Home ಕರಾವಳಿ Archive by category ಬೆಳ್ತಂಗಡಿ

ಕಡಬ: ಆರೋಗ್ಶ ಸುಧಾರಣೆಗಾಗಿ ಧರ್ಮಸ್ಥಳ ಯೋಜನೆಯಿಂದ ಸಹಾಯಧನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಲ್ಶ ಗ್ರಾಮದ ಸನ್ನಿದಿ ಪ್ರಗತಿಬಂಧು ತಂಡದ ಸದಸ್ಶರಾದ ಯಾದವ ರವರಿಗೆ ಕ್ರಿಟಿಕಲ್ ಇನ್ಲೇಸ್ ಯೋಜನೆಯಡಿಯಲ್ಲಿ ರೂ.25000 ಸಹಾಧನವನ್ನು ಆರೋಗ್ಶ ಸುಧಾರಣೆಗಾಗಿ ವಿತರಿಸಿ ಸಾಂತ್ವಾನ ತಿಳಿಸಲಾಯಿತು.ಬಲ್ಶ ಗ್ರಾಮದ ಯಾದವರವರು ಕೆಲಸ ಮಾಡುವ ಸಂದರ್ಭ ಆಕಸ್ಮೀಕವಾಗಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು

ಬೆಳ್ತಂಗಡಿಗೆಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು: ಸಚಿವರಿಗೆ ಅಭಿನಂದನೆ

ಬೆಳ್ತಂಗಡಿ. ತಾಲೂಕಿನ ಸುಮಾರು 60 ವರ್ಷ ಹಳೆಯದಾದ ಬೆಳ್ತಂಗಡಿಯ ನ್ಯಾಯಾಲಯದ ಕಟ್ಟಡ ನಾದುರಸ್ತಿಯಲ್ಲಿದ್ದು ಹೊಸ ನ್ಯಾಯಾಲಯದ ಕಟ್ಟಡಕ್ಕೆ ಸರ್ಕಾರ 9 ಕೋಟಿ ಅನುದಾನ ಮಂಜೂರು ಗೊಳಿಸಿದೆ. ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಸಚಿವರಾದ ಎಚ್ ಕೆ ಪಾಟೀಲ್ ರವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ,ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಹಾಗೂ ಅನುದಾನಕ್ಕೆ ಸಹಕರಿಸಿದ

ಬೆಳ್ತಂಗಡಿ: ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67) ಶನಿವಾರ ರಾತ್ರಿ ಹೃದಯಾಘಾತದಿಂದ ಮಂಗಳೂರಿನ ಮನೆಯಲ್ಲಿ ನಿಧನರಾದರು. ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಮೇಳದ ಪ್ರಬಂಧಕ ರಾಗಿ ಸೇವೆ ಸಲ್ಲಿಸಿದ್ದರು.ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗಗಳಲ್ಲಿ ಎಲ್ಲಾ ಸ್ವರೂಪದ ಪಾತ್ರ ಗಳನ್ನು ಅವರು ನಿರ್ವಹಿಸಿದ್ದರು.ಪುಂಡು, ರಾಜವೇಶ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದರು. ಹೃದಯ

ಬೆಳ್ತಂಗಡಿ: ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

ಬೆಳ್ತಂಗಡಿ: ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನರಸಿಂಹಗಡ ಕೋಟೆ (ಗಡಾಯಿಕಲ್ಲು), ಕಡಮಗುಂಡಿ, ಬೊಳ್ಳೆ, ಮತ್ತು ಬಂಡಾಜೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಂದಿನ ಆದೇಶದ ವರೆಗೆ ಪ್ರವೇಶವನ್ನು ನಿಷೇದಿಸಿದ ಬೆಳ್ತಂಗಡಿ ವನ್ಯಜೀವಿ ವಿಭಾಗ ಆದೇಶ ಮಾಡಿದೆ. ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ ಕಲ್ಲು ಬಂಡೆಗಳಿದ್ದು, ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದು, ಎಲ್ಲಾ ನದಿ ಹಳ್ಳಗಳು ಉಕ್ಕಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ರಕ್ಷಿತ್ ಶಿವರಾಂ ಮನವಿ ಸಲ್ಲಿಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳ ಬಗ್ಗೆ, ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ ರವರು ಮಾಹಿತಿಯನ್ನು ನೀಡಿದರು. ಜಿಲ್ಲೆಯ ಜನತೆ ಶಾಂತಿ ಸೌಹಾರ್ದತೆಯನ್ನು ಬಯಸುತ್ತಿದ್ದಾರೆ. ಆದರೆ ಕೆಲವು ವಿಘ್ನ ಸಂತೋಷಗಳು ಜಿಲ್ಲೆಯ

ಮಂಗಳೂರು ವಿ. ವಿ. ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾಗಿ ಯೋಗೀಶ್ ಕೈರೋಡಿ ಆರಂಬೋಡಿ ಆಯ್ಕೆ

ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕೈರೋಡಿ ನಿವಾಸಿ ಲೇಖಕ ಡಾ. ಯೋಗೀಶ್ ಕೈರೋಡಿ ಇವರನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ‌ ಪೀಠದ ಸಲಹಾ ಸಮಿತಿಗೆ ಸರಕಾರದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕೊಕ್ಕಡ: ಜೀಪು, ಗೂಡ್ಸ್ ರಿಕ್ಷಾ ನಡುವೆ ಡಿಕ್ಕಿ – ನಾಲ್ವರಿಗೆ ಸಣ್ಣಪುಟ್ಟ ಗಾಯ

ಕೊಕ್ಕಡ: ಪಟ್ಟೂರು ಬಳಿಯ ಪುಂಡಿಕಾಯಿ ತಿರುವಿನಲ್ಲಿ ಗುರುವಾರದಂದು ಜೀಪು ಮತ್ತು ಗೂಡ್ಸ್ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಉಂಟಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾ ಮತ್ತು ಜೀಪು ಎರಡೂ ಭಾಗಶಃ ಹಾನಿಗೊಳಗಾಗಿವೆ. ಘಟನೆಯಲ್ಲಿ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸುಂದರಿ, ಗಿರಿಜಾ ಮತ್ತು ಲಲಿತ ಎಂಬ ಮಹಿಳೆಯರು ಹಾಗೂ ರಿಕ್ಷಾ ಚಾಲಕ ಸಿದ್ದಿಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ

ಸುಬ್ರಹ್ಮಣ್ಯ : ಚಲನಚಿತ್ರ ನಟ ಪ್ರಭುದೇವ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

ಚಲನಚಿತ್ರರಂಗದ ಖ್ಯಾತ ನಟ ಪ್ರಭುದೇವ ಕುಟುಂಬ ಸಮೇತ ಇಂದು ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಳದಲ್ಲಿ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು. ಪ್ರಭುದೇವ್ ಪತ್ನಿ ಹಾಗೂ ಕುಟುಂಬ ವರ್ಗದವರು ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಶ್ರೀ ದೇವರ ಮುಖ್ಯ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ತದನಂತರ ದೇವಳದ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಪ್ರಭುದೇವ ದಂಪತಿ ಯವರನ್ನು ಶಾಲು ಹೊಂದಿಸಿ

ಕೊಕ್ಕಡ: ಮೂರು ತಾಲೂಕುಗಳನ್ನು ಬೆಸೆಯುವ ಕೋಡಂಗೇರಿ – ಉಪ್ಪಾರಹಳ್ಳ ಸೇತುವೆ, ಕಿಂಡಿ ಅಣೆಕಟ್ಟು ಲೋಕಾರ್ಪಣೆ

ಕೊಕ್ಕಡ: ಕೊಕ್ಕಡ ಮತ್ತು ಗೋಳಿತೊಟ್ಟು ಗ್ರಾಮದ 500ಕ್ಕೂ ಹೆಚ್ಚು ಮನೆಗಳ ನಿವಾಸಿಗಳ 40 ವರ್ಷಗಳ ಬೇಡಿಕೆಯ ರೂಪದಲ್ಲಿ ರೂ.3.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೋಡಂಗೇರಿ – ಉಪ್ಪಾರಹಳ್ಳ ಸೇತುವೆ ಹಾಗೂ ಕಿಂಡಿ ಅಣೆಕಟ್ಟನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಾ.8ರಂದು ಲೋಕಾರ್ಪಣೆ ಮಾಡಿದರು. ಈ ಸೇತುವೆ ಮತ್ತು ಅಣೆಕಟ್ಟಿನ ನಿರ್ಮಾಣದಿಂದ ರೈತರಿಗೆ ನೀರಾವರಿ ಹಾಗೂ ಜನ ಸಂಪರ್ಕ ಸುಗಮಗೊಳ್ಳಲಿದೆ.ಎಂದು ಹೇಳಿದರು. ಈ ವೇಳೆ ಶಾಸಕರನ್ನು ಸ್ಥಳೀಯರು

ಕೊಕ್ಕಡ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ 83 ಲಕ್ಷ ವೆಚ್ಚದ ಪುನರ್‌ವಸತಿ ಕೇಂದ್ರ: ಕೊಕ್ಕಡದಲ್ಲಿ ಭೂಮಿ ಪೂಜೆ

ಎಂಡೋಸಲ್ಫಾನ್ ಸಂತ್ರಸ್ತರ ಪುನರ್‌ವಸತಿ ಮತ್ತು ಭವಿಷ್ಯದ ಅನುಕೂಲಕ್ಕಾಗಿ ಎಂಆರ್‌ಪಿಎಲ್ (MRPL) ನಿಂದ 83 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಭೂಮಿ ಪೂಜೆ ಮಾ.8 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೆರವೇರಿಸಿದರು. ಕೊಕ್ಕಡ ಗ್ರಾಮ ಪಂಚಾಯತಿ ಸಮೀಪ ಈ ಪುನರ್‌ವಸತಿ ಕೇಂದ್ರ ನಿರ್ಮಾಣವಾಗಲಿದ್ದು, ಎಂಡೋ ಸಂತ್ರಸ್ತರ ಆರೋಗ್ಯದ ಕಲ್ಯಾಣಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ,