇರಿಗಳು ಸ್ವಯಂ ಪ್ರೇರಿತರಾಗಿ ಬಂದ್ ಗೊಳಿಸಿ ವೀಕೆಂಡ್ ಕರ್ಪ್ಯೂಗೆ ಬೆಂಬಲ ನೀಡಿದ್ದಾರೆ. ಮೆಡಿಕಲ್,

ರಾಜಧರ್ಮದ ಕುರಿತು ಭಾಷಣ ಮಾಡಿದ್ರೆ ಸಾಲದು, ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು: ಮಾಜಿ ಸಚಿವ ರಮಾನಾಥ ರೈ

ಬಂಟ್ವಾಳ: ಬಿಪಿಎಲ್ ಕಾರ್ಡ್ ರದ್ದುಮಾಡುವುದು, ಅದನ್ನು ಪುನರ್ ವಿಮರ್ಶೆ ಮಾಡಿ ಕೊಡಿಸುತ್ತೇವೆ ಎನ್ನುವುದು ಆಡಳಿತ ಪಕ್ಷದ ಪ್ರಚಾರದ ತಂತ್ರ ಎಂದು ಮಾಜಿ ಸಚಿವ ಬಿ. ರಮನಾಥ ರೈ ಆರೋಪಿಸಿದ್ದಾರೆ. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ರಾಜಧರ್ಮದ ಕುರಿತು ಕೇವಲ ಭಾಷಣ ಮಾಡಿದರೆ ಸಾಲದು ಅದನ್ನು ಅನುಷ್ಟಾನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಆಡಳಿತ ಪಕ್ಷಕ್ಕೆ ಸಂಬಂಧಪಟ್ಟವರೇ ಬಿಪಿಎಲ್ ಕಾರ್ಡ್ ರದ್ದು

ಬಂಟ್ವಾಳದಲ್ಲಿ ಹಸಿರು ನಮನ ಹಾಗೂ ಶ್ರದ್ಧಾಂಜಲಿ ಸಭೆ

ಗದಗ ಜಿಲ್ಲೆಯ ನರಗುಂದದಲ್ಲಿ 41 ನೇ ರೈತಹುತಾತ್ಮ ದಿನಾಚರಣೆಯ ಅಂಗವಾಗಿ ಕೃಷಿ ಉಳಿಸಿ – ಪ್ರಜಾಪ್ರಭುತ್ವ ರಕ್ಷಿಸಿಸಂಕಲ್ಪ ದಿನದಂದು ದೇಶದ ರೈತರ ಸಂಕಕ್ಷಣೆ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಪ್ರತಿಜ್ಞೆ ಮಾಡಿ ಹಿಂತಿರುಗುವ ಸಂದರ್ಭದಲ್ಲಿ ಚಿಕ್ಕಮಗಳೂರಿನ ಹತ್ತಿರ ಭಾರಿ ವಾಹನ ಅಪಘಾತದಲ್ಲಿ ಹುತಾತ್ಮರಾದ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷರಾದ ಎಮ್.ರಾಮು ಚೆನ್ನಪಟ್ಟಣ ಹಾಗೂ ಹಿರಿಯ ಉಪಾಧ್ಯಕ್ಷರಾದ ಜಿ.ಟಿ.ರಾಮಸ್ವಾಮಿಯವರಿಗೆ ಹಸಿರು ನಮನ ಹಾಗೂ

ಸೊರ್ನಾಡು ಬಳಿ ಡೀಸೆಲ್ ಪೈಪ್‌ಲೈನ್‌ಗೆ ಕನ್ನ

ಬಂಟ್ವಾಳ: ಮಣ್ಣಡಿ ಹಾದು ಹೋಗಿರುವ ಪೈಪ್ ಲೈನ್ ಗೆ ಕನ್ನ ಕೊರೆದು ಡಿಸೇಲ್ ಕಳವು ನಡೆಸುತ್ತಿದ್ದ ಪ್ರಕರಣವೊಂದು ತಾಲೂಕಿನ ಅರಳ ಗ್ರಾಮದ ಸೊರ್ನಾಡು ಬಳಿ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ. ಇಲ್ಲಿನ ಅರ್ಬಿ ಎಂಬಲ್ಲಿ ಐವನ್ ಪಿಂಟೊ ಎಂಬರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಮಂಗಳೂರು- ಬೆಂಗಳೂರಿಗೆ ಹಾದು ಹೋಗಿರುವ ಎಚ್ ಪಿ.ಎಸ್ ಎಲ್ ಪೆಟ್ರೊನೆಟ್ ಸಂಸ್ಥೆಗೆ ಸೇರಿದ ಪೈಪ್ ಲೈನ್ ಗೆ ಕನ್ನ ಕೊರೆದು ಡಿಸೆಲ್ ಕಳವು ನಡೆಸಲಾಗಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಬೆಳಕಿಗೆ

ಬಂಟ್ವಾಳ : ಸಂಚಾರಿ ಆರೋಗ್ಯ ಬಸ್ ಆರಂಭ

ಬಂಟ್ವಾಳದ ತಾಲೂಕಿನ ಜನತೆಗೆ ಉತ್ಕೃಷ್ಟ ವಾದ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಬಸ್ ಆರಂಭಿಸಲಾಗಿದೆ. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರ ಮುತುವರ್ಜಿಯಿಂದ ಸಂಚಾರಿ ಆರೋಗ್ಯ ಬಸ್ ವ್ಯವಸ್ಥೆ ಮಾಡಲಾಗಿದೆ. ಜನರ ಆರೋಗ್ಯದ ಸುರಕ್ಷತೆಯ ಜಾಗೃತಿಯ ಸಲುವಾಗಿ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನು ಕಾವಳಮೂಡುರು ಗ್ರಾಮ ಪಂಚಾಯತ್ ನ ಕೆದ್ದಳಿಕೆ ಶಾಲಾ ವಠಾರಕ್ಕೆ ಸಂಚಾರಿ ಆರೋಗ್ಯ ಬಸ್ ಆಗಮಿಸಿತು. ಇದರ ಸದುಪಯೋಗವನ್ನು

ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ: ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಲಕ್ಷ್ಮಣ ಎಂಬವರ ಮಗ ಕಾರ್ತಿಕ್ ಎಂಬಾತನ ಮೃತದೇಹವಿದಾಗಿದ್ದು ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸಂಜೆಯ ವೇಳೆ ಮನೆಯಿಂದ ಹೊರಟ ಕಾರ್ತಿಕ್ ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಮಂದಿ ಹುಡುಕಾಟ ಆರಂಭಿಸಿದ್ದರು. ಇಂದು ಮುಂಜಾನೆ ೩ ಗಂಟೆಯ ವೇಳೆಗೆ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