ವಿಟ್ಲ: ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆ ಭಾಗಶಃ ಹಾನಿಗೊಂಡ ಘಟನೆ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ಸಂಭವಿಸಿದೆ.ಜಯಂತಿ ಮಕ್ಕಳ ಮಕ್ಕಳಾದ ಪ್ರಜೀತಾ(19) ರಕ್ಷಿತ (24) ಅವರು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೀರಕಂಬ ಕಲ್ಮಲೆ ಜಯಂತಿ ಮತ್ತು ರಘುನಾಥ ಶೆಟ್ಟಿ ದಂಪತಿಗಳ ಮನೆಗೆ ಸಂಜೆ ವೇಳೆ ಸಂಭವಿಸಿದ ಭಾರೀ ಸಿಡಿಲು
ಬಂಟ್ವಾಳ ಪುಂಜಾಲಕಟ್ಟೆ ಹೆದ್ದಾರಿ ಅಗಲಗೊಳ್ಳುವ ಕಾರ್ಯದ ಸಂದರ್ಭ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ ಇದುವರೆಗೂ ಪರಿಹಾರ ಬಾರದೇ ಇರುವ ಹಿನ್ನೆಲೆಯಲ್ಲಿ ಜುಲೈ ೨೦ರೊಳಗೆ ಈ ಕುರಿತು ಯಾವುದೇ ಪರಿಹಾರ ಬರದಿದ್ದರೆ ತಮ್ಮ ಜಮೀನಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಭೂಮಿ ಕಳೆದುಕೊಂಡವರು ನಾವೂರಿನಲ್ಲಿ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿದ ಸಿಪ್ರಿಯನ್ ಸಿಕ್ವೇರಾ ಮತ್ತು ಸದಾನಂದ ನಾವೂರು, ಬಂಟ್ವಾಳ ಪುರಸಭಾ
ವಿಟ್ಲ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ನಾಲ್ವರ ತಂಡ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಸಂಭವಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ ಅಬ್ದುಲ್ ಹ್ಯಾರಿಸ್ (29) ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾಡುಮಠ ನಿವಾಸಿಗಳಾದ ಅವಿನಾಶ್, ವಿನೀತ್, ದಿನೇಶ್, ಮತ್ತೊಬ್ಬ ಅಪರಿಚಿತ
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್ ಗಳನ್ನು ಗ್ರಾಮ ಮಟ್ಟದಲ್ಲಿ ನೀಡಬೇಕು ಹಾಗೂ ಶಾಸಕರು ಗಳು ಆಹಾರ ಕಿಟ್ ಗಳಲ್ಲಿ ಹಸ್ತಕ್ಷೇಪ ಮಾಡವುದನ್ನು ಖಂಡಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ .ಸಿ.ಐ.ಟಿ.ಯು ವತಿಯಿಂದ ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಮುಖಾಂತರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಯವರಿಗೆ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ನಿಯೋಗದಲ್ಲಿ ಸಂಘಟನೆಯ ಬಂಟ್ವಾಳ
ಬಂಟ್ವಾಳ: ಮಾಜಿ ಕಂಬಳ ಓಟಗಾರ, ಧಾರ್ಮಿಕ, ಸಹಕಾರಿ ಮುಂದಾಳು ಉಳಿಗ್ರಾಮದ ಕಕ್ಯಪದವು, ಕಿಂಜಾಲು ನಿವಾಸಿ ಜಯ ಶೆಟ್ಟಿ ಕಿಂಜಾಲು(65) ಅವರು ಅಸೌಖ್ಯದಿಂದ ಜೂ.೨೭ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಜಯ ಶೆಟ್ಟಿ ಅವರು ಉದಯವಾಣಿಯಿಂದ ಕುಗ್ರಾಮವೆಂದು ಗುರುತಿಸಿದ್ದ ಉಳಿ ಗ್ರಾಮದಲ್ಲಿ ಸೌಲಭ್ಯಗಳ ಕೊರತೆಗಳ ಮಧ್ಯೆ ಉತ್ತಮ ಕೃಷಿ ಸಾಧನೆ ಮಾಡಿದ್ದರು.
