Home ಕರಾವಳಿ Archive by category ಮಂಗಳೂರು (Page 15)

ರಾಷ್ಟ್ರೀಯ ಈಜುಸ್ಪರ್ಧೆಯಲ್ಲಿಆಯ್ಕೆಯಾದ ಮಂಗಳಾ ಈಜು ಕ್ಲಬ್ ಸದಸ್ಯೆಯರಾದ ಚಾರ್ವಿ ಎಂ ಹಾಗೂ ಪ್ರಾಪ್ತಿ ಜೆ.ಪಿ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ನ ಸದಸ್ಯೆಯಾದ ಕು| ಚಾರ್ವಿ ಎಂ (ಲೇಡಿಹಿಲ್ಲ್ ವಿಕ್ಟೋರಿಯ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿನಿ) ಇವರು 14 ವರ್ಷದ ಬಾಲಕಿಯರ ವಿಭಾಗದಲ್ಲಿ 2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ ಒಟ್ಟು 5 ಪದಕಗಳನ್ನು ಮತ್ತು ಮಂಗಳಾ ಈಜು ಕ್ಲಬ್ನ

ಕಾಂತಾವರ ಕನ್ನಡ ಸಂಘದ ನಾಲ್ಕು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ೨೦೨೫ರ ಸಾಲಿನ ನಾಲ್ಕು ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಸರಸ್ವತಿ ಬಲ್ಲಾಳ್ ಮತ್ತು ಡಾ.ಸಿ.ಕೆ.ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಅವರಿಗೆ, ಧಾರವಾಡದ ಹಿರಿಯ ಸಾಹಿತಿ ಡಾ.ಜಿ.ಎಂ. ಹೆಗಡೆ ಅವರ ದತ್ತಿನಿಧಿಯ

ಜುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ತಾ ಇವರಿಗೆ ಪೊಲೀಸ್ ಇಲಾಖೆಯ ವತಿಯಿಂದ ಸನ್ಮಾನ

ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯವಾದ ಎಂ.ಡಿ.ಎಂ.ಎ ಪೂರೈಕೆ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿಗಳು ಪತ್ತೆ ಮಾಡಿ ಮಾದಕವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಈ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 54/2022 ಪ್ರಕರಣಕ್ಕೆ ಸಂಬಂಧಿಸಿ, ಮಂಗಳೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ದಿನಾಂಕ 6.12.2025 ರಂದು

ನಂದಾ ದೀಪ ಸೇವಾ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನಿಂದ ದಿನಸಿ ವಿತರಣೆ

ಕಾಪು:ನಂದಾ ದೀಪ ಸೇವಾ ಟ್ರಸ್ಟ್ ನ ಸದಸ್ಯರಾದ ರವಿ ಶೆಟ್ಟಿ ಪಡುಬಿದ್ರಿಯವರ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ಕಾಪುವಿನ ತೀರಾ ಬಡತನದಿಂದ ಬಳಲುತ್ತಿರುವ ಗಂಗಮ್ಮ ಶೆಟ್ಟಿಯವರಿಗೆ ದಿನಸಿ ಸಾಮಾನುಗಳನ್ನು ದಿನಾಂಕ 08/12/2025 ರ ಸೋಮವಾರದಂದು ವಿತರಣೆ ಮಾಡಲಾಯಿತು. ಕಳೆದ 3 ತಿಂಗಳಿಂದ ಗಂಗಮ್ಮ ಶೆಟ್ಟಿಯವರಿಗೆ ಮನೆಯ ದಿನಸಿ ಸಾಮಾನುಗಳನ್ನು ನೀಡುತ್ತಾ ಬರುತ್ತಿದ್ದು ಈ ತಿಂಗಳ ದಿನಸಿಯನ್ನು ನಂದಾ ದೀಪ ಸೇವಾ ಟ್ರಸ್ಟ್ ನ ಸದಸ್ಯರಾದ ಸಾದಿಕ್ ಕಂಚಿನಡ್ಕ ವತಿಯಿಂದ

ವಿಕಲ ಚೇತನರಿಗೆ ಸೌಲಭ್ಯಗಳನ್ನು ತಲುಪಿಸಿ: ನ್ಯಾ. ಜೈಬುನ್ನಿಸಾ |ಐಕ್ಯಂ ಸಂಸ್ಥೆಯಲ್ಲಿ ವಿಕಲಚೇತನರ ದಿನಾಚರಣೆ

ಮಂಗಳೂರು : ವಿಕಲಚೇತನರಿಗಾಗಿ ಉಚಿತವಾಗಿ ಕಾನೂನು ನೆರವಿನ ಸೌಲಭ್ಯ ಒದಗಿಸಲಾಗಿದೆ ಈ ಪ್ರಯೋಜನವನ್ನು ವಿಕಲಚೇತನರಿಗೆ ತಲುಪಿಸುವ ನಿಟ್ಟಿನಲ್ಲಿ ನಾಗರಿಕರು ಸ್ಪಂದಿಸಬೇಕು ಎಂದು ಜಿಲ್ಲಾ ನ್ಯಾಯಾಲಯದ ಸೀನಿಯರ್ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಶ್ರೀಮತಿ ಜೈಬುನ್ನಿಸಾ ಅವರು ಹೇಳಿದರು. ಅವರು ಮಂಗಳೂರಿನ ಕುಲ ಶೇಖರ ಕಲ್ಪನೆಯಲ್ಲಿ ಐಕ್ಯಂ ವಿಕಲಚೇತನರ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ವಿಕಲಚೇತನರ ದಿನಾಚರಣೆಯ

ಸಮೃದ್ಧ ಬೈಂದೂರು ವತಿಯಿಂದ ಪ್ರೇರಣಧಾರೆ -ನಿವೃತ್ತ ಶಿಕ್ಷಕರ ಸಮಾಗಮ ಕಾರ್ಯಕ್ರಮ

ರೈತ ಸಿರಿ ಸಭಾಭವನ ಉಪ್ಪುಂದ ಇಲ್ಲಿ ಜರುಗಿತು. ” ಶಿಕ್ಷಕರೆಂದರೆ ನಿವೃತ್ತಿ ಇಲ್ಲದವರು, ಅವರು ಸಮಾಜಕ್ಕೆ ಸದಾಕಾಲ ಬೆಳಕು ನೀಡುವ ದೀಪಗಳು” ಎನ್ನುವ ಪರಿಕಲ್ಪನೆ ಅಡಿಯಲ್ಲಿ, ಬೈಂದೂರು ಕ್ಷೇತ್ರ ವ್ಯಾಪ್ತಿಯ ನಿವೃತ್ತ ಶಿಕ್ಷಕರ ವಿಶ್ರಾಂತ ಬದುಕು ಮೆಲುಕು ಹಾಕುವ ಉದ್ದೇಶದಿಂದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಕಲ್ಪನೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಯಮಿಗಳಾದ ಗೋಕುಲ್ ಶೆಟ್ಟಿ ಉದ್ಘಾಟಿಸಿ ಈ ವಿಶೇಷ ಕಾರ್ಯಕ್ರಮವು ದೇಶದ ಭವಿಷ್ಯ

1 ಕೋಟಿ 35 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ

1 ಕೋಟಿ 35 ಲಕ್ಷ ಅನುದಾನದಲ್ಲಿ ಕಾಪು ಪುರಸಭಾ ವ್ಯಾಪ್ತಿಯ ಅಲ್ಪಸಂಖ್ಯಾತ ಕಾಲನಿಗಳ ರಸ್ತೆ ಅಭಿವೃದ್ಧಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ಕಾಪು ವಿಧಾನಸಭಾ ಕ್ಷೇತ್ರದ ಕಾಪು ಪುರಸಭಾ ವ್ಯಾಪ್ತಿಯ ಅಲ್ಪಸಂಖ್ಯಾತ ಕಾಲನಿಗಳ ರಸ್ತೆ ಅಭಿವೃದ್ಧಿಗೆ 1 ಕೋಟಿ 35 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 06-12-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಕಾಪು ಪುರಸಭೆಯ ಕಾಪು

Mangaluru: ಮುಂದಿನ ಮಳೆಗಾಲದೊಳಗೆ ಸೀ ಆ್ಯಂಬುಲೆನ್ಸ್‌  ಕಾರ್ಯಾಚರಣೆ

ಮೀನುಗಾರರು ಮೀನುಗಾರಿಕೆಗೆ ಹೋದ ಸಂದರ್ಭ ಸಮುದ್ರದಲ್ಲಿ ಅವಘಡಗಳು ಉಂಟಾದಾಗ ಮೀನುಗಾರರ ಜೀವರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ “ಸೀ ಆ್ಯಂಬುಲೆನ್ಸ್‌’ ವ್ಯವಸ್ಥೆ ಮುಂದಿನ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್‌. ವೈದ್ಯ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮದವರ ಜತೆ ಅವರು ಮಾತನಾಡಿ, ಸೀ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸುವುದಾಗಿ

ಮಂಗಳೂರು: ಮೀನುಗಾರಿಕಾ ಬಂದರು ಆಧುನೀಕರಣಕ್ಕೆ ಶಂಕುಸ್ಥಾಪನೆ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೀನುಗಾರರ ಬೇಡಿಕೆ ಏನು ಎಂದು ಕೇಳಿ ಯೋಜನೆ ರೂಪಿಸಿದರೆ ಮಾತ್ರ ಅವರ ಕಷ್ಟಗಳು ನಿವಾರಣೆಯಾಗಲು ಸಾಧ್ಯ. ಸಮುದ್ರ ತಟದಲ್ಲಿರುವ 16 ರಾಜ್ಯಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ, ಹಾಗಾಗಿ ಆಯಾ ರಾಜ್ಯದ ಆವಶ್ಯಕತೆಗೆ ಪೂರಕವಾಗಿ ಸಹಾಯ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು. ಪ್ರಧಾನ ಮಂತ್ರಿ

ವಿಶ್ವಬ್ರಾಹ್ಮಣ ಯುವ ಸಂಘಟನೆ (ರಿ.)ಚತುರ್ಥ ಬಾರಿಯ ಸಾಮೂಹಿಕ ವಿವಾಹ ಹಾಗೂ ಸಭಾ ಕಾರ್ಯಕ್ರಮ

ಕಾಪು: ವಿಶ್ವಬ್ರಾಹ್ಮಣ ಯುವ ಸಂಘಟನೆ (ರಿ.)ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಉಡುಪಿ ಜಿಲ್ಲೆ ದಶಮಾನೋತ್ಸವ ಸಂಭ್ರಮಹಾಗೂ ಚತುರ್ಥ ಬಾರಿಯ ಸಾಮೂಹಿಕ ವಿವಾಹ ಹಾಗೂ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಸಂಗಮ ಡಿ.10ರಂದು ನಡೆಯಲಿದೆ. ಕಟಪಾಡಿ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ವಿಶ್ವ ಬ್ರಾಹ್ಮಣ ಸಂಘಟನೆಯ ದಶಮಾನೋತ್ಸವ ಸಂಭ್ರಮ ಹಾಗೂ ಚತುರ್ಥ ಬಾರಿಯ ಸಾಮೂಹಿಕ ವಿವಾಹದಲ್ಲಿ ವಿಶ್ವಕರ್ಮ ಸಮಾಜದ 12 ಜೋಡಿಗಳು ಹಸೆಮನೆ ಏರಲಿದ್ದಾರೆ.ಕಳೆದ 3 ಬಾರಿ