ಬಂಟ್ವಾಳ: ರಕ್ಷಿತಾರಣ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧದ ಮರಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ವಲಯ ಅರಣಾಧಿಕಾರಿಗಳು ಬಂಧಿಸಿದ್ದು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಾತೂರು ನಿವಾಸಿ ಇಬ್ರಾಹಿಂ ಹಾಗೂ ಇರಾ ಗ್ರಾಮದ ಮೊಯ್ದೀನ್ ಬಂಧಿತ ಆರೋಪಿಗಳು. ಸಿದ್ದೀಕ್ ಹಾಗೂ ಕೊರುಂಗು
ಬಂಟ್ವಾಳ: ತಂದೆಯೇ ತನ್ನ ಸ್ವಂತ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯ ಸಮೀಪ ಭಜನಾ ಮಂದಿರದ ಬಳಿ ನಿವಾಸಿ ಬಾಬು ನಾಯ್ಕ (58) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಸಾತ್ವಿಕ್ (15) ಕೊಲೆಯಾದ ಯುವಕ. ಕುಡಿತದ ಚಟ ಹೊಂದಿದ್ದ ಬಾಬು ನಾಯ್ಕ್ ಅವರು ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲಕ ಕಾರಣಕ್ಕಾಗಿ
ವಿಟ್ಲ: ಅನಗತ್ಯವಾಗಿ ವಿಟ್ಲ ಪೇಟೆ ಪ್ರವೇಶಿಸಿ ನೋ ಪಾರ್ಕಿಂಗ್ ನಲ್ಲಿ ವಾಹನಗಳನ್ನು ನಿಲ್ಲಿಸಿ ವಾಹನ ದಟ್ಟಣೆಗೆ ಕಾರಣವಾದ ವಾಹನಗಳನ್ನು ವಿಟ್ಲ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಜಿಲ್ಲಾಧಿಕಾರಿ ಲಾಕ್ ಡೌನ್ ಸಡಿಲಿಕೆಗೊಳಿಸಿದ್ದರಿಂದ ಇಂದು ಪೇಟೆಯಲ್ಲಿ ಹೆಚ್ಚಿನ ವಾಹನ ದಟ್ಟನೆ ಉಂಟಾಗಿದೆ. ವಿಟ್ಲ-ಪುತ್ತೂರು ರಸ್ತೆಯ ಎಂಪೈರ್ ಮಾಲ್ ನ ಮುಂಭಾಗ ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಅದರ ಸವಾರರ ತೆರಳಿದ್ದರು. ಇದರಿಂದ ಪುತ್ತೂರು ರಸ್ತೆಯಲ್ಲಿ ವಾಹನ ದಟ್ಟಣೆ
ವಿಟ್ಲ: ನವಭಾರತ್ ಯುವಕ ಸಂಘ ಅನಂತಾಡಿ ವತಿಯಿಂದ ಪರಿಸರ ಸಂರಕ್ಷಣಾ ಪ್ರಯುಕ್ತ ಮನೆಗೊಂದು ಸಸಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಅನಂತಾಡಿ ಗ್ರಾಮದ ಸುತ್ತ ಮುತ್ತಲಿನ ಹಲವಾರು ಮನೆಗಳಿಗೆ ಆರ್ಯುವೇದಿಕ್ ಸಂಬಧಿಸಿದ ಸಸಿಗಳನ್ನು ನೀಡಿದರು.ಈ ಕಾರ್ಯ ಕ್ರಮದಲ್ಲಿ ನವಭಾರತ್ ಅಧ್ಯಕ್ಷ ಪವನ್ ಕುಮಾರ್ ಅನಂತಾಡಿ, ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡು ಯಂತ್ರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ನಡೆದಿದೆ. ಉಪ್ಪಿನಂಗಡಿ ಕಡೆಯಿಂದ ಮಂಗಳೂರಿನ ಬೈಕಂಪಾಡಿಗೆ ಸಿಮೆಂಟ್ ಮಿಕ್ಸರ್ ಯಂತ್ರವನ್ನು ಸಾಗಾಟ ಮಾಡುತ್ತಿದ್ದ ಲಾರಿ ಮಾಣಿ ಸಮೀಪ ಚಾಲಕನ ನಿಯಂತ್ರಣ ಕಳೆದು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ. ಮುಂಭಾಗದಿಂದ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು